KSPSTA

RECENT INFORMATIONS

Search This Blog

Tuesday, September 30, 2025

A method for citizens to voluntarily enter survey information...

  KSPSTA       Tuesday, September 30, 2025
Hedding : A method for citizens to voluntarily enter survey information...

ಈಗಾಗಲೇ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಸರಕಾರಿ ಶಾಲೆಯ ಶಿಕ್ಷಕರ ಮೂಲಕ ಮಾಡಲಾಗುತ್ತಿದ್ದು ಪ್ರಸ್ತುತ ಸಾರ್ವಜನಿಕರೇ ಸ್ವಂತ ಮೊಬೈಲ್ ನಲ್ಲಿ ಈ ಸಮೀಕ್ಷೆಯನ್ನು ಮಾಡಲು ಅಧಿಕೃತ ವೆಬೈಟ್ ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ಸರಕಾರದಿಂದ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು ಇದರ ಭಾಗವಾಗಿ ಈಗ ಸ್ವಂತ ನಾಗರಿಕರೇ ಮೊಬೈಲ್ ನಲ್ಲಿ ಸಮೀಕ್ಷೆಯ-ಮಾಡಲು ಅವಕಾಶ ನೀಡಲಾಗಿದೆ.

ಈ ಅಂಕಣದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಸಮೀಕ್ಷೆಯನ್ನು ಮಾಡುವುದು ಹೇಗೆ? ಸಮೀಕ್ಷೆಯನ್ನು ಮಾಡಲು ಯಾವೆಲ್ಲ ದಾಖಲೆಗಳು ಅವಶ್ಯಕ? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.


ಸಮೀಕ್ಷೆಯನ್ನು ಮಾಡಲು ಅಗತ್ಯ ದಾಖಲೆಗಳು:

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಯ ವಿವರ ಅವಶ್ಯಕ:

ಆಧಾರ್ ಕಾರ್ಡ

ರೇಶನ್ ಕಾರ್ಡ

ಮನೆಯ ಸದಸ್ಯರ ಆಧಾರ್ ಕಾರ್ಡ

ಮೊಬೈಲ್ ನಂಬರ್

ಸಮೀಕ್ಷೆಯ ಅಂಕಿ-ಅಂಶ:

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಕೆಲವು ಪ್ರಮುಖ ಅಂಕಿ-ಅಂಶಗಳ ಮಾಹಿತಿ ಈ ಕೆಳಗಿನಂತಿದೆ:

ರಾಜ್ಯದಲ್ಲಿ ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ನಡೆಸಬೇಕಾಗಿದೆ.

ಇದುವರೆಗೆ 2,76,016 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ.

ಸಮೀಕ್ಷೆ ಕಾರ್ಯಕ್ಕೆ ಒಟ್ಟು 1,20,728 ಗಣತಿದಾರರನ್ನು ನಿಯೋಜಿಸಲಾಗಿದೆ.

ಒಟ್ಟು 1,22,085 ಗಣತಿ ಬ್ಲಾಕ್‌ಗಳನ್ನು ಗುರುತಿಸಲು

ಸಮೀಕ್ಷೆಯನ್ನು ನಡೆಸಲು ಅಂತಿಮ ದಿನಾಂಕ:



ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು 07 ಅಕ್ಟೋಬರ್ 2025 ಕೊನೆಯ ದಿನಾಂಕವಾಗಿದೆ...


ಸಾರ್ವಜನಿಕರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿಕೃತ ವೆಬೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನ ಅನುಸರಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನುಮೊಬೈಲ್ ನಲ್ಲಿ ಮಾಡಲು ಅವಕಾಶವಿರುತ್ತದೆ.

Step-1: ನಾಗರಿಕರು ಮೊದಲಿಗೆ  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾಲತಾಣವನ್ನು ಪ್ರವೇಶ ಮಾಡಿ.

Step-2: ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಈ ಪೇಜ್ ನಲ್ಲಿ ಸುದ್ದಿ ಮತ್ತು ಘಟನೆಗಳು ಕಾಲಂ ನಲ್ಲಿ ಕಾಣಿಸುವ "ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಾಗರಿಕರು ಸ್ವಇಚ್ಚೆಯಿಂದ ಪಾಲ್ಗೊಳ್ಳುವ ಲಿಂಕ್" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ ಇಲ್ಲಿ ಎರಡು ಆಯ್ಕೆಗಳು ಕಾಣಿಸುತ್ತವೆ ಸಮೀಕ್ಷೆದಾರ / Enumerator ಮತ್ತು ನಾಗರಿಕ /Citizen ಇದರಲ್ಲಿ "ನಾಗರಿಕ / Citizen" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ನಂತರ ಇಲ್ಲಿ ನಿಮ್ಮ 10 ಅಂಕಿಯ ಮೊಬೈಲ್‌ ನಂಬ‌ರ್ ಅನ್ನು ಹಾಕಿ OTP ಅನ್ನು ನಮೂದಿಸಿದರೆ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಅಗತ್ಯವಿರುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ







.








logoblog

Thanks for reading A method for citizens to voluntarily enter survey information...

Previous
« Prev Post

No comments:

Post a Comment