Regarding admission Process under Section 12(1)(b) and Section 12(1)(c) of the Right to Education Act-2009 for the year 2025-26
2025-26 ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009 ರ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1) (ಸಿ)ಅಡಿ ಪ್ರವೇಶ ಪ್ರಕ್ರಿಯೆ ಬಗ್ಗೆ ರಾಜ್ಯ ಸರಕಾರದ ಮಹತ್ವದ ಆದೇಶ.
ಈಗಾಗಲೇ ಉಲ್ಲೇಖ(9)ರಂತೆ 2025-26ನೇ ಸಾಲಿನ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಾಲೆಗಳ ಮ್ಯಾಪಿಂಗ್ ಮಾಡುವ ಕುರಿತು ಕಳುಹಿಸಿರುವ ಸುತ್ತೋಲೆಯನ್ನು ಮುಂದುವರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ಈ ಕೆಳಕಾಣಿಸಿದ ಕ್ರಮ ತೆಗೆದುಕೊಳ್ಳಲು ತಿಳಿಸಿದೆ.
1. ನೆರೆಹೊರೆಯಲ್ಲಿರುವ ಯಾವುದೇ ಶಾಲೆಯನ್ನು ಕೈಬಿಡದಂತೆ ಎಲ್ಲಾ ಸರ್ಕಾರಿ, ಬಿ.ಬಿ.ಎಂ.ಪಿ. ಶಾಲೆಗಳು ಅನುದಾನಿತ ಮತ್ತು ಅನುದಾನರಹಿತ, ಶಾಲೆಗಳನ್ನು ಮ್ಯಾಪ್ ಮಾಡುವುದು.
2. ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಣಾ ಪತ್ರ ಪಡೆದಿರುವ, ಈಗಾಗಲೇ ಮುಚ್ಚಿರುವ ಮತ್ತುನ್ಯಾಯಾಲಯದ ತಡೆಯಾಜ್ಞೆ ಪಡೆದಿರುವ ಶಾಲೆಗಳನ್ನು ಪಟ್ಟಿಯಿಂದ ಕೈಬಿಡುವುದು.
3. ಎಲ್.ಕೆ.ಜಿ. ಮತ್ತು ಯು.ಕೆ.ಜಿ ತರಗತಿಗಳನ್ನು ಮಾತ್ರ ನಡೆಸುವ ಶಾಲೆಗಳನ್ನು ಪಟ್ಟಿಯಲ್ಲಿ ಸೇರಿಸಬಾರದು.
ಅಲ್ಪಸಂಖ್ಯಾತವಲ್ಲದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ದಿನಾಂಕ: 31.12.2024 ರಲ್ಲಿದ್ದಂತೆ ಎಲ್.ಕೆ.ಜಿ. ಮತ್ತು 1 ನೇ ತರಗತಿಯ ಮಾನ್ಯತೆ ಪಡೆದ ವಿಭಾಗಗಳಿಗೆ ಅನುಗುಣವಾಗಿ ದಾಖಲಾತಿ ಸಂಖ್ಯೆಯನ್ನು SATS ತಂತ್ರಾಂಶದ ಆಧಾರದ ಮೇಲೆ ಶೇ.25% ಸೀಟು ಹಂಚಿಕೆಗೆ ಪರಿಗಣಿಸಲಾಗುವುದು.
2025-26ನೇ ಸಾಲಿನಲ್ಲಿ ಕಾಯ್ದೆಯ ಸೆಕ್ಷನ್ 12(1) (ಬಿ) ಮತ್ತು 12(1)(ಸಿ) ಅನ್ವಯ ಪ್ರವೇಶ ಪ್ರಕ್ರಿಯೆಗೆ ನಿಗಧಿಪಡಿಸಿದ ವೇಳಾಪಟ್ಟಿಯನ್ನು ಈ ಸುತ್ತೋಲೆಗೆ ಲಗತ್ತಿಸಿದೆ. ವೇಳಾಪಟ್ಟಿ ಪ್ರಕಾರ ಸಂಬಂಧಿಸಿದ ಪ್ರಾಧಿಕಾರವು ಸಕಾಲಿಕ ಕ್ರಮ ತೆಗೆದುಕೊಳ್ಳುವುದು. ಆನ್ಲೈನ್ ತಂತ್ರಾಂಶದಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಪ್ರತಿ ವರ್ಷದಂತೆ ಅಗತ್ಯ ಗಣಕಯಂತ್ರ ವ್ಯವಸ್ಥೆ ಮತ್ತು ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ
No comments:
Post a Comment