Hedding : Preparation of voters' list for the West Graduates' Constituency of Karnataka Legislative Council...
ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಮತಕ್ಷೇತ್ರದ ಮತದಾರರ
ಪಟ್ಟಿ ತಯಾರಿಕೆ...
ಮತದಾರರರ ನೋಂದಣೆ ನಿಯಮಗಳು, 1960ರ 31(3)ನೇ ನಿಯಮದ ಅನುಸಾರ, ಮೊದಲನೇ ಅನುಸೂಚಿ ಅಡಿಯಲ್ಲಿ ಯಾರ ವಿವರಗಳನ್ನು ನೀಡಲಾಗಿದೆಯೋ ಅಂತಹ ಪ್ರತಿಯೊಬ್ಬ ಮತದಾರರರ ನೋಂದಣೆ ಅಧಿಕಾರಿಗಳು, ಸದರಿ ಅನುಸೂಚಿಯಲ್ಲಿ ನಮೂದಿಸಿರುವ ಮತಕ್ಷೇತ್ರದ ಮತದಾರರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಹಕ್ಕುಳ್ಳ ಪ್ರತಿಯೊಬ್ಬ ವ್ಯಕ್ತಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಸಲುವಾಗಿ ಮತದಾರರರ ನೋಂದಣಿ ನಿಯಮಗಳು, 1960ಕ್ಕೆ ಲಗತ್ತಿಸಲಾದ ಹಾಗೂ ಎರಡನೆಯ ಅನುಸೂಚಿಯಲ್ಲಿ ಯಥಾವತ್ತಾಗಿ ಪುನರುಚ್ಛರಿಸಿರುವ ನಮೂನೆ-18 ರಲ್ಲಿನ ಅರ್ಜಿಯನ್ನು ಭರ್ತಿ ಮಾಡಿ 6ನೇ ನವಂಬರ್ 2025 ರಂದು ಅಥವಾ ಅದಕ್ಕೂ ಮೊದಲು ಮೊದಲನೇ ಅನುಸೂಚಿಯಲ್ಲಿ ನಮೂದಿಸಿರುವ ಅಧಿಕಾರಿಗಳಿಗೆ ಕಳುಹಿಸಲು ಅಥವಾ ತಲುಪಿಸಲು ಕರೆ ನೀಡಲಾಗಿದೆ.
2. ಅರ್ಜಿಗಳನ್ನು ಮೊದಲನೇ ಅನುಸೂಚಿಯಲ್ಲಿ ನಮೂದಿಸಲಾದ ಸಹಾಯಕ ಮತದಾರರರ ನೋಂದಣಾಧಿಕಾರಿಗಳು ಹಾಗೂ ನಿಯೋಜಿತ ಅಧಿಕಾರಿಗಳಿಗೂ ಸಹ ಸಲ್ಲಿಸಬಹುದಾಗಿದೆ. ಪದವೀಧರರ ಕ್ಷೇತ್ರದ ಮತದಾರರರ ಪಟ್ಟಿಯನ್ನು ಪ್ರತಿ ಚುನಾಚಣೆಯ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳೂ ಸಹ ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
ಅರ್ಹತೆಗಳು: ಭಾರತದ ಪ್ರಜೆಯಾಗಿರುವ, ಆಯಾ ಮತಕ್ಷೇತ್ರದೊಳಗಡೆ ಸಾಮಾನ್ಯವಾಗಿ
ವಾಸಿಸುತ್ತಿರುವ ಹಾಗೂ 1ನೇ ನವಂಬರ್ 2025ಕ್ಕೆ ಮುಂಚೆ (ಅರ್ಹತಾ ದಿನಾಂಕ) ಕನಿಷ್ಠ ಮೂರು ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಮತದಾರರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ. ಸದರಿ ತತ್ಸಮಾನ ವಿದ್ಯಾರ್ಹತೆಗಳ ಪಟ್ಟಿಯು ಮೊದಲನೇ ಅನುಸೂಚಿಯಲ್ಲಿ ತಿಳಿಸಲಾಗಿರುವ ಅಧಿಕಾರಿಗಳ ಬಳಿ ಇರುತ್ತದೆ. 3 ವರ್ಷಗಳ ಅವಧಿಯನ್ನು ಅರ್ಹತಾ ಪದವಿ ಪರೀಕ್ಷೆಯ ಫಲಿತಾಂಶವನ್ನು ವಿಶ್ವವಿದ್ಯಾಲಯ ಅಥವಾ ಸಂಬಂಧಪಟ್ಟ ಇತರ ಪ್ರಾಧಿಕಾರವು ಘೋಷಿಸಿ ಪ್ರಕಟಿಸಿದ ದಿನಾಂಕದಿಂದ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
3. ನಮೂನೆ 18ರಲ್ಲಿರುವ (ಎರಡನೇ ಅನುಸೂಚಿಯಲ್ಲಿ ಲಗತ್ತಿಸಿರುವಂತೆ) ಅರ್ಜಿಯನ್ನು ಎಲ್ಲಾ ಪ್ರಕರಣಗಳಲ್ಲಿ ದಸ್ತಾವೇಜು ಪುರಾವೆಯ ಈ ಮುಂದಿನ ಯಾವುದಾದರೊಂದು ರೂಪದ ಮೂಲಕ ಸೂಕ್ತ ರೀತಿಯಲ್ಲಿ ಸಮರ್ಥಿಸತಕ್ಕದ್ದು.
ಎ) ವಿಶ್ವವಿದ್ಯಾಲಯ ಅಥವಾ ಸಂಬಂಧಪಟ್ಟ ಸಂಸ್ಥೆಯಿಂದ ನೀಡಲಾದ ಪದವಿ, ಡಿಪ್ಲೋಮಾ ಅಥವಾ ಪ್ರಮಾಣಪತ್ರ ಕೋರ್ಸ್‌ಗಳ ಮೂಲ ಪ್ರತಿ ಅಥವಾ ನಕಲು ಪ್ರತಿಯ ಸ್ವಯಂ ದೃಢೀಕರಿಸಿದ ಹಾಗೂ ಅಪರ ನಿಯೋಜಿತ ಅಧಿಕಾರಿಗಳಾದ (ಎ) ತಹಸೀಲ್ದಾರ್, (ಬಿ) ಪದವಿ ಕಾಲೇಜುಗಳ / ಇಂಟರ್ ಕಾಲೇಜುಗಳ ಪ್ರಾಂಶುಪಾಲರುಗಳು, (ಸಿ) ಬಾಲಕಿಯರ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳು / ಇಂಟರ್ ಕಾಲೇಜುಗಳ ಪ್ರಾಂಶುಪಾಲರುಗಳು (ಡಿ) ಎಲ್ಲಾ ಬ್ಲಾಕುಗಳ ಜಂಟಿ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು (ಇ) ನಗರ ಪಾಲಿಕೆ / ನಗರ ಪಂಚಾಯತ್‌ಗಳ ಕಾರ್ಯನಿರ್ವಾಹಕ ಅಧಿಕಾರಿ (ಪತ್ರಾಂಕಿತ) (ಎಫ್) ಸಂಬಂಧಪಟ್ಟ ಜಿಲ್ಲೆಯಲ್ಲಿನ ಪತ್ರಾಂಕಿತ ಅಧಿಕಾರಿಗಳು (ಗೆಜೆಟೆಡ್) ಹಾಗೂ (ಜಿ) ನೋಟರಿ ಪಬ್ಲಿಕ್ ಗಳಿಂದ ದೃಢೀಕೃತ:
CLICK HERE TO DOWNLOAD THE PDF FILE 🗄️🗃️🗃️🗃️...
No comments:
Post a Comment