Hedding : SSLC Benefits and Exemptions for Differently Abled Children 2026...
ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿಭಿನ್ನ ಸಾಮರ್ಥ್ಯವುಳ್ಳ (Differently Abled) ಮಕ್ಕಳಿಗೆ ನೀಡುವ ಸೌಲಭ್ಯಗಳು ಮತ್ತು ವಿನಾಯಿತಿಗಳು👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇
ಭಾರತ ಸರ್ಕಾರದ Ministry of Social Justice and Empowerment Department of Disability Affairs ಸಂಸ್ಥೆಯ ಪತ್ರ ಸಂಖ್ಯೆ:F.No.16-110/2003-DDIII ದಿನಾಂಕ:26.02.2013 ಹಾಗೂ ಕರ್ನಾಟಕ ಸರ್ಕಾರ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸುತ್ತೋಲೆ ಸಂಖ್ಯೆ:ವಿಹಿನಾಸಿಇ/ಅಧಿನಿಯಮ/07/2012-13, ದಿನಾಂಕ:20.05.2013 ರನ್ವಯ ಕೆಳಕಂಡ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.
1. ಸರ್ಕಾರದ ಆದೇಶದ ಸಂಖ್ಯೆ:ಮಮಅ.65.ಪಿಹೆಚ್ ಪಿ.2000, ಬೆಂಗಳೂರು ದಿನಾಂಕ:10.03.2000 ರನ್ವಯ, ಅಧಿಕೃತ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಸ್ಪಾಸ್ಟಿಕ್/ ಕಿವುಡು/ ಮೂಗ ಮತ್ತು ಕಲಿಕಾ ನ್ಯೂನತೆ ಹಾಗೂ ಬುದ್ಧಿಮಾಂದ್ಯ ವಿದ್ಯಾರ್ಥಿಗಳು ಶಿಕ್ಷಣ ಮಾಧ್ಯಮದ ಭಾಷೆ ಒಂದನ್ನು ಮಾತ್ರ ತೆಗೆದುಕೊಳ್ಳಬಹುದು. ಉಳಿದ ಎರಡು ಭಾಷಾ ವಿಷಯಗಳಿಗೆ ವಿನಾಯಿತಿ ಇರುತ್ತದೆ. ಈ ಬಗ್ಗೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಂದ ಅನುಮತಿ ಪಡೆದುಕೊಳ್ಳುವುದು. ನೇರವಾಗಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಬಾರದು ಈ ವಿಷಯದಲ್ಲಿ ಅಂತಹ ವಿದ್ಯಾರ್ಥಿ ಹಾಗೂ ಪೋಷಕರಿಗೆ ಅನವಶ್ಯಕ ತೊಂದರೆ ನೀಡಬಾರದಾಗಿ ಮುಖ್ಯ ಶಿಕ್ಷಕರಿಗೆ ತಿಳಿಸಿದೆ.
2. ಸರ್ಕಾರದ ಸುತ್ತೋಲೆ ಸಂಖ್ಯೆ:ಇಡಿ.142.ಯೋಯೋಕ.2009, ದಿನಾಂಕ:16.07.2009 ರನ್ವಯ ಕಲಿಕಾ ನ್ಯೂನ್ಯತೆ ಹೊಂದಿರುವ ವಿದ್ಯಾರ್ಥಿಗಳು ನಿಮ್ಹಾನ್ಸ್/ ಅಖಿಲ ಭಾರತ ದೃಕ್-ಶ್ರವಣ ಸಂಸ್ಥೆ ಮೈಸೂರು/ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ಮನ:ಶಾಸ್ತ್ರಜ್ಞರು/ ಕನಿಷ್ಠ ಎಂ.ಫಿಲ್. ವಿದ್ಯಾರ್ಹತೆ ಹೊಂದಿರುವ ಕ್ಲಿನಿಕಲ್ ಮನ:ಶಾಸ್ತ್ರಜ್ಞರು ನೀಡಿರುವ ಪ್ರಮಾಣ ಪತ್ರಕ್ಕೆ ಜಿಲ್ಲಾ ಸರ್ಜನ್ ಶ್ರೇಣಿಗಿಂತಲೂ ಕಡಿಮೆ ಇಲ್ಲದ ಸರ್ಕಾರಿ ವೈದ್ಯರಿಂದ ದೃಢೀಕರಣ ಅಥವಾ ಮಲ್ಲೇಶ್ವರಂ ಡಿಸ್‌ಲೆಕ್ಸಿಯಾ ಅಸೋಷಿಯೇಷನ್(ರಿ), ಬೆಂಗಳೂರು ಅಥವಾ ಭಾರತ ದೇಶದ ಯಾವುದೇ ಭಾಗದಿಂದ ಅಧಿಕೃತ ಜಿಲ್ಲಾ ಸರ್ಜನ್ಗಿಂತಲೂ ಕಡಿಮೆ ಇಲ್ಲದ ವೈದ್ಯರಿಂದ ಪಡೆದ ಪ್ರಮಾಣ ಪತ್ರವನ್ನು ಮುಖ್ಯ ಶಿಕ್ಷಕರು ತಮ್ಮ ಹಂತದಲ್ಲಿಯೇ ಸಂರಕ್ಷಿಸಿಡುವುದು ಕಡ್ಡಾಯ. ಈ ಮಾರ್ಗಸೂಚಿಯ ನಿಗದಿತ ಅವಧಿಯ ನಂತರ ವಿನಾಯಿತಿ ಕೋರಿ ಬರುವ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ. ಈ ಬಗ್ಗೆ ವಿನಾಯಿತಿ ಪಡೆದುಕೊಳ್ಳಲು ಮುಖ್ಯಶಿಕ್ಷಕರು ಪೂರ್ವಭಾವಿ ಕ್ರಮವಹಿಸಿ ಜಿಲ್ಲಾ ಉಪನಿರ್ದೇಶಕರು (ಆಡಳಿತ)ರವರ ಅನುಮತಿ ಪಡೆದು ಅಂತಹ ವಿದ್ಯಾರ್ಥಿಗಳಿಗೆ ಸದರಿ ಸೌಲಭ್ಯ ಒದಗಿಸುವುದು ಮುಖ್ಯಶಿಕ್ಷಕರ ಆದ್ಯ ಕರ್ತವ್ಯವಾಗಿರುತ್ತದೆ. ಸದರಿ ಮಾಹಿತಿಯನ್ನು ಮಂಡಲಿ ಜಾಲತಾಣದಲ್ಲಿ ಭರ್ತಿ ಮಾಡುವಾಗ ಈ ವಿಷಯವನ್ನು ಕ್ರಮಬದ್ದವಾಗಿ ದಾಖಲಿಸುವುದು ಕಡ್ಡಾಯವಾಗಿರುತ್ತದೆ.
3. ಸರ್ಕಾರದ ಸುತ್ತೋಲೆ ಸಂಖ್ಯೆ:ಇಡಿ.142.ಯೋಯೋಕಾ.2008, ದಿ:21.02.2009ರ ಅನ್ವಯ, ರಾಜ್ಯದಲ್ಲಿ ಮಾನ್ಯತೆ ಪಡೆದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಈ ಕೆಳಕಂಡ ಸೌಲಭ್ಯವನ್ನು ಒದಗಿಸಲಾಗಿದೆ.
ಈ ಮಕ್ಕಳಿಗೆ ಪರೀಕ್ಷಾ ಸಂದರ್ಭದಲ್ಲಿ ಸರಳ ಕ್ಯಾಲುಕ್ಯೂಲೇಟರ್ ಉಪಯೋಗಿಸಲು ಅನುಮತಿಸಲಾಗಿದೆ.
ಈ ಮಕ್ಕಳಿಗೆ ಪ್ರಶ್ನೆಗಳನ್ನು ಓದಲು ಪೋಷಕರ ವೆಚ್ಚದಲ್ಲಿ ಸಹಾಯಕರನ್ನು ಪಡೆಯಲು ಅನುಮತಿಸಿದೆ.
4. RPWD ಕಾಯ್ದೆ 2016ರನ್ವಯ 21 ನ್ಯೂನ್ಯತೆಗಳನ್ನು ಗುರುತಿಸಿದ್ದು, ಭಾಷಾ ವಿನಾಯಿತಿಗೆ ಆದೇಶ ನೀಡುವಾಗ ಪ್ರಸ್ತಾವನೆಗಳನ್ನು ಜಿಲ್ಲಾ ಉಪನಿರ್ದೇಶಕರು ಕೂಲಂಕುಷವಾಗಿ ಪರಿಶೀಲಿಸುವುದು. ಚಾಲ್ತಿಯಲ್ಲಿರುವ ಸರ್ಕಾರಿ ಆದೇಶಗಳಂತೆ ಸದರಿ ನ್ಯೂನ್ಯತೆಗಳಿಗೆ ನೀಡಲಾಗುವ ಸೌಲಭ್ಯಗಳನ್ನು ಪರಿಶೀಲಿಸಿ ಅದರಂತೆ ಯಾವ ಸೌಲಭ್ಯವನ್ನು ನೀಡಬೇಕು ಎಂಬಬಗ್ಗೆ ವಿವರವಾಗಿ ನಮೂದಿಸಲು ಕ್ರಮವಹಿಸುವುದು.
ಸರ್ಕಾರದ ಆದೇಶ ಸಂಖ್ಯೆ:ಇಪಿ 62 ಎಸ್ಎಲ್ಬಿ 2021 ದಿನಾಂಕ:15.03.2021ರಂತೆ ಮೇಲ್ಕಂಡ ಕ್ರಮ ಸಂಖ್ಯೆ:1, 2 ಮತ್ತು 3ರ ಸರ್ಕಾರದ ಆದೇಶದ ಅಂಶಗಳನ್ನು ಯಥಾವತ್ತಾಗಿ ಮುಂದುವರೆಸುತ್ತಾ, ಹಾಗೂ ಸರ್ಕಾರದ ಆದೇಶ ಸಂಖ್ಯೆ: ಇಪಿ 05 ಎಸ್ಎಲ್ಬಿ 2023 ದಿನಾಂಕ:02.03.2023ರನ್ವಯ ಕೆಳಕಂಡಂತೆ ಇನ್ನೂ ಹೆಚ್ಚಿನ ಸೌಲಭ್ಯ/ವಿನಾಯಿತಿಗಳನ್ನು ನೀಡಿದೆ..ವಿಶೇಷ ಸೌಲಭ್ಯಗಳು /ವಿನಾಯಿತಿಗಳ ವಿವರಗಳು
➖➖➖➖➖➖➖➖➖➖➖➖➖➖➖➖
ವಿಶೇಷ ಸೌಲಭ್ಯಗಳು /ವಿನಾಯಿತಿಗಳ ವಿವರಗಳು👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇
1. ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡುವ ಪ್ರಾಧಿಕಾರ
ಈ ಕೆಳಕಂಡ ಸಂಸ್ಥೆಗಳು ನೀಡುವ ವೈದ್ಯಕೀಯ ಪ್ರಮಾಣ ಪತ್ರಗಳನ್ನು ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲು ಪರಿಗಣಿಸಲಾಗುವುದು.
1. ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಆಸ್ಪತ್ರೆಗಳ ಮುಖ್ಯ ವೈದ್ಯಾಧಿಕಾರಿ/ಸಿವಿಲ್ ಸರ್ಜನ್/ ವೈದ್ಯಕೀಯ ಅಧೀಕ್ಷಕರು ಇವರಿಂದ ದೃಢೀಕರಿಸಲ್ಪಟ್ಟ ವೈದ್ಯಕೀಯ ಪ್ರಮಾಣ ಪತ್ರ.
2. ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಾದ ರಾಷ್ಟ್ರೀಯ ಅಖಿಲ ಭಾರತ ಅಂಧರ ಸಂಘ, ಸ್ಪಾಸ್ಟಿಕ್ ಸೊಸೈಟಿ ಆಫ್ ಇಂಡಿಯಾ ಇತ್ಯಾದಿ.
3. Rehabilitation council of India/ ಕೇಂದ್ರ ಸರ್ಕಾರ/ ಆಯಾ ರಾಜ್ಯ /ಸರ್ಕಾರದಲ್ಲಿ ನೋಂದಾಯಿಸಲ್ಪಟ್ಟ ಸರ್ಕಾರೇತರ ಸಂಸ್ಥೆಗಳು/ವೃತ್ತಿ ನಿರತರು ನೀಡುವ ಪ್ರಮಾಣ ಪತ್ರ.
ಈ ಮಾರ್ಗಸೂಚಿಯಲ್ಲಿರುವ ಅನುಬಂಧ 1 ರಲ್ಲಿ ವೈದ್ಯಕೀಯ ಪ್ರಮಾಣ ಪತ್ರದ ನಮೂನೆಯನ್ನು ನೀಡಲಾಗಿದೆ. ( ಸರ್ಕಾರದ ಮಾರ್ಗಸೂಚಿಯನ್ನು ನೋಡಿ)
2. ಬರಹಗಾರರ ಸೌಲಭ್ಯ ಮತ್ತು ಹೆಚ್ಚುವರಿ ಸಮಯ.
ವಿಶೇಷ ಚೇತನರ ಹಕ್ಕುಗಳ ಅಧಿನಿಯಮ 2016 ರನ್ವಯ ವಿವಿಧ ಪ್ರಕಾರದ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಬರಹಗಾರರ ಸೌಲಭ್ಯ ಅಥವಾ ಹೆಚ್ಚುವರಿ ಸಮಯ ಅಥವಾ ಎರಡನ್ನೂ ಪಡೆಯುವ ಅವಕಾಶವಿದೆ.
1) ಮೂರು ಗಂಟೆಯ ಪ್ರಶ್ನೆಪತ್ರಿಕೆಗೆ ಹೆಚ್ಚುವರಿ ಸಮಯ 60 ನಿಮಿಷ.
2) ಎರಡೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ ಹೆಚ್ಚುವರಿ ಸಮಯ 50 ನಿಮಿಷ.
3) ಎರಡು ಗಂಟೆಯ ಪ್ರಶ್ನೆಪತ್ರಿಕೆಗೆ ಹೆಚ್ಚುವರಿ ಸಮಯ 40 ನಿಮಿಷ.
4) ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ ಹೆಚ್ಚುವರಿ ಸಮಯ 30 ನಿಮಿಷ.
➖➖➖➖➖➖➖➖➖➖➖➖➖➖➖➖
3. ಬರಹಗಾರರ ನೇಮಕಕ್ಕೆ ಸಂಬಂಧಿಸಿದ ಸೂಚನೆಗಳು👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇
1. ವಿಕಲಚೇತನ ಮಕ್ಕಳು ತಮಗೆ ಬೇಕಾದ ಸ್ವಂತ ಓದುಗಾರರ/ ಬರಹಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು / ಅಥವಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರ ಮೂಲಕ ಮಾಡಿಕೊಳ್ಳಬಹುದು.
2. ಒಂದು ವೇಳೆ ವಿಕಲಚೇತನ ವಿದ್ಯಾರ್ಥಿಗಳಿಗೆ ಬರಹಗಾರರ ಆಯ್ಕೆಯನ್ನು ಪರೀಕ್ಷಾ ಕೇಂದ್ರದ ಅಧೀಕ್ಷಕರು ಮಾಡಿಕೊಟ್ಟಲ್ಲಿ ಬರಹಗಾರರ ವಿದ್ಯಾರ್ಹತೆಯು ಪರೀಕ್ಷಾರ್ಥಿಯ ವಿದ್ಯಾರ್ಹತೆಗಿಂತ ಒಂದು ಹಂತ ಕಡಿಮೆಯಿರತಕ್ಕದ್ದು.
3. 5 ಸರ್ಕಾರದ ಆದೇಶ ಸಂಖ್ಯೆ:ಇಪಿ ಎಸ್ಎಲ್ಬಿ 2023 ದಿನಾಂಕ:02.03.2023ರನ್ವಯ ಅಂಧ ವಿದ್ಯಾರ್ಥಿಗಳಿಗೆ ಎಸ್‌ಎಸ್ಎಲ್‌ಸಿ ವಿದ್ಯಾರ್ಹತೆಯುಳ್ಳ ಸಹಾಯಕ ಬರಹಗಾರರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
4. ಒಂದು ವೇಳೆ ಪರೀಕ್ಷಾರ್ಥಿಯು ಬರಹಗಾರರನ್ನು ತಾನೇ ನೇಮಿಸಿಕೊಂಡಿದ್ದಲ್ಲಿ, ನೇಮಕಗೊಂಡ ಬರಹಗಾರರ ವಿದ್ಯಾರ್ಹತೆಯು ಪರೀಕ್ಷಾರ್ಥಿಯ ವಿದ್ಯಾರ್ಹತೆಗಿಂತ ಒಂದು ಹಂತ ಕಡಿಮೆಯಿರತಕ್ಕದ್ದು ಹಾಗೂ ಸ್ವಂತವಾಗಿ ಬರಹಗಾರರ/ ಓದುಗಾರರ ನೇಮಕವನ್ನು ಮಾಡಿಕೊಂಡ ವಿಕಲಚೇತನ ವಿದ್ಯಾರ್ಥಿಗಳು ಅದರ ಸಂಪೂರ್ಣ ಮಾಹಿತಿಯನ್ನು ಅನುಬಂಧ-2 ರಲ್ಲಿರುವಂತೆ ಪರೀಕ್ಷೆಗೆ ಮೊದಲೇ ಸಲ್ಲಿಸುವುದು.
5. ತುರ್ತು ಸಂದರ್ಭಗಳಲ್ಲಿ ಮಾತ್ರ ಬರಹಗಾರರನ್ನು/ ಓದುಗಾರರನ್ನು ಬದಲಾಯಿಸುವ ಅವಕಾಶ ವಿದ್ಯಾರ್ಥಿಗಳಿಗಿರುತ್ತದೆ. ಪರೀಕ್ಷಾರ್ಥಿಗಳು ಬರಹಗಾರರನ್ನು/ ಓದುಗಾರರನ್ನು ವಿಷಯಗಳಿಗೆ ತಕ್ಕಂತೆ ಬದಲಾವಣೆ ಮಾಡಲು ಅವಕಾಶವಿರುತ್ತದೆ (ವಿಶೇಷವಾಗಿ ಭಾಷೆಗಳಿಗೆ) ಒಟ್ಟಾರೆ ಒಂದು ವಿಷಯಕ್ಕೆ ಒಬ್ಬನೇ ಬರಹಗಾರರ/ಓದುಗಾರರನ್ನು ನೇಮಿಸಿಕೊಳ್ಳಲು ಅವಕಾಶವಿದೆ.
6. ಪರೀಕ್ಷಾ ಕೇಂದ್ರದ ಅಧೀಕ್ಷಕರು, ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರಹಗಾರರ ಜೊತೆ ಸುಗಮವಾಗಿ ಬರೆಯಲು ಸೂಕ್ತವಾದ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಿ, ಪ್ರತ್ಯೇಕ ಮೇಲ್ವಿಚಾರಕರನ್ನು ನೇಮಕ ಮಾಡುವುದು.
4. ಇತರೆ ಸಾಮಾನ್ಯ ಸೂಚನೆಗಳು/ಸೌಲಭ್ಯಗಳು
1. ಪರೀಕ್ಷಾ ಕೇಂದ್ರಗಳಲ್ಲಿ ವಿಶೇಷ ಚೇತನ ಮಕ್ಕಳಿಗೆ ಸೂಕ್ತ ಆಸನ ವ್ಯವಸ್ಥೆಯನ್ನು ನೆಲಮಹಡಿಯಲ್ಲಿಯೇ ವ್ಯವಸ್ಥೆಗೊಳಿಸುವುದು.
2. ದೃಷ್ಟಿ ಮಾಂದ್ಯ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರಾಗಿ Visually Impaired ವಿದ್ಯಾರ್ಥಿಗಳಿರುವ ಕೊಠಡಿಗೆ ನಿಯೋಜಿಸುವುದು ಹಾಗೂ ಬೇರೆ ವಿಷಯ ಶಿಕ್ಷಕರನ್ನು ಪರೀಕ್ಷಾ ದಿನದಂದು ನೇಮಿಸಲು ಕ್ರಮ ವಹಿಸುವುದು.
3. ಉತ್ತರ ಪತ್ರಿಕೆಯ ಮುಖಪುಟದಲ್ಲಿ ಹಸಿರು ಸ್ಟಿಕ್ಕರ್ ಅಂಟಿಸುವುದು.
4. ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿಗೆ ಪೋರ್ಟಬಲ್ ವಿಡಿಯೋ ವರ್ಧಕ Video Magnifier & Magnifier Glass ក ជ ಅವಕಾಶ ಕಲ್ಪಿಸಬಹುದು.
5. ವಿಭಿನ್ನ ಸಾಮರ್ಥ್ಯ ಹೊಂದಿದ ವಿದ್ಯಾರ್ಥಿಯು ಬರಹಗಾರರ ಸೌಲಭ್ಯ ಪಡೆಯದೇ ಕೇವಲ ಓದುಗಾರರ ಸೌಲಭ್ಯವನ್ನು ಇಚ್ಚಿಸಿದಲ್ಲಿ ಪಡೆಯಬಹುದಾಗಿದೆ. ಆದರೆ ಅಂತಹ ಓದುಗಾರರು ಕೇವಲ ಪ್ರಶ್ನೆ ಪತ್ರಿಕೆಯನ್ನು ಓದಲು ಸೀಮಿತವಾಗಿರತಕ್ಕದ್ದು.
6. ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿಯಿಂದ ವಿನಾಯಿತಿ ನೀಡಬಹುದು. ವಿದ್ಯಾರ್ಥಿಯು ಹಾಜರಾತಿಯಲ್ಲಿ ವಿನಾಯಿತಿ ಪಡೆಯಲು ಸಕ್ಷಮ ಪ್ರಾಧಿಕಾರದಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರವನ್ನು ಮುಖ್ಯೋಪಾಧ್ಯಾಯರು ಪರಿಶೀಲಿಸಿ ಶಾಲೆಯಲ್ಲಿ ಸಂರಕ್ಷಿಸಿಡುವುದು.
➖➖➖➖➖➖➖➖➖➖➖➖➖➖➖➖
ವಿಶೇಷ ಸೂಚನೆಗಳು👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇
ವಿಕಲಚೇತನರ ಹಕ್ಕುಗಳ ಕಾಯ್ದೆ 2016ರಲ್ಲಿ ನಿರ್ದಿಷ್ಟಪಡಿಸಿದ ಅಂಗವೈಕಲ್ಯಗಳ ಬಗ್ಗೆ ಅನುಬಂಧ-3ರಲ್ಲಿ ವಿವರಿಸಲಾಗಿದೆ.
ವಿಕಲ ಚೇತನ ಮಕ್ಕಳಿಗೆ ಬರಹಗಾರರ/ ಓದುಗಾರರ/ ಪ್ರಯೋಗ ಶಾಲಾ ಸಹಾಯಕರ ಸೌಲಭ್ಯ ಪಡೆಯಲು ಮುಖ್ಯ ಶಿಕ್ಷಕರು ವಿದ್ಯಾರ್ಥಿಯ ಪರೀಕ್ಷಾ ಪ್ರವೇಶ ಪತ್ರ ಮತ್ತು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಮನವಿ ಸಲ್ಲಿಸಿ ಅನುಮತಿ ಪಡೆಯತಕ್ಕದ್ದು.
ಬರಹಗಾರರ/ ಓದುಗಾರರ/ ಪ್ರಯೋಗ ಶಾಲಾ ಸಹಾಯಕರ ಸೌಲಭ್ಯ ಹೊರತುಪಡಿಸಿ ಉಳಿದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಮುಖ್ಯ ಶಿಕ್ಷಕರು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಉಪನಿರ್ದೆಶಕರು (ಆಡಳಿತ)ರವರಿಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುವುದು.
ವಿಭಿನ್ನ ಸಾಮರ್ಥ್ಯವುಳ್ಳ (Differently Abled) ಮಕ್ಕಳ ಉತ್ತರ ಪತ್ರಿಕೆಗಳ ಮೇಲೆ ಹಸಿರು ಸ್ಟಿಕ್ಕರ್ ಅಂಟಿಸುವುದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಜವಾಬ್ದಾರಿಯಾಗಿರುತ್ತದೆ.
➖➖➖➖➖➖➖➖➖➖➖➖➖➖➖➖
👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇
SSLC ವಿಭಿನ್ನ ಸಾಮರ್ಥ್ಯವುಳ್ಳ (Differently Abled) ಮಕ್ಕಳಿಗೆ ನೀಡುವ ಸೌಲಭ್ಯಗಳು ಮತ್ತು ವಿನಾಯಿತಿಗಳು 2026...
No comments:
Post a Comment