KSPSTA

RECENT INFORMATIONS

Search This Blog

Friday, March 28, 2025

28-03-2025 Friday All News Papers Educational, Employment and Others News Points

  Dailyguru       Friday, March 28, 2025
28-03-2025 Friday All News Papers Educational, Employment and Others News Points (Educational and Informational Purpose Only)

ಸಮಾಚಾರ ಪತ್ರಿಕೆಗಳು ಇಂದು ಮಾನವರಿಗೆ ಅವಶ್ಯವಾದ ಎಲ್ಲ ಮಾಹಿತಿಗಳನ್ನು ತಿಳಿಯಲು ಮಹತ್ವದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ. ಸಮಾಚಾರ ಪತ್ರಿಕೆಗಳಲ್ಲಿ ಶಿಕ್ಷಣ, ಆರೋಗ್ಯ, ಕ್ರೀಡೆ, ವಾಣಿಜ್ಯ ಎಲ್ಲ ವಿಷಯಗಳ ಮಾಹಿತಿ ಒದಗಿಸುತ್ತಿವೆ.

ಸಮಾಚಾರ ಪತ್ರಿಕೆಗಳು


ಹರಿದು ಹಂಚಿ ಹೋದ ಕನ್ನಡ ನಾಡು ಏಕೀಕರಣಗೊಳ್ಳಲು ಸಮಾಚಾರ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿವೆ.
ಕರ್ನಾಟಕದಲ್ಲಿ ಕನ್ನಡ ಪತ್ರಿಕೆಗಳು ಜನ್ಮ ತಳೆದದ್ದು ರಾಜಕೀಯ ಮತ್ತು ಜನರಿಗೆ ಸಾಮಾಜಿಕ ಜಾಗೃತಿಯ ಉದ್ದೇಶದಿಂದ . ೧೯೩೩ನೆಯ ಇಸವಿಯಲ್ಲಿ ಬೆಳಗಾವಿಯಲ್ಲಿ ಪ್ರಾರಂಭವಾದ ಸಂಯುಕ್ತ ಕರ್ನಾಟಕ ಪತ್ರಿಕೆಯು, ಹೆಸರೇ ಸೂಚಿಸುವಂತೆ, ಕರ್ನಾಟಕ ಏಕೀಕರಣಕ್ಕಾಗಿ, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗಾಗಿ ಹಾಗೂ ಸಮಾಜ ಸುಧಾರಣೆಗಾಗಿ ದುಡಿದಿದೆ. ತಾಯಿನಾಡು ಹಾಗೂ ಪ್ರಜಾವಾಣಿ ಪತ್ರಿಕೆಗಳು ಈ ಕಾರ್ಯವನ್ನು ಮೈಸೂರು ಪ್ರಾಂತದಲ್ಲಿ ಮಾಡಿದವು. ಈ ಪತ್ರಿಕೆಗಳು ನಾಡು ಕಟ್ಟಲು ದುಡಿದಂತೆ, ನುಡಿಯನ್ನು ಬೆಳೆಸಲೂ ದುಡಿದವು. ಅಲ್ಲಿಂದ ಇಲ್ಲಿಯವರೆಗೆ ಕನ್ನಡ ಪತ್ರಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವ. ಕೆಲವೊಂದು ಬದಲಾವಣೆಗಳು ಹೆಮ್ಮೆ ಪಡುವಂತಹವು ; ಕೆಲವೊಂದು ದುಃಖ ಪಡುವಂತಹವು.

ಒಂದು ಪತ್ರಿಕೆಗೆ ‘ತನ್ನತನ’ ಎನ್ನುವದು ಬೇಕು. ಪಾ.ವೆಂ. ಆಚಾರ್ಯರು ‘ಸಂಯುಕ್ತ ಕರ್ನಾಟಕ’ದ ಸಂಪಾದಕ ಮಂಡಲಿಯಲ್ಲಿದ್ದ ಕಾಲವದು. ಆ ಸಮಯದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ರಂಗೇರಿತ್ತು. ಮರಾಠಿ ಪತ್ರಿಕೆಗಳು ಭಂಡಶೈಲಿಯಲ್ಲಿ ಸುದ್ದಿಯನ್ನು ಪ್ರಕಟಿಸುತ್ತಿದ್ದವು. ನಾನು ಪಾ.ವೆಂ. ಅವರನ್ನು ಪತ್ರಿಕೆಯ ಕಚೇರಿಯಲ್ಲಿ ಭೆಟ್ಟಿಯಾದಾಗ, ಈ ವಿಷಯವನ್ನು ಪ್ರಸ್ತಾಪಿಸಿ, “ಸಂಯುಕ್ತ ಕರ್ನಾಟಕವು ಸಭ್ಯವಾಗಿ ಬರೆಯುವದೇಕೆ?”ಎಂದು ಕೇಳಿದ್ದೆ. ಪಾ.ವೆಂ. ನಸುನಕ್ಕು ಹೇಳಿದರು: “ಸಂಯುಕ್ತ ಕರ್ನಾಟಕಕ್ಕೆ ದೀರ್ಘವಾದ ಒಂದು ಸತ್ಸಂಪ್ರದಾಯವಿದೆ !”

ಆ ಸತ್ಸಂಪ್ರದಾಯ ಇಂದು ಎತ್ತ ಹೋಗಿದೆಯೋ ಅಥವಾ ಸತ್ತೇ ಹೋಗಿದೆಯೋ ತಿಳಿಯದು ! ಸಂಯುಕ್ತ ಕರ್ನಾಟಕದ ಭಾಷೆ, ಕಾಗುಣಿತಗಳ ತಪ್ಪು ಹಾಗು ವರದಿಯ ಶೈಲಿಯನ್ನು ನೋಡಿದಾಗ, ಈ ಪತ್ರಿಕೆಗೆ ಇಂದು ಕೋಡಂಗಿಯ ವ್ಯಕ್ತಿತ್ವ ಬಂದಿದೆ ಎಂದು ಭಾಸವಾಗುವದು.



logoblog

Thanks for reading 28-03-2025 Friday All News Papers Educational, Employment and Others News Points

Previous
« Prev Post

No comments:

Post a Comment