KSPSTA

RECENT INFORMATIONS

Search This Blog

Saturday, August 10, 2024

SSLC Vyagra Geete Lesson Notes

  Dailyguru       Saturday, August 10, 2024

 

SSLC KANNADA Vyagra Geete Lesson 2 question And Answers

10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಾಠ 2 ವ್ಯಾಘ್ರಗೀತೆ ಗದ್ಯಪಾಠದ ಪ್ರಶ್ನೋತ್ತರಗಳು


ವ್ಯಾಘ್ರಗೀತೆ

ಎ. ಎನ್ ಮೂರ್ತಿರಾವ್ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳಿನವರು. ಇವರ ಕಾಲ ಕ್ರಿ .ಶ. 1900. ಇವರು ಹಗಲುಗನಸುಗಳು, ಅಲೆಯುವ ಮನ, ಅಪರವಯಸ್ಕನ ಅಮೆರಿಕಾಯಾತ್ರೆ, ಮಿನುಗು-ಮಿಂಚು, ಚಿತ್ರಗಳು- ಪತ್ರಗಳು, ಪೂರ್ವಸೂರಿಗಳೊಡನೆ, ಚಂಡಮಾರುತ, ದೇವರು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಲಭಿಸಿದೆ.



ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಭಗವದ್ಗೀತೆಯನ್ನು ರಚಿಸಿದವರು ಯಾರು?

ಭಗವದ್ಗೀತೆಯನ್ನು ರಚಿಸಿದವರು ವೇದವ್ಯಾಸರು.

2. ಹುಲಿಗೆ ಪರಮಾನಂದವಾಗಲು ಕಾರಣವೇನು?

ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು.

3. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?

ಹುಲಿಗೆ ತಮ್ಮ ಮುಖ ತೋರಿಸದಂತೆ ತಪ್ಪಿಸಿಕೊಳ್ಳಲು ಕುಂಬಾರನ ತಿಗರಿಯಂತೆ ಸುತ್ತುತ್ತಿದ್ದರಿಂದ ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು.

4. ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?

ಶಾನುಭೋಗರ ಬ್ರಹ್ಮಾಸ್ತ್ರ ಅವರ ಬಳಿ ಇದ್ದ ಖಿರ್ದಿ ಪುಸ್ತಕ

5. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?

ಹಸಿದು ಮಲಗಿದ್ದ ಹುಲಿಯು ಎಚ್ಚೆತ್ತು "ವಿಧಿಯು ಈ ದಿನ ತನಗೆ ಆಹಾರವಾಗಿ ಏನನ್ನು ಒದಗಿಸುವುದೋ" ಎಂದು ಯೋಚಿಸಿತು.

ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು?

ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಲು ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು. ಕಾಡುದಾರಿಯಲ್ಲಿ ಹೋಗುತ್ತಾ "ಕತ್ತಲಾದರೂ ಬೆಳದಿಂಗಳು ಇದೆ. ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ತಲುಪಬಹುದು" ಎಂದು ಯೋಚಿಸಿದರು.

2. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣವೇನು?

ಹುಲಿಯು ಒಳ್ಳೆಯ ವಂಶದಲ್ಲಿ ಜನಿಸಿತ್ತು. ಹಿಂದಿನಿಂದ ಹಾರಿ ಕೊಲ್ಲುವುದು ಧರ್ಮವಲ್ಲ ಎಂದು ತಿಳಿದಿತ್ತು. ಪುಣ್ಯಕೋಟಿಯ ಕತೆ ಹಾಗೂ 'ಸ್ವಧರ್ಮವೇ ನಿಧನಂ ಶ್ರೇಯಃ' ಎಂಬ ಭಗವದ್ಗೀತೆಯ ಮಾತು ನೆನಪಾಯಿತು. ಅದ್ದರಿಂದ ಹುಲಿಯು ಹಿಂದಿನಿಂದ ಹಾರಿ ಕೊಲ್ಲಲಿಲ್ಲ.

3. ಶಾನುಭೋಗರು ಮೂರ್ಛಯಲ್ಲಿದ್ದಾಗ ನಡೆದ ಘಟನೆಯನ್ನು ವಿವರಿಸಿ.

ಶಾನುಭೋಗರು ಮದಲಿಂಗನ ಕಣಿವೆಯಲ್ಲಿ ಮೂರ್ಛ ತಪ್ಪಿದ್ದರು. ಕೆಲವು ರೈತರು ಅದೇ ಮಾರ್ಗ ಗಾಡಿಯಲ್ಲಿ ಹಿಂದಿರುಗುತ್ತಿದ್ದರು. ಶಾನುಭೋಗರು ಇದ್ದ ಹರಿದಾರಿ ದೂರದಲ್ಲೇ ಗಾಡಿ ನಿಂತಿತು. ಎತ್ತುಗಳು ಮುಂದೆ ಹೋಗದೆ ನಿಂತವು. ಅಷ್ಟರಲ್ಲಿ ಹುಲಿಯ ಘರ್ಜನೆ ಕೇಳಿಸಿತು. ರೈತರು ಗುಂಡು ಹಾರಿಸಿದರು. ಹುಲಿ ಹೆದರಿ ಓಡಿ ಹೋಯಿತು. ರೈತರು ಪಂಜು ಹೊತ್ತಿಸಿಕೊಂಡು ಮುಂದೆ ಬಂದರು. ಶಾನುಭೋಗರನ್ನು ಕಂಡರು ನೀರನ್ನು ಸಿಂಪಡಿಸಿ ಎಚ್ಚರಿಸಿದರು.

ಕೊಟ್ಟಿರುವ ಪ್ರಶ್ನೆಗಳಿಗೆ 8-10 ವಾಕ್ಯಗಳಲ್ಲಿ ಉತ್ತರಿಸಿ.

1. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ. ಹುಲಿ ಎಂದರೆ ಕ್ರೂರಪ್ರಾಣಿ ಕೊಂದು ತಿನ್ನುವುದೊಂದೆ ಅದರ ಸ್ವಭಾವ ಎಂದು ಭಾವಿಸುವವರು ಸಾಕಷ್ಟು ಜನರಿದ್ದಾರೆ. ಆದರೆ ಹುಲಿ ಆಹಾರಕ್ಕಾಗಿ ಬೇಟೆಯಾಡಿ ಪ್ರಾಣಿಗಳನ್ನು ಕೊಂದು ತಿನ್ನುವುದೇನೋ ಉಂಟು. ಆದರೆ ನಿಷ್ಪಕ್ಷಪಾತವಾದ ದೃಷ್ಟಿಯಿಂದ ನೋಡಿದರೆ ಅದರಲ್ಲಿ ತಪ್ಪೇನು ಇಲ್ಲ ಯಾಕೆಂದರೆ ಅವು ಮೂಲತಃ ಮಾಂಸಹಾರಿಗಳು, ಶಾಕಾಹಾರವನ್ನು ತಿಂದು ಬದುಕಬಹುದಾದ ಮಾನವನೇ ಮಾಂಸವನ್ನು ತಿನ್ನಬಹುದಾದರೆ ಮಾಂಸಹಾರಿಯಾದ ಹುಲಿಯಲ್ಲಿ ಅದೊಂದು ದೊಡ್ಡ ಅಪರಾಧವೇನಲ್ಲ. ಅದು ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದರಲ್ಲಿ ತಪ್ಪೇನು ಇಲ್ಲ ಆದರೆ ಹಾಗೆ ಕೊಲ್ಲುವಾಗ ಯಾವುದಾದರೊಂದು ಧರ್ಮವನ್ನು ಅನುಸರಿಸಿ ಕೊಲ್ಲುತ್ತದೆಯೇ ಅಥವಾ ಧರ್ಮಾಧರ್ಮಗಳ ಲೆಕ್ಕವನ್ನೇ ಇಡದೆ ಸ್ವಚ್ಛಂದದಿಂದ ವರ್ತಿಸುತ್ತದೆಯೇ ಎಂಬುದೇ ಇಲ್ಲಿ ಮುಖ್ಯ ಪ್ರಶ್ನೆ, ಹುಲಿಗೆ ಧರ್ಮವೇನು ಬಂತು ಎನ್ನಬಹುದು. ಇತರ ದೇಶಗಳಲ್ಲಿರುವ ಹುಲಿಗಳ ವಿಷಯ ಹೇಗೋ ನನಗೆ ತಿಳಿಯದು ಆದರೆ ಭರತ ಖಂಡದ ಹುಲಿಗಳ ಧರ್ಮಶ್ರದ್ಧೆಯನ್ನು ಅನುಸರಿಸಿ ಬೇಟೆಯಾಡುತ್ತವೆ. ಎಂತಹ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ, ಮಹರ್ಷಿ ವೇದವ್ಯಾಸರಿಂದ ರಚಿತವಾದ ಭಗದ್ಗೀತೆಯಂಥ ಗ್ರಂಥ ಉದ್ಭವಿಸಿತೋ, ಇಂತಹ ಈ ಭರತ ಭೂಮಿಯಲ್ಲಿ ಜನಿಸಿದ ಹುಲಿಗಳು ಅಧರ್ಮದಿಂದ ನಡೆದುಕೊಳ್ಳುವುದಿಲ್ಲ ಯಾರನ್ನೇ ಆಗಲಿ ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ ಶತೃವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ ಆದುದರಿಂದಲೇ ಹುಲಿಯು ಶಾನುಭೋಗರನ್ನು ಹಿಂದಿನಿಂದ ಹಾರಿ ಕೊಲ್ಲಲಿಲ್ಲ 2. ಶಾನುಭೋಗರನ್ನು ರಕ್ಷಿಸಿದುದು ಖರ್ದಿ ಪುಸ್ತಕವೇ? ಹುಲಿಯ ಧರ್ಮವೇ? ಸಮರ್ಥನೆಯೊಂದಿಗೆ ವಿವರಿಸಿ. ಹುಲಿಯ ಗಮನವನ್ನು ಬೇರೆಡೆಗೆ ಸೆಳೆದ, ಅರೆ ನಿಮಿಷದ ಅವಕಾಶವನ್ನು ಒದಗಿಸಿಕೊಟ್ಟು ನನ್ನ ಪ್ರಾಣವನ್ನು ತಿಳಿದು ಅದಕ್ಕೆ ಆನಣತ ವಾತ್ಸಲ್ಯದಿಂದ, ಕೃತಜ್ಞತೆಯನ್ನು ಸಲ್ಲಿಸಿದ ಶಾನುಭೋಗರ ಮನಸ್ಸನ್ನು ಗಮಿಸಿದರೆ ಖಿರ್ದಿ ಪುಸ್ತಕವೇ ನನ್ನನ್ನು ರಕ್ಷಿಸಿತು ಎಂದು ತಿಳಿದಿದ್ದಾರೆ. ಆದರೆ ನಿಜವಾಗಿ ನೋಡಿದರೆ ಶಾನುಭೋಗರು ಉಳಿದದ್ದು ಬೀರ್ಧಿಪುಸ್ತದಿಂದಲ್ಲ ಹುಲಿಯ ಧರ್ಮ ಶ್ರದ್ಧೆಯಿಂ ಎಂದು ಹೇಳಬಹುದು. ಏಕೆಂದರೆ ಅವರ ದುಂಡುದುಂಡಾದ ಶರೀರವನ್ನು ನೋಡಿದ ಹುಲಿ ಅವರು ಬೆನ್ನು ತಿರುಗಿಸಿ ನಡೆಯುತ್ತಿದ್ದರೂ ಮೇಲೆ ಬಿದ್ದು ಕೊಲ್ಲಬಹುದಾಗಿತ್ತು. ಶಾನುಭೋಗರು ಎಚ್ಚರ ತಪ್ಪಿ ಬಿದ್ದಿದ್ದಾಗ ಅವರನ್ನು ಎಳೆದುಕೊಂಡು ಹೋಗಬಹುದಾಗಿತ್ತು. ಆದರೆ ಹುಲಿ ಹಾಗೆ ಮಾಡಲಿಲ್ಲ ಏಕೆಂದರೆ ಭರತಖಂಡದ ಹುಲಿಗಳು ಶತ್ರುವನ್ನಾದರೂ ಸರಿ ಬೆನ್ನ ಹಿಂದಿನಿಂದ ಹಾರಿ ಕೊಲ್ಲುವುದು ಧರ್ಮವಲ್ಲ ಎಂದು ನಂಬಿರುವವು. ಶಾನುಭೋಗರು ಬೆನ್ನನ್ನು ಮೇಲೆ ಮಾಡಿದ್ದರಿಂದ ಅವರನ್ನು ಕೊಲ್ಲದೆ ಹಾಗೆ ಬಿಟ್ಟಿತು. ಹುಲಿಯ ಧರ್ಮ ಶ್ರದ್ದೆಯಿಂದ ಶಾನುಭೋಗರು ಉಳಿದುಕೊಂಡರು, ಖಿರ್ದಿ ಪುಸ್ತಕದಿಂದ ಅಲ್ಲ.


ಸಂದರ್ಭದೊಂದಿಗೆ ಸ್ವಾರಸ್ಯವನ್ನು ವಿವರಿಸಿ.

1. "ಖಂಡವಿದೆಕೋ ಮಾಂಸವಿದೆಕೋ, ಗುಂಡಿಗೆಯ ಬಿಸಿ ರಕ್ತವಿದೆಕೋ",

ಆಯ್ಕೆ :- ಈ ವಾಕ್ಯವನ್ನು ಎ.ಎನ್.ಮೂರ್ತಿರಾವ್ ಅವರ 'ಸಮಗ್ರ ಲಲಿತ ಪ್ರಬಂಧಗಳು' ಕೃತಿಯಿಂದ ಆಯ್ದ 'ವ್ಯಾಘ್ರಗೀತೆ' ಎಂಬ ಗದ್ಯಪಾಠದಿಂದ ಆರಿಸಿಕೊಂಡಿದೆ.

ಸಂದರ್ಭ :- ಶಾನುಭೋಗರು ಮದಲಿಂಗನ ಕಣಿವೆಯಲ್ಲಿ ಹೋಗುವಾಗ, ಬೆನ್ನ ಹಿಂದೆ ಬಂದ ಹುಲಿಯು 'ವೈರಿಯಾದರೂ ಸರಿಯೆ ಹಿಂದಿನಿಂದ ಹಾರಿ ಕೊಲ್ಲಬಾರದು' ಎಂಬ ತನ್ನ ಧರ್ಮವನ್ನು ನೆನೆದು ಗೊಂದಲಕ್ಕೆ ಒಳಗಾಯಿತು. ಆಗ ಈ ಮಾತನ್ನು ನೆನಪಿಸಿಕೊಂಡಿತು.

ಸ್ವಾರಸ್ಯ ಪುಣ್ಯಕೋಟಿಯು ತನ್ನನ್ನು ತಿನ್ನುವಂತೆ ಕೇಳಿಕೊಂಡರೂ, ಸತ್ಯವಂತೆಯಾದ ಪುಣ್ಯಕೋಟಿ ಯನ್ನು ತಿನ್ನದೆ ಹುಲಿ ತನ್ನ ಪ್ರಾಣವನ್ನು ಬಿಟ್ಟಿತು. ಇದರ ಮೂಲಕ ಹುಲಿ ತನ್ನ ಧರ್ಮ ಮತ್ತು ಆದರ್ಶವನ್ನು ಮೆರೆಯಿತು ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.

2. “ಸ್ವಧರ್ಮವೇ ಆಯ್ಕೆ - ಏನೇನು ಕೇಯನ್ ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು' ಕೃತಿಯಿಂದ ಆಯ್ದ 'ವ್ಯಾಘ್ರಗೀತೆ'

ಎಂಬ ಗದ್ಯಪಾಠದಿಂದ ಆರಿಸಿಕೊಂಡಿದೆ

ಸಂದರ್ಭ :- ಶಾನುಭೋಗರ ಬೆನ್ನ ಹಿಂದೆ ಬಂದ ಹುಲಿಯು 'ವೈರಿಯಾದರೂ ಸರಿಯೆ ಹಿಂದಿನಿಂದ ಹಾರಿ ಕೊಲ್ಲಬಾರದು' ಎಂದು ತನ್ನ ಧರ್ಮವನ್ನು ನೆನೆದು ಗೊಂದಲಕ್ಕೆ ಒಳಗಾಯಿತು. ಆಗ ಭಗವದ್ಗೀತೆಯ ಈ ಮಾತು ನೆನಪಿಗೆ ಬಂದಿತು.

ಸ್ವಾರಸ್ಯ :- ಹುಲಿಗೆ ಎಷ್ಟೇ ಹಸಿವಾಗಿದ್ದರೂ, ತನ್ನ ಬೇಟೆಯ ಧರ್ಮವನ್ನು ಬಿಡದೆ ಭಗವದ್ಗೀತೆಯ ಈ ಮಾತನ್ನು ನೆನಪಿಸಿಕೊಂಡಿತು ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.

3. "ದೇವರೇ, ಮರ ಹತ್ತುವಷ್ಟು ಅವಕಾಶ ಕರುಣಿಸು"

ಆಯ್ಕೆ :- ಈ ವಾಕ್ಯವನ್ನು ಎ.ಎನ್.ಮೂರ್ತಿರಾವ್ ಅವರ 'ಸಮಗ್ರ ಲಲಿತ ಪ್ರಬಂಧಗಳು' ಕೃತಿಯಿಂದ ಆಯ್ದ 'ವ್ಯಾಘ್ರಗೀತೆ' ಎಂಬ ಗದ್ಯಪಾಠದಿಂದ ಆರಿಸಿಕೊಂಡಿದೆ

ಸಂದರ್ಭ :- ಶಾನುಭೋಗರು ಹುಲಿಯಿಂದ ತಪ್ಪಿಸಿಕೊಳ್ಳಲು ಬಿರ್ದಿ ಪುಸ್ತಕವನ್ನು ಹುಲಿಯ ಮೇಲೆ ಎಸೆದು ಮರದ ಕಡೆ ಓಡುವಾಗ ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ ಕಷ್ಟ ಬಂದಾಗ ನಿವಾರಣೆಗಾಗಿ ದೇವರ ↑ ದೇವರ ಮೊರೆ ಹೋಗುತ್ತೇವೆ ಎಂಬುದು ಈ ಮಾತಿನ ಸ್ವಾರಸ್ಯ.

4. "ನಾನು ಬೆನ್ನು ಮೇಲಾಗಿ ಬಿದ್ದಿದ್ದೇನೆ".

ಆಯ್ಕೆ :- ಈ ವಾಕ್ಯವನ್ನು ಎ.ಎನ್.ಮೂರ್ತಿರಾವ್ ಅವರ 'ಸಮಗ್ರ ಲಲಿತ ಪ್ರಬಂಧಗಳು' ಕೃತಿಯಿಂದ ಆಯ್ದ 'ವ್ಯಾಘ್ರಗೀತೆ' ಎಂಬ ಗದ್ಯಪಾಠದಿಂದ ಆರಿಸಿಕೊಂಡಿದೆ

ಸಂದರ್ಭ :- ಶಾನುಭೋಗರು ಮೂರ್ಛಿಯಿಂದ ಎಚ್ಚರಗೊಂಡಾಗ ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ : ಪ್ರಜ್ಞೆತಪ್ಪಿ ಬಿದ್ದಿದ್ದರೂ ಸಹ ಹುಲಿ ಏಕೆ ಆಕ್ರಮಣ ಮಾಡಲಿಲ್ಲ? ಎಂಬ ಪ್ರಶ್ನೆಗೆ ಶಾನುಭೋಗರೇ ಕಂಡುಕೊಂಡ ಉತ್ತರವು ಈ ಮಾತಿನ ಸ್ವಾರಸ್ಯವಾಗಿದೆ.

5. "ಹುಲಿ ಈಗ ಎಷ್ಟು ಹಸಿದಿರಬೇಕು".

ಆಯ್ಕೆ :- ಈ ವಾಕ್ಯವನ್ನು ಎ.ಎನ್.ಮೂರ್ತಿರಾವ್ ಅವರ 'ಸಮಗ್ರ ಲಲಿತ ಪ್ರಬಂಧಗಳು' ಕೃತಿಯಿಂದ ಆಯ್ದ 'ವ್ಯಾಘ್ರಗೀತೆ' ಎಂಬ ಗದ್ಯಪಾಠದಿಂದ ಆರಿಸಿಕೊಂಡಿದೆ.

ಸಂದರ್ಭ :- ಹುಲಿಯ ಆಕ್ರಮಣದಿಂದ ತಪ್ಪಿಸಿಕೊಂಡು ಬಂದ ಶಾನುಭೋಗರು, ಮನೆಯಲ್ಲಿ ರಸದೂಟ ಮಾಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ :- ನಾನು ಹುಲಿಯಿಂದ ತಪ್ಪಿಸಿಕೊಂಡು ಬಂದು ಊಟ ಮಾಡಿದೆ. ಆದರೆ ಬೇಟೆಗೆ ಬಂದ ಹುಲಿ ನನ್ನನ್ನು ಕೊಲ್ಲಲಾಗದೆ ಹಸಿವಿನಿಂದ ಬಳಲುತ್ತಿರಬಹುದು ಎಂಬ ಮಾನವೀಯತೆಯ ಧ್ವನಿ ಈ ಮಾತಿನ ಸ್ವಾರಸ್ಯವಾಗಿದೆ.

ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.

1. ಮಂತ್ರಿತ್ವ ಹೋಗಿ ಕೇವಲ ಶಾನುಬೋಗಿಕೆ ಮಾತ್ರ ಉಳಿದಿತ್ತು.

2. ಖಿರ್ದಿ ಪುಸ್ತಕ ಶಾನುಭೋಗರ ಬ್ರಹ್ಮಾಸ್ತ್ರ.

3. ನೆಲದಿಂದ ನೆಲದಿಂದ ಮೇಲೆದ್ದುಕೊಂಡಿದ್ದ ಕಲನ್ನು ಎಡವಿ ಶಾನು ಬೋಗರು ಬಿದ್ದರು

4. ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆಯುತ್ತಿದ್ದರು.

5. ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ.

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆ ಪದಕ್ಕಿರುವ ಸಂಬಧವನ್ನು ಬರೆಯಿರಿ.

1. : :: :

2. ಮುಂಭಾಗ : ಭಾಗದ+ಮುಂದೆ :: ಇಮ್ಮಡಿ :ಎರಡು+ನುಡಿ

3. ರಸದೂಟ : ಲೋಪಸಂಧಿ :: ಬ್ರಹ್ಮಾಸ್ತ್ರ ಸವರ್ಣ ದೀರ್ಘಸಂಧಿ

4. ಹುಲಿ : ರೂಢನಾಮ :: ಆಟ : ಭಾವನಾಮ

5. ದೇಹ : ಶರೀರ :: ಆಯುಧ : ಹತಾರ

ಭಾಷಾ ಚಟುವಟಿಕೆ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ಕನ್ನಡ ಸಂಧಿಗಳನ್ನು ಹೆಸರಿಸಿ, ಎರಡೆರಡು ಉದಾಹರಣೆಗಳನ್ನು ಬರೆಯಿರಿ.

ಉತ್ತರ: ಕನ್ನಡ ಸಂಧಿಗಳು ಮೂರು, ಅವೆಂದರೆ

1. ಲೋಪಸಂಧಿ

ಉದಾ: ಊರೂರು=ಊರು+ಊರು: ಬಲ್ಲೆನೆಂದು=ಬಲ್ಲೆನು+ಎಂದು

2. ಆಗಮಸಂಧಿ

ಕೃತಜ್ಞತೆಯನ್ನು=ಕೃತಜ್ಞತೆ+ಅನ್ನು ಅಪರಾಧವೇನಲ್ಲ= ಅಪರಾಧ+ವಿನಲ್ಲ

3. ಆದೇಶಸಂಧಿ

ಮಳೆಗಾಲ=ಮಳೆ+ಕಾಲ; ಮೈದೋರು=ಮೈ+ತೋರು

2. ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ: ರ ಮತ್ತು ವ್ಯಂಜನ ಸಂಧಿಗಳಾಗಿ ವಿಂಗಡಿಸಿ ಬರೆಯಿರಿ.

ಉತ್ತರ:- ಸಂಸ್ಕೃತ ಸ್ವರ ಸಂಧಿಗಳು

1. ಸವರ್ಣದೀರ್ಘ ಸಂಧಿ 2. ಗುಣಸಂಧಿ

3. ವೃದ್ಧಿಸಂಧಿ

4. ಯಣ್ ಸಂಧಿ

ಸಂಸ್ಕೃತ ವ್ಯಂಜನ ಸಂಧಿಗಳು

1. ಜಸ್ತ್ರ ಸಂಧಿ 2. ಶ್ಚುತ್ವ ಸಂಧಿ 3. ಅನುನಾಸಿಕ ಸಂಧಿ

3. ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ.

ಬಲ್ಲೆನೆಂದು = ಬಲ್ಲೆನು+ಎಂದು - ಲೋಪಸಂಧಿ

ಸೂರ್ಯೋದಯ = ಸೂರ್ಯ+ಉದಯ ಗುಣಸಂಧಿ

ಮಳೆಗಾಲ = ಮಳೆ+ಕಾಲ ಆದೇಶ ಸಂಧಿ

ಅಷ್ಟೆಶ್ವರ್ಯ = ಅಷ್ಟ+ಐಶ್ವರ್ಯ ವೃದ್ಧಿಸಂಧಿ

ವೇದಿಯಲ್ಲಿ = ವೇದಿ+ಅಲ್ಲಿ ಆಗಮಸಂಧಿ

ಆ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ.

1. ಬೇಗ ಬೇಗ : ದ್ವಿರುಕ್ತಿ : : ಧೀರ ಶೂರ :

2. ಲೋಪ ಸಂಧಿ : ಸ್ವರ ಸಂಧಿ :: ಆದೇಶ ಸಂಧಿ :

3. ಕಟ್ಟಕಡೆಗೆ : ಕಡೆಗೆ ಕಡೆಗೆ : : ಮೊತ್ತಮೊದಲು :

4. ಶರಚ್ಚಂದ್ರ : ಶ್ಚುತ್ವ ಸಂಧಿ : : ದಿಗಂತ :

ಉತ್ತರಗಳು: ೧. ಜೋಡಿಪದ, ೨. ವ್ಯಂಜನ ಸಂಧಿ, ೩. ಮೊದಲು ಮೊದಲು, ೪, ಜಸ್ತ್ರಸಂದಿ

ಗಾದೆಗಳನ್ನು ವಿಸ್ತರಿಸಿ ಬರೆಯಿರಿ.

1.ಕಟ್ಟುವುದು ಕಠಿಣ; ಕೆಡಹುವುದು ಸುಲಭ

ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು.ಗಾದೆಗಳು ವೇದಗಳ ತಲೆದಿಂಬು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಅಂತಹ ಗಾದೆಗಳಲ್ಲಿ ಇದೂ ಒಂದು

ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯು ಕಷ್ಟಪಟ್ಟು ದುಡಿದರೆ ಸುಖ ಎಂಬರ್ಥವನ್ನು ಕೊಡುತ್ತದೆ. ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬ ಮಾತಿದೆ. ಜೀವನೋಪಾಯಕ್ಕಾಗಿ ಯಾವುದಾದರೂ ಒಂದು ಒಂದು ಕೆಲಸವಿರಬೇಕು. ಕಷ್ಟಪಟ್ಟು ದುಡಿದರೆ ಜೀವನ ಸುಖವಾಗಿರುತ್ತದೆ. ಕರ್ಮಣೇವಾಧಿಕಾಸ್ತೇ ಮಾ ಫಲೇಷು ಕದಾಚನ ಎಂಬ ಗೀತೆಯ ಮಾತು ಇದನ್ನೇ ಹೇಳುವುದು.

2. 'ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ'

ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು.ಗಾದೆಗಳು ವೇದಗಳ ತಲೆದಿಂಬು, ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಅಂತಹ ಗಾದೆಗಳಲ್ಲಿ 'ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ' ಎಂಬುದು ಒಂದು ಪ್ರಸಿದ್ಧ ಗಾದೆ ಮಾತಾಗಿದೆ.

ಕುಂಬಾರನು ಒಂದು ಮಡಕೆಯನ್ನು ಮಾಡಬೇಕಾದರೆ ಮಣ್ಣನ್ನು ತಂದು ಹದಗೊಳಿಸಿ. ಅದಕ್ಕೊಂದು ರೂಪವನ್ನು ಕೊಟ್ಟು, ಬೇಯಿಸಬೇಕಾಗಿದೆ. ಇದಕ್ಕೆ ಬಹಳಷ್ಟು ಶ್ರಮ, ಹಣ ಹಾಗು ಸಮಯ ಬೇಕಾಗುತ್ತದೆ. ಆದರೆ ಇಂತಹ ಒಂದು ಮಡಕೆಯನ್ನು ಕೇವಲ ಒಂದು ದೊಣ್ಣೆಯಿಂದ ಒಂದೇ ನಿಮಿಷದಲ್ಲಿ ನಾಶ ಮಾಡಬಹುದಾಗಿದೆ. ಇದಕ್ಕೆ ಹೇಳುವುದು 'ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ'. ಈ ಗಾದೆಯು 'ಕಟ್ಟುವುದು ಕಠಿಣ, ಕೆಡಿಸುವುದು ಸುಲಭ' ಎಂಬ ಗಾದೆಗೆ ಸಂವಾದಿಯಾಗಿದೆ.

 ಉ) ಈ ವಿಷಯಗಳಿಗೆ ಪ್ರಬಂಧ ಬರೆಯಿರಿ.

1. ಸ್ವಚ್ಛಭಾರತ ಅಭಿಯಾನ

ಪೀಠಿಕೆ:- ಭವ್ಯ ಭಾರತ ನಿರ್ಮಾಣದ ಕನಸ್ಸನ್ನು ಕಾಣುತ್ತಿರುವ ಸನ್ಮಾನ್ಯ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರ ಕನಸಿನ ಕೂಸು ಸ್ವಚ್ಛ ಭಾರತ ಅಭಿಯಾನ ಯೋಜನೆ. ಇದನ್ನು ಪ್ರಧಾನಮಂತ್ರಿಯವರು ದಿನಾಂಕ: 2/10/2014 ರಂದು ಗಾಂಧೀಜಿಯವರ ಜನ್ಮದಿನದಂದು ಘೋಷಿಸಿದರು. ಇದು ಸಮುದಾಯ ಅಭಿವೃದ್ಧಿ ಕಾರ್ಯಕ್ರಮವಾದ 'ನಿರ್ಮಲ ಭಾರತ ಅಭಿಯಾನದ' ಮುಂದುವರೆದ ಭಾಗವಾಗಿದೆ.

ವಿಷಯ ನಿರೂಪಣೆ:-

ಉದ್ದೇಶಗಳು:

* ಬಯಲು ಮುಕ್ತ ಶೌಚಾಲಯಗಳನ್ನು ರೂಪಿಸುವುದು.

* ಸ್ವಚ್ಛತೆಗೆ ಒತ್ತು ಹಾಗು ಒಳಚರಂಡಿ ವ್ಯವಸ್ಥೆ

* ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡುವುದು.

* ತ್ಯಾಜ್ಯಗಳ ಸಮರ್ಪಕ ಸಂರಕ್ಷಣೆ ಹಾಗು ನಿರ್ವಹಣೆ

ಇವೇ ಮೊದಲಾದ ಘನೋದ್ದೇಶಗಳನ್ನು ಕಾರ್ಯಕ್ರಮವು ಹೊಂದಿದೆ. ಈ ಕಾರ್ಯಕ್ರಮಕ್ಕೆ ಆಯವ್ಯಯದಲ್ಲಿ ಸಾಕಷ್ಟು ಹಣ ನಿಗದಿ ಮಾಡಿದ್ದು, ಅನುಷ್ಟಾನಕ್ಕಾಗಿ ವಿಶೇಷ ವ್ಯಕ್ತಿಗಳು, ನಟರು ಹಾಗು ಸಮಾಜ ಸೇವಕರು ರಾಯಭಾರಿಗಳಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಘನವೆತ್ತ ಭಾರತ ಸರ್ಕಾರವು ಸ್ವಚ್ಛ ನಗರಗಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದೆ.

ಮುಕ್ತಾಯ:- ಗಾಂಧೀಜಿಯವರು ಕಂಡಿದ್ದ ಸ್ವಚ್ಛ ಭಾರತದ ಕನಸನ್ನು ನನಸಾಗಿಸಲು ಪ್ರತಿಯೊಬ್ಬ ನಾಗರಿಕನು ಕೈ ಜೋಡಿಸಿದ್ದಲ್ಲಿ ಸಕಾರಗೊಳಿಸಬಹುದಾಗಿದೆ.

2. ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ

ಪೀಠಿಕೆ:- ಯಾವುದೇ ಒಂದು ದೇಶದ ಇತಿಹಾಸವನ್ನು ತಿಳಿಯಬೇಕಾದರೆ ಪ್ರಾಚ್ಯವಸ್ತುಗಳು ಪ್ರಮುಖ ಪಾತ್ರ ವಹಿಸುತ್ತವೆ.

ಅದೇ ರೀತಿಯಾಗಿ ಭಾರತದ ಹಾಗೂ ಕರ್ನಾಟಕ ಇತಿಹಾಸದ ಮಹತ್ವದ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಾಚ್ಯವಸ್ತುಗಳು ಬಹಳ ಮುಖ್ಯವಾಗಿರುತ್ತವೆ. ಅವುಗಳೆಂದರೆ ಶಾಸನಗಳು, ನಾಣ್ಯಗಳು, ಪ್ರಾಚೀನ ದೇವಾಲಯಗಳು, ತಾಮ್ರಪಟ, ತಾಳೆಗರಿ ಮುಂತಾದ ಪ್ರಾಚ್ಯವಸ್ತುಗಳನ್ನು ಸಂರಕ್ಷಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ .

ವಿಷಯ ನಿರೂಪಣೆ:- ಪ್ರಾಚ್ಯ ವಸ್ತುಗಳ ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳು –

* ಪ್ರಾಚ್ಯವಸ್ತುಗಳ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸಿ ಕೊಡಬೇಕು.

車 ಪ್ರಾಚ್ಯವಸ್ತುಗಳ ಸಂರಕ್ಷಣೆಗಾಗಿ ಇಲಾಖೆಯಿಂದ ವಿಶೇಷ ಕಾಳಜಿ ವಹಿಸುವುದು ಹಾಗೂ ಕಾನೂನುಗಳನ್ನು ರೂಪಿಸುವುದು.

* ಪ್ರಾಚ್ಯವಸ್ತುಗಳ ಕೇಂದ್ರಗಳನ್ನು ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸುವುದು.

* ಪ್ರಾಚ್ಯವಸ್ತುಗಳ ಸ್ಥಳ, ಕೇಂದ್ರಗಳನ್ನು ಪುನರುಜ್ಜಿವನಗೊಳಿಸುವುದು.

* ಐತಿಹಾಸಿಕ ಕೇಂದ್ರಗಳಲ್ಲಿ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಿ ಪ್ರಾಚ್ಯವಸ್ತುಗಳನ್ನು ಸಂರಕ್ಷಿಸುವುದು.

* ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿದ ಜನರಿಗೆ ಪ್ರೋತ್ಸಾಹ ನೀಡುವುದು.

* ಐತಿಹಾಸಿಕ ಸ್ಥಳಗಳಲ್ಲಿ ಜನವಸತಿಯನ್ನು ನಿಷೇಧಿಸುವುದು.

* ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಾಚ್ಯ ವಸ್ತುಗಳ ಸಂರಕ್ಷಣೆ ಕುರಿತು ಮಾಧ್ಯಮಗಳ ಮೂಲಕ ಜಾಹೀರಾತು ನೀಡುವುದು.

* ಪ್ರಾಚ್ಯವಸ್ತುಗಳ ಮಹತ್ವವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವುದು.

ಮುಕ್ತಾಯ:- ನಮ್ಮ ದೇಶ ಐತಿಹಾಸಿಕವಾಗಿ ತನ್ನದೆ ಆದ ಪ್ರಾಮುಖ್ಯತೆ ಪಡೆದರೂ ಕೂಡ ಬೇರೆ ದೇಶಗಳಿಗೆ ಹೋಲಿಸಿದರೆ ಪ್ರಾಚ್ಯ ವಸ್ತುಗಳ ಸಂರಕ್ಷಣೆಗೆ ನಾವು ನೀಡುವ ಪ್ರೋತ್ಸಾಹ ಹಾಗೂ ಸಂರಕ್ಷಣಾ ಕ್ರಮ ನೋಡಿದರೆ ಇನ್ನೂ ಕಡಿಮೆ ಎನಿಸುತ್ತದೆ. ಆದ್ದರಿಂದ ಪ್ರಾಚ್ಯ ವಸ್ತುಗಳು ಒಂದು ದೇಶದ ಆಸ್ತಿ ಇದ್ದ ಹಾಗೆ ಅವುಗಳ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ.

3. ರಾಷ್ಟ್ರೀಯ ಭಾವೈಕ್ಯ

ಪೀಠಿಕೆ:- ಭಾರತವು ಅನೇಕ ಜನಾಂಗಗಳು, ಪಂಗಡಗಳು ಇರುವಂತಹ ಒಂದು ವಿಶಾಲ ರಾಷ್ಟ್ರ. ಇಲ್ಲಿ ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಜಾತಿಗಳ ಜನರು ತಮ್ಮ ವಿವಿಧತೆಯನ್ನು ಮರೆತು ನಾವೆಲ್ಲರೂ ಭಾರತೀಯರು ಎಂಬ ರಾಷ್ಟ್ರೀಯ ಮನೋಭಾವನೆಯನ್ನು ಹೋದಿರುವುದೇ ರಾಷ್ಟ್ರೀಯ ಭಾವೈಕ್ಯತೆ.

ವಿಷಯ ನಿರೂಪಣೆ:- ಭಾರತವು ಪ್ರಜಾಪ್ರಭುತ್ವ ತಳಹದಿಯ ಮೇಲೆ ರೂಪಿತವಾಗಿರುವ ಒಂದು ಜಾತ್ಯತೀತ ರಾಷ್ಟ್ರವಾಗಿದ್ದು ಪ್ರತಿಯೊಂದು ಧರ್ಮೀಯರು ತಮ್ಮ ಸಂಪ್ರದಾಯ, ಪದ್ಧತಿಗಳನ್ನು ಆಚರಿಸಲು ಅವಕಾಶವಿದೆ.

ಭಾರತವು ವಿವಿಧ ಧರ್ಮ, ಭಾಷೆ, ಬುಡಕಟ್ಟು, ಜನಾಂಗಗಳನ್ನು ಹೊದಿಂದ್ದು, ವೈವಿದ್ಯತೆಯನ್ನು ಕಾಣುತ್ತೇವೆ. ದೇಶದ ಎಲ್ಲ ಭಾಗಗಳಲ್ಲಿಯೂ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಭೌಗೋಳಿಕವಾಗಿ : ನಂಬಿಕೆ ಮತ್ತು ಆಚರಣೆಗಳಲ್ಲಿ ವೈವಿಧ್ಯತೆಯನ್ನು ಹೊಂದಿದೆ. ಆದರೂ ನಮ್ಮಲ್ಲಿ ನಾವು ಭಾರತೀಯತೆ ಎಂಬ ಬಲವಾದ ಬೇರಿದೆ. ನಮ್ಮ ದೇಶದ ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರಲಾಂಛನ ಇವು ನಮ್ಮ ಏಕತೆಯ ಸಂಕೇತಗಳಾಗಿದ್ದು ದೇಶಪ್ರೇಮ, ದೇಶಾಭಿಮಾನವನ್ನು ಮೂಡಿಸುತ್ತವೆ. ಇಡೀ ದೇಶವೇ ವೈವಿಧ್ಯಮಯವಾದ ಸಾಂಸ್ಕೃತಿಕ ಪರಿಸರದಲ್ಲಿರುವಾಗ ನಾವು ಒಂದೇ ಮನೆಯವರಂತೆ ಕೂಡಿ ಬಾಳುತ್ತಿರುವುದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಬಹುದು.

ಮುಕ್ತಾಯ:- ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯ ಗಾಳಿಯು ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ಆದರೆ ಭಾರತೀಯರಾದ ನಾವು ಮಾತ್ರ ನಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗೆ ಪ್ರೀತಿ ಹಾಗೂ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಾ, ನಮ್ಮ ದೇಶದ ಏಕತೆಯನ್ನು ಎತ್ತಿ ಹಿಡಿದಿದ್ದೇವೆ.

logoblog

Thanks for reading SSLC Vyagra Geete Lesson Notes

Previous
« Prev Post

No comments:

Post a Comment