5th Standard Gida Mara Kannada Poem Notes
Contents
1 Gida Mara Kannada Poem Notes
2 ಕೃತಿಕಾರರ ಪರಿಚಯ
3 5ನೇ ತರಗತಿ ಗಿಡಮರ ಕನ್ನಡ ಪದ್ಯದ ನೋಟ್ಸ್
3.1 ಅ. ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
4.1 ಆ. ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
4.2 ಇ. ಬಿಟ್ಟ ಸ್ಥಳವನ್ನು ಪದ್ಯದಿಂದ ಆವರಿಸಿದ ಸೂಕ್ತ ಪದಗಳಿಂದ ತುಂಬಿರಿ.
4.3 ಈ. ಕೆಳಗೆ ನೀಡಿರುವ ಪದಗಳಲ್ಲಿ ಗಿಡ ಮರಗಳಿಗೆ ಮತ್ತು ಮಾನವನಿಗೆ ಸಂಬಂಧಿಸಿರುವ ಪದಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ.
ಕೃತಿಕಾರರ ಪರಿಚಯ
ಡಾ . ಸತ್ಯಾನಂದ ಪಾತ್ರೋಟ ಬಾಗಲಕೋಟೆಯಲ್ಲಿ ಜನಿಸಿದರು . ಕನ್ನಡದಲ್ಲಿ ಎಂ.ಎ. , ಪಿಹೆಚ್.ಡಿ.ಪದವಿ ಪಡೆದಿರುವ ಇವರು ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ . ಇವರು ಕರಿನೆಲದ ಕಲೆಗಳು , ಜಾಜಿ ಮಲ್ಲಿಗೆ , ಕಲ್ಲಿಗೂ ಗೊತ್ತಿರುವ ಕಥೆ , ಕರಿಯ ಕಟ್ಟಿದ ಕವನ , ನನ್ನ ಕನಸಿನ ಹುಡುಗಿ , ನದಿಗೊಂದು ಕನಸು ಮತ್ತು ಅವಳು ಎಂಬ ಕವನ ಸಂಕಲನಗಳನ್ನೂ ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ , ಮತ್ತೊಬ್ಬ ಏಕಲವ್ಯ ಎಂಬ ನಾಟಕಗಳನ್ನು ಒಂದಿಷ್ಟು ಕ್ಷಣಗಳು ಎಂಬ ಪ್ರಬಂಧ ಸಂಕಲನವನ್ನು ಪ್ರಕಟಿಸಿರುತ್ತಾರೆ . ಎದೆಯ ಮಾತು ಎಂಬುದು ಇವರ ಕಾವ್ಯದ ಧ್ವನಿಸುರುಳಿ , ಕರ್ನಾಟಕ ಸರಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಇವರನ್ನು ಪುರಸ್ಕರಿಸಿದೆ . ‘ ಗಿಡಮರ ‘ ಎಂಬ ಈ ಕವನವನ್ನು ಅವರ ಕರಿಯ ಕಟ್ಟಿದ ಕವನ ಎಂಬ ಕವನಸಂಕಲನದಿಂದ ಆರಿಸಲಾಗಿದೆ .
ಅ. ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1. ಯಾರೇ ಏನೇ ಮಾಡಿದರೂ ಗಿಡಮರ ಏನು ಮಾಡುತ್ತವೆ?
ಯಾರೇ ಏನೇ ಮಾಡಿದರೂ ಗಿಡಮರ ದಿವ್ಯ ಮೌನವಾಗಿರುತ್ತವೆ.
2. ಕಡಲುಕ್ಕುವ ಚೇತನ ಎಲ್ಲಿ ಕಾಣಬರುತ್ತದೆ?
ರೆಂಬೆ ಕೊಂಬೆಗಳ ಚಿಗುರುವಲ್ಲಿ ಕಡಲುಕ್ಕುವ ಚೇತನವು ಕಾಣ ಬರುತ್ತವೆ.
3. ಅದು ಇದು ಎಣಿಸದಿರುವುದು ಯಾವುದು?
ಜಾತಿ ಮತ ಪಂಥ ಎಣಿಸದಿರುವುದು ಗಿಡಮರಗಳು.
4. ಗಿಡ ಮರಗಳು ಹೇಗೆ ಬೆಳೆದು ಅರಳುತ್ತಿವೆ?
ಮಳೆ, ಚಳಿ, ಗಾಳಿ, ಬಿಸಿಲು ಲೆಕ್ಕಿಸದೆ ತಡಡೆದು ನಿಂದು ಗಿಡಮರಗಳು ಬೆಳೆದು ಅರಳುತ್ತಿವೆ.
ಆ. ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಬೆಳೆದು ನಿಂತ ಗಿಡಮರ ಹೇಗಿವೆ?
ಬೆಳೆದು ನಿಂತ ಗಿಡಮರ ಕಪ್ಪು ಬಣ್ಣದ ಬೊಡ್ಡೆಗಳು ಹಚ್ಚಹಸಿರು ಎಲೆಗಳು, ನಾನಾ ಬಣ್ಣ ಬಣ್ಣದಿಂದ ಕೂಡಿದ ಹೂಗಳು, ಹೂಗಳಿಂದ ಅಲಂಕೃತವಾಗಿ ಗಿಡ ಮರಗಳು ಬೆಳೆದು ನಿಂತಿವೆ.
2. ಯಾರ ಮಾತಿನಂತೆ ಮನ ಇಲ್ಲ? ಏಕೆ?
ಮನುಷ್ಯನ ಮಾತಿನಂತೆ ಅವನ ಮನ ಇಲ್ಲ. ಅವನ ಮನಸ್ಸಿನ ತುಂಬೆಲ್ಲ ಕೇವಲ ವರ್ಣ, ಜಾತಿ, ಧರ್ಮ ಮುಂತಾದವುಗಳ ಹೀನ ವಿಚಾರಗಳು ತುಂಬಿಕೊಂಡಿವೆ. ಅದಕ್ಕಾಗಿ ಮಾತಿನಂತೆ ಅವರ ಮನಸ್ಸು ಇಲ್ಲ.
3. ಗಿಡಮರಗಳು ಯಾವುದನ್ನು ಮೀರಿ ಬೆಳೆದವೆ?
ಮರಗಿಡಗಳು ಯಾವುದೇ ಭೆದಭಾವ ಇಲ್ಲದೆ ನಾಔೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿಹೇಳುತ್ತವೆ. ಹಿಡಮರಗಳು ಜಾತಿ-ಗೀತಿ, ಲಿಂಗ-ಧರ್ಮ, ಉಚ್ಚ-ನೀಚ, ಮೇಲು-ಕೀಳು, ಎಂಬ ಭಾವನೆಗಳನ್ನು ಮೀರಿ ಬೆಳೆದು ನಿಂತಿವೆ.
ಇ. ಬಿಟ್ಟ ಸ್ಥಳವನ್ನು ಪದ್ಯದಿಂದ ಆವರಿಸಿದ ಸೂಕ್ತ ಪದಗಳಿಂದ ತುಂಬಿರಿ.
ಎಂಥ ಸೊಗಸು ಏನು ಕಂಪು
ಬೆಳೆದು ನಿಂತ ಗಿಡಮರ
ರೆಂಬೆ ಕೊಂಬೆ ಚಿಗುರುವಲ್ಲಿ
ಕಡಲುಕ್ಕುವ ಚೇತನ
ಮನುಷ್ಯನಲ್ಲಿ ಮಾತು ಉಂಟು
ಮಾತಿನಂತೆ ಇಲ್ಲಮನ
ಜಾತಿ-ಗೀತಿ ಲಿಂಗ-ಧರ್ಮ
ಮೀರಿಬೆಳೆದ ಗಿಡಮರ
No comments:
Post a Comment