Regarding the creation of women police companies in the Karnataka State Reserve Police Force.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳಲ್ಲಿ ಮಹಿಳಾ ಪೊಲೀಸ್ ಕಂಪನಿಗಳನ್ನು ಸೃಜಿಸುವ ಕುರಿತು.
ಓದಲಾಗಿದೆ:
ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರ ಪತ್ರ ಸಂಖ್ಯೆ: ಪಿ&ಸಿ(5)54/2021-22, ໖: 23/12/2024,
ಪ್ರಸ್ತಾವನೆ:
ಮೇಲೆ ಓದಲಾದ ಪತ್ರದಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರು ಸರ್ಕಾರಕ್ಕೆ ಪ್ರಸ್ತಾವನ ಸಲ್ಲಿಸಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಘಟಕಗಳು ಒಂದು ಪ್ರಹಾರ ದಳವಾಗಿದ್ದು, ಮತೀಯ ಹಾಗೂ ರಾಜಕೀಯ ಗಲಭೆಗಳು, ರೈತರ ಹೋರಾಟ, ವಿದ್ಯಾರ್ಥಿ ಚಳುವಳಿ ಹಾಗೂ ಇನ್ಯಾವುದೇ ಗಲಭೆಗಳನ್ನು ಹತ್ತಿಕ್ಕುವಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿ ಸಮಾಜದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸುವ ಸಲುವಾಗಿ ಸದಾ ಸಿದ್ದತೆಯಲ್ಲಿರುವ ಸನ್ನದ ಬಲವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆಂದು ತಿಳಿಸಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಚಳುವಳಿ, ಧರಣಿ ಇನ್ನಿತರೆ ಹೋರಾಟಗಳಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದರಿಂದ ಅವುಗಳನ್ನು ಸಮಪರ್ಕವಾಗಿ ನಿಭಾಯಿಸಲು, ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಅವಶ್ಯಕತೆ ಇರುವುದಾಗಿ ತಿಳಿಸಿ, ಹಾಲಿ 2ನೇ ಪಡೆ, ಕ.ರಾ.ಮೀ.ಪೂ, ಬೆಳಗಾವಿ ಘಟಕದಲ್ಲಿರುವ ಒಂದು ಮಹಿಳಾ ಕಂಪನಿಗಳ ಹುದ್ಯವಾರು ಮಂಜೂರಾತಿ ಬಲದ ವಿವರವನ್ನು ಕೆಳಕಂಡಂತೆ ಒದಗಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ
No comments:
Post a Comment