KSPSTA

RECENT INFORMATIONS

Search This Blog

Sunday, April 20, 2025

Regarding the presentation of the State Government Best Service Award for the year 2023

  Dailyguru       Sunday, April 20, 2025
Regarding the presentation of the State Government's Best Service Award for the year 2023.

2023ನೇ ಸಾಲಿನ ರಾಜ್ಯ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ.

ಓದಲಾಗಿದೆ:

1. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 105 ಇಆಸು 2011, ໖:20-11-2012.

2. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ(ಆಸು) 11 ಇಆಸು 2022, 2:19-03-2022 2 19-04-2022.

3. ಸುತ್ತೋಲೆ ಸಂಖ್ಯೆ: ಸಿಆಸುಇ(ಆಸು) 49 ಇಆಸು 2023, ໖:18-03-2023.

4. ದಿನಾಂಕ:16-04-2025 ರಂದು ಜರುಗಿದ ಆಯ್ಕೆ ಸಮಿತಿ ಸಭೆಯ ನಡವಳಿ.

ಪ್ರಸ್ತಾವನೆ:

ಮೇಲಿನ ಕ್ರಮ ಸಂಖ್ಯೆ (1)ರ ದಿನಾಂಕ:20-11-2012 ರಲ್ಲಿ ಓದಲಾದ ಆದೇಶದನ್ವಯ ಅತ್ಯುನ್ನತ ಸೇವೆಗೈದ/ ಸಾಧನೆಗೈದ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ.

ಮೇಲಿನ ಕ್ರಮ ಸಂಖ್ಯೆ (2) ರಲ್ಲಿರುವ ಆದೇಶ ದಿನಾಂಕ: 19-03-2022 ರಲ್ಲಿ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಹಲವು ಮಾರ್ಪಾಡುಗಳೊಂದಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ರಚಿಸಲಾಗಿದ್ದು, ಜಿಲ್ಲಾ / ರಾಜ್ಯ ಮಟ್ಟದ ಪ್ರಶಸ್ತಿಗೆ ಸ್ವತ: ನಾಮ ನಿರ್ದೇಶನ ಸಲ್ಲಿಸುವುದರ ಜೊತೆಗೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ ತಲಾ ಇಬ್ಬರನ್ನು ನಾಮ ನಿರ್ದೇಶನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳ ಸಂಖ್ಯೆಯನ್ನು 30ಕ್ಕೆ ಏರಿಸಲಾಗಿದೆ. ದಿನಾಂಕ:19-04-2022ರ ಆದೇಶದಲ್ಲಿ ಜಿಲ್ಲಾ ಪ್ರಶಸ್ತಿ ಮೊತ್ತವನ್ನು ರೂ.10,000/- ದಿಂದ 25,000/- ಕ್ಕೆ ಮತ್ತು ರಾಜ್ಯ ಪ್ರಶಸ್ತಿ ಮೊತ್ತವನ್ನು ರೂ.25,000/- ದಿಂದ ರೂ.50,000/- ಕ್ಕೆ ಏರಿಸಲಾಗಿದೆ.

ಮೇಲಿನ ಕ್ರಮ ಸಂಖ್ಯೆ: (3)ರಲ್ಲಿರುವ ಸುತ್ತೋಲೆ ದಿನಾಂಕ: 18-03-2023 ರಲ್ಲಿ ರಾಜ್ಯ ಸರ್ಕಾರದ ಅಧಿಕಾರಿ ನೌಕರರಿಗೆ ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನ್ ಲೈನ್ ಮುಖಾಂತರ ಸ್ವತ: ನಾಮನಿರ್ದೇಶನ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಮೇಲಿನ ಕ್ರಮ ಸಂಖ್ಯೆ (4) ರಲ್ಲಿರುವ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆಯ್ಕೆ ಸಮಿತಿ ಸಭೆಯು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಸಲ್ಲಿಸಿರುವ ಎಲ್ಲಾ ಅರ್ಹ ನಾಮನಿರ್ದೇಶನಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಂತಿಮವಾಗಿ 30 ಅರ್ಹ ಅಧಿಕಾರಿ/ನೌಕರರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರವು ಈ ಕೆಳಗಿನಂತ ಆದೇಶಿಸಿದೆ.

logoblog

Thanks for reading Regarding the presentation of the State Government Best Service Award for the year 2023

Previous
« Prev Post

No comments:

Post a Comment