January 2025 Commerce Mains Examination Result
ಜನವರಿ-2025ರ ವಾಣಿಜ್ಯ ಪರೀಕ್ಷೆಯ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳ ಫಲಿತಾಂಶವನ್ನು ಮಂಡಲಿಯ ដ https://kseab.karnataka.gov.in 2 20:20.03.2025 ໐໖ ಪ್ರಕಟಿಸಲಾಗುವುದು. ಹಾಗೂ ಅದೇ ದಿನದಂದು ಸಂಬಂಧಿಸಿದ ಸಂಸ್ಥೆಗಳ ಲಾಗಿನ್‌ಗಳಲ್ಲಿ ಲಭ್ಯಮಾಡಲಾಗುವುದು. ಸದರಿ ಫಲಿತಾಂಶವನ್ನು ಎಲ್ಲಾ ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರು ಫಲಿತಾಂಶ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸುವುದು. ಫಲಿತಾಂಶದಲ್ಲಿ ತಿದ್ದುಪಡಿ ಇದ್ದಲ್ಲಿ ಫಲಿತಾಂಶ ಪ್ರಕಟಣೆಯಾದ 15 ದಿನಗಳೊಳಗೆ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸುವುದು, ಪ್ರಸ್ತಾವನೆಯನ್ನು ಪರಿಶೀಲಿಸಿ ನಿಯಮಾನುಸಾರ ಫಲಿತಾಂಶವನ್ನು ತಿದ್ದುಪಡಿ ಮಾಡಲು ಕ್ರಮವಹಿಸಲಾಗುವುದು.
ಫಲಿತಾಂಶವು ಪರೀಕ್ಷೆಯಲ್ಲಿ ಹಾಗೂ ಮೌಲ್ಯಮಾಪನದಲ್ಲಿ ವಂಚನೆ, ಅನುಚಿತ ವರ್ತನೆ, ನಕಲು ಮಾಡಿರುವುದು ಮೊದಲಾದವುಗಳಿಂದ ಪ್ರಭಾವಿತವಾಗಿದೆ ಎಂದು ಕಂಡುಬಂದಲ್ಲಿ ಅಂತಹ ಫಲಿತಾಂಶವನ್ನು ತಡೆಹಿಡಿಯಲಾಗುವುದು ಅಥವಾ ಫಲಿತಾಂಶ ಪ್ರಕಟವಾದ ನಂತರವೂ ನಿಯಮಾನುಸಾರ ತಡೆಹಿಡಿಯುವ, ರದ್ದುಪಡಿಸುವ, ಮಾರ್ಪಡಿಸಿ ಪ್ರಕಟಿಸುವ ಅಧಿಕಾರವನ್ನು ಮಂಡಲಿ ಹೊಂದಿರುತ್ತದೆ.
* ಫಲಿತಾಂಶಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆಗಳು:
ಜನವರಿ-2025ರ ವಾಣಿಜ್ಯ ಪರೀಕ್ಷೆಯ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳ ಫಲಿತಾಂಶ ಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಸಂಸ್ಥೆಯ ಲಾಗಿನ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಕೆಳಕಂಡ ಅಂಶಗಳ ಆಧಾರದ ಮೇಲೆ ಆಯಾ ಸಂಸ್ಥೆಯ ಎಲ್ಲಾ ಅಭ್ಯರ್ಥಿಗಳ ಫಲಿತಾಂಶವನ್ನು ಕಡ್ಡಾಯವಾಗಿ ಸಂಬಂಧಿಸಿದ ಸಂಸ್ಥೆಯ ಮುಖ್ಯಸ್ಥರು ಪರಿಶೀಲಿಸಲು ತಿಳಿಸಿದೆ. ಹಾಗೂ ಯಾವುದೇ ಕಾರಣಕ್ಕೂ ಮಂಡಲಿಯಿಂದ ಫಲಿತಾಂಶ ಪಟ್ಟಿಯನ್ನು ಭೌತಿಕವಾಗಿ ಸಂಸ್ಥೆಗಳಿಗೆ ಕಳುಹಿಸಲಾಗುವುದಿಲ್ಲ.
> ವಾಣಿಜ್ಯ ಸಂಸ್ಥೆಗಳಿಂದ ಪರೀಕ್ಷಾ ಮಂಡಲಿಗೆ ಪತ್ರ ವ್ಯವಹರಿಸುವ ಪ್ರತಿಯೊಂದು ಪತ್ರದ ಮುಖಪುಟದಲ್ಲಿ ತಮ್ಮ ಸಂಸ್ಥೆಗೆ ನೀಡಿರುವ ಸಂಸ್ಥೆಯ ಸಂಕೇತ, ದೂರವಾಣಿ ಸಂಖ್ಯೆ ಮತ್ತು E-Mail ID ಯನ್ನು ತಪ್ಪದೇ ನಮೂದಿಸುವುದು.
> ಜನವರಿ-2025ರ ವಾಣಿಜ್ಯ ಪರೀಕ್ಷೆಯ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳುವುದು.
> ಒಂದುವೇಳೆ ಯಾವುದಾದರೂ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗದಿದ್ದಲ್ಲಿ, ಫಲಿತಾಂಶ ತಡೆಹಿಡಿದಿದ್ದಲ್ಲಿ ಫಲಿತಾಂಶ ಪ್ರಕಟಿಸಿದ 15 ದಿನಗಳೊಳಗಾಗಿ ಸಕಾರಣಗಳೊಂದಿಗೆ ಮಂಡಲಿಗೆ ಮಾಹಿತಿ ಸಲ್ಲಿಸಿ ಫಲಿತಾಂಶ ಪಡೆದುಕೊಳ್ಳಲು ಫಲಿತಾಂಶ ಪಡೆಯುವ ಲಿಂಕ್ ಇಲ್ಲಿದೆ.
No comments:
Post a Comment