Physical standard, physical endurance and physical efficiency test for candiadtes for the post of Forest Guards (Beat foresters)- Ballari Circle and Other Circles
ಬಳ್ಳಾರಿ ವೃತ್ತ ಹಾಗೂ ಇತರೆ ವೃತ್ತಗಳ ಗಸ್ತು ಅರಣ್ಯ ಪಾಲಕ ಹುದ್ದೆಗೆ ಅಂತಿಮ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ದೈಹಿಕ ತಾಳ್ವಿಕೆ, ದೈಹಿಕ ಕ್ಷಮತೆ ಮತ್ತು ದೈಹಿಕ ಪರೀಕ್ಷೆ ನಡೆಸುವ ಕುರಿತು.
ಸರ್ಕಾರದ ಅಧಿಸೂಚನೆ ಸಂಖ್ಯೆ FEE/203 FEG 2015 ದಿನಾಂಕ 06.08.2019ರ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2019ರ ಅನ್ವಯ ಕರ್ನಾಟಕದ ಎಲ್ಲ ಅರಣ್ಯ ವೃತ್ತಗಳಿಗೆ ಸಂಬಂಧಿಸಿದಂತೆ ಅಧಿಸೂಚಿಸಲಾದ ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ 'ಅರಣ್ಯ ರಕ್ಷಕ" ಗ್ರೂಪ್ 'ಸಿ' ಹುದ್ದೆಗಳಿಗೆ ನೇರ ನೇಮಕಾತಿ ನಿಯಮ ಹಾಗೂ ಅಧಿಸೂಚನೆಯಲ್ಲಿನ ಷರತ್ತುಗಳನ್ವಯ ದೈಹಿಕ ತಾಳ್ವಿಕೆ ಪರೀಕ್ಷೆ (Physical Endurance Test) ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ (Physical Efficiency Test) ಹಾಗೂ ದೇಹ ದಾರ್ಡ್ಯತೆ ಪರೀಕ್ಷೆ (Physical Standard Test) ಗಳಿಗೆ ಮೆರಿಟ್ ಹಾಗೂ ನೇರ ಮತ್ತು ಸಮತಳ ಬಿಂದುಗಳ ಅನುಸಾರ ಅರ್ಹತೆ ಪಡೆದ ಅಭ್ಯರ್ಥಿಗಳ 1:20 (ಹುದ್ದೆ ಅಭ್ಯರ್ಥಿ) ಅಂತಿಮ ಅರ್ಹತಾ ಪಟ್ಟಿಯನ್ನು ಅನುಬಂಧ-1 ರಲ್ಲಿ ಇಲಾಖೆಯ ಅಂತರ್ಜಾಲ https://aranya.gov.in ನಲ್ಲಿ ನೇಮಕಾತಿ (Requirement) ಶೀರ್ಷಿಕೆಯಡಿ ದಿನಾಂಕ 07.08.2024 ರಂದು ಪ್ರಕಟಣೆಯನ್ನು ಪ್ರಕಟಿಸಲಾಗಿರುತ್ತದೆ.
ಅದರಂತೆ ಸದರಿ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ದೈಹಿಕ ತಾಳ್ವಿಕೆ ಪರೀಕ್ಷೆ (Physical Endurance Test) ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ (Physical Efficiency Test) ಹಾಗೂ ದೇಹ ದಾರ್ಡ್ಯತೆ ಪರೀಕ್ಷೆ (Physical Standard Test) ಗಳನ್ನು ಈ ಕೆಳಕಂಡ ಸ್ಥಳ ಹಾಗೂ ದಿನಾಂಕದಂದು ನಡೆಸಲಾಗುವುದು. ಈ ಬಗ್ಗೆ ಇಲಾಖೆಯಿಂದ ಯಾವುದೇ ಪತ್ರ ವ್ಯವಹಾರ ನಡೆಸಲಾಗುವುದಿಲ್ಲ.
ಅಭ್ಯರ್ಥಿಗಳಿಗೆ ವಿಶೇಷ ಸೂಚನೆ:
1) ಅಧಿಸೂಚನೆ ದಿನಾಂಕ : 17.11.2023ರ ಕಂಡಿಕೆ 9ರ ಟಿಪ್ಪಣಿಯ ಕ್ರಸಂ (2) ರಲ್ಲಿ ನಮೂದಿಸಿದ ಒಂದು ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಎರಡು ಸ್ವಯಂ ದೃಢೀಕರಣ ಪ್ರತಿಯನ್ನು ಸಲ್ಲಿಸುವುದು.
2) ಆನ್ ಲೈನ್ (Online) (ಎಲೆಕ್ಟ್ರಾನಿಕ್ ಮಾರ್ಗ) ಅರ್ಜಿಯ ಸ್ವಯಂ ದೃಢೀಕೃತ ನಕಲು ಪ್ರತಿ.
3) ಇತ್ತೀಚಿನ ಐದು (5) ಪಾಸ್ ಪೋರ್ಟ್ ಸೈಜ್ ಭಾವಚಿತ್ರಗಳು (ಷರಾ: ಹಿಂಭಾಗದಲ್ಲಿ ತಮ್ಮ ಹೆಸರು ಹಾಗೂ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಸಹಿಯೊಂದಿಗೆ ನಮೂದಿಸುವುದು)
4) ಸಾಮಾನ್ಯ ಅಂಗವಿಕಲ ಅಭ್ಯರ್ಥಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಗಳ ಅಂಗವಿಕಲತೆಯನ್ನು ದೃಡೀಕರಿಸಲು ಆಧಾರವಾಗಿರುವ ಎಲ್ಲಾ ಸಂಬಂಧಿಸಿದ ವೈದ್ಯಕೀಯ ದಾಖಲಾತಿಗಳನ್ನು ಹಾಜರುಪಡಿಸುವುದು.
5) ಮೇಲ್ಕಂಡ ಪ್ರಕ್ರಿಯೆಯು ಒಂದು ದಿನಕ್ಕಿಂತ ಹೆಚ್ಚಿನ ದಿನ ನಡೆಯುವ ಸಂಭವವಿರುವುದರಿಂದ ತಂಗುವಿಕೆಗೆ ಎಲ್ಲಾ ಪೂರ್ವ ಸಿದ್ಧತೆಗಳೊಂದಿಗೆ ಹಾಜರಾಗಲು ತಿಳಿಸಿದೆ. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ತಂಗುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು. ಪ್ರಯಾಣ ಭತ್ಯೆ ಇನ್ನಿತರ ಭತ್ಯೆಗಳನ್ನು ಇಲಾಖೆಯಿಂದ ನೀಡಲಾಗುವುದಿಲ್ಲ.
6) ಹಾಜರಾಗಲು ನಿಗದಿಪಡಿಸಿದ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಮೇಲ್ಕಂಡ ದಿನಾಂಕದಂದು ಅಭ್ಯರ್ಥಿಯು ಹಾಜರಾಗದೆ ಇದ್ದ ಪಕ್ಷದಲ್ಲಿ ಗಸ್ತು ಅರಣ್ಯ ಪಾಲಕ ಹುದ್ದೆಗೆ ಸೇರಲು ಅಭ್ಯರ್ಥಿಗೆ ಇಚ್ಚೆ ಇಲ್ಲವೆಂದು ಭಾವಿಸಿ ಅಭ್ಯರ್ಥಿಯ ಹೆಸರನ್ನು ಆಯ್ಕೆ ಪ್ರಕ್ರಿಯೆಯಿಂದ ಕೈ ಬಿಡಲಾಗುವುದು.
7) ಯಾವುದೇ ಹಂತದಲ್ಲಿ ದೈಹಿಕ ತಾಳ್ವಿಕೆ / ದೈಹಿಕ ಸಮರ್ಥತೆ ಪರೀಕ್ಷೆಯಲ್ಲಿ ಅನರ್ಹರಾದಲ್ಲಿ ಅಥವಾ ಪರೀಕ್ಷೆ ನಡೆಯುವ ಸಮಯದಲ್ಲಿ ಗಾಯಗೊಂಡ ಅಥವಾ ಯಾವುದೇ ಕಾರಣದಿಂದಾಗಿ ಪರೀಕ್ಷೆಯನ್ನು ಅಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇನ್ನೊಂದು ಅವಕಾಶ ನೀಡಲಾಗುವುದಿಲ್ಲ.
8) ದೈಹಿಕ ತಾಳ್ವಿಕೆ ಮತ್ತು ದೈಹಿಕ ಸಮರ್ಥತೆ ಪರೀಕ್ಷೆಗಳಲ್ಲಿ ಯಾವುದೇ ಅವಘಡ ಸಂಭವಿಸಿದ್ದಲ್ಲಿ ಇಲಾಖೆಯು ಹೊಣೆಗಾರರಾಗಿರುವುದಿಲ್ಲ.
9) ಅಭ್ಯರ್ಥಿಯು ಗರ್ಭಿಣಿ / ಬಾಣಂತಿಯರಾಗಿದ್ದಲ್ಲಿ ಅಧಿಸೂಚನೆ ಕಂಡಿಕೆ ಸಂಖ್ಯೆ 9 ವಿಶೇಷ ಸೂಚನೆಗಳಂತೆ ಅಗತ್ಯ ಮೂಲ ದಾಖಲಾತಿಗಳೊಂದಿಗೆ ಸದರಿ ಪರೀಕ್ಷಾ ದಿನದಂದು ಹಾಜರುಪಡಿಸತಕ್ಕದ್ದು.
10) ಅರಣ್ಯ ಇಲಾಖೆಯ ಅಂತರ್ಜಾಲ https://aranya.gov.in ನಲ್ಲಿ ನೇಮಕಾತಿ (Requirement) ಶೀರ್ಷಿಕೆಯಡಿ ಪ್ರಕಟಿಸಲಾಗುತ್ತಿರುವ ಮಾಹಿತಿಯನ್ನು ಅಭ್ಯರ್ಥಿಗಳು ಕಾಲಕಾಲಕ್ಕೆ ವೀಕ್ಷಿಸುವುದು. ಇದಕ್ಕಾಗಿ ಬೇರೆ ಯಾವುದೇ ಪತ್ರ ವ್ಯವಹಾರ / ದೂರವಾಣಿ / ಇ-ಮೇಲ್/ ಎಸ್.ಎಂ.ಎಸ್. ಇಲಾಖೆ ವತಿಯಿಂದ ಮಾಡಲಾಗುವುದಿಲ್ಲ / ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಎಲ್ಲ ವೃತ್ತಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Ballari
Download Chamarajanagar Circle File Chamarajanagar
Kalaburagi Circle File ಕಲಬುರಗಿ
No comments:
Post a Comment