SSLC Kannada Namma Bhashe pathada prashottaragalu
ನಮ್ಮ ಭಾಷೆ ಪಾಠದ ಪ್ರಶ್ನೋತ್ತರಗಳು.
ಲೇಖಕರ ಪರಿಚಯ :- ಎಂ. ಮರಿಯಪ್ಪ ಭಟ್ಟರು ೧೯೦೬ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಜನಿಸಿದರು. ಇವರು ತುಳು-ಇಂಗ್ಲಿಷ್ ನಿಘಂಟು, ಅಭಿನವಮಂಗರಾಜನ ನಿಘಂಟು, ಜಾತಕತಿಲಕಂ, ಛಂದಸ್ಸಾರ ಮೊದಲಾದ ಕೃತಿಗಳ ರಚಿಸಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರದ ಪುರಸ್ಕಾರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.
1. ಭಾಷೆ ಯಾವುದಕ್ಕೆ ಸಾಧನವಾಗಿದೆ?
ಉತ್ತರ:- ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನವಾಗಿದೆ.
2. ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಪೇತು ಕೊಡುತ್ತವೆ?
ಉತ್ತರ:- ಪ್ರಾಣಿಗಳು ತಮ್ಮ ಮಕ್ಕಳಿಗೆ ಚಲನವಲನಗಳ ವಿಷಯವಾಗಿ, ಆಹಾರ ವಿಚಾರಗಳ ವಿಚಾರವಾಗಿ ತರಪೇತು ಕೊಡುತ್ತವೆ.
3. ಮನುಷ್ಯನಿಗೆ ಲೆಕ್ಕವಿಡುವ ಆವಶ್ಯಕತೆ ಯಾವಾಗ ಉಂಟಾಯಿತು?
ಉತ್ತರ:- ಮನುಷ್ಯನು ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ, ಮನೆ, ಬದುಕು ಮೊದಲಾದ ಭಾವನೆಗಳು ಮೂಡಿದವೋ ಆಗ ಅವನಿಗೆ ಲೆಕ್ಕವಿಡುವ ಆವಶ್ಯಕತೆ ಉಂಟಾಯಿತು.
4. ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ಯಾರು?
ಉತ್ತರ:- ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ನಯಸೇನ ಕವಿ.
5. ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು?
ಉತ್ತರ:- ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಮಹಮ್ಮದೀಯರ ಆಳ್ವಿಕೆಯ ಅವಧಿಯಲ್ಲಿ ಬಂದವು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
1. ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯ ಲಕ್ಷಣಗಳೇನು?
ಉತ್ತರ:- ವ್ಯಾವಹಾರಿಕವೆಂದರೆ ಜೀವದ್ಭಾಷೆ. ಅದರಲ್ಲಿ ಜನರು ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಉದಾಹರಣೆ ಕನ್ನಡ, ತಮಿಳು, ತೆಲುಗು, ತುಳು, ಮರಾಠಿ, ಉರ್ದು, ಇಂಗ್ಲಿಷ್, ಗ್ರಾಂಥಿಕವೆಂದರೆ ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಉಪಯೋಗವಾದ ಭಾಷೆ, ಉದಾಹರಣೆ ಸಂಸ್ಕೃತ, ಕನ್ನಡ, ಇಂಗ್ಲಿಷ್, ಪಾಳಿ, ಇತ್ಯಾದಿ, ಎಲ್ಲ ವ್ಯಾವಹಾರಿಕ ಭಾಷೆಗಳು ಗ್ರಾಂಥಿಕವಾಗಬೇಕಿಲ್ಲ. ತುಳು ಒಂದು ಸುಂದರ ವ್ಯಾವಹಾರಿಕ ಭಾಷೆ, ಆದರೆ ಅದು ಗ್ರಾಂಥಿಕ ಭಾಷೆಯಲ್ಲ. ಹಾಗೆಯೇ ಎಲ್ಲ ಗ್ರಾಂಥಿಕ ಭಾಷೆಗಳು ಇಂದು ವ್ಯಾವಹಾರಿಕವಾಗಿ ಇರುವುದಿಲ್ಲ. ದೇವಭಾಷೆ ಎನ್ನಿಸಿಕೊಂಡ ಸಂಸ್ಕೃತ ಸರ್ವ ಸಂಪನ್ನತೆಯಿಂದ ಕೂಡಿದ ಗ್ರಾಂಥಿಕ ಭಾಷೆಯಾಗಿದೆ. ಆದರೆ ಇಂದು ಯಾವೊಂದು ಪ್ರದೇಶದಲ್ಲಿಯೂ ಅದು ವ್ಯಾವಹಾರಿಕ ಭಾಷೆಯಾಗಿರುವುದಿಲ್ಲ.
2. ಲಿಪಿಯ ಜಾಡು ಆರಂಭಗೊಂಡ ಬಗೆ ಹೇಗೆ?
ಉತ್ತರ:- ನವಶಿಲಾಯುಗದ ಮಾನವ, ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ. ಮನೆ. ಬದುಕು ಮೊದಲಾದ ಭಾವನೆಗಳನ್ನು ತಳೆಯುವುದಕ್ಕೆ ಎಂದು ಮೊದಲು ಮಾಡಿದನೋ ಅಂದು ಆತನಿಗೆ ಲೆಕ್ಕವಿಡುವ ಆವಶ್ಯಕತೆ ಉಂಟಾಯಿತು. ಇದೇ ಲಿಪಿಯ ಉಗಮದ ಕಾಲವೆನ್ನುವರು. ಯಾವ ಓದುಬರೆಹವಿಲ್ಲದ ಹಳ್ಳಿಯ ಕೆಲಸಗಾರನಾದರೂ ಸರಿಯೆ, ತಾನು ದಿನಗೆಲಸಕ್ಕೆ ಹೋದ ಲೆಕ್ಕವನ್ನು ಗೋಡೆಯ ಮೇಲೆ ದಿನಂಪ್ರತಿ ಒಂದೊಂದು ಗೆರೆ ಎಳೆದು ಗುರುತಿಸಿ, ಕೊನೆಯಲ್ಲಿ ಎಣಿಸಿ ಲೆಕ್ಕಹಾಕಿ ಸಂಬಳವನ್ನು ಪಡೆಯುತ್ತಾನೆ. ಹಾಲು ಮಾರುವವರೂ ಹೀಗೆಯೇ ಲೆಕ್ಕವಿಡುವುದುಂಟು. ಹೀಗೆ ಲಿಪಿಯ ಜಾಡು ಆರಂಭಗೊಂಡಿತು.
3. ಲಿಪಿಯ ಮೂಲಕ ಜ್ಞಾನ ಭಂಡಾರ ಯಾವ ರೀತಿ ಭದ್ರವಾಯಿತು?
ಉತ್ತರ:- ಮಾನವನಿಗೆ ಬಿಡುವು ಹೆಚ್ಚಿದಂತೆ, ಜೀವನದ ಸೌಕರ್ಯಗಳನ್ನು ವಿಶಿಷ್ಟ ಮೇಧಾಶಕ್ತಿಯಿಂದ ಅಭಿವೃದ್ಧಿಗೊಳಿಸುತ್ತಾ ಹೋದಂತೆ ತನ್ನ ಆಗುಹೋಗುಗಳನ್ನು, ಸುಖ ದುಃಖಗಳನ್ನು ಕಾವ್ಯರೂಪಕ್ಕೆ ಇಳಿಸುವ ಮಾರ್ಗವನ್ನು ಕಂಡುಕೊಂಡನು. ಸಾಹಿತ್ಯ ವಿವಿಧ ರೂಪದಲ್ಲಿ ಬೆಳೆಯಿತು. ಲೆಕ್ಕಪತ್ರಗಳನ್ನಿಡಲು ಉಪಯುಕ್ತವಾದ ಮೂಲಲಿಪಿಯನ್ನು ಮತ್ತಷ್ಟು ಪರಿಷ್ಕರಿಸುತ್ತಾ ಸುಂದರವಾದ ಸಾಹಿತ್ಯ ಕೃತಿಗಳನ್ನು ಬರೆದಿಡುವುದನ್ನು ಮಾನವ ಕಲಿತುಕೊಂಡ. ಆ ಲಿಪಿಯ ಮೂಲಕ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು. ಜ್ಞಾನ ಭಂಡಾರ ಭದ್ರವಾಯಿತು. ಸಂಸ್ಕೃತಿಯ ಇತಿಹಾಸ ಉಳಿಯಿತು. ಪ್ರಗತಿಪಥ ಸುಗಮವಾಯಿತು.
4. ಕನ್ನಡ ಭಾಷೆ ಹದಗೊಂಡದ್ದು ಹೇಗೆ?
ಉತ್ತರ:- ಅನೇಕ ಕವಿಗಳು ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ಸಾರಿದ್ದಾರೆ. ಅಂಥವರ ವಾಣಿಯಿಂದ ಕನ್ನಡದ ವೀಣೆ ಮೃದು ಮಧುರವಾಗಿ ಮಿಡಿಯಿತು. ಮುಂದೆ ಬಸವೇಶ್ವರ, ಅಲ್ಲಮಪ್ರಭುಗಳಂತಹ ಶರಣವರೇಣ್ಯರು, ಚಾಮರಸ, ಕುಮಾರವ್ಯಾಸರಂತಹ ಕವಿಪುಂಗವರು, ಪುರಂದರದಾಸ, ಕನಕದಾಸರಂತಹ ದಾಸ ಶೇಷ್ಠರು ಸುಲಭ ಮಾರ್ಗವನ್ನೇ ತುಳಿದರು. ತಮ್ಮ ತಮ್ಮ ಅನುಭವಸಾರವನ್ನು ಸುಲಭವೂ ಸುಂದರವೂ ಸಹಜವೂ ಆದ ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು. ಹೀಗೆ ಕನ್ನಡ ಭಾಷೆ ಹದಗೊಂಡಿತು.
5. ಆಂಗ್ಲ ಭಾಷೆ ವಿಶ್ವವ್ಯಾಪಿಯಾಗಲು ಕಾರಣವೇನು?
ಉತ್ತರ:- ಆಂಗ್ಲಭಾಷೆ ಯೂರೋಪಿನ ಸಾಮಾನ್ಯ ಭಾಷೆಗಳಲ್ಲಿ ಒಂದಾಗಿತ್ತು. ಆಂಗ್ಲ ಜನತೆ ಸಾಹಸಜೀವಿಯಾಯಿತು. ಬುದ್ದಿಶಾಲಿಯಾಯಿತು. ಸೂರ್ಯನು ಎಂದೂ ಮುಳುಗನೆನ್ನುವಂತಹ ವಿಸ್ತಾರವಾದ ಸಾಮ್ರಾಜ್ಯವನ್ನು ಸ್ಥಾಪಿಸಿತು. ದೇಶ ವಿದೇಶಗಳ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಆಂಗ್ಲ ಪಂಡಿತರು ಮುಕ್ತ ಮನಸ್ಸಿನಿಂದ ಅಭ್ಯಸಿಸಿದರು. ತನ್ಮೂಲಕ ತಮ್ಮ ಭಾಷೆ ಮತ್ತು ಸಾಹಿತ್ಯವನ್ನು ಹಿಗ್ಗಿಸಿದರು. ಅರಳಿಸಿದರು. ಎಲ್ಲಕ್ಕೂ ಮೇಲಾಗಿ ಮಹಾ ಮೇಧಾವಿಗಳು ತಮ್ಮ ಆಸೆ, ಆಕಾಂಕ್ಷೆ, ವಿಚಾರ ಮುಂತಾದುವುಗಳನ್ನು ಆ ಭಾಷೆಯ ಮುಖಾಂತರವಾಗಿಯೇ ಹೇಳಬೇಕೆಂಬ ಉಜ್ವಲ ಅಭಿಮಾನವುಳ್ಳವರಾಗಿದ್ದರು. ಆಂಗ್ಲ ವಿಜ್ಞಾನಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಹೀಗೆ ಎಲ್ಲರೂ ತಮ್ಮ ಭಾಷೆಯನ್ನೇ ಬಳಸಿದುದರ ಪರಿಣಾಮವಾಗಿ ಆಂಗ್ಲ ಭಾಷೆ ಬೆಳೆದು ವಿಶ್ವವ್ಯಾಪಿಯಾಗಲು ಕಾರಣವಾಯಿತು,
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1. ಭಾಷೆ ಸತ್ವಪೂರ್ಣವಾಗಿ ವಿಕಾಸಗೊಳ್ಳುವುದು ಯಾವಾಗ?
ಉತ್ತರ:- ಒಂದು ಭಾಷೆ ಸತ್ವಪೂರ್ಣವಾಗಿ ವಿಕಾಸವಾಗಬೇಕಾದರೆ ಅದನ್ನಾಡುವ ಜನ ಅಭಿಮಾನಧನರೂ ಬುದ್ಧಿಶಾಲಿಗಳೂ ಪ್ರಯೋಗಶೀಲರೂ ಆಗಿರಬೇಕು. ಉದಾಹರಣೆಗೆ: ನಾಲೈದು ಶತಮಾನಗಳ ಹಿಂದೆ ಆಂಗ್ಲಭಾಷೆ ಯೂರೋಪಿನ ಸಾಮಾನ್ಯ ಭಾಷೆಗಳಲ್ಲಿ ಒಂದಾಗಿತ್ತು. ಇಂದು ಪ್ರಪಂಚದ ದೊಡ್ಡ ಭಾಷೆಗಳಲ್ಲಿ ಒಂದಾಗಿದೆ. ಇದಕ್ಕೆಲ್ಲ ಕಾರಣ ಆಂಗ್ಲ ಜನರ ಸಂಕಲ್ಪ, ಭಾಷಾಕೃಷಿ ಕಾರಣವೆಂದು ಹೇಳಬಹುದು. ಆಂಗ್ಲ ಜನರು ಸಾಹಸಜೀವಿಗಳು, ಬುದ್ದಿಶಾಲಿಗಳಾಗಿದ್ದರು, ದೇಶ ವಿದೇಶಗಳ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಮುಕ್ತ ಮನಸ್ಸಿನಿಂದ ಅಭ್ಯಸಿಸಿದರು. ಈ ಮೂಲಕ ತಮ್ಮ ಭಾಷೆ ಮತ್ತು ಸಾಹಿತ್ಯವನ್ನು ಹಿಗ್ಗಿಸಿದರು. ಆರಳಿಸಿದರು. ಎಲ್ಲಕ್ಕೂ ಮೇಲಾಗಿ ಅಲ್ಲಿನ ಮಹಾ ಮೇಧಾವಿಗಳು ತಮ್ಮ ಆಸೆ, ಆಕಾಂಕ್ಷೆ, ವಿಚಾರ ಮುಂತಾದುವುಗಳನ್ನು ಆಂಗ್ಲಭಾಷೆಯ ಮುಖಾಂತರವಾಗಿಯೇ ಹೇಳಬೇಕೆಂಬ ಉಜ್ವಲ ಅಭಿಮಾನವುಳ್ಳವರಾಗಿದ್ದರು. ವಿಜ್ಞಾನಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಹೀಗೆ ಎಲ್ಲರೂ ತಮ್ಮ ಭಾಷೆಯನ್ನೇ ಬಳಸಿದುದರ ಪರಿಣಾಮವಾಗಿ ಅವರ ಭಾಷೆ ಸತ್ವಪೂರ್ಣವಾಗಿ ವಿಕಾಸಗೊಂಡಿತು.
ಹಾಗೆಯೇ ನೆರೆಹೊರೆಯ ಭಾಷೆಗಳನ್ನು ದ್ವೇಷಿಸದೆ, ನಮ್ಮ ನಮ್ಮ ಭಾಷೆಗಳನ್ನು ಗೌರವಿಸಿ, ಪ್ರೀತಿಸಿ ಅಭಿವೃದ್ಧಿಗೊಳಿಸಬೇಕು. ನೆರೆಹೊರೆಯ ಭಾಷೆಗಳಲ್ಲಿ ಕೊಳುಕೊಡುಗೆಯ ವ್ಯವಹಾರ ನಡೆದೇ ನಡೆಯುತ್ತದೆ. ನಡೆಯಲೇಬೇಕು. ಅದು ಸಜೀವ ಭಾಷೆಯ ಲಕ್ಷಣ. ಆದರೆ ಸ್ವೀಕರಿಸುವಾಗ ತನ್ನತನವನ್ನು ಕಳೆದುಕೊಳ್ಳದಂತೆ ಕಾಪಾಡಿಕೊಳ್ಳಬೇಕು. ಸ್ವಾಭಾವಿಕವಾಗಿ ಗಡಿ ಜನರ ವ್ಯವಹಾರ ಸಂಪರ್ಕಗಳಿಂದ ನೆರಮಾತುಗಳಲ್ಲಿ ಕೊಳುಕೊಡುಗೆ ನಡೆಯುತ್ತಲೇ ಇದೆ. ಅದರ ನೆರನುಡಿಗಳೂ ಪರಸ್ಪರ ಎರವುಗಳಿಂದ ಅಭಿವೃದ್ಧಿ ಹೊಂದಿ ಭಾಷೆ ಸತ್ವಪೂರ್ಣವಾಗಿ ವಿಕಾಸವಾಗಲು ಸಾಧ್ಯವಾಗುತ್ತದೆ.
2. ಕನ್ನಡಭಾಷೆ ಸಮೃದ್ಧವಾಗಿ ರೂಪುಗೊಂಡ ಬಗೆ ಹೇಗೆ? ವಿವರಿಸಿ.
ಉತ್ತರ:- ಕನ್ನಡ ಭಾಷೆಗೆ ಪ್ರಾಚೀನ ಕಾಲದಿಂದಲೂ ಸಂಸ್ಕೃತ ಭಾಷೆಯ ಪೋಷಣೆ ದೊರೆಯುತ್ತಾ ಬಂದಿದೆ. ಕನ್ನಡದ ಪಂಡಿತರು ವೈದಿಕ ಹಾಗೂ ಧಾರ್ಮಿಕ ತತ್ವಗಳನ್ನು ಕನ್ನಡದಲ್ಲಿ ವಿವರಿಸಲು ಅಭಿಲಾಷೆಯಿಂದ ಕಾವ್ಯಗಳನ್ನು ರಚಿಸಿದರು. ಅನೇಕ ಕವಿಗಳು ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ಸಾರಿದ್ದಾರೆ. ಅಂಥವರ ವಾಣಿಯಿಂದ ಕನ್ನಡದ ವೀಣೆ ಮೃದು ಮಧುರವಾಗಿ ಮಿಡಿಯಿತು. ಬಸವೇಶ್ವರ, ಅಲ್ಲಮಪ್ರಭುಗಳಂತಹ ಶರಣವರೇಣ್ಯರು. ಚಾಮರಸ, ಕುಮಾರವ್ಯಾಸರಂತಹ ಕವಿಪುಂಗವರು, ಪುರಂದರದಾಸ, ಕನಕದಾಸರಂತಹ ದಾಸ ಶೇಷ್ಠರು ಸುಲಭ ಮಾರ್ಗವನ್ನೇ ತುಳಿದರು. ತಮ್ಮ ತಮ್ಮ ಅನುಭವಸಾರವನ್ನು ಸುಲಭವೂ ಸುಂದರವೂ ಸಹಜವೂ ಆದ ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು. ಹೀಗೆ ಕನ್ನಡ ಭಾಷೆ ಹದಗೊಂಡುದರಿಂದ ಅದು ಸುಲಿದ ಬಾಳೆಯ ಹಣ್ಣಿನಂತೆ. ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಯಿತು. ಸಂಸ್ಕೃತ, ಪ್ರಾಕೃತ ಭಾಷೆಗಳಿಂದ (ತತ್ಸಮ ತದ್ಭವಗಳಾಗಿ) ಅನೇಕ ಶಬ್ದಗಳನ್ನು ಕನ್ನಡ ತನ್ನಲ್ಲಿ ಅಳವಡಿಸಿಕೊಂಡಿದೆ. ಮಹಮ್ಮದೀಯರ ಆಳ್ವಿಕೆಯ ಅವಧಿಯಲ್ಲಿ ಪರ್ಷಿಯನ್ ಭಾಷೆಯಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದಿವೆ. ಅಸಂಖ್ಯಾತ ಇಂಗ್ಲಿಷ್ ಶಬ್ದಗಳು ಕನ್ನಡದ ಉಡುಪನ್ನು ಧರಿಸಿ ಒಳಗೆ ಬಂದು ಬಿಟ್ಟಿವೆ. ಸ್ವಾಭಾವಿಕವಾಗಿ ಗಡಿ ಜನರ ವ್ಯವಹಾರ ಸಂಪರ್ಕಗಳಿಂದ ನೆರೆಮಾತುಗಳಲ್ಲಿ ಕೊಳುಕೊಡುಗೆ ನಡೆಯುತ್ತಲೇ ಇದೆ. ಇದರಿಂದ ಕನ್ನಡವೂ ಅದರ ನೆರನುಡಿಗಳೂ ಪರಸ್ಪರ ಎರವುಗಳಿಂದ ಅಭಿವೃದ್ಧಿ ಹೊಂದುತ್ತಲಿವೆ. ಜೊತೆಗೆ ಭಾಷೆಯಲ್ಲಿರುವ ಸಾಮಗ್ರಿಯನ್ನೇ(ಪದಗಳನ್ನು) ಬಳಸಿಕೊಂಡು ನುಡಿಗಟ್ಟುಗಳಾಗಿ ಮಾಡಿಕೊಂಡು ಕನ್ನಡ ಭಾಷೆಯು ಸಮೃದ್ಧವಾಗಿ ರೂಪಗೊಂಡಿತು.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. "ಸಂಸ್ಕೃತಿಯ ಇತಿಹಾಸ ಉಳಿಯಿತು"
ಆಯ್ಕೆ:- ಈ ವಾಕ್ಯವನ್ನು 'ಎಂ.ಮರಿಯಪ್ಪ ಭಟ್ಟರು' ಬರೆದಿರುವ 'ಕನ್ನಡ ಸಂಸ್ಕೃತಿ' ಎಂಬ ಪ್ರಬಂಧ ಸಂಕಲನದಿಂದ ಆಯ್ದ ನಮ್ಮ ಭಾಷೆ' ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
' ಸಂದರ್ಭ :- ನವಶಿಲಾಯುಗದ ಮಾನವ, ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ, ಮನೆ, ಬದುಕು ಮೊದಲಾದ ಭಾವನೆಗಳನ್ನು ತಳೆಯಲು ಪ್ರಾರಂಭಿಸಿ, ಜೀವನದ ಸೌಕರ್ಯಗಳನ್ನು ವಿಶಿಷ್ಟ ಮೇಧಾಶಕ್ತಿಯಿಂದ ಅಭಿವೃದ್ಧಿಗೊಳಿಸುತ್ತಾ ಹೋದಂತೆ ತನ್ನ ಆಗುಹೋಗುಗಳನ್ನು, ಸುಖ ದುಃಖಗಳನ್ನು ಕಾವ್ಯರೂಪಕ್ಕೆ ಇಳಿಸುವ ಮಾರ್ಗವನ್ನು ಕಂಡುಕೊಂಡನು. ಸುಂದರವಾದ ಸಾಹಿತ್ಯ ಕೃತಿಗಳನ್ನು ಬರೆದಿಡುವುದನ್ನು ಮಾನವ ಕಲಿತುಕೊಂಡನು. ಲಿಪಿಯ ಮೂಲಕ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು. ಜ್ಞಾನ ಭಂಡಾರ ಭದ್ರವಾಯಿತು. "ಸಂಸ್ಕೃತಿಯ ಇತಿಹಾಸ ಉಳಿಯಿತು", ಪ್ರಗತಿಪಥ ಸುಗಮವಾಯಿತು ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- ಭಾಷೆ ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸವನ್ನು ಉಳಿಸಲು, ಬೆಳೆಸಲು ಸಹಾಯಕವಾಗುತ್ತದೆ ಎಂಬುದು ಸ್ವಾರಸ್ಯಕರವಾಗಿದೆ. ನಾಡಿನ ಪರಂಪರ
2. "ತಕ್ಕುದೆ ಬೆರಸ ಧೃತಮುಮಂ ತೈಲಮುಮಂ'
ಆಯ್ಕೆ:- ಈ ವಾಕ್ಯವನ್ನು 'ಎಂ.ಮರಿಯಪ್ಪ ಭಟ್ಟರು' ಬರೆದಿರುವ 'ಕನ್ನಡ ಸಂಸ್ಕೃತಿ' ಎಂಬ ಪ್ರಬಂಧ ಸಂಕಲನದಿಂದ ಆಯ್ದ 'ನಮ್ಮ ಭಾಷೆ' ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಕನ್ನಡಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ದೊರೆಯುತ್ತ ಬಂದಿದೆ. ವೈದಿಕ ಹಾಗೂ ಜೈನ ಧಾರ್ಮಿಕ ತತ್ವಗಳನ್ನು ಕನ್ನಡದಲ್ಲಿ ವಿವರಿಸಬೇಕೆಂಬ ಅಭಿಲಾಷೆಯಿಂದ ಅನೇಕ ಪಂಡಿತರು ಉತ್ತಮ ಕಾವ್ಯಗಳನ್ನು ರಚಿಸಿದರು. ಆದರೆ ಅವರಲ್ಲಿ ಅನೇಕರು ಕನ್ನಡವನ್ನು ಸಂಸ್ಕೃತಮಯವನ್ನಾಗಿ ಮಾಡಿಬಿಟ್ಟರು. ಇಂಥ ಪರಿಸ್ಥಿತಿಯನ್ನು ಗಮನಿಸಿ 12 ನೆಯ ಶತಮಾನದ ನಯಸೇನ ಕವಿ "ತಕ್ಕುದೆ ಬೆರಸ ಧೃತಮುಮಂ ತೈಲಮುಮಂ" ಅಂದರೆ ಎಣ್ಣೆ ತುಪ್ಪದ ಮಿಶ್ರಣ ಮಾಡುವುದು ಯೋಗ್ಯವಾದುದಲ್ಲ. ನಮಗೆ ತುಪ್ಪವೂ ಬೇಕು: ಎಣ್ಣೆಯೂ ಬೇಕು. ಸಂಸ್ಕೃತವೂ ಬೇಕು; ಕನ್ನಡವೂ ಬೇಕು. ಆದರೆ ಎಣ್ಣೆತುಪ್ಪದ ಅಸ್ವಾದು ಮಿಶ್ರಣಬೇಡ. ಎಂಬುದು ನಯಸೇನನ ಅಭಿಮತವನ್ನು ಲೇಖಕರು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ:- ಕನ್ನಡ ಭಾಷಾ ಸಾಹಿತ್ಯದಲ್ಲಿ ಸಂಸ್ಕೃತ ಪದಗಳನ್ನು ಸೇರಿಸಿ ಕಾವ್ಯ ರಚಿಸಿದರೆ ಕಾವ್ಯ ರುಚಿಸುವುದಿಲ್ಲ, ಅದು ಅಸ್ವಾದು ಎಂದು ಕನ್ನಡ ಭಾಷಾ ಶುದ್ಧತೆಯ ಬಗ್ಗೆ ಹೇಳಿರುವುದು ಸ್ವಾರಸ್ಯಪೂರ್ಣವಾಗಿ ಬಂದಿದೆ.
3. "ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಆಳಿದ ಹಾಲಿನಂತೆ"
ಆಯ್ಕೆ:- ಈ ವಾಕ್ಯವನ್ನು 'ಎಂ.ಮರಿಯಪ್ಪ ಭಟ್ಟರು' ಬರೆದಿರುವ 'ಕನ್ನಡ ಸಂಸ್ಕೃತಿ' ಎಂಬ ಪ್ರಬಂಧ ಸಂಕಲನದಿಂದ ಆಯ್ದ 'ನಮ್ಮ ಭಾಷೆ' ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ :- ಅನೇಕ ಕವಿಗಳು ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ಸಾರಿದ್ದಾರೆ. ಅಂಥವರ ವಾಣಿಯಿಂದ ಕನ್ನಡದ ವೀಣೆ ಮೃದು ಮಧುರವಾಗಿ ಮಿಡಿಯಿತು. ಮುಂದೆ ಬಸವೇಶ್ವರ, ಅಲ್ಲಮಪ್ರಭುಗಳಂತಹ ಶರಣವರೇಣ್ಯರು, ಚಾಮರಸ, ಕುಮಾರವ್ಯಾಸರಂತಹ ಕವಿಪುಂಗವರು, ಪುರಂದರದಾಸ, ಕನಕದಾಸರಂತಹ ದಾಸ ಶೇಷ್ಠರು ಸುಲಭ ಮಾರ್ಗವನ್ನೇ ತುಳಿದರು. ತಮ್ಮ ತಮ್ಮ ಅನುಭವಸಾರವನ್ನು ಸುಲಭವೂ ಸುಂದರವೂ ಸಹಜವೂ ಆದ ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು. ಹೀಗೆ ಕನ್ನಡ ಭಾಷೆ ಹದಗೊಂಡುದರಿಂದ ಅದು "ಸುಲಿದ ಬಾಳೆಯ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ" ಎಂದು
ಕವಿ ಮಹಲಿಂಗರಂಗ ಸಾರಿ ಹೇಳಿದನು ಎನ್ನುವ ವಿಚಾರವನ್ನು ಹೇಳುವ ಸಂದರ್ಭವಾಗಿದೆ. ಸ್ವಾರಸ್ಯ :- ಕನ್ನಡ ಭಾಷೆಯು ಕಲಿಯಲು ಸುಲಭವೂ, ಸುಂದರವೂ, ಸಹಜವೂ, ರುಚಿಕರವೂ ಆಗಿದೆ ಎಂದು ಕನ್ನಡ ಭಾಷೆಯ ಸೊಬಗಿನ ಬಗ್ಗೆ ವರ್ಣಿಸಿರುವುದು ಸ್ವಾರಸ್ಯಕರವಾಗಿದೆ.
4. "ಒಬ್ಬ ತಾಯಿಯ ಗಾನದ ಶ್ರುತಿಯಂತೆ"
ಆಯ್ಕೆ:- ಈ ವಾಕ್ಯವನ್ನು 'ಎಂ.ಮರಿಯಪ್ಪ ಭಟ್ಟರು' ಬರೆದಿರುವ 'ಕನ್ನಡ ಸಂಸ್ಕೃತಿ' ಎಂಬ ಪ್ರಬಂಧ ಸಂಕಲನದಿಂದ ಆಯ್ದ 'ನಮ್ಮ ಭಾಷೆ' ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ :- ಭಾಷೆಗಳಲ್ಲಿ ಮೇಲು-ಕೀಳೆಂಬುದಿಲ್ಲ. ನಾಲ್ಕು ಜನ ಮಾತನಾಡುತ್ತಿದ್ದ ಭಾಷೆಗೂ ನಲವತ್ತು ಲಕ್ಷ ಜನ ಮಾತನಾಡುತ್ತಿದ್ದ ಭಾಷೆಗೂ ಸತ್ಯ ಹಾಗೂ ಸತ್ಯದೃಷ್ಟಿಯಿಂದ ಅಂತರವೇ ಇಲ್ಲ. ಎಲ್ಲ ಭಾಷೆಗಳೂ ಅಷ್ಟೇ. "ಒಬ್ಬ ತಾಯಿಯ ಗಾನದ ಶ್ರುತಿಯಂತೆ" ಎಲ್ಲಕ್ಕೂ ಅಷ್ಟೇ ಸ್ಥಾನವಿದೆ. ಇದನ್ನರಿತು ಭಾರತೀಯರಾದ ನಾವು ನೆರೆಹೊರೆಯ ಭಾಷೆಗಳನ್ನು ದ್ವೇಷಿಸದೆ, ನಮ್ಮ ನಮ್ಮ ಭಾಷೆಗಳನ್ನು ಗೌರವಿಸಿ, ಪ್ರೀತಿಸಿ ಅಭಿವೃದ್ಧಿಗೊಳಿಸಿದರೆ ದೇಶದ ಸಂಸ್ಕೃತಿ ಮುಂದುವರಿಯುತ್ತದೆ ಎಂದು ಲೇಖಕರು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- ಸ್ವಭಾಷೆಯನ್ನು ಪ್ರೀತಿಸಬೇಕು. ಗೌರವಿಸಬೇಕು. ಬೆಳೆಸಬೇಕು ಎನ್ನುವ ಧಾತಂತದಲ್ಲಿ ಅನ್ಯಭಾಷೆಗಳನ್ನು ತಿರಸ್ಕರಿಸಬಾರದು ಎಂದು ಭಾಷಾ ಭಾವೈಕ್ಯತೆಯ ಬಗ್ಗೆ ಹೇಳಿರುವುದು ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
ಉ) ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.
1. 2. ಕನ್ನಡಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ದೊರೆಯುತ್ತಾ ಬಂದಿದೆ.
ಭಾಷೆ ಇದ್ದೂ ಅದರ ಪೀಯೂಷವನ್ನು ಕುಡಿದು ಅರಗಿಸಿಕೊಳ್ಳದ. ವ್ಯಕ್ತಿ ಜಂತುವೇ ಸರಿ.
3. ಕನ್ನಡ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದೆ.
4. ಇಂಗ್ಲಿಷ್ ಶಬ್ದಗಳು ಕನ್ನಡದ ಉಡುಪನ್ನು ಧರಿಸಿ ಒಳಗೆ ಬಂದು ಬಿಟ್ಟಿವೆ.
5. ನಮ್ಮ ಭಾಷೆ ಗದ್ಯ ಭಾಗದ ಆಕರ ಗ್ರಂಥ ಕನ್ನಡ ಸಂಸ್ಕೃತಿ.
ಊ) ಹೊಂದಿಸಿ ಬರೆಯಿರಿ.
1
2
3
ಸರಿ ಉತ್ತರಗಳು
ವ್ಯಾವಹಾರಿಕ
'ಬ' ಪಟ್ಟಿ
6
ಶ್ರವಣ
ದಾಸರು
ಅನ್ಯದೇಶ್ಯ
ಕೀರ್ತನೆಗಳು
ದಿವಾನ
ಚಾಕ್ಷುಷ
ಕೀರ್ತನೆಗಳು
ಅನ್ಯದೇಶ್ಯ
4
5
గ్రాంథిక
ತದ್ಭವರೂಪ
ಚಾಕ್ಷುಷ
ಶಿವಶರಣರು
ವಚನಗಳು
ವಚನಗಳು
ಶ್ರವಣ
ಪ್ರಾಯೋಗಿಕ ಅಭ್ಯಾಸ
ಅ). ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ.
ವಿಚಾರವಿನಿಮಯ:- ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನವಾಗಿದೆ.
ಸಂಶೋಧಕ:- ಹೊಸ ವಸ್ತು, ಸಂಗತಿ, ವಿಚಾರಗಳನ್ನು ಶೋಧಿಸಿ ಬೆಳಕಿಗೆ ತರುವವನು ಸಂಶೋಧಕನಾಗುತ್ತಾನೆ.
ಪರಿಷ್ಕರಿಸು:- ಕಾನೂನುಗಳು ಕಾಲಕ್ಕೆ ತಕ್ಕಂತೆ ಪರಿಷ್ಕರಿಸಬೇಕು.
ಪ್ರಗತಿಪಥ:- ಭಾರತ ದೇಶವು ಪ್ರಗತಿಪಥದಲ್ಲಿದೆ.
ಆ) ಕೊಟ್ಟಿರುವ ಕನ್ನಡರೂಪಗಳ ಮೂಲರೂಪ ಬರೆಯಿರಿ.
1. ಹೋಟ್ಲು - ಹೋಟೆಲ್
2. ಇಸ್ಕೂಲು - ಸ್ಕೂಲ್
3. ಆಫೀಸು - ಆಫೀಸ್
4. ಲೈಟು - ಲೈಟ್
5. ಹಾಸ್ಪಿಟಲು - ಹಾಸ್ಪಿಟಲ್
ಭಾಷಾ ಚಟುವಟಿಕೆ
1. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.
ಕಾರ್ಯ, ಕತ್ತಲೆ, ಇಲ್ಲ, ಶಸ್ತ್ರ, ಸ್ಫೋಟಿಸು, ಎಚ್ಚರ, ಕಣ್ಣಿಗೆ, ಅದ್ಭುತ, ಡಾಕ್ಟರ್, ಬಟ್ಟೆ, ವಿಜಾತೀಯ ಸಂಯುಕ್ತಾಕ್ಷರಗಳು - ಕಾರ್ಯ, ಶಸ್ತ್ರ, ಸ್ಫೋಟಿಸು. ಅದ್ಭುತ, ಡಾಕ್ಟರ್
2. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ.
ಸಮನಾಗಿ, ದೇಶ, ಮನೆಯ, ರೋದನ, ಬಳಿಕ, ನೆಲ, ಮದುವೆ, ಮಾನುಷ, ಹೊತ್ತು, ಒಳಗೆ
ದೇಶ-ಶ
ಮನೆಯ-ಯ
ರೋದನ-ರೋ
-
ನೆಲ-ಲ
ಮದುವೆ-ವ
ಹೊತ್ತು-ಹೊ
パー
3. ಕೊಟ್ಟಿರುವ ಪದಗಳಲ್ಲಿನ ಧ್ವನಿ ವ್ಯತ್ಯಾಸದೊಂದಿಗೆ ಆಗುವ ಅರ್ಥ ವ್ಯತ್ಯಾಸ ಅರಿಯಿರಿ
ಪ್ರದಾನ > ಪ್ರಧಾನ. ಮದ್ಯ > ಮಧ್ಯ, ಹುಣ್ಣು > ಉಣ್ಣು, ಸುಳಿ > ಸುಲಿ
4. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ.
ಅ) ಕ್, ಗ್ : ಅಲ್ಪಪ್ರಾಣಾಕ್ಷರಗಳು : : ಭ್. ಝ್ : ಮಹಾಪ್ರಾಣಾಕ್ಷರಗಳು
ಆ) ವರ್ಗೀಯ ವ್ಯಂಜನಾಕ್ಷರಗಳು : 25 : : ಅವರ್ಗೀಯ ವ್ಯಂಜನಾಕ್ಷರಗಳು ೨
ಇ) ಆ, ಈ, ಊ : ದೀರ್ಘಸ್ವರಗಳು : : ಅ, ಇ. ಉ. ಋ : ಹ್ರಸ್ವಸ್ವರಗಳು
ಈ) ಸ್ವರಗಳು : 13 : : ಯೋಗವಾಹಗಳು : 2
5. ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ರಚಿಸಿರಿ.
1. ರಾಷ್ಟ್ರೀಯ ಹಬ್ಬಗಳ ಮಹತ್ವ
ಪೀಠಿಕೆ:- ಒಂದು ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಭಾರತದಂತಹ ವೈವಿಧ್ಯತೆಯುಳ್ಳ ರಾಷ್ಟ್ರಗಳಲ್ಲಿ ಏಕತೆಯನ್ನು ಸಾಧಿಸುವುದು ಇಂತಹ ರಾಷ್ಟ್ರೀಯ ಹಬ್ಬಗಳ ಮೂಲಕ ಸಾಧ್ಯವಿದೆ.
"ಇಡೀ ರಾಷ್ಟ್ರದ ಜನರೆಲ್ಲರೂ ಯಾವುದೇ ಭೇಧಭಾವವಿಲ್ಲದೆ, ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆಯನ್ನು ತೊರೆದು ಒಟ್ಟಾಗಿ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳು, ನಮ್ಮದೇಶದಲ್ಲಿ ಮೂರು ರಾಷ್ಟ್ರೀಯ ಹಬ್ಬಗಳೆಂದು ಘೋಸಿಸಲಾಗಿದೆ. ಅವುಗಳೆಂದರೆ 1) ಸ್ವಾತಂತ್ರ್ಯ ದಿನಾಚರಣೆ 2) ಗಣರಾಜ್ಯೋತ್ಸವ 3) ಗಾಂಧಿ ಜಯಂತಿ,
1) ಸ್ವಾತಂತ್ರ್ಯ ದಿನಾಚರಣೆ: ಭಾರತ ಸುಮಾರು ಎರಡು ನೂರು ವರ್ಷಗಳ ಕಾಲ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತ್ತು. ವ್ಯಾಪಾರಕ್ಕಾಗಿ ಬಂದ ಬ್ರಿಟೀಷರು ಭಾರತೀಯ ರಾಜರ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಭಾರತ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಭಾರತಿಯರಿಗೆ ಸ್ವಾತಂತ್ರ ಎನ್ನವುದೇ ಇರಲಿಲ್ಲ. ಹಾಗಾಗಿ ಭಾರತೀಯರೆಲ್ಲರೂ ಒಟ್ಟಾಗಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ರಣಕಹಳೆಯನ್ನು ಊದಿ ಕೊನೆಗೆ 1947 ನೇ ಆಗಸ್ಟ್ 15 ರಂದು ಸ್ವಾತಂತ್ರವನ್ನು ಪಡೆದರು. ಆ ದಿನವನ್ನು ಪ್ರತಿವರ್ಷ ಭಾರತೀಯರೆಲ್ಲರೂ ಒಟ್ಟಾಗಿ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ రాష్ట్రీయ ఐకృతయన్ను మరియుత్తార 2) : ಭಾರತದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ ಎಲ್ಲ ರಾಜ್ಯಗಳನ್ನು ಗಣಗಳನ್ನಾಗಿ ಮಾಡಿ (ಒಟ್ಟುಗೂಡಿಸಿ) ಉತ್ತಮವಾದ
ಗಣರಾಜ್ಯೋತ್ಸವ ಆಡಳಿತ ನಡೆಸಲು ಕಾನೂನುರೂಪ ಪಡೆದ ಸಂವಿಧಾನವನ್ನು ಜನೇವರಿ 26.1950 ರಲ್ಲಿ ಜಾರಿಗೆ ತರಲಾಯಿತು. ಆ ದಿನವೇ ಗಣರಾಜ್ಯ ದಿನ. ಇದನ್ನು ಕೂಡ ನಮ್ಮ ದೇಶದ ಪ್ರಜೆಗಳೆಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಾರೆ.ಈ ದಿನ ಸಂವಿಧಾನದ ನಿರ್ಮಾತೃಗಳು ಹಾಗೂ ತತ್ವಗಳನ್ನು ಸ್ಮರಿಸಿಕೊಳ್ಳತ್ತಾರೆ. ಪ್ರತಿಯೊಬ್ಬರು ಸಂವಿಧಾನ ಪಾಲಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳುವ ಆಶಯನ್ನು ಪಡೆಯುತ್ತಾರೆ. ಹಾ ಸಾರುವ ಕಾಠ್ಯಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ದೇಶಭಕ್ತಿ . ಹಾಗೆಯೇ ದೇಶ
3) ಗಾಂಧಿ ಜಯಂತಿ : ಯಾವುದೇ ಒಂದು ದೇಶದ ಜನರೆಲ್ಲರೂ ಒಟ್ಟಾಗಿ ಸೇರಲು ನಾಯಕತ್ವ ಬೇಕು. ಅಂತೆಯೇ ನಮ್ಮ ದೇಶದ ಸ್ವಾತಂತ್ರ್ಯ, ಪಡೆಯಲು ನಾಯಕತ್ವವಹಿಕೊಂಡವರು ನಮ್ಮ ದೇಶದ ರಾಷ್ಟ್ರಪಿತ ಎನಿಸಿಕೊಂಡ ಮಹಾತ್ಮ ಗಾಂಧೀಜಿಯವರು. ಅವರ ಹುಟ್ಟಿದ ದಿನವೇ ಅಕ್ಟೋಬರ್ 2. ಆ ದಿನವನ್ನು ಗಾಂಧಿಜಯಂತಿಯೆಂದು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ ಗಾಂಧೀಜಿವರು ಸ್ವಾತಂತ್ರ್ಯ ಚಳುವಳಿಯ ಮುಂದಾಳತ್ವವನ್ನು ವಹಿಸಿಕೊಂಡು ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡರು, ಆದ್ದರಿಂದ ಅವರ ಆದರ್ಶಗಳನ್ನು ನೆನೆಯುತ್ತ, ಅವರನ್ನು ಸ್ಮರಿಸುತ್ತಾ ಸ್ವಾತಂತ್ರ್ಯದ ಮಹತ್ವದಬಗ್ಗೆ ಕೊಂಡಾಡುವ ದಿನವಾಗಿದೆ.
2. ಗ್ರಂಥಾಲಯಗಳ ಮಹತ್ವ
ಉಪಸಂಹಾರ :- ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಿಂದ ಪ್ರತಿಯೊಬ್ಬ ನಾಗರಿಕರಲ್ಲಿ ವಿಕತೆ, ದೇಶಭಕ್ತಿ, ಸಂವಿಧಾನದ ಮಹತ್ವ, ನಾಯಕತ್ವದ ಮಹತ್ವ ಮುಂತಾದ ವಿಚಾರಗಳನ್ನು ತಿಳಿಯಲು ಮತ್ತು ನಾವು ಅದೇ ರೀತಿ ನೆಡೆದುಕೊಳ್ಳಲು ನೆರವಾಗುತ್ತದೆ ಎಂಬ ಆಶಯವನ್ನು ಇಟ್ಟುಕೊಳ್ಳೋಣ.
ಪೀಠಿಕೆ:- 'ಗ್ರಂಥಗಳಿಲ್ಲದ ಕೋಣೆ ಆತ್ಮವಿಲ್ಲದ ದೇಹದಂತೆ' ಎಂಬ ನಾಣ್ಣುಡಿಯಂತೆ ಮಾನವನ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರವಹಿಸುತ್ತವೆ. ಮಾನವನ ಮನಸ್ಸಿನ ವಿಕಾಸಕ್ಕೆ, ಜ್ಞಾನಾರ್ಜನೆಗೆ, ನಾಗರಿಕರನ್ನಾಗಿ ಮಾಡುವಲ್ಲಿ ಪುಸ್ತಕಗಳ ಪಾತ್ರ ಹಿರಿದು. ವಿಷಯ ನಿರೂಪಣೆ :- ಇಂದಿನ ಯುಗದಲ್ಲಿ ಜ್ಞಾನವೃದ್ಧಿಗೆ ಮತ್ತು ಅಮೂಲ್ಯವಾದ ಸಮಯ ಸದುಪಯೋಗಕ್ಕೆ ಗ್ರಂಥಾಲಯಗಳು ಬಹಳ ಮುಖ್ಯ
ಎಸುತ್ತವೆ. ಗ್ರಂಥಾಲಯಗಳಿಂದಾಗಿ ಜ್ಞಾನಾರ್ಜನೆಯಾಗುತ್ತದೆ. ವ್ಯಕ್ತಿತ್ವ ವಿಕಸನ, ಜ್ಞಾನವಿಕಾಸ ಮತ್ತು ನಾಗರಿಕ ಪ್ರಜ್ಞೆ ಮೂಡುತ್ತದೆ. ವೈಚಾರಿಕ ಪ್ರಜ್ಞೆ ಬೆಳೆಯುತ್ತದೆ ಒಂದೇ ಕಡೆ ಸಾಹಿತ್ಯ, ವಿಜ್ಞಾನ, ಇತಿಹಾಸ, ಪುರಾಣ ಮೊದಲಾದ ವಿಷಯಗಳ ಮಾಹಿತಿ ದೊರೆಯುತ್ತದೆ. ಓದುವ ಹವ್ಯಾಸ
ಬೆಳೆಯುತ್ತದೆ ಇತ್ಯಾದಿ. ಉಪಸಂಹಾರ :- ಸಜ್ಜನರ ಸಂಘದಲ್ಲಿ ಹೆಚ್ಚೇನು ಸವಿದಂತೆ, ಗ್ರಂಥಗಳ ಅಧ್ಯಯನ ಮಾಡಿ ಜ್ಞಾನ ಸಂಪಾದನೆ ಮಾಡಿಕೊಳ್ಳಬಹುದು. 'ದೇಶ ಸುತ್ತ ಬೇಕು ಇಲ್ಲವೆ ಕೋಶ ಓದಬೇಕು' ಎಂಬ ಮಾತಿನಂತೆ ಜ್ಞಾನದ ಹರಹನ್ನು ವಿಸ್ತರಿಸಿಕೊಳ್ಳಬಹುದು. ಗ್ರಂಥಾಲಯಗಳು ಜ್ಞಾನ ವಿಕಾಸದಲ್ಲಿ ಬಹಳ ಪ್ರಮುಖವಾದ ಪಾತ್ರ ನಿರ್ವಹಿಸುತ್ತವೆ.
3. ಸಾಮಾಜಿಕ ಪಿಡುಗುಗಳು.
ಪೀಠಿಕೆ :- ಸಮಾಜದ ಅಭಿವೃದ್ಧಿಗೆ ತೊಡಕನ್ನುಂಟುಮಾಡುವ ಪದ್ಧತಿಗಳನ್ನು ಸಾಮಾಜಿಕ ಪಿಡುಗುಗಳು ಎನ್ನವರು. ಇಂತಹ ಪದ್ಧತಿಗಳು
ಸಮಾಜಕ್ಕೆ ಕಂಟಕವಾಗಿರುತ್ತವೆ. ಇವುಗಳಲ್ಲಿ ಸಮಾಜದಲ್ಲಿನ ಅಸಮಾನತೆ, ಹಕ್ಕುಗಳ ಉಲ್ಲಂಘನೆ, ಮೌಡ್ಯತೆ, ಶೋಷಣೆ ಇರುತ್ತದೆ.
ಕಾರಣಗಳು:
ವಿಷಯ ವಿವರಣೆ :- ಪಾಚೀನ ಕಾಲದಿಂದಲೂ ನಮ್ಮ ಸಮಾಜಕ್ಕೆ ಅಂಟಿಕೊಂಡು ಬಂದಿರುವ, ಸಮಾಜದ ಅಭಿವೃದ್ಧಿಗೆ ಕಂಟಕವಾಗಿರುವ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ವರದಕ್ಷಿಣೆ, ಸ್ತ್ರೀಶೋಷಣೆ, ಅಸ್ಪಷ್ಟತೆ, ಸತಿಪದ್ಧತಿ, ದೇವದಾಸಿ ಪದ್ಧತಿ, ಜೀತಪದ್ಧತಿ, ಮೊದಲಾದ ಸಾಮಾಜಿಕ ಪಿಡುಗುಗಳು ಇಂದಿಗೂ ಕಾಡುತ್ತಿವೆ. ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಕಾನೂನುಗಳಿದ್ದರೂ ಪ್ರಯೋಜನವಾಗಿಲ್ಲ.
ಅನಕ್ಷರತೆ, ಮೂಢನಂಬಿಕೆಗಳು, ಸಾಮಾಜಿಕ ಅಸಮಾನತೆ, ಸಾಮಾಜಿಕ ಹಾಗೂ ಕಾನೂನುಗಳ ಉಲ್ಲಂಘನೆ, ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವದ ಕೊರತೆ.
ಪರಿಹಾರಗಳು:
ಅಕ್ಷರಸ್ಥರನ್ನಾಗಿ ಮಾಡುವುದು, ಕಠಿಣ ಕಾನೂನುಗಳನ್ನು ಜಾರಿ ಮತ್ತು ಪರಿಣಾಮಕಾರಿ ಅನುಷ್ಟಾನ ಅರಿವು ಮೂಡಿಸುವುದು, ಸಾಮಾಜಿಕ ಸಮಾನತೆ ಮತ್ತು ನ್ಯಾಯ ಒದಗಿಸುವುದು, ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು ಇತ್ಯಾದಿ ಉಪಸಂಹಾರ :- ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಮಾಜಿಕ ಪಿಡುಗುಗಳನ್ನು ಬೇರುಸಹಿತ ಕಿತ್ತೊಗೆಯಬೇಕು. ಆ ಮೂಲಕ ಸಾಮಾಜಿಕ ಪಿಡುಗುಗಳನ್ನು ನಿವಾರಿಸಿ ಸಮಾಜ ಸ್ವಾಸ್ಥ್ಯವಾಗಿರಿಸಲು ಶ್ರಮಿಸಬೇಕು. ಆಗ ಮಾತ್ರ ನಮ್ಮ ಸಮಾಜ, ರಾಜ್ಯ, ದೇಶ ಅಭಿವೃದ್ಧಿಪಥದತ್ತ ಸಾಗಲು ಸಾಧ್ಯವೆಂದು ಹೇಳಬಹುದು.
No comments:
Post a Comment