> KGID ಗೆ ಸಂಬಂಧಿಸಿದ ಒಂದಿಷ್ಟು ವಿವರ
*ಪ್ರಶ್ನೋತ್ತರಗಳು*
👉*ವಿಮೆ ಕಡ್ಡಾಯವಾಗಿ ಎಷ್ಟಿರಬೇಕು?*
> ನಿಮ್ಮ ವೇತನದ 6.25% ಕಡ್ಡಾಯ,(ಹೆಚ್ಚಿಗೂ ಮಾಡಿಸಬಹುದು)
👉*ವಿಮೆ ಮುಗಿಯುವುದು ಯಾವಾಗ?*
> 55 ವರ್ಷ ತುಂಬಿದ ನಂತರ
👉*ವಿಮೆ ಮಾಡಿಸಲು ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯವೇ?*
> 1,000/- ಕ್ಕಿಂತ ಕಡಿಮೆ ಮೊತ್ತದ ವಿಮೆಗೆ ವೈದ್ಯಕೀಯ ಪ್ರಮಾಣ ಪತ್ರದ ಅವಶ್ಯಕತೆಯಿಲ್ಲ,1,000/- ಕ್ಕಿಂತ ಹೆಚ್ಚಾದ ವಿಮೆಗೆ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯ..
👉*ವೈದ್ಯಕೀಯ ಪ್ರಮಾಣ ಪತ್ರ ಎಲ್ಲಿ ಮಾಡಿಸಬಹುದು?*
> ಕರ್ನಾಟಕದ ಸರ್ಕಾರಿ ಜಿಲ್ಲಾ/ತಾಲೂಕು ಆಸ್ಪತ್ರೆ & ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ವೈದ್ಯಾಧಿಕಾರಿಗಳಿಂದ ಮಾಡಿಸಬಹುದು..
👉*KGID ಯ ಎಲ್ಲಾ ಪ್ರಕ್ರಿಯೆಗಳೂ ಆನ್ ಲೈನ್ ಆಗಿದೆಯೇ?*
> ಹೌದು ಭಾಗಶಃ ಆನ್ಲೈನ್ ಆಗಿದೆ.
👉 *ಇಳಿಕೆ ವಿಮೆ ತಪ್ಪಿಸಲು ಎತ್ತರ ತೂಕಗಳನ್ನು ನಿರ್ವಹಿಸುವುದು ಹೇಗೆ?*
> ಎತ್ತರದಲ್ಲಿ ಯಾವುದೇ ವ್ಯತ್ಯಾಸ ಮಾಡಲು ಆಗುವುದಿಲ್ಲ, ಎತ್ತರವನ್ನು ಇದ್ದಂತೆ ಹಾಕಿಸಿ ತೂಕವನ್ನು ವೈದ್ಯಾಧಿಕಾರಿಗಳಿಗೆ ವಿನಂತಿಸಿ ಎತ್ತರದ ಕೊನೆಯ ಎರಡು ಸಂಖ್ಯೆ ನಮೂದಿಸಿ ಇಳಿಕೆ ವಿಮೆ ಆಗದಂತೆ ಎಚ್ಚರ ವಹಿಸಬಹುದು..
ಉದಾಹರಣೆಗೆ- ಎತ್ತರ 157 ಸೆ ಮೀಟರ್ ಇದ್ದಲ್ಲಿ ತೂಕ 56/57/58 ಕಿ ಗ್ರಾಂ ಹಾಕುವುದು
👉*ಬೋನಸ್ ಎಷ್ಟು ವರ್ಷಕ್ಕೊಮ್ಮೆ ಕೊಡಲಾಗುತ್ತೆ?*
> ಪ್ರತೀ ಎರಡು ವರ್ಷಕ್ಕೊಮ್ಮೆ ಬೋನಸ್ ನೀಡಲಾಗುತ್ತದೆ..
*👉 ಬೋನಸ್ ಹೇಗೆ ಜಮಾ ಮಾಡಲಾಗುತ್ತದೆ..*
> ನಿಮ್ಮ ವಿಮಾ ಮೊತ್ತ (ಸಮ್ ಅಷ್ಯುರ್ಡ್) ಕ್ಕೆ ಇಂತಿಷ್ಟು ಪರ್ಸೆಂಟ್ ಎಂದು ನಿಗದಿಗೊಳಿಸಲಾಗುತ್ತಿದೆ.. ನಿಮ್ಮ ವೈಯಕ್ತಿಕ ಲಾಗಿನ್ ನಲ್ಲಿ ಪರಿಶೀಲಿಸಿಕೊಳ್ಳಬಹುದು.
*👉LIC,PLI,SBI,KOTAK ಇನ್ನಿತರೆ ಜೀವ ವಿಮಾ ಕಂಪನಿಗಳಿಗಿಂತ KGID ಉತ್ತಮವೇ?*
> ಹೌದು 100% ಉತ್ತಮ, ಹೇಗೆಂದರೆ ಯಾವುದೇ ಕಂಪನಿಗಳಲ್ಲಿ ವಿಮಾ ಮೊತ್ತದ ಶೇಕಡ 100% ರಷ್ಟು ನಿಮಗೆ ದೊರಕದು,
> ಅಂದರೆ ವಿಮಾ ಮೊತ್ತ 1,00,000 ಇದ್ದಲ್ಲಿ+70,000/80,000 ಸಿಕ್ಕರೆ ಹೆಚ್ಚು,
> ಆದರೆ KGID ಯಲ್ಲಿ ವಿಮಾ ಮೊತ್ತದ ಶೇಕಡ 200,300% ರಷ್ಟು
> ಸಿಕ್ಕೇ ಸಿಗುತ್ತದೆ..
> KGID ವಿಮಾ ಮೊತ್ತ 1,00,000 ಇದ್ದಲ್ಲಿ+2,00,000/3,00,000 ಸಿಗುತ್ತದೆ..
*👉 ವಿಮೆಗೆ ನಾಮಿನಿ ಯಾರನ್ನು ಕೊಡಬಹುದು..*
*ಅವಿವಾಹಿತರು*
> ತಂದೆ/ತಾಯಿ/ಸಹೋದರ/ಸಹೋದರಿ...
*ವಿವಾಹಿತರು*
> ಗಂಡ/ಹೆಂಡತಿ/ಮಕ್ಕಳು...
*ವಿಚ್ಛೇದಿತರು/ವಿಧವೆ/ವಿದುರ*
> ಮಕ್ಕಳು/ತಂದೆ/ತಾಯಿ/ಸಹೋದರ/ಸಹೋದರಿ
*👉 ವಿಮೆ ಯಾವುದೋ ಕಾರಣದಿಂದ ವೇತನದಲ್ಲಿ ಮುರುವಳಿಯಾಗದಿದ್ದಲ್ಲಿ ಪಾವತಿ ಮಾಡುವುದು ಹೇಗೆ?*
> ನೌಕರರ ವೈಯಕ್ತಿಕ ಲಾಗಿನ್ ನಲ್ಲಿ ಫೋನ್ ಪೆ/ಗೂಗಲ್ ಪೆ/ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಮುಖಾಂತರ ಪಾವತಿ ಮಾಡಿ KGID ಕಚೇರಿಗೆ ಮಾಹಿತಿ ನೀಡಿ ಅಪ್ಡೇಟ್ ಮಾಡಿಸಬೇಕು..
*👉 KGID ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ?*
> ಮೊದಲಿನಂತೆ ಕಚೇರಿಗೆ ಅರ್ಜಿ ಕೊಡುವ ಅವಶ್ಯಕತೆ ಇಲ್ಲ ನಮ್ಮ ಲಾಗಿನ್ ನಲ್ಲಿಯೇ ಅರ್ಜಿ ಸಲ್ಲಿಸಿ ಮಾನ್ಯ ಬಿಇಓ ರವರ ಲಾಗಿನ್ ನಿಂದ KGID ಕಚೇರಿಗೆ ಫಾರ್ವರ್ಡ್ ಮಾಡಿಸಿದರೆ ಲೋನ್ ಸ್ಯಾಂಕ್ಷನ್ ಆಗುತ್ತೆ..
*👉 ಲೋನ್ ನ ಅಸಲು ಮತ್ತು ಬಡ್ಡಿಯನ್ನು ಎಷ್ಟು ಕಂತುಗಳಲ್ಲಿ ಮರುವಳಿ ಮಾಡಬಹುದು?*
> ಲೋನ್ ನ ಗರಿಷ್ಠ ಕಂತುಗಳು 40
> ಬಡ್ಡಿಯ ಕಂತುಗಳು ಗರಿಷ್ಠ 8
*👉KGID ಸಹಾಯ ವಾಣಿ?*
> ಎಸ್, KGID ಯ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ಸಹಾಯ ವಾಣಿ ಇದೆ..
> `ಈ ಸಂಖ್ಯೆಗೆ ವರ್ಕಿಂಗ್ ಡೇಸ್ ನಲ್ಲಿ ಕರೆ ಮಾಡಬಹುದು `KGID ಹೆಲ್ಪ್ ಲೈನ್ ನಂಬರ್ 080 2253 6100`
*👉 ಮೊಬೈಲ್ ನಂಬರ್ ಬದಲಿಸಿದಲ್ಲಿ ಅಪ್ಡೇಟ್ ಮಾಡಿಸುವುದು ಹೇಗೆ?*
> KGID ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ವಿನಂತಿಸಿ ಅಪ್ಡೇಟ್ ಮಾಡಿಕೊಳ್ಳಬಹುದು
*👉ಹೆಚ್ಚುವರಿ ಹೊಸ ಪಾಲಿಸಿ ಮಾಡಿಸಲು ವಯಸ್ಸಿನ ಮಿತಿ?*
> ಹೆಚ್ಚುವರಿ ಹೊಸ ಪಾಲಿಸಿ ಮಾಡಿಸಲು ಕೊನೆಯ ವಯಸ್ಸು 50!!
No comments:
Post a Comment