Hedding : Regarding disciplinary action against those who are absent from the social and educational survey conducted by the Karnataka State Backward Classes Commission...
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗೈರು ಹಾಜರಾಗಿರುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಕುರಿತು...
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ದಿನಾಂಕ: 22.09.2025 ರಿಂದ ಪ್ರಾರಂಭಗೊಂಡಿದ್ದು, ನಿಮ್ಮನ್ನು ಸದರಿ ಸಮೀಕ್ಷೆ ಕಾರ್ಯಕ್ಕೆ ಗಣತಿದಾರರನ್ನಾಗಿ ನೇಮಕಾತಿ ಮಾಡಲಾಗಿರುತ್ತದೆ. ಈ ಕೆಳಕಂಡ ಪಟ್ಟಿಯಲ್ಲಿರುವ ನೀವುಗಳು ನಿಮಗೆ ವಹಿಸಲಾದ ವಾರ್ಡ್‌ಗಳಿಗೆ ತೆರಳಿ ಸಮೀಕ್ಷೆ ಕಾರ್ಯವನ್ನು ಆರಂಭಿಸಿ ಈ ಸಂಬಂಧ ಸೃಜಿಸಲಾಗಿರುವ ತಂತ್ರಾಂಶದಲ್ಲಿ ಸಮೀಕ್ಷೆಯ ದತ್ತಾಂಶಗಳನ್ನು ಇಂಧೀಕರಿಸುವುದು ನಿಮ್ಮ ಕರ್ತವ್ಯವಾಗಿರುತ್ತದೆ. ನಿಮಗೆ ವಲಯ ಅಧಿಕಾರಿಗಳು ಹಲವಾರು ಬಾರಿ ದೂರವಾಣಿ ಕರೆ ಮಾಡಿದರೂ ಸಹಾ ಕರೆಗೆ ಸ್ಪಂದಿಸದಿರುವುದು ಹಾಗೂ ಸಮೀಕ್ಷೆ ಕಾರ್ಯಕ್ಕೆ ವಾರ್ಡ್‌ಗಳಿಗೆ ತೆರಳದಿರುವುದು ಉಲ್ಲೇಖಿತ ಸಭೆಯಲ್ಲಿ ಮಂಡಿಸಲಾದ ವರದಿಯಿಂದ ತಿಳಿದುಬಂದಿರುತ್ತದೆ. ನಿಮ್ಮ ಈ ಕರ್ತವ್ಯ ನಿರ್ಲಕ್ಷತೆ ಹಾಗೂ ಬೇಜವಬ್ದಾರಿಯಿಂದ ಜಿಲ್ಲೆಯ ಸಮೀಕ್ಷೆಯ ಪ್ರಗತಿಗೆ ತೀವ್ರ ಹಿನ್ನೆಡೆಯಾಗಿರುತ್ತದೆ. ಅಲ್ಲದೇ ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮೈಸೂರುರವರು ಉಲ್ಲೇಖದಂತೆ ನಡೆಸಿದ ಸಭೆಯಲ್ಲಿ ಈ ಸಂಬಂಧ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿ ನಿಮ್ಮ ಮೇಲೆ ಕೂಡಲೇ ಕ್ರಮಕೈಗೊಂಡು ತಕ್ಷಣ ವರದಿ ನೀಡಲು ಸೂಚಿಸಿರುತ್ತಾರೆ.
ಆದ್ದರಿಂದ ಮೇಲ್ಕಂಡ ಸಮೀಕ್ಷಾ ಕಾರ್ಯವು ಸರ್ಕಾರದ ಒಂದು ಮಹತ್ವಕಾಂಕ್ಷೆಯ ಹಾಗೂ ನಿಗಧಿತ ಕಾಲಮಿತಿಯೊಳಗೆ ಪೊರೈಸಬೇಕಾದ ಜವಾಬ್ದಾರಿಯಾಗಿದ್ದು, ಈ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ನೀವು ಸಂಪೂರ್ಣ ನಿರ್ಲಕ್ಷತೆ ಹಾಗೂ ಬೇಜವಬ್ದಾರಿತನದಿಂದ ವರ್ತಿಸಿ ಮೇಲಾಧಿಕಾರಿಗಳು ಹಾಗೂ ಸರ್ಕಾರದ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿರುತ್ತೀರಿ. ಈ ಕೂಡಲೇ ನಿಮಗೆ ವಹಿಸಲಾದ ವಾರ್ಡ್‌ಗಳಿಗೆ ತೆರಳಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ನಿಮಗೆ ಈ ಮೂಲಕ ಅಂತಿಮ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ನಾಳೆ ಸಮೀಕ್ಷೆಗೆ ಹಾಜರಾಗದಿದ್ದಲ್ಲಿ ನಿಮ್ಮ ಮೇಲೆ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳಂತೆ ಶಿಸ್ತುಕ್ರಮ ಜರುಗಿಸಲಾಗುವುದು....
CLICK HERE TO DOWNLOAD THE PDF FILE 🗄️🗃️🗃️🗃️...
No comments:
Post a Comment