ಎಲ್ಲರಿಗೂ ಡಾ॥ ಬಿ. ಆರ್. ಅಂಬೇಡ್ಕರಜಿಯವರ *135ನೆಯ ಜಯಂತಿಯ* ಹಾರ್ದಿಕ ಶುಭಾಶಯಗಳು 🙏🏻💐
*ಪೂರ್ಣ ಮೂಲ ಹೆಸರು*
ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್
*ಎಲ್ಲರು ಪ್ರೇಮದಿಂದ ಕರೆಯುತ್ತಿದ್ದ ಹೆಸರು*
ಬಾಬಾ ಸಾಹೇಬ
*ಮನೆತನದ ಹೆಸರು*
ಸಕ್ಪಾಲ್ ಅಥವಾ ಅಂಬಾವಾಡೇಕರ್'
*ಉಪನಾಮ ಬದಲಾವಣೆ*
ಅವರ ಗುರುಗಳಾದ ಕೃಷ್ಣಾಜಿ ಕೇಶವ ಅಂಬೇಡ್ಕರ್ ಇವರು ಬ್ರಾಹ್ಮಣ ಸಮುದಾಯದವರಾಗಿದ್ದರು. ಇವರಿಗೆ ಬಾಬಾಸಾಹೇಬರ ಮೇಲೆ ಅಪಾರ ಪ್ರೀತಿ ಇತ್ತು ಮತ್ತು ಶಾಲಾ ದಾಖಲೆಗಳಲ್ಲಿ ಅವರ ಉಪನಾಮವನ್ನು *'ಸಕ್ಪಾಲ್ ಅಥವಾ ಅಂಬಾವಾಡೇಕರ್'* ನಿಂದ ತಮ್ಮ ಉಪನಾಮವಾದ *'ಅಂಬೇಡ್ಕರ್'* ಎಂದು ಬದಲಾಯಿಸಿಕೊಂಡರು.
*ಬಿರುದುಗಳು*
👉🏻ಬಾಬಾ ಸಾಹೇಬ
👉🏻ಭಾರತದ ಸಂವಿಧಾನ ಶಿಲ್ಪಿ
👉🏻ಆಧುನಿಕ ಮನು
👉🏻ದಲಿತೋದ್ಧಾರಕ
👉🏻ಬೋಧಿಸತ್ವ
_(ಅಂದರೆ ಜ್ಞಾನೋದಯದ ಹಾದಿಯಲ್ಲಿರುವ ಜೀವಿ.)_
👉🏻ಭಾರತ ರತ್ನ
*ಜನನ*
ಅಂಬೇಡ್ಕರ್ 1891 ರ ಏಪ್ರಿಲ್ 14 ರಂದು ಮಧ್ಯಪ್ರದೇಶದ ಮೋಹ್ ಪಟ್ಟಣ ಮತ್ತು ಮಿಲಿಟರಿ ಕಂಟೋನ್ಮೆಂಟ್ನಲ್ಲಿ ತಮ್ಮ ಹೆತ್ತವರಿಗೆ 14ನೆಯ & ಕೊನೆಯ ಮಗುವಾಗಿ ಜನಿಸಿದರು.
*ಪಾಲಕರು*
ರಾಮ್‌ಜಿ ಮಾಲೋಜಿ ಸಕ್ಪಾಲ್ (ತಂದೆ)
ಭೀಮಾಬಾಯಿ ಸಕ್ಪಾಲ್ (ತಾಯಿ)
_ತಂದೆ ಬ್ರಿಟೀಷ್ ಸೈನ್ಯದಲ್ಲಿ ಸುಬೇದಾರರ ಹುದ್ದೆಯನ್ನು ಹೊಂದಿದ್ದ ಸೇನಾ ಅಧಿಕಾರಿಯಾಗಿದ್ದರು ಮತ್ತು ತಾಯಿ ಲಕ್ಷ್ಮಣ್ ಮುರ್ಬದ್ಕರ್ ಅವರ ಮಗಳು ಭೀಮಾಬಾಯಿ ಇವರ ಉದರದಿ ಜನಿಸಿದ 14 ನೇ ಮತ್ತು ಕೊನೆಯ ಮಗು ಡಾ॥ ಬಿ.ಆರ್.ಅಂಬೇಡ್ಕರಜಿಯವರು._
*ವಿದ್ಯಾಭ್ಯಾಸ*
👉🏻ಪ್ರಾಥಮಿಕ ಶಿಕ್ಷಣ ಮೋಹ್ ಹಾಗೂ ಸಾತಾರದಲ್ಲಿ.
👉🏻ಪ್ರೌಢ ಶಿಕ್ಷಣ ಮುಂಬೈಯ ಎಲ್ಫಿನ್ಸ್ಟೋನ್ ಪ್ರೌಢಶಾಲೆಯಲ್ಲಿ.
👉🏻1907 ರಲ್ಲಿ, ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
👉🏻ಮುಂದಿನ ವರ್ಷದಲ್ಲಿ ಇವರು ಬಾಂಬೆ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದ್ದ ಎಲ್ಫಿನ್ ಸ್ಟೋನ್ ಕಾಲೇಜಿಗೆ ಪ್ರವೇಶಿಸಿದರು.
ಮಹಾರ್ ಜಾತಿಯಿಂದ ಇಷ್ಟೊಂದು ಉನ್ನತ ಮಟ್ಟದಲ್ಲಿ ವ್ಯಾಸಾಂಗ ಮಾಡಿದವರಲ್ಲಿ ಮೊದಲಿಗರಾದರು.
👉🏻1908 ರಿಂದ 1912 ರ ಹೊತ್ತಿಗೆ, ಇವರು ಬಾಂಬೆ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರ, ಇತಿಹಾಸ, ತತ್ವಶಾಸ್ತ್ರ ಮತ್ತು ಮಾನವಶಾಸ್ತ್ರದ ಇತರ ವಿಷಯಗಳಲ್ಲಿ ಪ್ರಮುಖ ಪದವಿ ಪಡೆದರು.
👉🏻ನಂತರ ಬರೋಡಾ ರಾಜ್ಯ ಸರ್ಕಾರದಲ್ಲಿ ಉದ್ಯೋಗವನ್ನು ತೆಗೆದುಕೊಳ್ಳಲು ಸಿದ್ಧರಾದರು.
👉🏻ತದನಂತರ 1913-15 ರಲ್ಲಿ, ತಮ್ಮ 22 ನೇ ವಯಸ್ಸಿನಲ್ಲಿ, ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ಅವಕಾಶಗಳನ್ನು ಒದಗಿಸಲು ವಿನ್ಯಾಸಗೊಳಿಸಲಾದ ಸಯಾಜಿರಾವ್ ಗಾಯಕ್ವಾಡ್ III ( ಬರೋಡಾದ ಗಾಯಕ್ವಾಡ್ ) ಸ್ಥಾಪಿಸಿದ ಯೋಜನೆಯಡಿಯಲ್ಲಿ ಅಂಬೇಡ್ಕರಜಿಯವರಿಗೆ ತಿಂಗಳಿಗೆ £11.50 (ಸ್ಟರ್ಲಿಂಗ್) ವಿದ್ಯಾರ್ಥಿವೇತನವನ್ನು ಮೂರು ವರ್ಷಗಳ ಕಾಲ ನೀಡಲಾಯಿತು.
👉🏻1916-21 ರಲ್ಲಿ, ಅವರು ಲಂಡನ್ ವಿಶ್ವವಿದ್ಯಾಲಯದಲ್ಲಿ ಮೊದಲನೇ ಸ್ನಾತಕೋತ್ತರ ಪ್ರಬಂಧವನ್ನು ಪೂರ್ಣಗೊಳಿಸಿದರು.
👉🏻1923 ರಲ್ಲಿ, ಅವರು ಲಂಡನ್ ವಿಶ್ವವಿದ್ಯಾಲಯದಲ್ಲಿ ಎರಡನೆಯ ಸ್ನಾತಕೋತ್ತರ ಪ್ರಬಂಧವನ್ನು ಪೂರ್ಣಗೊಳಿಸಿದರು.
👉🏻ಅಂಬೇಡ್ಕರಜಿಯವರು 1927 ರಲ್ಲಿ ಕೊಲಂಬಿಯಾದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದರು.
*ಸಂಗಾತಿ:*
*ಮೊದಲ ಹೆಂಡತಿ* ರಮಾಬಾಯಿ ಅಂಬೇಡ್ಕರ್ (1906–1935)
_ಡಾ. ಬಿ.ಆರ್. ಅಂಬೇಡ್ಕರಜಿಯವರ ಮೊದಲ ಪತ್ನಿ ರಮಾಬಾಯಿ, ಧೀರ್ಘಕಾಲದ ಅನಾರೋಗ್ಯದ ನಂತರ ಮೇ 27, 1935 ರಂದು ತಮ್ಮ 37 ನೇ ವಯಸ್ಸಿನಲ್ಲಿ ನಿಧನರಾದರು. ಅವರು ತಮ್ಮ ಪತಿಯ ಕೆಲಸಕ್ಕೆ ಸ್ಥಿತಿಸ್ಥಾಪಕತ್ವ ಮತ್ತು ಸಮರ್ಪಣೆಗೆ ಹೆಸರುವಾಸಿಯಾಗಿದ್ದರು._
ಮತ್ತು *ಎರಡನೇ ಹೆಂಡತಿ* ಸವಿತಾ ಅಂಬೇಡ್ಕರ್ (1948–1956), ಇವರನ್ನು ಜನ ಪ್ರೀತಿಯಿಂದ *ಮಾಯಿ ಸಾಹೇಬ್* ಎಂದು ಕರೆಯುತ್ತಿದ್ದರು. ಸವಿತಾ ಅಂಬೇಡ್ಕರ್ ಇವರು ಒಬ್ಬ ಭಾರತೀಯ ವೈದ್ಯೆ ಮತ್ತು ಸಾಮಾಜಿಕ ಕಾರ್ಯಕರ್ತೆ. 1948ರಲ್ಲಿ, ಅವರು ಬಿ. ಆರ್. ಅಂಬೇಡ್ಕರಜಿಯವಯನ್ನು ವಿವಾಹವಾದರು.
*ಮಕ್ಕಳು:*
ಯಶವಂತ್ ಅಂಬೇಡ್ಕರ್
_(ಡಾ. ಬಿ.ಆರ್. ಅಂಬೇಡ್ಕರಜಿಯವರಿಗೆ ಅವರ ಮೊದಲ ಪತ್ನಿ ರಮಾಬಾಯಿ ಅವರಿಂದ ಐದು ಮಕ್ಕಳಿದ್ದರು, ಆದರೆ ಯಶವಂತ್ ಅಂಬೇಡ್ಕರ್ ಎಂಬ ಒಬ್ಬರೇ ಬದುಕುಳಿದರು.)_
*ಗೌರವ ಡಾಕ್ಟರೇಟ್ ಪದವಿ*
ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಜನವರಿ 12, 1953 ರಂದು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ನೀಡಲಾಯಿತು.
*ರಾಜಕೀಯವಾಗಿ ಡಾ|| ಬಿ.ಆರ್.ಅಂಬೇಡ್ಕರಜಿಯವರ ಸಾಧನೆ*
ಶಾಸಕರಾಗಿ, ಪಕ್ಷದ ನಾಯಕರಾಗಿ, ಭಾರತೀಯ ಸಂವಿಧಾನದ ಕರಡು ರಚನಾ ಸಮಿತಿಯ ಸದಸ್ಯರಾಗಿ ಮತ್ತು ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.
*ಡಾ॥ ಬಿ. ಆರ್. ಅಂಬೇಡ್ಕರಜಿಯವರ ಪ್ರಸಿದ್ಧ ಘೋಷಣೆಗಳಲ್ಲಿ ಬಹುಮುಖ್ಯವಾದ ಒಂದು ಘೋಷಣೆ*
"ಶಿಕ್ಷಣ ನೀಡಿ, ಚಳವಳಿ ನಡೆಸಿ, ಸಂಘಟಿಸಿ".
*ಡಾ॥ ಬಿ. ಆರ್.ಅಂಬೇಡ್ಕರಜಿಯವರಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ*
1990 ರಲ್ಲಿ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಮರಣೋತ್ತರವಾಗಿ ಡಾ॥ ಬಿ. ಆರ್. ಅಂಬೇಡ್ಕರ್ ಅವರಿಗೆ ನೀಡಲಾಯಿತು.
*ಡಾ. ಬಿ.ಆರ್. ಅಂಬೇಡ್ಕರಜಿಯವರ ಅನುಯಾಯಿಗಳು ಬಳಸುವ ಪ್ರಸಿದ್ಧ ಘೋಷಣೆ*
"ಜೈ ಭೀಮ್" _(ಇದರ ಅರ್ಥ "ಭೀಮನಿಗೆ ಜಯ".)_
*ಮರಣ:*
ಡಿಸೆಂಬರ್ 6, 1956 (ವಯಸ್ಸು 65 ವರ್ಷ), ನವದೆಹಲಿಯಲ್ಲಿ ಸ್ವರ್ಗವಾಸಿಯಾದರು.
_ಡಾ. ಬಿ.ಆರ್. ಅಂಬೇಡ್ಕರಜಿಯವರ ಪುಣ್ಯತಿಥಿಯನ್ನು(ಪ್ರತಿವರ್ಷ ಡಿಸೆಂಬರ್-6ರಂದು) *ಮಹಾಪರಿನಿರ್ವಾಣ ದಿವಸ್* ಎಂದು ಆಚರಿಸಲಾಗುತ್ತದೆ. "ಮಹಾಪರಿನಿರ್ವಾಣ" ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ *"ಸಾವು ಮತ್ತು ಪುನರ್ಜನ್ಮದ ಚಕ್ರದಿಂದ ಮುಕ್ತಿ"* ಎಂದರ್ಥ._
No comments:
Post a Comment