Hedding : Regarding the cadre and recruitment rules of KSRP and IRB units...
ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ಘಟಕಗಳ ವೃಂದ ಮತ್ತು ನೇಮಕಾತಿ ನಿಯಮಗಳ ಕುರಿತು...
ಸರ್ಕಾರದ ಉಲ್ಲೇಖ-1ರ ಪತ್ರದೊಂದಿಗೆ ದಿನಾಂಕ:10.09.2025ರಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಮತ್ತು ಭಾರತ ಮೀಸಲು ಪೊಲೀಸ್ ಪಡೆ (ಐಆರ್‌ಬಿ) ಘಟಕಗಳಿಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ಸಂಬಂಧ ನಡೆದ ಸಭೆಯ ನಡವಳಿಯನ್ನು ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಕೆಎಸ್‌ಆರ್‌ಪಿ ರವರು ದಿನಾಂಕ:10.09.2025ರ ಸಭೆಯ ನಡವಳಿಯಂತೆ ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ಘಟಕಗಳ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಿ ಉಲ್ಲೇಖ-2ರ ಪತ್ರದೊಂದಿಗೆ ಕರಡು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಒದಗಿಸಿರುತ್ತಾರೆ.
ಆದ್ದರಿಂದ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕೆಎಸ್‌ಆರ್‌ಪಿ ರವರ ಉಲ್ಲೇಖ-2ರ ಪತ್ರ ಹಾಗೂ ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ಘಟಕಗಳ ಪ್ರತ್ಯೇಕ ಪರಿಷ್ಕೃತ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ ಹಾಗೂ ಕೆಎಸ್‌ಆರ್‌ಪಿ ಮತ್ತು ಐಆಬಿ ಘಟಕಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ರೂಪಿಸಲಾಗಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಿ ಅನುಮೋದನೆಯನ್ನು ಪಡೆಯುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತೊಮ್ಮೆ ಕೋರಲಾಗಿದೆ...
No comments:
Post a Comment