KSPSTA

RECENT INFORMATIONS

Search This Blog

Friday, May 9, 2025

Regarding clarification on the Scheduled Caste Comprehensive Survey 2025

  Dailyguru       Friday, May 9, 2025
Regarding clarification on the Scheduled Caste Comprehensive Survey 2025.

ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಕುರಿತು 2025 ಸ್ಪಷ್ಟೀಕರಣ ನೀಡುವ ಕುರಿತು.

ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಗಳ ವಿವಿಧ ಉಪ ಗುಂಪುಗಳಲ್ಲಿ ಪ್ರಾತಿನಿಧ್ಯತೆ ಕುರಿತು Emperical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ (ಉಪ ವರ್ಗೀಕರಣ) ಬಗ್ಗೆ ವರದಿ ಸಲ್ಲಿಸಲು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಡಾ. ಹೆಚ್. ಎನ್. ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಉಲ್ಲೇಖಿತ ಸರ್ಕಾರದ ಆದೇಶದಂತೆ ಏಕ ಸದಸ್ಯ ಆಯೋಗವನ್ನು ರಚಿಸಲಾಗಿರುತ್ತದೆ.

DAJAN

ಸದರಿ ಆಯೋಗ ಈಗಾಗಲೇ ನೀಡಿರುವ ಮಧ್ಯಂತರ ವರದಿಯಂತೆ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ನಡೆಸಲು ಕೈಗತ್ತಿಗೊಳ್ಳಲಾಗಿದೆ. ಸಮೀಕ್ಷೆಯನ್ನು ಮೂರು ಹಂತದಲ್ಲಿ ನಡೆಸಲು ಈಗಾಗಲೇ ಹಲವಾರು ಸೂಚನೆಗಳನ್ನು ಜಿಲ್ಲಾಧಿಕಾರಿಗಳಿಗೆ ಹಾಗೂ ಬಿ.ಬಿ.ಎಂ.ಪಿ ಮುಖ್ಯ ಆಯುಕ್ತರಿಗೆ ಕೈಪಿಡಿ ಮೂಲಕ ಸೂಚಿಸಲಾಗಿರುತ್ತದೆ. ಆದಾಗ್ಯೂ ಹಲವಾರು ಜಿಲ್ಲಾಧಿಕಾರಿಗಳು ಈ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಅಗತ್ಯದ ಬಗ್ಗೆ, ಸೃಷಿಕರಣ ಕೋರಿರುತ್ತಾರೆ.

ಈ ಸಮೀಕ್ಷೆಯು ಸರ್ಕಾರದ ಆದೇಶದನ್ವಯ ಸದರಿ ಏಕ ಸದಸ್ಯ ಆಯೋಗಕ್ಕೆ ದಿನಾಂಕ:03-12-2024 ರಲ್ಲಿ Terms of references ಗಳನ್ನು ಈ ಕೆಳಕಂಡಂತೆ ನಿಗಧಿಪಡಿಸಿ ಆದೇಶಿಸಲಾಗಿರುತ್ತದೆ.


ಹೆಚ್ಚಿನ ಮಾಹಿತಿಗಾಗಿ.
logoblog

Thanks for reading Regarding clarification on the Scheduled Caste Comprehensive Survey 2025

Previous
« Prev Post

No comments:

Post a Comment