SSLC Hakki harutide nodidira Notes
ಹಕ್ಕಿ ಹಾರುತಿದೆ ನೋಡಿದಿರಾ?- ದ.ರಾ.ಬೇಂದ್ರೆ
ಕವಿ ಕೃತಿ ಪರಿಚಯ :- ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. 1896ರಲ್ಲಿ ಧಾರವಾಡದಲ್ಲಿ ಜನಿಸಿದರು. ದ.ರಾ.ಬೇಂದ್ರೆಯವರ ಕೃತಿಗಳೆಂದರೆ ಗರಿ. ಕೃಷ್ಣಕುಮಾರಿ, ಉಯ್ಯಾಲೆ, ನಾದುಗೀತೆ ನಗೆಯ ಹೊಗೆ, ಅರಳು ಮರಳು, ನಾಕುತಂತಿ ಮುಂತಾದವು. ಇವರಿಗೆ ಸಂದ ಪ್ರಶಸ್ತಿಗಳೆಂದರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
ಮೌಲ್ಯವನ್ನಾಧರಿಸಿ ಪದ್ಯದ ಸಾರಾಂಶ
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ ಎವೆತೆರೆದಿಕ್ಕುವ ಹೊತ್ತಿನ ಒಳಗೆ
ವರ ಕವಿ ಬೇಂದ್ರೆಯವರು ಕಾಲಪಕ್ಷಿಯು ಚಲನಶೀಲವಾದುದು. ವಿಶ್ವವ್ಯಾಪಕವಾದುದು, ಬಹುವೇಗವಾದುದು, ಹಾಗು ಪ್ರಗತಿಶೀಲವಾದುದು ಎಂದು ವರ್ಣಿಸುತ್ತಾರೆ. ಹಗಲು ರಾತ್ರಿಯ ಪುನರಾವರ್ತನೆ, ಕಾಲಮಾನದ ಪುನರಾವರ್ತನೆಯಿಂದ ಕಾಲವು ಚಲನಶೀಲವಾಗಿದೆ. ಅದು ಮೇಲೆ, ಕೆಳಗೆ ಸುತ್ತಮುತ್ತ ಎತ್ತೆತ್ತಲೂ ತನ್ನ ಕಬಂಧ ಬಾಹುವನ್ನು ಹರಡಿಕೊಂಡು ವಿಶ್ವವ್ಯಾಪಕವಾಗಿದೆ. ಕಣ್ಣು ತೆರೆದು ರೆಪ್ಪೆ ಮುಚ್ಚುವುದರೊಳಗೆ ಗಾವುದ ಗಾವುದ ಗಾವುದ ರೀತಿಯಲ್ಲಿ ವೇಗವಾಗಿ ಹಾರಿಹೋಗುತ್ತಿದೆ ಎಂದು ಕಾಲದ ಚಲನಾಶೀಲ, ವಿಸ್ತಾರ, ವೇಗ ಗುಣಗಳನ್ನು ತಿಳಿಸುತ್ತಾ ಕಾಲದ ಮಹತ್ವವನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕವಿಯು ಈ ಪದ್ಯದಲ್ಲಿ ಕಂಡು ಬರುವ ಮೌಲ್ಯವಾಗಿದೆ.
ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿಹೊಳೆ ಬಣ್ಣದ ಗರಿ ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡು ಪಕ್ಕದಲ್ಲುಂಟು
ಹಕ್ಕಿಹಾರುತಿದೆ ನೋಡಿದಿರಾ !
ಬೇಂದ್ರೆಯವರು ಈ ಚರಣದಲ್ಲಿ ಕಾಲಪಕ್ಷಿಯ ಭೌತಿಕರೂಪವನ್ನು ಅಂದರೆಭೂತ, ವರ್ತಮಾನ ಹಾಗು ಭವಿಷ್ಯತ್ ಕಾಲದ ಚಲನೆಯನ್ನು ಕುರಿತು ವರ್ಣಿಸುತ್ತಾರೆ
ಹಕ್ಕಿಯ ಹಿಂದೆಯಿರುವ ಪುಚ್ಚ ಅಗೋಚರವಾಗಿದ್ದು ಅದು ಕಳೆದುಹೋದ ಭೂತಕಾಲ ಕರಿನರೆ ಬಣ್ಣಕ್ಕೆ ಹೋಲಿಸಿದ್ದಾರೆ. ನೇರವಾಗಿ ಗೋಚರಿಸುವ ಬಿಳಿಹೊಳೆ ಬಣ್ಣದ ಗರಿಗಳು ವರ್ತಮಾನದ ಗುರುತುಗಳು. ಹಾಗೆಯೇ ಕೆಂಪಾಗಿ ಹೊನ್ನಿನ ಬಣ್ಣಗಳ ರಕ್ಕೆಗಳು ಭವಿಷ್ಯತ್ ಕಾಲದ ಗುರುತುಗಳು. ಹೀಗೆ ಕಾಲದೆಂಬ ಹಕ್ಕಿ ಭೂತ, ವರ್ತಮಾನ, ಭವಿಷ್ಯತ್ ಕಾಲಗಳೆಂಬ ಗುರುತುಗಳನ್ನು ಮೂಡಿಸುತ್ತಾ ಹಾರಿ ಹೋಗುತ್ತಿದೆ ಎಂದು ಕವಿಯು ಅರ್ಥೈಸುತ್ತಾರೆ.
ಚಲನಶೀಲವಾದ ಕಾಲದ ಮಹತ್ವವನ್ನು ಅರಿತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಆಶಯವು ಈ ಪದ್ಯದಲ್ಲಿ ಕಂಡುಬಂದಿದೆ.
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ ಮಂಡಲ-ಗಿಂಡಲಗಳ ಗಡಮುಕ್ಕಿ తేలిన ಮುಳುಗಿಸಿ ఎండ పండగళ ಸಾರ್ವಭೌಮರ ನೆತ್ತಿಯ ಕುಕ್ಕಿ ಹಕ್ಕಿ ಹಾರುತಿದೆ ನೋಡಿದಿರಾ !
ಕವಿಗಳು ಈ ಪದ್ಯಈ ಚರಣದಲ್ಲಿ ಕಾಲಚಕಲ್ಲಿ ನಡೆದಿರುವ ಭೂಮಂಡಲದ ರಾಜಕೀಯ ಹಾಗು ಪ್ರಾಕರತಿಕ ಬದಲಾವಣೆಯನ್ನು ವರ್ಣಿಸಿದ್ದಾರೆ.
ಕಾಲ ಪಕ್ಷಿಯು ತನ್ನ ಪಯಣದಲ್ಲಿ ಆನೇಕ ಸಣ್ಣ ಸಣ್ಣ ರಾಜಮನೆತನಗಳನ್ನು ಹಾಗು ದೊಡ್ಡದೊಡ್ಡ ಸಾಮ್ರಾಜ್ಯಗಳನ್ನು ಹುಟ್ಟಿಸಿ ಬೆಳೆಸಿ ಅವುಗಳ ಪಲಿತವನ್ನು ಕೊಯ್ದು ಮಾಡಿದೆ. ಅದೇ ರೀತಿಯಲ್ಲಿ ಅನೇಕ ರಾಜ್ಯ, ಸಾಮ್ರಾಜ್ಯ ಕೋಟೆ ಕೊತ್ತಲಗಳನ್ನು ನಾಶಗೊಳಿಸಿದೆ. ವಿಶ್ವದ ಎಲ್ಲಾ ಭಾಗಗಳನ್ನು ಒಂದು ಸಲ ವೈಭವದಿಂದ ಮೆರೆಯುವಂತೆ ಮಾಡಿದ್ದು ಮತ್ತೊಂದು ಸಲ ಮಳುಗುವಂತೆ ಮಾಡಿದೆ. ಸಾರ್ವಭೌಮರೆಂದು ಮೆರೆದವರ ನೆತ್ತಿಯ ಮೇಲೆ ಕುಕ್ಕಿ ಕೆಳಗೆ ಬೀಳಿಸಿ ಹೊಸಕಿ ಹಾಕಿ ಹಕ್ಕಿ ಹಾರಿಹೋಗಿದೆ ಎಂದು ಕವಿಗಳು ವರ್ಣಿಸಿದ್ದಾರೆ.
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳಿನೂರಿನ ನೀರನು ಹೀರಿ ಆಡಲು ಹಾಡಲು ತಾ ಹಾರಾಡಲು ಮಂಗಳ ಲೋಕದ ಅಂಗಳಕೇರಿ ಹಕ್ಕಿ ಹಾರುತಿದೆ ನೋಡಿದಿರಾ?
ಪದ್ಯದ ಈ ಚರಣದಲ್ಲಿ ಕವಿಯ ದಾರ್ಶನಿಕ ಮುನ್ನೋಟ ಅಭಿವ್ಯಕ್ತವಾಗಿದೆ.
ಕಾಲದ ಓಟದಲ್ಲಿ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಗಳಾಗಬಹುದು ಚಂದ್ರಲೋಕವು ಬರಿಯ ಊರು ಆಗಬಹುದು. ಮಂಗಳಲೋಕವು ಭೂಮಿಗೆ ಅಂಗಳವಾಗಬಹುದು ಹಾಗು ಇವು ಮಾನವನಿಗೆ ಆಡಲು, ಹಾರಾಡಲು ವೇದಿಕೆ ಆಗಬಹುದು ಎಂದು ಕಾಲದ ಭೌತಿಕ ಲಕ್ಷಣವನ್ನು ದಾರ್ಶನಿಕವಾಗಿ ಮತ್ತು ವೈಜ್ಞಾನಿಕವಾಗಿ ಮುನ್ನೋಟದ ನುಡಿಯನ್ನು ನುಡಿದ್ದಿದ್ದಾರೆ.
ಮುಟ್ಟಿದೆ ದಿನ್ನಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ ಬ್ರಹ್ಮಾಂಡಗಳನು ಒಡೆಯಲು ಎಂದೋ ಬಲ್ಲರು ಯಾರಾ ಹಾಕಿದ ಹೊಂಚ!
ಹಕ್ಕಿ ಹಾರುತಿದೆ ನೋಡಿದಿರಾ?
ಬೇಂದ್ರೆಯವರು ಈ ಪದ್ಯದ ಚರಣದಲ್ಲಿ ಕಾಲ ಪಕ್ಷಿಯ ಹಾರಾಟ ಮಾನವನ ಕಲ್ಪನೆಗೆ ಮೀರಿದ್ದು ಎನ್ನುವುದನ್ನು ವ್ಯಕ್ತಪಡಿಸುತ್ತಾರೆ. ವಿಶ್ವಗಳು ಅನೇಕ ಇರಬಹುದು, ದಿಕ್ಕುಗಳು ಆನಂತವಾಗಿರಬಹುದು, ಆದರೆ ಕಾಲಪಕ್ಷಿಯು ಎಲ್ಲಾ ಮಂಡಲಗಳ ಅಂಚನ್ನು ಮುಟ್ಟಿದೆ. ಜಗತ್ತಿನ ಮೂಲವನ್ನು ಹುಡುಕಲು, ರಹಸ್ಯವನ್ನು ಬೇಧಿಸಲು ಎಂಬಂತೆ ಕಾಲ ಪಕ್ಷಿಯು ಹೊಂಚು ಹಾಕಿದೆ. ಕಾಲಪಕ್ಷಿಯ ಮನೋಗತ ನಮಗೆ ಅರ್ಥವಾಗಬಹುದೇ? ಬಲ್ಲವರಾರು? ಪ್ರಪಂಚದ ವಿಸ್ಮಯವನ್ನು ಭೇಧಿಸಲು ಕಾಲವೆಂಬ ಹಕ್ಕಿಹೊಂಚು ಹಾಕುತ್ತಿದೆಯಾ? ಎನ್ನುವಂತೆ (ಬ್ರಹ್ಮಸೃಷ್ಟಿಯನ್ನೇ ಒಡೆಯಲೆಂದು ಈ ಕಾಲಪಕ್ಷಿ ಹೊಂಚುಹಾಕುತ್ತಿದೆಯಾ? ಇರಬಹುದು, ಬಲ್ಲವರಾರು? ಎಂದು ಬೇಂದ್ರೆಯವರು ಕಾಲ ಪಕ್ಷಿಯ ಮಹಿಮೆಯನ್ನು ವರ್ಣಿಸಿದ್ದಾರೆ.
ಅಭ್ಯಾಸ
ಅ.ಒಂದು ವಾಕ್ಯದಲ್ಲಿ ಉತ್ತರಿಸಿ.
1. ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?
ಕಣ್ಣ ರೆಪ್ಪೆ ಮಿಟುಕಿಸುವಷ್ಟರಲ್ಲಿ ಹಕ್ಕಿ ಹಾರುತ್ತಿದೆ.
2. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
ಹಕ್ಕಿಯ ಗರಿಯಲ್ಲಿ ಕರಿ, ಬಿಳಿ, ಕೆಂಪು, ಹೊನ್ನ ಬಣ್ಣಗಳಿವೆ
3. ಹಕ್ಕಿಯ ಕಣ್ಣುಗಳು ಯಾವುವು?
ಸೂರ್ಯ ಚಂದ್ರರೇ ಹಕ್ಕಿಯ ಕಣ್ಣುಗಳು.
4. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.
5. ಹಕ್ಕಿಯು ಯಾರನ್ನು ಹರಸಿದೆ?
ಹಕ್ಕಿಯು ಹೊಸಗಾಲದ ಹಸುಮಕ್ಕಳನ್ನು ಹರಸಿದೆ.
6. ಹಕ್ಕಿಯು ಯಾವುದರ ಸಂಕೇತವಾಗಿದೆ? ಹಕ್ಕಿಯು ಕಾಲಗತಿಯ ಸಂಕೇತವಾಗಿದೆ.
ಅ) ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ.
1. ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ?
ಆಕಾಶದ ನೀಲ ಮೇಘ ಮಂಡಲದ ಸಮಾನವಾದ ಬಣ್ಣ ಕಾಣುತ್ತಿದೆ. ಮುಗಿಲಿಗೆ ರೆಕ್ಕೆಗಳು ಬಂದಿವೆ. ನಕ್ಷತ್ರ ಮಾಲೆ ಇದೆ. ಸೂರ್ಯ ಚಂದ್ರರೇ ಕಣ್ಣುಗಳು ಎಂದು ಕವಿ ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೋಲಿಸಿದ್ದಾರೆ.
2. ಹೊಸಗಾಲದ ಹಸು ಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
ಕಾಲ ಪಕ್ಷಿಯು ಯುಗಯುಗಗಳ ಘಟನೆಗಳನ್ನು ಹಿಂದಕ್ಕೆ ತಳ್ಳುತ್ತಾ ಹೊಸ ಮನ್ವಂತರದ ಪ್ರಗತಿಗೆ ಕಾರಣವಾಗಿದೆ. ಹಕ್ಕಿಯು ತನ್ನ ರೆಕ್ಕೆಯನ್ನು ಬೀಸುವ ಮೂಲಕ ಭೂಮಂಡಲದ ಜೀವಿಗಳಿಗೆ ಚೈತನ್ಯವನ್ನು ನೀಡಿ ಹೊಸಗಾಲದ ಹಸು ಮಕ್ಕಳನ್ನು ಹರಸಿ, ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸಿದೆ.
2) ಎಂಟು /ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಹೇಳಿರುವ ಮಾತುಗಳಾವುವು?
ದ.ರಾ.ಬೇಂದ್ರೆಯವರು 'ಹಕ್ಕಿ ಹಾರುತಿದೆ ನೋಡಿದಿರಾ' ಕವನದಲ್ಲಿ ಚಲನಶೀಲವಾದ ಕಾಲವನ್ನು ಹಾರುತ್ತಿರುವ ಹಕ್ಕಿಗೆ ಹೋಲಿಸಿ ವರ್ಣಿಸಿದ್ದಾರೆ. ಕಾಲ ಪಕ್ಷಿಯು, ಕಣ್ಣು ಮಿಟುಕಿಸುವಷ್ಟುರಲ್ಲಿ ಗಾವುದ ಗಾವುದ ದೂರ ಮುಂದೆ ಸಾಗಿರುತ್ತದೆ. ಕವಿಯು ಕಾಲ ಪಕ್ಷಿಯ ಬಣಗಳೊಂದಿಗೆ ಕಾಲದ ಮೂರು ಅವಸ್ಥೆಗಳನ್ನು ವರ್ಣಿಸಿದ್ದಾರೆ. ಆಕಾಶವನ್ನು ಪಕ್ಷಿಗೆ ಹೋಲಿಸುತ್ತಾ ಮುಗಿಲುಗಳು ರೆಕ್ಕೆಗಳು, ಸೂರ್ಯ ಚಂದ್ರರೇ ಕಣ್ಣುಗಳು. ಕಾಲ ಪಕ್ಷಿಯು ತನ್ನ ಪಯಣದಲ್ಲಿ ಅನೇಕ ರಾಜಮನೆತನ. ಸಾರ್ಮಾಜ್ಯಗಳನ್ನು ಹುಟ್ಟಿಸಿ, ಬೆಳೆಸಿ ಅವುಗಳ ಫಲಿತವನ್ನು ಕೊಯ್ದು ಮಾಡಿದೆ. ಅದೇರೀತಿ ಅನೇಕ ರಾಜ್ಯ, ಸಾಮ್ರಾಜ್ಯ, ಕೋಟೆ ಕೊತ್ತಲನ್ನು ನಾಶಮಾಡಿದೆ. ಕಾಲ ಪಕ್ಷಿಯು ತನ್ನ ಪಯಣದಲ್ಲಿ ಭೂಮಂಡಲದ ಮೇಲಿರುವ ಖಂಡಗಳನ್ನು ತೇಲಿಸಿ, ಮುಳುಗಿಸಿ ಪ್ರಾಕೃತಿಕ ಬದಲಾವಣೆ ತಂದಿದೆ. ಮೆರೆಯುತ್ತಿದ್ದ ಸಾರ್ವಭೌಮರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಮೆಟ್ಟಿ ನಿಂತಿದೆ. ಕಾಲ ಹಕ್ಕಿಯು ಯುಗ ಯುಗಗಳ ಆಗುಹೋಗುಗಳನ್ನು ಹಿಂದಕ್ಕೆ ತಳ್ಳುತ್ತ ಹೊಸ ಮನ್ವಂತರದ ಪರಿವರ್ತನೆಗೆ ಕಾರಣವಾಗಿದೆ. ಕಾಲ ಪಕ್ಷಿಯು ತನ್ನ ರೆಕ್ಕೆಯನ್ನು ಬೀಸುವ ಮೂಲಕ ಭೂಮಂಡಲದ ಜೀವಿಗಳಿಗೆ ಚೈತನ್ಯ ನೀಡಿ ಮುಂದಿನ ಜನಾಂಗದ ಮಕ್ಕಳನ್ನು ಹರಸಿ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತದೆ ಎಂದು ಕವಿ ವರ್ಣಿಸಿದ್ದಾರೆ.
ಈ) ಸಂದರ್ಭದೊಂಟಗೆ ಸ್ವಾರಸ್ಯ ಬರೆಯಿರಿ.
1. "ರಾಜ್ಯದ ಸಾರ್ಮಾಜ್ಯದ ತೆನೆ ಒಕ್ಕಿ."
ಆಯ್ಕೆ:- ಈ ವಾಕ್ಯವನ್ನು ದ.ರಾ.ಬೇಂದ್ರೆ ವಿರಚಿತ ಗರಿ ಕವನ ಸಂಕಲನದಿಂದ ಆಯ್ದ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ:- ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಈ ಮಾತನ್ನು ಹೇಳಿದ್ದಾರೆ. ಕಾಲ ಪಕ್ಷಿಯು ತನ್ನ ಪಯಣದಲ್ಲಿ ಅನೇಕ ರಾಜ್ಯ, ಸಾಮ್ರಾಜ್ಯಗಳನ್ನು ಹುಟ್ಟಿಸಿ ಬೆಳೆಸಿ ಅವುಗಳ ಫಲಿತವನ್ನು ಕೊಯ್ದುಮಾಡಿದೆ ಎಂದು ಹೇಳುವಾಗ ಈ ಮಾತು ಬಂದಿದೆ.
ಸ್ವಾರಸ್ಯ :- ಕಾಲ ಪಕ್ಷಿಯು ಅನೇಕ ಸಾಮ್ರಾಜ್ಯಗಳ ಏಳು ಬೀಳುಗಳಿಗೆ ಸಾಕ್ಷಿಯಾಗಿದೆ ಎಂಬುದನ್ನು ಈ ಮಾತಿನಲ್ಲಿ ಸ್ವಾರಸ್ಯವಾಗಿ ವರ್ಣಿಸಲಾಗಿದೆ.
2. "ಸಾರ್ವಭೌಮರ ನೆತ್ತಿಯ ಕುಕ್ಕಿ"
ಆಯ್ಕೆ:- ಈ ವಾಕ್ಯವನ್ನು ದ.ರಾ.ಬೇಂದ್ರೆ ವಿರಚಿತ ಗರಿ ಕವನ ಸಂಕಲನದಿಂದ ಆಯ್ದ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ:- ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಈ ಮಾತನ್ನು ಹೇಳಿದ್ದಾರೆ. ಸಾರ್ವಭೌಮರೆಂದು ಮೆರೆಯುತ್ತಿದ್ದ ಸಾಮ್ರಾಟರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಮೆಟ್ಟಿ ನಿಂತಿದೆ ಎಂದು ಹೇಳುವಾಗ ಈ ಮಾತು ಬಂದಿದೆ.
ಸ್ವಾರಸ್ಯ :- ಕಾಲದ ಗತಿಯಲ್ಲಿ ಅಹಂಕಾರದಿಂದ ಮೆರೆದವರೂ ನಿರ್ನಾಮವಾಗಿದ್ದಾರೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.
3. "ಮನ್ವಂತರಗಳ ಭಾಗ್ಯವ ತೆರೆಸಿ"
ಆಯ್ಕೆ:- ಈ ವಾಕ್ಯವನ್ನು ದ.ರಾ.ಬೇಂದ್ರೆ ವಿರಚಿತ ಗರಿ ಕವನ ಸಂಕಲನದಿಂದ ಹಕ್ಕಿ ಹಾರುತಿದೆ ನೋಡಿದಿರಾ ಪದ್ಯದಿಂದ ಆರಿಸಲಾಗಿದೆ. చంబ
ಸಂದರ್ಭ:- ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಈ ಮಾತನ್ನು ಹೇಳಿದ್ದಾರೆ. ಕಾಲ ಪಕ್ಷಿಯು ಯುಗಯುಗಗಳ ಆಗುಹೋಗುಗಳನ್ನು ಹಿಂದಕ್ಕೆ ತಳ್ಳುತ್ತಾ ಹೊಸ ಮನ್ವಂತರದ ಪ್ರಗತಿಗೆ ಕಾರಣವಾಗಿದೆ ಎಂದು ಹೇಳುವಾಗ ಈ ಮಾತು ಬಂದಿದೆ.
ಸ್ವಾರಸ್ಯ :- ಕಾಲ ಪಕ್ಷಿಯು ಹೊಸ ಪರಿವರ್ತನೆಗೆ ಕಾರಣವಾಗಿದೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.
4. "ಹೊಸಗಾಲದ ಹಸುಮಕ್ಕಳ ಹರಸಿ"
م
ಆಯ್ಕೆ:- ಈ ವಾಕ್ಯವನ್ನು ದ.ರಾ.ಬೇಂದ್ರೆ ವಿರಚಿತ ಗರಿ ಕವನ ಸಂಕಲನದಿಂದ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಪದ್ಯದಿಂದ ಆರಿಸಲಾಗಿದೆ. G
ಸಂದರ್ಭ:- ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಈ ಮಾತನ್ನು ಹೇಳಿದ್ದಾರೆ. ಕಾಲ ಪಕ್ಷಿಯು ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಭೂಮಂಡಲದ ಜೀವಿಗಳಿಗೆ ಚೈತನ್ಯ ನೀಡಿ ಮುಂದಿನ ಜನಾಂಗದ ಮಕ್ಕಳನ್ನು ಹರಸಿದೆ ಎನ್ನುವಾಗ ಈ ಮಾತು ಬಂದಿದೆ.
ಸ್ವಾರಸ್ಯ:-ಕಾಲಪಕ್ಷಿಯು ಮುಂದಿನ ಜನಾಂಗವನ್ನು
ಹರಸುತ್ತಿದೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ. ಉ) ಹೊಂದಿಸಿ ಬರೆಯಿರಿ
೧. ಹಕ್ಕಿ
ಜ್ಞಾನಪೀಠ ಪ್ರಶಸ್ತಿ
ಉತ್ತರ
೨. ನಾಕುತಂತಿ
ಪಕ್ಷಿ
ಪಕ್ಷಿ
೩. ನೀಲಮೇಘಮಂಡಲ
ಖಂಡ-ಖಂಡಗಳ
ಜ್ಞಾನಪೀಟ
೪. ರಾಜ್ಯದ ಸಾಮ್ರಾಜ್ಯದ
ತೆನೆ ಒಕ್ಕಿ
ಸಮಬಣ್ಣ
೫. ತೇಲಿಸಿ ಮುಳುಗಿಸಿ
ಸಮ ಬಣ್ಣ
ತೆನೆ ಒಕ್ಕಿ
ಖಂಡಖಂಡಗಳ
೬. ಮಂಗಳ ಭಾಗ್ಯವ
ಅಂಗಕೇರಿ
ಅಂಗಳಕೇರಿ
ಭಾಷಾ ಚಟುವಟಿಕೆ
ಸಮಾನಾರ್ಥಕ ಪದ ಬರೆಯಿರಿ
ಸೂರ್ಯ- ರವಿ ಮೇಘ ಮೋಡ ಗಡ-ಕೋಟೆ ಹರಸು-ಆಶಿರ್ವದಿಸು
ತೆನೆಯಿಂದ ಕಾಲನ್ನು ಬೇರ್ಪಡಿಸುವುದು, ಕೆನ್ನ- ಕೆಂಬಣ್ಣ
ತತ್ಸಮ - ತದ್ಭವ ಪದ ಬರೆಯಿರಿ
ಬಣ್ಣ >ವರ್ಣ ಬ್ರಹ್ಮ>ಬೊಮ್ಮ ಚಂದ್ರ ಚಂದಿರ ಯುಗ-ಜುಗ ಅಂಗಳ ಅಂಕಣ
ಸಂಧಿ ವಿಂಗಡಿಸಿ ಹೆಸರಿಸಿ
ಇರುಳಳಿದು= ಇರುಳು+ಅಳಿದು ಲೋಪಸಂದಿ
ತೆರೆದಿಕ್ಕುವ=ತೆರೆದು + ಇಕ್ಕುವ ಲೋಪ
ಹೊಸಗಾಲ=ಹೊಸ+ಕಾಲ= ಆದೇಶ
ದಿಗ್ಧಂಡಲ= ದಿಕ್+ ಮಂಡಲ=ಜತ್ತ್ವ
ತಿಂಗಳಿನೂರು=ತಿಂಗಳಿನ+ ಊರು=ಲೋಪ
ಈ ಅವ್ಯಯ ಪದಗಳು ಯಾವ ಯಾವ ಅವ್ಯಯ ಪದಕ್ಕೆ ಸೇರಿವೆ ಗುರುತಿಸಿ,
ಅದುವೇ-ಅವಧಾರಣೆ. ಆದ್ದರಿಂದ-ಸಂಬಂಧಾರ್ಥಕ/ಸಮುಚ್ಚಯ, ಅಯ್ಯೋ-ಭಾವಸೂಚಕ, ಬೇಗನೆ-ಸಾಮಾನ್ಯ, ಧಗಧಗ- ಅನುಕರಣೆ, ಸಾಕು-ಕ್ರಿಯಾರ್ಥಕ, ಓಹೋ-ಭಾವಸೂಚಕ. ಹೌದು-ಕ್ರಿಯಾರ್ಥಕ, ನೀನೇ-ಅವಧಾರಣೆ, ರೊಯ್ಯನೆ-ಸಾಮಾನ್ಯ. ಮೆಲ್ಲಗೆ-ಸಾಮಾನ್ಯ. ಅಲ್ಲದೆ-ಸಂಬಂಧಾರ್ಥಕ.
No comments:
Post a Comment