KSPSTA

RECENT INFORMATIONS

Search This Blog

Wednesday, October 2, 2024

free electricity connection to government schools

  Dailyguru       Wednesday, October 2, 2024

 

Use this link to provide information for free electricity connection to government schools

ಶಾಲಾ ಶಿಕ್ಷಣ ಇಲಾಖೆಯ ವೆಬ್ಸೈಟ್ ಆದ schooleducation.gov.in ನಲ್ಲಿ ಉಚಿತ ವಿದ್ಯುತ್ ಸಂಪರ್ಕಕ್ಕೆ ಮಾಹಿತಿ ನಮೂದಿಸಲು ಇದೀಗ ಅವಕಾಶ ಕಲ್ಪಿಸಲಾಗಿದೆ. ಇದೀಗ ನಾವು ಆ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಕೆಳಗೆ ನೀಡಿರುವ ಇಲ್ಲಿ ಕ್ಲಿಕ್ ಮಾಡಿ ಎಂಬ ಸ್ಕ್ರಾಲ್ ಲಿಂಕನ್ನು ಪ್ರಕಟಿಸಲಾಗಿದ್ದು, ಅರ್ಜಿ ಸಲ್ಲಿಸಲು ಸದರಿ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು. ಈ ಲಿಂಕ್ ಮೇಲೆ ಲಿಂಕ್ ಮಾಡಿದ ತಕ್ಷಣ ಸೇವಾ ಸಿಂಧು ಪೋರ್ಟಲ್ ನ ಪೇಜ್ ತೆರೆದುಕೊಳ್ಳುತ್ತದೆ ಈ ವೆಬ್ ಪೇಜ್ ನ ಮುಖಪುಟದಲ್ಲಿ ಈ ಕೆಳಕಂಡ ಕ್ರಮಗಳನ್ನು ಶಾಲೆಯ ಮುಖ್ಯ ಶಿಕ್ಷಕರು ನಿರ್ವಹಿಸಬೇಕಾಗುತ್ತದೆ.

1. ಸಂಬಂಧಪಟ್ಟ ಸರಕಾರಿ ಶಾಲೆಯ ಯುಡೈಸಂಖ್ಯೆಯನ್ನು ನಿಗದಿತ ಸ್ಥಳದಲ್ಲಿ ನಮೂದಿಸಿದಾಗ ಶಾಲೆಯ ಹೆಸರು ವಿಳಾಸ ಮತ್ತು ಶಾಲೆಯ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆ ಹಾಗೂ ಶಾಲೆಗೆ ಸಂಬಂಧಿಸಿದ ವಿವರಗಳು ಪ್ರದರ್ಶಿತಗೊಳ್ಳುತ್ತವೆ ಈ ವಿವರಗಳು ತಮ್ಮ ಕಚೇರಿಗೆ ಸಂಬಂಧಿಸಿದ ಎಂದು ಕಾತರಿಪಡಿಸಿಕೊಳ್ಳಬೇಕು.

2. ಸದರಿ Udise ಗೆ ಲಿಂಕ್ ಮಾಡಲಾಗಿರುವ ಮೊಬೈಲ್ ಸಂಖ್ಯೆ ಶಾಲಾ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆಗೆ ಸೇ ಕೃತವಾಗುವ OTP(one time password) ನಮೂದಿಸಿ ದಾಖಲೆಗಳನ್ನು ಪರಿಶೀಲಿಸಿ validate ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.


3. ನಂತರ ತಮ್ಮ ಶಾಲೆಯು ಒಳಪಡುವ ವಿದ್ಯುತ್ ಸರಬರಾಜು ಕಂಪನಿ ನಿಯಮಿತವನ್ನು ಆಯ್ಕೆ ಮಾಡಿಕೊಂಡು ಶಾಲೆಯ ವಿದ್ಯುತ್ ಬಿಲ್ ನಲ್ಲಿ ನಮೂದಿಸಿರುವ ಅಕೌಂಟ್ ನಂಬರನ್ನು ನಿಖರವಾಗಿ ಪರಿಶೀಲಿಸಿಕೊಂಡು ನಿಗದಿತ ಸ್ಥಳದಲ್ಲಿ ನಿಖರವಾಗಿ ನಮೂದಿಸಬೇಕು.

4. ನಂತರ ಮಾಹಿತಿ ನಿಖರವಾಗಿರುವ ಬಗ್ಗೆ ದೃಢೀಕರಣ ವಾಕ್ಯದ ಬಟನ್ ಕ್ಲಿಕ್ ಮಾಡಬೇಕು.

5. ನಂತರ ನೀಡಿರುವ ಕ್ಯಾಪ್ಚವನ್ನು ಯಥಾ ಪ್ರಕಾರ ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

6. Acknowledgement ಪಡೆದು ಮುದ್ರಿಸಿ ಕಡತದಲ್ಲಿ ಇಟ್ಟುಕೊಳ್ಳಿ.

ನಿಮ್ಮ ಶಾಲೆಗೆ ಉಚಿತ ವಿದ್ಯುತ್ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಲಿಂಕ್ ಅನ್ನು ಕ್ಲಿಕ್ ಮಾಡಿ.


Click Here For Free Electricity Registration

logoblog

Thanks for reading free electricity connection to government schools

Previous
« Prev Post

No comments:

Post a Comment