Regarding the implementation of the process of submitting pension applications of employees retiring on old age/voluntarily to the Accountant General through the Khajane-2 software.
ವಿಷಯ: ಖಜಾನೆ-2ರ ತಂತ್ರಾಂಶದ ಮುಖಾಂತರ ಮಹಾಲೇಖಪಾಲರಿಗೆ ವಯೋ ನಿವೃತ್ತಿ/ಸ್ವ- ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವ ಕುರಿತು.
ಓದಲಾದ (1)ರ ಆದೇಶದಲ್ಲಿ ಪಿಂಚಣಿ ಪ್ರಸ್ತಾವನೆಗೆ ಸಂಬಂದಿಸಿದ ಕಾಗದ ಪತ್ರಗಳನ್ನು ಮಹಾಲೇಖಪಾಲರಿಗೆ ಸಲ್ಲಿಸಲು ಸೂಚಿಸಲಾಗಿದೆ.
ಓದಲಾದ (2) ರ ಆದೇಶದಲ್ಲಿ ಕರ್ನಾಟಕ ರಾಜ್ಯದ ಪಿಂಚಣಿಯನ್ನು ಸಾರ್ವಜನಿಕ ಕ್ಷೇತ್ರ ಬ್ಯಾಂಕುಗಳ ಮೂಲಕ ಪಾವತಿ ಮಾಡುವ ಪ್ರಕ್ರಿಯೆ ಮತ್ತು ಅನುಸರಿಸಬೇಕಾದ ಕ್ರಮಗಳನ್ನು ನೀಡಲಾಗಿದೆ.
ಓದಲಾದ (3)ರ ಆದೇಶದಲ್ಲಿ ಸಿಪಿಪಿಸಿ ಹೊಂದಿರುವ ಸಾರ್ವಜನಿಕ ಕ್ಷೇತ್ರ ಬ್ಯಾಂಕುಗಳೊಂದಿಗೆ ಅನುಕಲನದ ಮುಖಾಂತರ ಖಜಾನೆ-2 ರಲ್ಲಿ ಪಿಂಚಣಿ ದತ್ತಾಂಶವನ್ನು/ಲೆಕ್ಕ ಸಮನ್ವಯವನ್ನು ಅನ್ ಲೈನ್ ನಲ್ಲಿ ನಿರ್ವಹಿಸುವ ಉದ್ದೇಶದಿಂದ ಅರ್ಹ ರಾಜ್ಯ ಪಿಂಚಣಿ ನೌಕರರಿಗೆ ಆದೇಶದಲ್ಲಿ ನೀಡಿರುವ ಬ್ಯಾಂಕುಗಳ ಮುಖಾಂತರ ಪಾವತಿ ಮಾಡಲು ಅಭಿಮತವನ್ನು ನೀಡಬಹುದಾಗಿದೆ.
ಓದಲಾದ (4) ರಲ್ಲಿ ಖಜಾನೆ ಇಲಾಖೆಯ ಕಡತದಲ್ಲಿ ಕೆ.ಸಿ.ಎಸ್.ಆರ್. ನಿಯಮ 326 ಮತ್ತು 332 (ಸಿ) ರನ್ವಯ ವಯೋ ನಿವೃತ್ತಿ/ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಅವರು ನಿವೃತ್ತಿ ಹೊಂದುವ 3 ತಿಂಗಳ ಮುಂಚಿತವಾಗಿ ಮಹಾಲೇಖಪಾಲರಿಗೆ ಸಲ್ಲಿಸುವುದು ಎಂದು ಇರುತ್ತದೆ ಹಾಗೂ ಕೆ.ಸಿ.ಎಸ್.ಆರ್. ನಿಯಮ 327 (1) ರನ್ಮಯ ಎಲ್ಲಾ ಪತ್ರಂಕಿತ ಅಧಿಕಾರಿಗಳ ಪಿಂಚಣಿ ಪತ್ರಗಳನ್ನು ನಮೂನೆ-7ರಲ್ಲಿ ಒಂದು ವರ್ಷ ಮುಂಚಿತವಾಗಿ ಮಹಾಲೇಖಪಾಲರಿಗೆ ಸಲ್ಲಿಸಬೇಕಿರುತ್ತದೆ.
DS(C)
JS (MY PUTC) DS CT) Ds 19
ಪ್ರಸ್ತುತ ಖಜಾನೆ-2 ಮತ್ತು ಅಕೌಂಟೆಂಟ್ ಜನರಲ್ ತಂತ್ರಾಂಶದ ನಡುವಿನ ಅನುಕಲನದ ಪ್ರಯೋಗಾತ್ಮಕ ಹಂತ ಪೂರ್ಣಗೊಂಡಿರುವುದರಿಂದ ಪ್ರಾಯೋಗಿಕವಾಗಿ ಜನವರಿ 2025 ರಿಂದ ಮಾರ್ಚ್ 2025ರವರೆಗೆ ಮೂರು ತಿಂಗಳ ಕಾಲ ರಾಜ್ಯದ ಎಲ್ಲಾ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು (ಡಿಡಿಓ) ವಯೋ ನಿವೃತ್ತಿ/ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಆನ್‌ಲೈನ್ ಮತ್ತು ಭೌತಿಕವಾಗಿ ಮಹಾಲೇಖಪಾಲರಿಗೆ ಸಲ್ಲಿಸುವುದನ್ನು ಅನುಗಾನಗೊಳಿಸಲು ಆದೇಶ ಹೊರಡಿಸುವಂತೆ ಖಜಾನೆ ಆಯುಕ್ತರು ಕೋರಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ
No comments:
Post a Comment