KSPSTA

RECENT INFORMATIONS

Search This Blog

Saturday, August 10, 2024

SSLC Sankalpa Geete Lesson Notes

  Dailyguru       Saturday, August 10, 2024

 

Sankalpa Geete Lesson Notes

ಸಂಕಲ್ಪ ಗೀತೆ ಪದ್ಯ ಪಾಠದ ಪ್ರಶ್ನೋತ್ತರಗಳು.

ಜಿ.ಎಸ್. ಶಿವರುದ್ರಪ್ಪ :- ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ಕ್ರಿ. ಶ. 1926 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಇವರು ಎದೆತುಂಬಿ ಹಾಡಿದೆನು, ಚೆಲುವು-ಒಲುವು, ಅನಾವರಣ ಸಾಮಗಾನ, ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ರಾಷ್ಟ್ರಕವಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಿ. ಲಿಟ್ ಪದವಿಗಳನ್ನು ನೀಡಿ ಗೌರವಿಸಲಾಗಿದೆ.



ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ

ಸುತ್ತಲು ಕವಿಯುವ ಕತ್ತಲೆಯೊಳಗೆ

ಪ್ರೀತಿಯ ಹಣತೆಯ ಹಟ್ಟೋಣ

ಬಿರುಗಾಳಿಗೆ ಹೊಯ್ದಾಡುವ ಹಡಗನು

ಎಚ್ಚರದಲಿ ಮುನ್ನಡೆಸೋಣ

ಜಾತೀಯತೆ, ಮತ, ಭಾಷೆ, ಬಣ್ಣ, ಅಜ್ಞಾನ, ಮೂಢನಂಬಿಕೆಗಳೆಂಬ ಕತ್ತಲೆಯು ನಮ್ಮ ಸುತ್ತಲೂ ಕವಿದಿರುತ್ತದೆ. ಆದುದರಿಂದ ಆ ಕತ್ತಲೆಯನ್ನು ಓಡಿಸಲು ಬೆಳಕಿ(ಅರಿವಿ)ನ ಅವಶ್ಯಕತೆಯಿದೆ. ಬೆಳಕನ್ನು ಬೀರಲು ಪ್ರೀತಿಯಿಂದ ಹಣತೆಯನ್ನು ಹಚ್ಚಬೇಕಾಗಿದೆ. ಅದೇ ರೀತಿ ಸಂಸಾರವೆಂಬ ಸಾಗರವು ಆಜ್ಞಾನದ ಬಿರುಗಾಳಿಗೆ ಹೊಯ್ದಾಡುತ್ತಾ ಎತ್ತೆತ್ತಲೂ ಸಾಗುತ್ತಿದೆ. ಆ ಬಾಳ ನೌಕೆಯನ್ನು ಎಚ್ಚರಿಕೆಯಿಂದ ಗುರಿಯತ್ತ ನಡೆಸೋಣ ಎಂದು ಕವಿ "ಬೆಳಕಿನ ತತ್ವ ಮತ್ತು
ಪ್ರೀತಿಯ ತತ್ವವನ್ನು" ಇಲ್ಲಿ ಪ್ರತಿಪಾದಿಸಿದ್ದಾರೆ.

ಕಲುಷಿತವಾದೀ ನದೀ ಜಲಗಳಿಗೆ

ಮುಂಗಾರಿನ ಮಳೆಯಾಗೋಣ

బరడాగరు చికాడు యండుగళ

ವಸಂತವಾಗುತ ಮುಟ್ಟೋಣ

ಆಧುನಿಕ ಮಾನವನ ಹಸ್ತಕ್ಷೇಪದಿಂದ ಕಲುಷಿತವಾದ ನದಿಗಳ ಶುದ್ಧಿಕರಣ ಮಾಡಲು ಭೋರ್ಗರೆಯುವ ಮುಂಗಾರಿನ ಮಳೆಯೇ ಬೇಕು. ಅಂದರೆ ಅಲ್ಲಲ್ಲಿ ನಿಂತ ಕಲುಷಿತ ನೀರನ್ನುತೆಗೆದು ಶುದ್ದೀಕರಿಸುತ್ತಾ ಕಲ್ಮಶಗಳಿಂದ ಕೂಡಿದ ಮನುಷ್ಯರ ಮನಸ್ಸುಗಳನ್ನು ಪ್ರೀತಿಯ ಮೂಲಕ ಹಸನುಗೊಳಿಸಬೇಕಾಗಿದೆ. ಹಾಗೆಯೇ ಆಧುನೀಕರಣ, ಜಾಗತೀಕರಣ, ಕೈಗಾರೀಕರಣ, ಯಾಂತ್ರೀಕರಣಗಳಿಂದಾಗಿ ಕಾಡುಗಳು ನಾಶವಾಗಿ ಪರಿಸರ ಬರಡಾದ ಮರುಭೂಮಿಯಂತಾಗಿದೆ. ಅಲ್ಲಿ ಗಿಡಮರಗಳನ್ನು ಬೆಳೆಸುತ್ತ, ಬೆಳೆಸುವ ಆವಶ್ಯಕತೆಯನ್ನು ಜನರಲ್ಲಿ ಜಾಗೃತಗೊಳಿಸುವ ಕಾರ್ಯವನ್ನು ಮಾಡೋಣ ಎನ್ನಬಹುದು. ಅಂದರೆ ನಾಗರೀಕತೆಯ ಭರಾಟೆಯಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಅಂತಹ ಹೃದಯದಲ್ಲಿ ಮೌಲ್ಯಗಳೆಂಬ ಸಸಿಗಳನ್ನು ನೆಟ್ಟು, ಪ್ರೀತಿಯ ನೀರನ್ನು ಎರೆಯುತ್ತ ಬದುಕನ್ನು ವಸಂತವಾಗಿಸೋಣ ಎಂದು ಬದುಕು ಹಸನುಗೊಳಿಸುವ ಮೌಲ್ಯವನ್ನು ಕವಿ ಜಿ.ಎಸ್. ಶಿವರುದ್ರಪ್ಪನವರು ಹೇಳಿದ್ದಾರೆ.

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ

ಹೊಸ ಭರವಸೆಗಳ ಕಟ್ಟೋಣ ಮನುಜರ ನಡುವಣ ಅಡ್ಡಗೋಡೆಗಳ

ಕೆಡವುತ ಸೇತುವೆಯಾಗೋಣ.

ಬಡತನ, ಅಜ್ಞಾನ, ಮೂಢನಂಬಿಕೆ, ಧರ್ಮ, ಭಾಷೆ, ಜಾತಿಗಳಿಂದ ಶೋಷಣೆಗೊಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕಲು ಆಸರೆ ನೀಡಿ ಮೇಲೆ ತರಬೇಕು. ಅವರ ಮನಸ್ಸಿನಲ್ಲಿ ಬದುಕುವ ಹೊಸ ಭರವಸೆಗಳನ್ನು ಕೊಡಬೇಕು. ಹಾಗೆಯೇ ಮನುಷ್ಯರ ನಡುವೆ ಜಾತಿ, ಧರ್ಮ, ಭಾಷೆ, ವರ್ಣಗಳಿಂದ ಆವೃತವಾದ ಅಡ್ಡಗೋಡೆಗಳನ್ನು ಕೆಡವಿ, ಪ್ರೀತಿ-ಸ್ನೇಹವೆಂಬ ಮಾನವೀಯತೆಯ ಸೇತುವೆಯನ್ನು ನಿರ್ಮಿಸೋಣವೆಂದು ಕವಿ ಜಿ.ಎಸ್.ಶಿವರುದ್ರಪ್ಪನವರು ಸಮಾನತೆಯ ಮೌಲ್ಯವನ್ನು ಹೇಳಿದ್ದಾರೆ. ಇದು ಕುವೆಂಪುರವರ

ವಿಶ್ವಮಾನವತಾ ತತ್ವವನ್ನು ಧ್ವನಿಸುತ್ತದೆ. ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು ಬದುಕೋಣ
ಭಯ ಸಂಶಯದೊಳು ಕಂದಿದ ಕಣ್ಣೊಳು.
ನಾಳಿನ ಕನಸನು ಬಿಡೋಣ,

ಭಾರತದಲ್ಲಿ ವಿವಿಧ ಮತಪಂಥಗಳಿದ್ದು ಬೇರೆ ಬೇರೆ ರೀತಿಯ ಆಚರಣೆ, ಸಂಪ್ರದಾಯಗಳು ಇವೆ. ಆದರೂ ವಿವಿಧತೆಯಲ್ಲಿ ವಿಕತೆಯನ್ನು ಕಾಣುವ ದೇಶ ಭಾರತ, ಮತಪಂಥಗಳೆಲ್ಲವೂ ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ, ಮುಕ್ತಿಯನ್ನು ನೀಡಬಲ್ಲ, ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವ ಮಾರ್ಗಗಳೆಂದು ತಿಳಿಯಬೇಕು. ಅಸಮಾನತೆ, ಶೋಷಣೆ ಇತ್ಯಾದಿಗಳಿಂದ ಭಯ- ಭೀತಿಗೊಂಡು, ನಾಳಿನ ಬದುಕಿನ ಬಗ್ಗೆ ಸಂಶಯಗೊಂಡು ನಿರಾಸೆ ಹೊಂದಿದ ಮನಸ್ಸುಗಳಿಗೆ, ಮುಂದಿನ ಬದುಕಿಗೆ ಉತ್ತಮ ಕನಸನ್ನು ಅವರಲ್ಲಿ ಬಿತ್ತಿ, ಧೈರ್ಯ ನೀಡಬೇಕೆಂದು ಸಮಾನತೆಯ ತತ್ವ ಮತ್ತು ಬದುಕಿನ ಬಗ್ಗೆ ಭರವಸೆಯ ಅರಿವು ಮೂಡಿಸಬೇಕೆಂದು ಜಿ.ಎಸ್.. ೨ ಹೇಳಿದ್ದಾರೆ. ಶಿವರುದ್ರಪ್ಪನವರು ಹೇಳಿದ್ದಾರೆ.

l ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1 . ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು? ಬಿರುಗಾಳಿಗೆ ಓಲಾಡುತ್ತಿರುವ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕು.

2. ನದಿ ಜಲಗಳು ಏನಾಗಿವೆ? ನದಿ ಜಲಗಳು ಮಲಿನವಾಗಿವೆ.

3. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು? ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.


4. ಕಾಡುಮೇಡುಗಳ ಸ್ಥಿತಿ ಹೇಗಿದೆ?. ಕಾಡು ಮೇಡುಗಳು ಬರಡಾಗಿವೆ.

5. ಯಾವ ಎಚ್ಚರದೊಳು ಬದುಕಬೇಕು?

ನಾವು ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕು.

ಅ) ಎರಡು /ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕು?

ನಮ್ಮ ಬದುಕಿನ ಸುತ್ತಲು ಕವಿದಿರುವ ಕತ್ತಲೆಯನ್ನು ಕಳೆಯಲು ಪ್ರೀತಿ ಎಂಬ ಹಣತೆಯನ್ನು ಹಚ್ಚಬೇಕು. ಸಂಸಾರದ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಜ್ಞಾನ ದೀವಿಗೆಯ ಮೂಲಕ ಎಚ್ಚರಿಕೆಯಿಚಿದ ಮುನ್ನಡೆಸಬೇಕಿದೆ.

2. ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ?

ವಸಚಿತನು ಬರಡಾಗಿರುವ ಕಾಡುಗಳು ಹಚ್ಚಹಸುರಿನಿಂದ ಕಂಗೊಳಿಸುವಚಿತೆ ಮುಟ್ಟಬೇಕಿದೆ. ಅಂತೆಯೇ ಬರಡಾದ ಕಾಡುಗಳಲ್ಲಿ ಮರಗಿಡಗಳು ಚಿಗುರಿ ಪ್ರಕೃತಿಗೆ ನವಚೈತನ್ಯ ನೀಡಬೇಕಿದೆ.

3. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?

ಜಾತಿ, ಮತ, ಭಾಷೆಗಳ ಭೇದಗಳು ಮನುಷ್ಯರ ನಡುವೆ ಅಡ್ಡಗೋಡೆಗಳಾಗಿವೆ. ಈ ಗೋಡೆಯನ್ನು ಸ್ನೇಹ, ಪ್ರೀತಿ, ನಂಬಿಕೆಯ ಮೂಲಕ ಕೆಡವಬೇಕಿದೆ. ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿ ಜನರ ನಡುವೆ ಸೇತುವೆಯಾಗಬೇಕಿದೆ.

4. ನಾಳಿನ ಕನಸನ್ನು ಭಿತ್ತಬೇಕಾದರೆ ನಾವು ಹೇಗೆ ಬದುಕಬೇಕು?

ಎಲ್ಲ ಮತಗಳೂ ಸಹ ಮಾರ್ಗಗಳು ಎಂದು ತಿಳಿಯಬೇಕು. ಮತಗಳೆಲ್ಲವೂ ಗುರಿಗಳಲ್ಲ ಎಂಬ ಎಚ್ಚರವಿರಬೇಕು. ಭಯ, ಸಂಶಯ ನಿವಾರಿಸಿಕೊಂಡು ಬದುಕಬೇಕು. ಆಗಮಾತ್ರ ನಾಳಿನ ಕನಸನ್ನು ಬಿತ್ತಬಹುದು.

ಇ) ಎಂಟು / ಹತ್ತು ವಾಕ್ಯಗಳಲ್ಲಿ ಉತ್ತರಿಸಿ,


 1. ನಾವು ಯಾವ ಸಂಕಲ್ಪವನ್ನು ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯವಾಗಿದೆ?

ನಮ್ಮ ಸುತ್ತಲೂ ಹಬ್ಬಿರುವ ದ್ವೇಷದ ಕತ್ತಲೆಯನ್ನು ಕಳೆಯಲು ಪ್ರೀತಿಯ ದೀಪ ಹಚ್ಚುವ, ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ, ಪರಿಸರ ಮಾಲಿನ್ಯದಿಂದ ಕಲುಷಿತವಾಗಿರುವ ನದಿ ಜಲಗಳಿಗೆ ಮುಂಗಾರಿನ ಮಳೆಯಾಗುವ ಬರಡಾಗಿರುವ ಕಾಡುಮೇಡುಗಳನ್ನು ಹಸುರಾಗಿಸುವ, ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತುವ, ಮನುಜರ ನಡುವೆ ಉಂಟಾಗಿರುವ ಅಸಮಾನತೆಯ ಗೋಡೆಯನ್ನು ಕೆಡವಿ ಅಮಾನತೆಯನ್ನು ಮೂಡಿಸುವ ಸೇತುವೆಯಾಗುವ, ಭಯ ಸಂಶಯಗಲು ತುಂಬಿರುವ ಕಣ್ಣುಗಳಲ್ಲಿ ಭರವಸೆಯ ಕನಸನ್ನು ಬಿತ್ತುವ,ಎನ್ನುವುದೇ ಕವಿಯ ಆಶಚಿಯವಾಗಿದೆ.

2. ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ.

ಅನೇಕ ಸವಾಲುಗಳು ನಮ್ಮನ್ನು ಕಾಡುತ್ತಿವೆ. ಅವುಗಳನ್ನು ಎದುರಿಸಲು ನಮ್ಮ ಜೀವನಕ್ಕೆ ಒಂದು ಗುರಿ ಇರಬೇಕು, ಅದರ ಅನುಷ್ಠಾನಕ್ಕೆ ಸರಿಯಾದ ಮಾರ್ಗ ಹಾಗೂ ದೃಢ ಸಂಕಲ್ಪವೂ ಇರಬೇಕು. ನಮ್ಮ ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವ ಮೂಲಕ ದ್ವೇಷರಹಿತ ಸಮಾಜವನ್ನು ನಿರ್ಮಾಣ ಮಾಡಬೇಕು. ಎಚ್ಚರಿಕೆಯಿಂದ ಜೀವನ ನಡೆಸುವ ಸಂಕಲ್ಪ ಕೈಗೊಳ್ಳುವ ಮೂಲಕ ಸವಾಲು ಗಳನ್ನು ಧೈರ್ಯದಿಂದ ಎದುರಿಸಿ ಬಾಳಬೇಕು. ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಳ್ಳುವ ಮೂಲಕ ನದೀಜಲ ಹಾಗೂ ಕಾಡುಗಳ ಸಂರಕ್ಷಣೆ ಮಾಡಬೇಕು. ಜನರ ನಡುವಿನ ಅಸಮಾನತೆಯ ಗೋಡೆಗಳನ್ನು ಕೆಡವುವ ದೃಢ ಸಂಕಲ್ಪ ಮಾಡುವ ಮೂಲಕ ಸಮಾನತೆಯ ಮನೋಬಾವ ಮೂಡಿಸುವ ಸೇತುವೆಯಾಗಬೇಕು. ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಭಯ ಹಾಗೂ ಸಂಶಯಗಳಿಂದ ಮುಕ್ತರಾಗುವ ಸಂಕಲ್ಪ ಕೈಗೊಳ್ಳು ವುದರಿಂದ ಭವಿಷ್ಯದ ಹೊಂಗನಸನ್ನು ಕಾಣಬಹುದು ಎಂಬುದನ್ನು ಕವಿ ಶಿವರುದ್ರಪ್ಪನವರು

ಸಂಕಲ್ಪ ಮತ್ತು ಅನುಷ್ಠಾನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 


ಈ) ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ.

1. "ಪ್ರೀತಿಯ ಹಣತೆಯನ್ನು ಹಟ್ಟೋಣ".

ಆಯ್ಕೆ :- ಈ ವಾಕ್ಯವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರು ರಚಿಸಿರುವ 'ಎದೆತುಂಬಿ ಹಾಡುವೆನು' ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ' ಎಂಬ ಕವಿತೆಯಿಂದ ಆರಿಸಲಾಗಿದೆ.

ಸಂದರ್ಭ:- 'ಜೀವನದಲ್ಲಿ ಉತ್ತಮ ಮನೋಭಾವನೆಯ ಧೃಢ ಸಂಕಲ್ಪವನ್ನು ಹೊಂದಬೇಕು' ಎಂದು ಹೇಳುವ ಸಂದರ್ಭದಲ್ಲಿ ಕವಿಗಳು ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ:- ನಾವು ಪ್ರೀತಿಯ ದೀಪವನ್ನು ಹಚ್ಚುವ ಮೂಲಕ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.

2. "ಮುಂಗಾರಿನ ಮಳೆಯಾಗೋಣ".

ಆಯ್ಕೆ:- ಈ ವಾಕ್ಯವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರು ರಚಿಸಿರುವ 'ಎದೆತುಂಬಿ ಹಾಡುವೆನು' ಕವನ ಸಂಕಲನದಿಂದ ದ ಆಯ್ದ 'ಸಂಕಲ್ಪಗೀತೆ" ಎಂಬ ಕವಿತೆಯಿಂದ ಆರಿಸಲಾಗಿದೆ. 5 ಆಾ '

ಸಂದರ್ಭ:- 'ಜೀವನದಲ್ಲಿ ಉತ್ತಮ ಮನೋಭಾವನೆಯ ಧೃಢ ಸಂಕಲ್ಪವನ್ನು ಹೊಂದಬೇಕು' ಎಂದು ಹೇಳುವ ಸಂದರ್ಭದಲ್ಲಿ ಕವಿಗಳು ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ:- ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದರೆ ನದೀಜಲ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.

3. "ಹೊಸ ಭರವಸೆಗಳನ್ನು ಕಟ್ಟೋಣ".

ಆಯ್ಕೆ:- ಈ ವಾಕ್ಯವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರು ರಚಿಸಿರುವ 'ಎದೆತುಂಬಿ ಹಾಡುವೆನು' ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ' ಎಂಬ ಕವಿತೆಯಿಂದ ಆರಿಸಲಾಗಿದೆ.

ಸಂದರ್ಭ:- 'ಜೀವನದಲ್ಲಿ ಉತ್ತಮ ಮನೋಭಾವನೆಯ ಧೃಢ ಸಂಕಲ್ಪವನ್ನು ಹೊಂದಬೇಕು' ಎಂದು ಹೇಳುವ ಸಂದರ್ಭದಲ್ಲಿ ಕವಿಗಳು ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ:-ನಾವು ಜನರಲ್ಲಿ ಹೊಸ ಭರವಸೆಗಳನ್ನು ಮೂಡಿಸುವ ಮೂಲಕ ಸಮಾಜದಲ್ಲಿನ ಅನೈತಿಕತೆಯನ್ನು ತಡೆಯ ಬಹುದು ಎಂಬುದು ಈ

ಮಾತಿನ ಸ್ವಾರಸ್ಯವಾಗಿದೆ.

4. "ಹೊಸ ಎಚ್ಚರದೊಳು ಬದುಕೋಣ."

ಆಯ್ಕೆ:- ಈ ವಾಕ್ಯವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರು ರಚಿಸಿರುವ 'ಎದೆತುಂಬಿ ಹಾಡುವೆನು' ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ" ಎಂಬ ಕವಿತೆಯಿಂದ ಆರಿಸಲಾಗಿದೆ.

ಸಂದರ್ಭ:- 'ಜೀವನದಲ್ಲಿ ಉತ್ತಮ ಮನೋಭಾವನೆಯ ಧೃಢ ಸಂಕಲ್ಪವನ್ನು ಹೊಂದಬೇಕು'' ಎಂದು ಹೇಳುವ ಸಂದರ್ಭದಲ್ಲಿ ಕವಿಗಳು ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ:-ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕಿದರೆ ದೇಶದಲ್ಲಿ ಶಾಂತಿ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ ನೆಲೆಸುವಂತೆ ಮಾಡಬಹುದು

00) ಅಟ್ಟ ನಾಗಗಳನ್ನು ಸೂಕ್ತ ಪದಗಜಂದ ಸುದಲ,

೧. 'ಸಂಕಲ್ಪ ಗೀತೆ' ಪದ್ಯವನ್ನು .ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

೨. ಕತ್ತಲೆಯೊಳಗೆ ಪ್ರೀತಿಯ ಹಳ್ಳೋಣ.

೩. ಜಿ.ಎಸ್.ಶಿವರುದ್ರಪ್ಪನವರು . ಯಲ್ಲಿ ಸಮಾವೇಶಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಉತ್ತರಗಳು:

1. ಎದೆತುಂಬಿ ಹಾಡಿದೆನು

2. ಹಣತೆ 3.ದಾವಣಗೆರೆ

ಕೊಟ್ಟರುವ ಪದಗಳ ದಾತುಗಳನ್ನು ಬರೆಯಿರಿ.

ನಿಲ್ಲಿಸಿ =ನಿಲ್ಲು, ನಡೆಸು=ನಡೆ ಹಚ್ಚುವುದು= ಹೆಚ್ಚು ಮುಟ್ಟೋಣ=ಮುಟ್ಟು ಕಟ್ಟುವುದು=ಕಟ್ಟು ಆಗೋಣ=ಆಗು

ಕೊಟ್ಟರುವ ಪದಗಳ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.

ಪ್ರೀತಿಯ=ಪ್ರೀತಿ+ಅ= ಷಷ್ಠಿ

ಬಿದ್ದುದನ್ನು=ಬಿದ್ದುದು +ಅನ್ನು=ದ್ವಿತೀಯಾ

ಬಿರುಗಾಳಿಗೆ=ಬಿರುಗಾಳಿ+ಇಗೆ=ಚತುರ್ಥಿ ಜಲಕ್ಕೆ=ಜಲ+ಕ್ಕೆ=ಚತುರ್ಥಿ ಭರವಸೆಗಳ=ಭರವಸೆಗಳ+ಅ=ಷಷ್ಠಿ

ಕೊಟ್ಟಿರುವ ಪದಗಳ ವಿಭಕ್ತಿ ಪ್ರತ್ಯಯಗಳನ್ನು ಬರೆಯಿರಿ.

ಸಂಶಯದೊಳ್=ಒಳ್ =ಸಪ್ತಮಿ, ಜಲದಿಂ=ಇಮ್ = ತೃತೀಯ

ಮರದತ್ತಣಿಂ=ಅತ್ತಣಿಂ=ಪಂಚಮಿ

ರಾಯಂಗೆ=ಗೆ=ಚತುರ್ಥಿ

ಕೊಟ್ಟರುವ ಪದಗಳಲ್ಲಿನ ಕ್ರಿಯಾರ್ಥಕ ರೂಪಗಳನ್ನು (ವಿದ್ಯರ್ಥಕ, ಸಮಭವನಾರ್ಥಕ, ನಿಷೇಧಾರ್ಥಕ)ಬರೆಯಲಿ.

ಹಾಡು, ನೋಡು, ಕಟ್ಟು, ಕೇಳು, ಓಡು, ಓದು, ಬರೆ.

ವಿಧ್ಯರ್ಥಕ :- ಹಾಡಲಿ, ನೋಡಲಿ, ಕಟ್ಟಲಿ, ಕೇಳಲಿ, ಓಡಲಿ, ಓದಲಿ, ಬರೆಯಲಿ.

ನಿಷೇಧಾರ್ಥಕ :- ಹಾಡನು. ಕಟ್ಟನು. ನೋಡನು ಕೇಳನು. ಓಡನು. ಓದನು. ಬರೆಯನು.

ಸಂಭಾವನಾರ್ಥಕ :- ಹಾಡಿಯಾನು, ನೋಡಿಯಾನು, ಕಟ್ಟಿಯಾನು, ಕೇಳಿಯಾನು, ಓಡಿಯಾನು, ಓದಿಯಾನು, ಬರೆದಾನು.

8971339647 AbdulRajak 

logoblog

Thanks for reading SSLC Sankalpa Geete Lesson Notes

Previous
« Prev Post

No comments:

Post a Comment