KSPSTA

RECENT INFORMATIONS

Search This Blog

Wednesday, 10 April 2024

Second PUC Result District wise Rank List 2024

  Dailyguru       Wednesday, 10 April 2024

 Breaking: ದ್ವಿತೀಯ ಪಿಯುಸಿ 81.15% ಫಲಿತಾಂಶ, ಈ ಬಾರಿ ಕೂಡ ದಕ್ಷಿಣ ಕನ್ನಡ ಫಸ್ಟ್, ಉಡುಪಿ ಸೆಕೆಂಡ್




Breaking: ದ್ವಿತೀಯ ಪಿಯುಸಿ 81.15% ಫಲಿತಾಂಶ, ಈ ಬಾರಿ ಕೂಡ ದಕ್ಷಿಣ ಕನ್ನಡ ಫಸ್ಟ್, ಉಡುಪಿ ಸೆಕೆಂಡ್

ಬೆಂಗಳೂರು(ಏ.10): 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಬುಧವಾರ ಬಿಡುಗಡೆಯಾಗಿದೆ.  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (Karnataka School Examination and Assessment Board -KSEAB) ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದೆ. https://karesults.nic.in ವೆಬ್ ಸೈಟ್ ನಲ್ಲಿ 11 ಗಂಟೆ ನಂತರ ಫಲಿತಾಂಶ ವೀಕ್ಷಿಸಬಹುದು ಎಂದು ತಿಳಿಸಿದೆ. ಮಂಡಳಿಯ ಅಧ್ಯಕ್ಷೆ ಎನ್. ಮಂಜುಶ್ರೀ, ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲಕೃಷ್ಣ ಸೇರಿ ಹಿರಿಯ ಅಧಿಕಾರಿಗಳು ಫಲಿತಾಂಶವನ್ನು ಘೋಷಣೆ ಮಾಡಿದ್ದಾರೆ.   ಈ ಬಾರಿ ದ್ವಿತೀಯ ಪಿಯುಸಿ 81.15% ಫಲಿತಾಂಶ ಬಂದಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಡ  ಬಾಲಕಿಯರೇ (84.87%) ಮೇಲುಗೈ ಸಾಧಿಸಿದ್ದಾರೆ. ಬಾಲಕರು 76.98% ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ. ದುರಾದೃಷ್ಟವೆಂದರೆ 35 ಕಾಲೇಜುಗಳಿಗೆ ಈ ಬಾರಿ  ಶೂನ್ಯ ಫಲಿತಾಂಶ ಬಂದಿದೆ. ಒಟ್ಟಯ 463 ಕಾಲೇಜುಗಳಲ್ಲಿ ಶೇ. 100% ಫಲಿತಾಂಶ ಬಂದಿದ್ದು, ಅದರಲ್ಲಿ 91 ಸರ್ಕಾರಿ ಕಾಲೇಜುಗಳಲ್ಲಿ ಶೇ.100% ಫಲಿತಾಂಶ ಬಂದಿದೆ.  ಕಳೆದ ಬಾರಿಯಂತೆ ಈ ಬಾರಿ ಕೂಡ  ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ.  ಗದಗ (72.86%) ಕೊನೆಯ ಸ್ಥಾನ ಪಡೆದಿದೆ.  ಜಿಲ್ಲೆಗಳ ಶೇಕಡಾವಾರು ಫಲಿತಾಂಶ:  1. ದಕ್ಷಿಣ ಕನ್ನಡ        97.37 2. ಉಡುಪಿ        96.80 3. ವಿಜಯಪುರ        94.89 4. ಉತ್ತರ ಕನ್ನಡ        92.51 5. ಕೊಡಗು        92.13 6. ಬೆಂಗಳೂರು ದಕ್ಷಿಣ    89.57 7. ಬೆಂಗಳೂರು ಉತ್ತರ    88.67 8. ಶಿವಮೊಗ್ಗ        88.58 9. ಚಿಕ್ಕಮಗಳೂರು    88.20 10. ಬೆಂಗಳೂರು ಗ್ರಾಮಾಂತರ    87.55 11. ಬಾಗಲಕೋಟೆ        87.54 12. ಕೋಲಾರ        86.12 13. ಹಾಸನ        85.83 14. ಚಾಮರಾಜನಗರ    84.99 15. ಚಿಕ್ಕೋಡಿ        84.10 16. ರಾಮನಗರ        83.58 17. ಮೈಸೂರು        83.13 18. ಚಿಕ್ಕಬಳ್ಳಾಪುರ     82.84 19. ಬೀದರ್         81.69 20. ತುಮಕೂರು         81.03 21. ದಾವಣಗೆರೆ        80.96 22. ಕೊಪ್ಪಳ     80.83 23. ಧಾರವಾಡ    80.70 24. ಮಂಡ್ಯ    80.56 25. ಹಾವೇರಿ       78.3626.  ಯಾದಗಿರಿ    77.29 27. ಬೆಳಗಾವಿ    77.20 28. ಕಲಬುರಗಿ    75.48 29. ಬಳ್ಳಾರಿ    74.70 30. ರಾಯಚೂರು    73.11 31. ಚಿತ್ರದುರ್ಗ    72.92 32. ಗದಗ    72.86  ಕಲಾ ವಿಭಾಗದಲ್ಲಿ 596 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದವರು ಬೆಂಗಳೂರಿನ ಮೇಧಾ ಡಿ ವಿಜಯಪುರದ ವೇದಾಂತ್ ಬಳ್ಳಾರಿಯ ಕವಿತಾ  ವಾಣಿಜ್ಯ ವಿಭಾಗದಲ್ಲಿ  ರಾಜ್ಯಕ್ಕೆ  ಟಾಪರ್‌ ಗಾನವಿ ಎಂ. ವಿದ್ಯಾನಿಧಿ ಪಿಯು ಕಾಲೇಜು ತುಮಕೂರು  (597) ಪ್ರಥಮ ಪವನ್ ಎಂ.ಎಸ್ ಕುಮಧ್ವತಿ ಪಿಯು ಕಾಲೇಜು ಶಿವಮೊಗ್ಗ 596 ದ್ವಿತೀಯ ಸ್ಥಾನ ಹರ್ಷಿತಾ ಪೂರ್ಣ ಪ್ರಜ್ಞಾ ಪಿಯು ಕಾಲೇಜ್ ಉಡುಪಿ 596 ದ್ವಿತೀಯ ಸ್ಥಾನ ತುಳಸಿ ಪೈ ಕೆನರಾ ಕಾಲೇಜು ಮಂಗಳೂರು 596 ದ್ವಿತೀಯ ಸ್ಥಾನ ತೇಜಸ್ವಿನಿ ಕೆ. ಕಾಲೆ , MES ಮಲ್ಲೇಶ್ವರ 596  ದ್ವಿತೀಯ ಸ್ಥಾನ  35 ಕಾಲೇಜುಗಳು ಶೂನ್ಯ ಫಲಿತಾಂಶ ಬಂದಿದೆ. ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ ಇಂತಿದೆ.  ಸರ್ಕಾರಿ ಕಾಲೇಜು- 02 ಅನುದಾನಿತ ಕಾಲೇಜು - 06 ಅನುದಾನ‌‌‌ ರಹಿತ ಕಾಲೇಜು - 26 ವಿಭಜಿತ ಪದವಿ ಪೂರ್ವ ಕಾಲೇಜು - 01    ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ ಗಳು - 6,98,378 ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 5,52690 ಶೇ.85% ಹಾಗೂ ಅದಕ್ಕಿಂತ ಹೆಚ್ಚಿನ ಅಂಕ - 1,53,370 ಶೇ.60% - 2,89733 ದ್ವಿತೀಯ ದರ್ಜೆ- 72,098  ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರು - 37,489  ಮಾರ್ಚ್‌ 1ರಿಂದ 22ರವರೆಗೆ ರಾಜ್ಯದ 1120ಕ್ಕೂ ಹೆಚ್ಚು ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸಿದ್ದು, ಸುಮಾರು 7 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು.  


logoblog

Thanks for reading Second PUC Result District wise Rank List 2024

Previous
« Prev Post

No comments:

Post a Comment