Hedding ; Important guidelines related to SSLC Annual Examination 2026...
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಗ ಸೂಚಿಗಳು!👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇
ಶಾಲಾ ಮುಖ್ಯೋಪಾಧ್ಯಾಯರ ಜವಾಬ್ದಾರಿಗಳು ಮತ್ತು ಪರೀಕ್ಷಾ ಅರ್ಜಿಗಳನ್ನು ಸಲ್ಲಿಸಲು ಪಾಲಿಸಬೇಕಾದ ಸೂಚನೆಗಳು:-
1. 2026ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ CCERF ವಿದ್ಯಾರ್ಥಿಗಳ ನೋಂದಣಿ ಮಾಹಿತಿಯನ್ನು ಮಂಡಳಿ ಜಾಲತಾಣದ ಶಾಲಾ ಲಾಗಿನ್ ಮುಖಾಂತರ ಅಪ್ ಲೋಡ್ ಮಾಡುವುದು.
2. ದಿನಾಂಕ:01.03.2026 ರಂದು 15 ವರ್ಷ ವಯೋಮಿತಿ ಪೂರೈಸುವ ಅಭ್ಯರ್ಥಿಗಳು ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ಕುಳಿತುಕೊಳ್ಳಬಹುದು. ಇವರುಗಳು ನಿಗದಿತ ನೋಂದಣಿ ಶುಲ್ಕ ನೀಡಿ ನೋಂದಣಿ ಮಾಡಿಸಿಕೊಂಡಿರಬೇಕು.
3. ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಪ್ರಕಾರ ರಾಜ್ಯದ ಪ್ರತಿಯೊಂದು ಖಾಸಗಿ ಅನುದಾನಿತ/ ಅನುದಾನ ರಹಿತ ಪ್ರೌಢಶಾಲೆಗಳು ಬೋಧಿಸುವ ಮಾಧ್ಯಮಗಳಿಗನುಗುಣವಾಗಿ ಇಲಾಖೆಯ ಸಕ್ಷಮ ಪ್ರಾಧಿಕಾರದ ಅನುಮತಿ/ಮಾನ್ಯತೆ ಪಡೆಯುವುದು ಕಡ್ಡಾಯ.
4. ಪ್ರಸ್ತುತ ರಾಜ್ಯದ ಕೆಲವು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಹಲವಾರು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದನ್ನು ಗಮನಿಸಿ ಮತ್ತು ಅನುತ್ತೀರ್ಣರಾಗುತ್ತಾರೆಂಬ ಪೂರ್ವಾಗ್ರಹ ಪೀಡಿತರಾಗಿ ಹಾಗೂ ಶಾಲೆಯ ಒಟ್ಟಾರೆ ಶೇಕಡಾ 100ರಷ್ಟು ಫಲಿತಾಂಶ ಪಡೆಯಬೇಕೆಂಬ ಹೆಬ್ಬಯಕೆಯಿಂದ, ಕೆಲವು ಶಾಲಾ ವಿದ್ಯಾರ್ಥಿಗಳನ್ನು ಖಾಸಗಿ ವಿದ್ಯಾರ್ಥಿಗಳಾಗಿ ಪರಿಗಣಿಸಿ ಪ್ರಸ್ತಾವನೆ ಸಲ್ಲಿಸುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಶಾಲಾ ವಿದ್ಯಾರ್ಥಿಯನ್ನು ಯಾವುದೇ ಕಾರಣಗಳಿಂದಾಗಿ ವರ್ಗಾವಣೆ ಪ್ರಮಾಣ ಪತ್ರ ನೀಡಿ ಖಾಸಗಿ ಅಭ್ಯರ್ಥಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ಇಂತಹ ಪ್ರಕರಣಗಳು ಮರುಕಳಿಸಿದಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ- 1983ರ ನಿಯಮ-39 ರನ್ವಯ ಮಾನ್ಯತೆಯನ್ನು ಹಿಂಪಡೆಯಲು ಸೂಕ್ತ ಕ್ರಮಜರುಗಿಸಲಾಗುವುದು ಹಾಗೂ ಸಂಬಂಧಿಸಿದ ಶಾಲೆಗಳ ಶಾಲಾ ಸಂಕೇತವನ್ನು ಸಹ ರದ್ದುಪಡಿಸಲು ಕ್ರಮವಹಿಸಲಾಗುವುದು.
5. ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಬೋಧನೆ ಮಾಡುವ ವಿಷಯ ಮತ್ತು ಮಾಧ್ಯಮವನ್ನು ಮಾತ್ರ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳತಕ್ಕದ್ದು.
6. CCERF ವಿದ್ಯಾರ್ಥಿಗಳ ವಿವರಗಳನ್ನು ಮಂಡಳಿ ಜಾಲತಾಣದ ಶಾಲಾ ಲಾಗಿನ್ ಮೂಲಕ್ ಆನ್‌ಲೈನ್‌ನಲ್ಲಿ ನಿಗದಿಪಡಿಸಿದ ಅಂತಿಮ ದಿನಾಂಕದೊಳಗೆ ನೋಂದಾಯಿಸಲು ಕ್ರಮವಹಿಸುವುದು. ಈ ದಿನಾಂಕದ ನಂತರ ವಿದ್ಯಾರ್ಥಿಗಳ ನೋಂದಣಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು ನಿಗದಿತ ದಿನಾಂಕದೊಳಗೆ ಅನ್‌ಲೈನ್‌ನಲ್ಲಿ ನೋಂದಾಯಿಸಲು ಕ್ರಮಕೈಗೊಳ್ಳುವುದು.
ವಿಶೇಷ ಸೂಚನೆ:👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇
CCERF ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಪಾವತಿಸಲು ಮಂಡಳಿ ಜಾಲತಾಣದಲ್ಲಿ ಚಲನ್ ಸೃಜಿಸಿಕೊಂಡು ರಾಷ್ಟ್ರೀಕೃತ ಬ್ಯಾಂಕ್‌ನಲ್ಲೇ ಜಮಾ ಮಾಡಬೇಕು. ಯಾವುದೇ ಕಾರಣಕ್ಕೂ ಈ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ಬ್ಯಾಂಕ್ ಹುಂಡಿ ಅಥವಾ ಮಂಡಳಿಯ NEFT ಚಲನ್ ಮೂಲಕ ಪಾವತಿಸಬಾರದು.
7. ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಅರ್ಜಿಯ ಜೊತೆಗೆ ನೋಂದಣಿ ಪ್ರಮಾಣ ಪತ್ರವನ್ನು ಶಾಲೆಯಲ್ಲಿ ಸಂರಕ್ಷಿಸಿಡಲು ಕ್ರಮವಹಿಸುವುದು. ಸಕಾರಣದಿಂದ ತಿರಸ್ಕರಿಸುವ ಅರ್ಜಿಗಳ ಪರೀಕ್ಷಾ ಶುಲ್ಕವನ್ನು ಹಿಂದಿರುಗಿಸುವುದಿಲ್ಲ. ಶುಲ್ಕ ವಿನಾಯಿತಿ ಪಡೆಯುವ ಖಾಸಗಿ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ / ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ.) ಮತ್ತು ಇನ್ನಿತರ ದಾಖಲೆಗಳನ್ನು ಮುಖ್ಯಶಿಕ್ಷಕರು ಅಭ್ಯರ್ಥಿಗಳಿಂದ ಪಡೆದು ಶಾಲೆಯಲ್ಲಿ ಸಂರಕ್ಷಿಸಿ ಇಡತಕ್ಕದ್ದು ಹಾಗೂ ಇವುಗಳನ್ನು ಮುಂದಿನ ತಪಾಸಣಾ ಸಮಯದಲ್ಲಿ ಹಾಜರುಪಡಿಸುವುದು.
8. ಪುನರಾವರ್ತಿತ ವಿದ್ಯಾರ್ಥಿಗಳಿಗೆ ಶಾಲಾ ಬದಲಾವಣೆಗೆ ಅವಕಾಶವಿಲ್ಲ. ವಿದ್ಯಾರ್ಥಿಗಳು ಪುನ: ಪರೀಕ್ಷೆ ಬರೆಯಲು ಬಯಸಿದಲ್ಲಿ ವ್ಯಾಸಂಗ ಮಾಡಿದ ಶಾಲೆಯ ಮೂಲಕವೇ ಪರೀಕ್ಷೆ ತೆಗೆದುಕೊಳ್ಳಲು ಮುಖ್ಯಶಿಕ್ಷಕರು ಅವಕಾಶ ಕಲ್ಪಿಸಬೇಕು. ಒಂದು ವೇಳೆ ಇಂತಹ ವಿದ್ಯಾರ್ಥಿಗಳ ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಿದ್ದರೂ ಸಹ, ನಿಯಮಾನುಸಾರ ಅದೇ ಶಾಲೆಯ ಮೂಲಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದು.
9. ಸರ್ಕಾರದಿಂದ ಮಾನ್ಯತೆ ಪಡೆದು ಅಧಿಕೃತ ಶಾಲೆಗಳಾಗಿ ಮಂಡಳಿಯಿಂದ ಶಾಲಾ ಸಂಕೇತ ಪಡೆದಿರುವ ಸರ್ಕಾರಿ/ಅನುದಾನಿತ/ಅನುದಾನ ರಹಿತ/ಸರ್ಕಾರದ ಇತರೆ ಇಲಾಖೆಯಿಂದ ನಡೆಸಲ್ಪಡುವ ಪ್ರೌಢಶಾಲೆಗಳ ಎಲ್ಲಾ ವಿಷಯವಾರು ಶಿಕ್ಷಕರು ಕಡ್ಡಾಯವಾಗಿ ಮಂಡಳಿಯಲ್ಲಿ ಮೌಲ್ಯಮಾಪನಕ್ಕೆ ನೋಂದಣಿ ಮಾಡಿಸತಕ್ಕದ್ದು.
ಈ ಬಗ್ಗೆ ಮಂಡಳಿಯ ಜಾಲತಾಣದಲ್ಲಿ ವ್ಯವಸ್ಥೆ ಮಾಡಲಾಗುವುದು ಹಾಗೂ ಈ ಕುರಿತು ಪ್ರತ್ಯೇಕ ಸುತ್ತೋಲೆ ನೀಡಲಾಗುವುದು. ನಿಮ್ಮ ಶಾಲೆಗಳಿಗೆ ಸಂಬಂಧಿಸಿದಂತೆ, ಮುಖ್ಯ ಶಿಕ್ಷಕರುಗಳನ್ನೊಳಗೊಂಡಂತೆ ಎಲ್ಲಾ ಶಿಕ್ಷಕರುಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸುವುದು ಮುಖ್ಯ ಶಿಕ್ಷಕರ ಕರ್ತವ್ಯವಾಗಿರುತ್ತದೆ. ಸದರಿ ಮಾಹಿತಿಯನ್ನು ಮಂಡಳಿಯ ಜಾಲತಾಣದಲ್ಲಿ ದಾಖಲಿಸತಕ್ಕದ್ದು. ಮಾರ್ಚ್/ಏಪ್ರಿಲ್ 2026ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕೆ ಮಂಡಳಿಯಲ್ಲಿ ಶಾಲಾ ಸಂಕೇತ ಪಡೆದು ನೋಂದಣಿಯಾಗಿರುವ ಶಾಲೆಗಳು, ಮೌಲ್ಯಮಾಪನಕ್ಕೆ ನೋಂದಣಿ ಮಾಡಿಸದೇ ಇರುವ ಪ್ರೌಢಶಾಲೆಗಳು ಕಡ್ಡಾಯವಾಗಿ ನಿಗದಿತ ಅರ್ಹತೆ ಹೊಂದಿರುವ ಎಲ್ಲಾ ಅರ್ಹ ಶಿಕ್ಷಕರನ್ನು ಮಂಡಳಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ. ಮೌಲ್ಯಮಾಪನದ ನೋಂದಣಿಗೆ ಪದವಿ ಹಾಗೂ ಬಿ.ಇಡಿ., ವಿದ್ಯಾರ್ಹತೆ ಹೊಂದಿರುವವರು ಅರ್ಹತೆ ಹೊಂದಿರುತ್ತಾರೆ. ಕರ್ನಾಟಕ ಶಿಕ್ಷಣ ಕಾಯ್ದೆ-28 ಹಾಗೂ 122ರನ್ವಯ ಹಾಗೂ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿಯಮ (ತಿದ್ದುಪಡಿ) 2012ರನ್ವಯ ಪ್ರತಿಯೊಬ್ಬ ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವುದು ಕಡ್ಡಾಯ. ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಶಿಸ್ತುಕ್ರಮ ಜರುಗಿಸಲು ಅವಕಾಶವಿದೆ.
10. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರೌಢಶಾಲೆಗೆ ಬಡ್ತಿ ಹೊಂದಿದ ದಿನಾಂಕವನ್ನು ಜೇಷ್ಠತೆಗಾಗಿ ಪರಿಗಣಿಸಿ ಮೌಲ್ಯಮಾಪನಕ್ಕೆ ನೋಂದಣಿ ಮಾಡಿಸುವುದು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿದ ದಿನಾಂಕವನ್ನು ಮೌಲ್ಯಮಾಪನದ ನೋಂದಣಿಗೆ ಪರಿಗಣಿಸತಕ್ಕದ್ದಲ್ಲ.
11. ಪ್ರಥಮ ಭಾಷೆ ಆಂಗ್ಲ ಹಾಗೂ ಆಂಗ್ಲ ಮಾಧ್ಯಮದ ಸಮಾಜ ವಿಜ್ಞಾನ ವಿಷಯವನ್ನು ಬೋಧಿಸುತ್ತಿರುವ ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲಾ ಅರ್ಹ ಶಿಕ್ಷಕರು ಕಡ್ಡಾಯವಾಗಿ ಮಂಡಳಿಯಲ್ಲಿ ನೋಂದಣಿ ಮಾಡಿಸುವುದು ಹಾಗೂ ಸಂಬಂಧಿಸಿದ ಮುಖ್ಯಶಿಕ್ಷಕರು ಪ್ರಥಮ ಭಾಷೆ ಆಂಗ್ಲ ವಿಷಯದ ಹಾಗೂ ಆಂಗ್ಲ ಮಾಧ್ಯಮದ ಸಮಾಜ ವಿಜ್ಞಾನ ವಿಷಯದ ಅರ್ಹ ಶಿಕ್ಷಕರನ್ನು ಕಡ್ಡಾಯವಾಗಿ ನೋಂದಣಿ ಮಾಡಲು ಅಗತ್ಯಕ್ರಮವಹಿಸುವುದು.
12. ಶಾಲಾ ಮುಖ್ಯ ಶಿಕ್ಷಕರು ಆನ್‌ಲೈನ್‌ನಲ್ಲಿ ಮೌಲ್ಯಮಾಪನಕ್ಕಾಗಿ ಶಿಕ್ಷಕರ ಸೇವಾ ವಿವರದ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸುವುದು. ಬೋಧನೆ ಮಾಡುವ ವಿಷಯದ, ವಿಷಯ ಸಂಕೇತವನ್ನು ಸ್ಪಷ್ಟವಾಗಿ ನಮೂದಿಸುವುದು. ಕೋರ್ ವಿಷಯಗಳಲ್ಲಿ ನೋಂದಣಿಯಾಗುವ ಶಿಕ್ಷಕರು ಯಾವ ಮಾಧ್ಯಮದಲ್ಲಿ ಮೌಲ್ಯಮಾಪನ ಮಾಡಲಾಗುವುದು ಎಂದು ಸ್ಪಷ್ಟವಾಗಿ ನಮೂದಿಸುವುದು. (ವಿಷಯ ಸಂಕೇತದ ವಿವರಗಳನ್ನು ಅನುಬಂಧ-5 ರಲ್ಲಿ ನೀಡಿದೆ).
13. ಸರ್ಕಾರದ ಆದೇಶ ಸಂಖ್ಯೆ:ಅಇ/47/ಟಿಎಆರ್/2014, ಬೆಂಗಳೂರು 2:22.12.2014 ರನ್ವಯ, ಸಹಾಯಧನ/ಪ್ರೋತ್ಸಾಹಧನ/ಗೌರವಧನ ಮುಂತಾದವುಗಳನ್ನು RTGS / NEFT ಮುಖಾಂತರ ನೇರವಾಗಿ ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳ ಮೂಲಕ ವಿತರಿಸುವಂತೆ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ 2026ನೇ ಸಾಲಿನ ಮಾರ್ಚ್/ಏಪ್ರಿಲ್ ಮಾಹೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕುಳಿತುಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ Aadhar linked ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಹೆಸರು, ವಿಳಾಸ, ಐ.ಎಫ್.ಎಸ್.ಸಿ ಕೋಡ್ ಮುಂತಾದ ವಿವರಗಳನ್ನು ರಾಜ್ಯದ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಶಾಲಾ ಲಾಗಿನ್‌ನಲ್ಲಿ ಪರೀಕ್ಷೆಗೆ ನೋಂದಾಯಿಸುವಾಗ ಜಾಲತಾಣದಲ್ಲಿ ನಿಖರವಾಗಿ ತಪ್ಪಿಲ್ಲದೆ ದಾಖಲಿಸುವುದು.
14. ಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಎಸ್.ಎ.ಟಿ.ಎಸ್ ನಲ್ಲಿ 2025-26ನೇ ಸಾಲಿಗೆ 10ನೇ ತರಗತಿಗೆ ದಾಖಲಾಗಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸುವುದು, ವ್ಯತ್ಯಾಸವಿದ್ದಲ್ಲಿ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು. ಕ್ಷೇತ್ರಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಪ್ರೌಢ ಶಾಲೆಗಳು 10ನೇ ತರಗತಿ ಎಸ್.ಎ.ಟಿ.ಎಸ್ ನಲ್ಲಿರುವ ದಾಖಲಾತಿಯಂತೆ ಅರ್ಹ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿರುವ ಬಗ್ಗೆ ದೃಢಪಡಿಸಿಕೊಳ್ಳುವುದು.
15. ಸದರಿ ಮಾರ್ಗಸೂಚಿಯ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಓದಿ ಮನನ ಮಾಡಿಕೊಂಡು ಅಗತ್ಯ ಕ್ರಮ ವಹಿಸುವುದು.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಉಪನಿರ್ದೇಶಕರು (ಆಡಳಿತ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳು👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇:
1. ಕರ್ನಾಟಕ ಶಿಕ್ಷಣ ಕಾಯ್ದೆ 1983 ಸೆಕ್ಷನ್ 31ರ ಪ್ರಕಾರ ಪ್ರತಿಯೊಂದು ಪ್ರೌಢಶಾಲೆಯು ಬೋಧಿಸುವ ಮಾಧ್ಯಮಗಳಿಗನುಗುಣವಾಗಿ ಇಲಾಖೆಯ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯ. ಸಕ್ಷಮ ಪ್ರಾಧಿಕಾರವು ಅನುಮತಿ ನೀಡಿರುವ ಮಾಧ್ಯಮದಲ್ಲಿ ಮಾತ್ರ ಅಯಾ ಶಾಲೆಯ ರೆಗ್ಯೂಲರ್ ಶಾಲಾ ಮಕ್ಕಳನ್ನು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಾಯಿಸಲು ಅವಕಾಶವಿರುತ್ತದೆ.
2. ಕೆಲವು ಪ್ರೌಢಶಾಲೆಗಳು ಮಾನ್ಯತೆಯನ್ನು ಮತ್ತು ಬೋಧನಾ ಮಾಧ್ಯಮದ ಬಗ್ಗೆ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಮಂಡಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಿರುವುದನ್ನು ಗಮನಿಸಲಾಗಿದೆ. ಇಂತಹ ಪ್ರಸ್ತಾವನೆಗಳನ್ನು ಮಂಡಳಿಯು ಪುರಸ್ಕರಿಸುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ ಪೋಷಕರಿಗೆ ಗೊಂದಲದ ಸನ್ನಿವೇಶಗಳುಂಟಾಗುತ್ತವೆ. ಇದನ್ನು ತಪ್ಪಿಸಲು ಆಡಳಿತ ಮಂಡಳಿಗಳು ತಮ್ಮ ಶಾಲೆಯ ನಾಮಫಲಕಗಳಲ್ಲಿ ಇಲಾಖೆಯಿಂದ ಅನುಮತಿ ಪಡೆದ ಮಾಧ್ಯಮಗಳ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಈ ಬಗ್ಗೆ ಉಪನಿರ್ದೆಶಕರು (ಆಡಳಿತ) ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳುವುದು.
3. ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ)ರವರು ತಮ್ಮ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಗಳು 2025-26ನೇ ಸಾಲಿಗೆ ಮಾನ್ಯತೆ ನವೀಕರಣ ಹೊಂದಿರುವ ಮತ್ತು ನವೀಕರಣ ಹೊಂದದ ಶಾಲೆಗಳ ಪಟ್ಟಿಯನ್ನು ದೃಢೀಕರಿಸಿ ದಿನಾಂಕ:31.10.2025 ರೊಳಗೆ ಮಂಡಳಿಯ ಅಯಾ ಪರಿಶೀಲನಾ ಶಾಖೆ ವಿಳಾಸಕ್ಕೆ ಸಲ್ಲಿಸಲು ತಿಳಿಸಿದೆ. ಈ ಮಾಹಿತಿ ನೀಡದೆ ಒಂದು ವೇಳೆ ಮಾನ್ಯತೆ ನವೀಕರಣ ಹೊಂದದ ಶಾಲೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳುವಲ್ಲಿ ವ್ಯತ್ಯಯ ಉಂಟಾದಲ್ಲಿ ಅಯಾ ಉಪನಿರ್ದೆಶಕರು (ಆಡಳಿತ) ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
4. ಅನಧಿಕೃತ ಶಾಲೆಗಳ ವಿವರಗಳನ್ನು ಸ್ಪಷ್ಟವಾಗಿ ವಿವರಿಸಿ ವರದಿ ಮಾಡಬೇಕು. ಯಾವುದೇ ಕಾರಣಗಳಿಂದ ಅನಧಿಕೃತ ಶಾಲೆಗಳಿಂದ ಪ್ರಸ್ತಾವನೆ ಸಲ್ಲಿಸದಂತೆ ಕ್ರಮವಹಿಸಬೇಕು. ಕಳೆದ ಸಾಲಿನಲ್ಲಿ ಕೆಲವು ಅನಧಿಕೃತ ಶಾಲೆಗಳಿಂದ ಪ್ರಸ್ತಾವನೆಗಳು ಬಂದಿದ್ದು, ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಲು ಕ್ರಮಕೈಗೊಳ್ಳಲಾಗಿದೆ. ಇಂತಹ ಕ್ರಮಗಳನ್ನು ತಡೆಗಟ್ಟುವುದು ಅನಿವಾರ್ಯ ಹಾಗೂ ಕಡ್ಡಾಯ. ಆದ್ದರಿಂದ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಇಂತಹ ಅನಧಿಕೃತ ಶಾಲೆಗಳನ್ನು ಗುರುತಿಸಿ, ಬರುವಂತಹ ಪ್ರಸ್ತಾವನೆಗಳನ್ನು ತಡೆಗಟ್ಟಲು ಕ್ರಮವಹಿಸಬೇಕು.
5. ಆಯಾ ಕ್ಷೇತ್ರಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರಿಗಳಿಂದ ಶಾಲೆಗಳನ್ನು ಮುಚ್ಚಿಸಲು ಆದೇಶ ನೀಡಿದ್ದಲ್ಲಿ ಹಾಗೂ ವಿದ್ಯಾರ್ಥಿಗಳು ಇಲ್ಲದೇ ಶಾಲೆಯನ್ನು ಮುಚ್ಚಿದ್ದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು ಶಾಲಾ ಸಂಕೇತವನ್ನು ರದ್ದುಪಡಿಸಲು ಕಡ್ಡಾಯವಾಗಿ ಶಿಫಾರಸ್ಸು ಮಾಡತಕ್ಕದ್ದು.
6. ಕೇಂದ್ರ ಪಠ್ಯಕ್ರಮ ಸಿ.ಬಿ.ಎಸ್.ಇ, ಐ.ಸಿ.ಎಸ್.ಇ ಹಾಗೂ ಹೊರ ರಾಜ್ಯ ಪಠ್ಯಕ್ರಮಗಳಿಂದ ರಾಜ್ಯ ಪಠ್ಯಕ್ರಮಕ್ಕೆ ವಲಸೆ ಬರುವ ಅರ್ಹ ವಿದ್ಯಾರ್ಥಿಗಳು ಪಾವತಿಸಿದ ನೋಂದಣಿ ಶುಲ್ಕದ ಮೂಲ NEFT ಚಲನ್‌ಗಳನ್ನು ಸಂಬಂಧಿಸಿದ ಜಿಲ್ಲಾ ಉಪ ನಿರ್ದೇಶಕರು (ಆಡಳಿತ)ರವರು ಪಠ್ಯಕ್ರಮ ಬದಲಾವಣೆಗಾಗಿ ಶುಲ್ಕ ಪಾವತಿಸಲು ನಿಗದಿಪಡಿಸದ ಅಂತಿಮ ದಿನಾಂಕದ ನಂತರ ಒಂದು ವಾರದೊಳಗೆ ಮಂಡಳಿಯ ಅಯಾ ಪರಿಶೀಲನಾ ಶಾಖೆಗೆ ಸಲ್ಲಿಸತಕ್ಕದ್ದು.
7. ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಪರೀಕ್ಷೆ ಪ್ರಾರಂಭವಾಗುವ ಮೊದಲೇ ಬಿ.ಇ.ಓ. ಲಾಗಿನ್‌ನಲ್ಲಿ ನೀಡಲಾಗುವ ಆಯಾಯ ತಾಲ್ಲೂಕಿನಲ್ಲಿನ ಪರೀಕ್ಷಾ ಕೇಂದ್ರಗಳ ಎ.ಎಂ.ಎಲ್. ಮತ್ತು ಸಿ.ಎನ್.ಆರ್.ಗಳನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಂಡು ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ವಿತರಿಸತಕ್ಕದ್ದು.
. ಪರೀಕ್ಷೆ ನಡೆಯುವ ದಿನಗಳಂದು ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಪರೀಕ್ಷಾ ಕೇಂದ್ರಗಳ ಅಭ್ಯರ್ಥಿವಾರು ಹಾಜರಾತಿಯ ವಿವರವನ್ನು ಮಂಡಳಿ ಜಾಲತಾಣದ ಬಿ.ಇ.ಓ ಲಾಗಿನ್‌ನಲ್ಲಿ ಆಯಾ ಪರೀಕ್ಷಾ ದಿನವೇ ಮಧ್ಯಾಹ್ನ 12.00 ಗಂಟೆಯೊಳಗೆ ತಪ್ಪದೇ ನಮೂದಿಸತಕ್ಕದ್ದು.
9. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಪ್ರೌಢ ಶಾಲೆಗಳು 10ನೇ ತರಗತಿ ಎಸ್.ಎ.ಟಿ.ಎಸ್ ನಲ್ಲಿರುವ ದಾಖಲಾತಿಯಂತೆ ಅರ್ಹ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿರುವ ಬಗ್ಗೆ ದೃಢಪಡಿಸಿಕೊಳ್ಳುವುದು.
Click here to view the 🖇️ 🔗 👇👇👇👇👇👇👇👇👇👇👇👇👇👇👍👇👇👇👇👇👇👇
SSLC ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಮಾರ್ಗಸೂಚಿಗಳು 2026...
No comments:
Post a Comment