KLC Recruitment Final Result 2024
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿನ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳಿಗೆ ದಿನಾಂಕ: 22.03.2025 ರಿಂದ 25.03.2025ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸದರಿ ಪರೀಕ್ಷೆಗಳ ಅಂತಿಮ ಕೀ ಉತ್ತರಗಳನ್ನು ಮತ್ತು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ದಿನಾಂಕ: 09.04.2025 ರಂದು ಪ್ರಕಟಿಸಿ, ದಿನಾಂಕ: 12.04.2025ರ ಸಂಜೆ 5.00 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಪ್ರಕಟಿತ ತಾತ್ಕಾಲಿಕ ಅಂಕಪಟ್ಟಿಗೆ ಅಭ್ಯರ್ಥಿಗಳಿಂದ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಿ, ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂತಿಮ ಅಂಕಪಟ್ಟಿಯನ್ನು ಮತ್ತು ಫಲಿತಾಂಶವನ್ನು ಅಭ್ಯರ್ಥಿಗಳ ಮಾಹಿತಿಗಾಗಿ ದಿನಾಂಕ: 19.04.2025 ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರಕಟಿತ ಅಂಕಪಟ್ಟಿಯು ದಿನಾಂಕ 15.04.2025 ರಂದು ನಡೆಸಲಾದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಒಳಗೊಂಡಿದೆ. ಮುಂದುವರೆದು, ಸರ್ಕಾರದ ಆದೇಶದಂತೆ ಪತ್ರಿಕೆ-1 & 2 ರಲ್ಲಿ ಕನಿಷ್ಠ 35% ಅಥವಾ ಹೆಚ್ಚು ಅಂಕಗಳನ್ನು ಗಳಿಸಿ ಅರ್ಹರಾದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯಕ್ಕೆ ಹಸ್ತಾಂತರಿಸಲಾಗುವುದು. ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಿಂದ ನಿಯಮಾನುಸಾರ ಆಯ್ಕೆಪಟ್ಟಿ ಪ್ರಕಟಿಸಲು ಕ್ರಮವಹಿಸುವರು.
No comments:
Post a Comment