KSPSTA

RECENT INFORMATIONS

Search This Blog

Sunday 24 March 2024

SSLC Social Science Question Paper 2024

  Mahiti Kanaja       Sunday 24 March 2024

 Hedding ; 27-03-2024 Social Science Subject Annual Model Question Paper and Answer Explanations Part 3...


2023-24 ನೇ ಸಾಲಿನ ಸರ್ಕಾರಿ ಶಾಲೆಗಳಲ್ಲಿ10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಗಣಿತ, ವಿಜ್ಞಾನ, ತಂತ್ರಜ್ಞಾನ, ಭಾಷೆ, ದೇಶದಸಂಸ್ಕೃತಿ, ಪರಂಪರೆ, ಸಾಮಾನ್ಯ ಜ್ಞಾನ ಹಾಗೂ ಇತರ ವಿಷಯಗಳಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಕಿರಿಯ ಹಾಗೂ ಹಿರಿಯರ ವಿಭಾಗ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು (Quiz Competition)ಆನ್ ಲೈನ್ ಮೂಲಕ ಆಯೋಜಿಸುವ ಸಂಬಂಧ ಉಲ್ಲೇಖಿತ ಪತ್ರದ ಸುತ್ತೋಲೆಯಲ್ಲಿ ವಿವರವಾಗಿ ಮಾಹಿತಿ ನೀಡಲಾಗಿತ್ತು.


 ಆದರೆ ಕೆಲವು ಜಿಲ್ಲೆಗಳಲ್ಲಿ ಶಾಲಾ ಹಂತದಲ್ಲಿ ಶಿಕ್ಷಕರು ವೇಳಾಪಟ್ಟಿಯಂತೆ ರಸಪ್ರಶ್ನೆಸ್ಪರ್ಧೆಯನ್ನು ನಡೆಸಿ ವಿಜೇತ ವಿದ್ಯಾರ್ಥಿಗಳ ಮಾಹಿತಿಯನ್ನು ವಿದ್ಯಾವಾಹಿನಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರಸಪ್ರಶ್ನೆ ಸ್ಫರ್ಧೆ ಕಾರ್ಯಕ್ರಮದ ವೇಳಾಪಟ್ಟಿಯನ್ನು ಮರು ನಿಗದಿಗೊಳಿಸಲಾಗಿದೆ.

ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ “ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ (Qult Competition) ಸ್ಪರ್ಧೆಯನ್ನು ಆಯೋಜಿಸಲು ಅನುಮೋದನೆಯಾಗಿರುತ್ತದೆ.

 ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಅವರಲ್ಲಿ ಗಣಿತ, ವಿಜ್ಞಾನ, ತಂತ್ರಜ್ಞಾನ, ಸಾಮಾನ್ಯ ಜ್ಞಾನ, ಭಾಷೆ, ಭಾರತ ದೇಶದ ಪರಂಪರೆ ಹಾಗೂ ವಿವಿಧ ಇತರ ವಿಷಯಗಳಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸಲು ಹಾಗೂ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಲು ಈ ಕಾರ್ಯಕ್ರಮವು ಪೂರಕವಾಗಿದೆ.

ಈ ರಸಪ್ರಶ್ನೆಯ ಉದ್ದೇಶಗಳು ಹೀಗಿವೆ :
ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ಹಾಗೂ ಸಾಮಾನ್ಯ ಜ್ಞಾನವನ್ನು ಬೆಳೆಸುವುದು.

ಈ ರಸಪ್ರಶ್ನೆ ಕುರಿತು & ಕಾರ್ಯಹಾಳೆ
ಮನುಷ್ಯನ ಮೇಲೆ ಪ್ರಬಂಧ ಅಲೆಕ್ಸಾಂಡರ್ ಪೋಪ್ ಪ್ರಕಟಿಸಿದ ಸಾಹಿತ್ಯದ ಪ್ರಭಾವಶಾಲಿ ತುಣುಕು, ಮತ್ತು ಈ ರಸಪ್ರಶ್ನೆ/ವರ್ಕ್‌ಶೀಟ್ ಸಂಯೋಜನೆಯು ಕವಿತೆಯ ನಿಮ್ಮ ಗ್ರಹಿಕೆಯನ್ನು ಮೌಲ್ಯಮಾಪನ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಕವಿತೆಯ ವಿಷಯಗಳು ಮತ್ತು ಅದರ ಪ್ರಕಟಣೆಯ ದಿನಾಂಕವನ್ನು ಒಳಗೊಂಡಿರುತ್ತದೆ.

ರಸಪ್ರಶ್ನೆ & ವರ್ಕ್‌ಶೀಟ್ ಗುರಿಗಳು
ಈ ಉಪಕರಣಗಳು ನಿಮ್ಮ ಜ್ಞಾನವನ್ನು ನಿರ್ಣಯಿಸುತ್ತವೆ:

ಪತ್ರದ ವ್ಯಾಖ್ಯಾನ
ಸಾಹಿತ್ಯ ಕೃತಿ ಇದರಲ್ಲಿ ಮನುಷ್ಯನ ಮೇಲೆ ಒಂದು ಪ್ರಬಂಧ ಪ್ರತಿಧ್ವನಿಸುತ್ತದೆ
ಕವಿತೆಯ ವಿಷಯಗಳು
ಪೋಪ್ ಅನ್ನು ಏಕೆ ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ
ಕೌಶಲ್ಯಗಳನ್ನು ಅಭ್ಯಾಸ ಮಾಡಲಾಗಿದೆ
ಈ ರಸಪ್ರಶ್ನೆ ಮತ್ತು ವರ್ಕ್‌ಶೀಟ್‌ನಲ್ಲಿ ಈ ಕೆಳಗಿನ ಕೌಶಲ್ಯಗಳ ಮೇಲೆ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗುತ್ತದೆ:

ಓದುವಿಕೆ ಗ್ರಹಿಕೆ - ಪೋಪ್ ಮತ್ತು An Ssay on Man ಪಾಠದಿಂದ ನೀವು ಅತ್ಯಂತ ಪ್ರಮುಖವಾದ ಮಾಹಿತಿಯನ್ನು ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.

ಸಂಪರ್ಕಗಳನ್ನು ಮಾಡುವುದು - ನಿಯೋಕ್ಲಾಸಿಕಲ್ ಸಾಹಿತ್ಯದ ಪರಿಕಲ್ಪನೆ ಮತ್ತು ಕವಿತೆಯ ವಿಷಯಗಳಿಗೆ ಅದರ ಸಂಪರ್ಕದ ತಿಳುವಳಿಕೆಯನ್ನು ಬಳಸಿ

ವಿಮರ್ಶಾತ್ಮಕ ಚಿಂತನೆ - ಪೋಪ್‌ನ ಕವಿತೆಯ ಬಗ್ಗೆ ಮಾಹಿತಿಯನ್ನು ವಿಭಿನ್ನ ಬೆಳಕಿನಲ್ಲಿ ಪರೀಕ್ಷಿಸಲು ಮತ್ತು ಅನ್ವಯಿಸುವ ತೀರ್ಮಾನಗಳನ್ನು ತಲುಪಲು ಸಂಬಂಧಿತ ಪರಿಕಲ್ಪನೆಗಳನ್ನು ಅನ್ವಯಿಸಿ
ಹೆಚ್ಚುವರಿ ಕಲಿಕೆ
ಈ ಮಹತ್ವದ ಸಾಹಿತ್ಯ ಕೃತಿಯ ಕುರಿತು ನಿಮ್ಮ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಲು, ಅಲೆಕ್ಸಾಂಡರ್ ಪೋಪ್‌ನ An essay on Man ಎಂಬ ಶೀರ್ಷಿಕೆಯ ಪಾಠವನ್ನು ಪರಿಶೀಲಿಸಿ: ಸಾರಾಂಶ & ವಿಶ್ಲೇಷಣೆ. ಈ ಪಾಠವು ಈ ಕೆಳಗಿನ ಉದ್ದೇಶಗಳನ್ನು ಒಳಗೊಂಡಿದೆ:

ಪತ್ರವನ್ನು ವ್ಯಾಖ್ಯಾನಿಸಿ
ಪೋಪ್ ಅವರ ಕೆಲಸದ ಮೇಲೆ ಪ್ರಭಾವವನ್ನು ಗುರುತಿಸಿ
ಸಾಹಿತ್ಯದಲ್ಲಿ ನಿಯೋಕ್ಲಾಸಿಕಲ್ ಯುಗವನ್ನು ಅರ್ಥಮಾಡಿಕೊಳ್ಳಿ
ಮನುಷ್ಯನ ಮೇಲೆ ಒಂದು ಪ್ರಬಂಧ ಅನ್ನು ಹೇಗೆ ಬರೆಯಲಾಗಿದೆ ಮತ್ತು ಅದರ ವಿಭಿನ್ನ ಭಾಗಗಳನ್ನು ಹೇಗೆ ಗುರುತಿಸಲಾಗಿದೆ ಎಂದು ತಿಳಿಯಿರಿ.

ವಿದ್ಯಾರ್ಥಿಗಳಲ್ಲಿ ಚಿಂತಿಸುವ, ವಿಶ್ಲೇಷಿಸುವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು. ಭಾರತವು ವಿವಿಧ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು.

ವಿದ್ಯಾರ್ಥಿಗಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ಅವರಲ್ಲಿ ಸ್ಪರ್ಧಾ ಮನೋಭಾವನೆಯನ್ನು ಬೆಳೆಸುವುದು.



ಭಾರತದ ಶ್ರೀಮಂತ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಅವರಲ್ಲಿ ದೇಶದ ಬಗ್ಗೆ ಹೆಮ್ಮೆ ಹಾಗೂ ದೇಶಪ್ರೇಮ ಬೆಳೆಸುವುದು.

ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಕಾರ್ಯಗತಗೊಳಿಸುವಲ್ಲಿ ಕರ್ನಾಟಕವು ಕಾರ್ಯ ಪುವೃತ್ತವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಸೂಚಕಗಳಲ್ಲಿ ಒಂದಾದ ಭಾರತ ಕೇಂದ್ರಿತ ಶಿಕ್ಷಣ ಹಾಗೂ ನಮ್ಮ ಶಾಲಾ ಮಕ್ಕಳಲ್ಲಿ ಭಾರತದ ದೇಶದ ಬಗ್ಗೆ ಹಮ್ಮ, ಸಂಸ್ಕೃತಿ ಪರಂಪರೆಯ ಕುರಿತು ಜಾಗೃತಿ ಮೂಡಿಸುವ ಪ್ರಾಮುಖ್ಯತೆಯನ್ನು ನಿರ್ಧಿಪ್ರವಾಗಿ “ಭಾರತದ ಜ್ಞಾನ” (Knowledge of INDIA ) ಎಂದು ಕರೆಯಲಾಗುತ್ತದೆ. ಭಾರತದ ಸ್ವಾತಂತ್ರದ 75 ವರ್ಷಗಳ ಸಂಭ್ರಮಾಚರಣೆಯ “ಆಜಾದಿ ಕಾ ಅಮೃತ್ ಮಹೋತ್ಸವ ” ಕಾರ್ಯಕ್ರಮದಡಿಯಲ್ಲಿ ಶಾಲೆ, ತಾಲೂಕು, ಜಿಲ್ಲೆ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸ್ಪರ್ಧೆಯ ಹಂತಗಳು:
ಶಾಲೆ, ತಾಲ್ಲೂಕು, ಜಿಲ್ಲೆ ವಿಭಾಗ ಹಾಗೂ ರಾಜ್ಯ ಹಂತಗಳಲ್ಲಿ ಈ ಸ್ಪರ್ಧೆಯನ್ನು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ 5 ರಿಂದ 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ 2 ಹಂತಗಳಲ್ಲಿ ಆಯೋಜಿಸಲಾಗಿದೆ.

ಕಿರಿಯರ ವಿಭಾಗ /ಜೂನಿಯರ್ ವಿಭಾಗ (5ರಿಂದ 7 ತರಗತಿಯ ವಿದ್ಯಾರ್ಥಿಗಳಿಗಾಗಿ)
ಹಿರಿಯರ ವಿಭಾಗ /ಸೀನಿಯರ್ ವಿಭಾಗ (8ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ)

ಪರೀಕ್ಷಾ ಆತಂಕ ಪರಿಹಾರವೇನು?

ಬದಲಾದ ಸಾಮಾಜಿಕ ಪರಿಸ್ಥಿತಿಗಳಿಂದ ಹಾಗೂ ಹೆಚ್ಚಿದ ಸಾಮಾಜಿಕ ಒತ್ತಡದಿಂದ ‘ಪರೀಕ್ಷಾ ಆತಂಕ’ ಹಿಂದೆಂದೂ ಕಾಣದಷ್ಟು ಪ್ರಾಮುಖ್ಯ ಪಡೆಯುತ್ತಿದೆ. ಒಂಬತ್ತನೆಯ ತರಗತಿಯವರೆಗೆ ವಿದ್ಯಾರ್ಥಿಗಳು ನಪಾಸಾಗುವಂತಿಲ್ಲ ಎನ್ನುವ ಸತ್ಯ ಗೊತ್ತಿದ್ದರೂ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಆತಂಕವೇನೂ ಕಡಿಮೆ ಆಗಿಲ್ಲ. ಬದಲಾಗಿ ಎಲ್‌ಕೆಜಿ, ಯುಕೆಜಿಯಲ್ಲಿ ಕಲಿಯುತ್ತಿರುವ ಮಕ್ಕಳೂ ಪರೀಕ್ಷೆಯೆಂದರೆ ಭಯಪಡುವ ಸಂದರ್ಭಗಳನ್ನು ಕಾಣುತ್ತಿದ್ದೇವೆ.

ಪರೀಕ್ಷೆಗಳು ಹತ್ತಿರವಾಗುತ್ತಲೇ ಮಕ್ಕಳಿಗಿಂತಲೂ ಹೆತ್ತವರು ಹೆಚ್ಚು ಆತಂಕಿತರಾಗಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲು ಪ್ರಾರಂಭಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕರದ್ದು ಅದೇ ಧಾಟಿ. ‘ಪರೀಕ್ಷೆ ಹತ್ತಿರ ಬಂತು, ಈ ಬಾರಿ ಪಬ್ಲಿಕ್ ಪರೀಕ್ಷೆ. ಗಂಭೀರವಾಗಿ ತೆಗೆದುಕೊಳ್ಳಿ’ ಎನ್ನುವ ಸಲಹೆ. ನಮಗೆ ತಿಳಿದೋ ತಿಳಿದೆಯೋ ಪರೀಕ್ಷೆ ಬಂತು ಪರೀಕ್ಷೆ ಬಂತು ಎನ್ನುವ ಧ್ವನಿ ‘ಭೂತ ಬಂತು ಭೂತ ಬಂತು’ ಎನ್ನುವ ಹಾಗೆ ಧ್ವನಿಸುತ್ತದೆ. ಅದು ನಮ್ಮ ಅರಿವಿಗೆ ಬರುವುದಿಲ್ಲ.


ಹಾಗಿದ್ದರೆ ಪರೀಕ್ಷೆಗಳ ಬಗ್ಗೆ ಭಯ ಬೇಡವೇ? ಸ್ವಲ್ಪವೂ ಭಯವಿರದಿದ್ದರೆ ಮಕ್ಕಳು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವಿರಾ? ನಿಜ. ಸಣ್ಣ ಪ್ರಮಾಣದ, ಆರೋಗ್ಯಕರ ಭಯ ವ್ಯಕ್ತಿಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಆದರೆ ಅದು ಅತಿಯಾಗದಂತೆ ನೋಡಿಕೊಳ್ಳಬೇಕು. ದುರದೃಷ್ಟವೆಂದರೆ ಚೆನ್ನಾಗಿ ಓದುವ ವಿದ್ಯಾರ್ಥಿಗಳು ಹಾಗೂ ಉತ್ತಮ ಅಂಕಗಳನ್ನೇ ಪಡೆದುಕೊಂಡ ವಿದ್ಯಾರ್ಥಿಗಳೂ ಹೆಚ್ಚಿನ ಪ್ರಮಾಣದಲ್ಲಿ ಆತಂಕ ಅನುಭವಿಸುವುದೂ.

ಪರೀಕ್ಷಾ ಆತಂಕದ ಲಕ್ಷಣಗಳು
1) ಭಾವನಾತ್ಮಕ ಲಕ್ಷಣಗಳು
ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ಮಕ್ಕಳಲ್ಲಿ ಹಿಂದಿನ ಪರೀಕ್ಷೆಗಳ ಕಹಿ ಅನುಭವಗಳ ನೆನಪು, ಮತ್ತೆ ಫೇಲಾದರೆ ಎನ್ನುವ ಭಯ, ಅಸಹಾಯಕತೆ, ಏನೂ ಹೊಳೆಯದಂತಹ ಸ್ಥಿತಿ, ಋಣಾತ್ಮಕ ಆಲೋಚನೆಗಳು ಕಾಡತೊಡಗುತ್ತವೆ. ತಮ್ಮನ್ನೇ ಹಳಿದುಕೊಳ್ಳುವುದು, ಮುಜುಗರ ಅನುಭವಿಸುವುದು, ಅಕಾರಣ ಸಿಟ್ಟು, ಆತಂಕ ಕಂಡುಬರುವುದು.

2) ದೈಹಿಕ ಲಕ್ಷಣಗಳು
* ವಾಕರಿಕೆ, ತಲೆಸುತ್ತು

* ಉಸಿರಾಡಲು ಕಷ್ಟವಾಗುವುದು.

* ತಲೆನೋವು

* ಹಸಿವಿಲ್ಲದಿರುವುದು

* ನಿದ್ರಾಹೀನತೆ

* ಎದೆಬಡಿತ ಜೋರಾಗುವುದು..

ಕಡಿಮೆ ಮಾಡುವುದು ಹೇಗೆ?
ಪರೀಕ್ಷೆ ಕುರಿತಾಗಿ ಶಾಲೆಯಲ್ಲಿ, ಮನೆಯಲ್ಲಿ ಕೆಲವು ವಿಚಾರಗಳನ್ನು ತಿಳಿಸಬೇಕು. ‘ನಾನು ವಿದ್ಯಾರ್ಥಿ, ನನ್ನ ಕರ್ತವ್ಯದಂತೆ ಶಾಲೆಗೆ ಹೋಗಿದ್ದೇನೆ. ಪಾಠಗಳನ್ನು ಕೇಳಿಸಿಕೊಂಡಿದ್ದೇನೆ. ನೋಟ್ಸ್ ಬರೆದುಕೊಂಡಿದ್ದೇನೆ. ಇನ್ನು ನನ್ನ ಮುಂದೆ ಇರುವುದು ಪರೀಕ್ಷೆಗೆ ಉಳಿದಿರುವ ದಿನಗಳನ್ನು ವಿಭಜಿಸಿ, ಓದಿದ್ದನ್ನು ಪುನರ್‌ ಮನನ ಮಾಡಿಕೊಂಡು ಪರೀಕ್ಷೆ ಬರೆಯುವುದು ಮಾತ್ರ. ನನ್ನ ನಿಯಂತ್ರಣದಲ್ಲಿರುವ ಕರ್ತವ್ಯವನ್ನು ನಾನು ಚೆನ್ನಾಗಿಯೇ ಮಾಡುವೆ. ನನ್ನ ಮಿತಿಯಲ್ಲಿರದ ವಿಚಾರಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ನನ್ನ ಮಿತಿಯಲ್ಲಿರದ ವಿಚಾರಗಳೆಂದರೆ, ಪ್ರಶ್ನೆಪತ್ರಿಕೆ ಹೇಗಿರುತ್ತದೆ? ಮೌಲ್ಯಮಾಪನ ಹೇಗಿರುತ್ತದೆ? ನಾನು ಓದಿದ ವಿಷಯಗಳೇ ಪರೀಕ್ಷೆಗೆ ಬರುತ್ತದೋ ಇಲ್ಲವೋ, ನನಗೆ ಸಮಯ ಸಾಲದಿದ್ದರೆ? ಓದಿದ್ದು ಮರೆತು ಹೋದರೆ? ಅಂಕಗಳು ಕಡಿಮೆ ಬಂದರೆ? ನಾನು ಫೇಲಾದರೆ’ ಇಂಥ ಪ್ರಶ್ನೆಗಳನ್ನು ಗುರುತಿಸಿ ಆ ವಿಚಾರಗಳನ್ನು ಅಲಕ್ಷಿಸುವುದನ್ನು ಹೇಳಿಕೊಡಬೇಕು. ನಮ್ಮ ಗಮನ ಶೇ 100ರಷ್ಟು ಕಾರ್ಯಕ್ಷಮತೆಯ ಕಡೆ ಇರಬೇಕೇ ವಿನಃ ಶೇ 100ರಷ್ಟು ಅಂಕಗಳಲ್ಲ ಎಂದು ತಿಳಿಸಿಕೊಡಬೇಕು.

* ಪರೀಕ್ಷಾ ಆತಂಕ ಇರುವ ಮಕ್ಕಳನ್ನು ಗುರುತಿಸಿ ಈ ವಿಚಾರಗಳನ್ನು ತಿಳಿಸಬೇಕು.

ಅಣುಕು ಪರೀಕ್ಷೆಗಳನ್ನು ನಡೆಸಿ ಅವರಲ್ಲಿನ ಕಾರ್ಯಕ್ಷಮತೆಯನ್ನು ಗುರುತಿಸಿ ಧೈರ್ಯ ತುಂಬಬೇಕು.

* ದೀರ್ಘ ಉಸಿರಾಟದ ಕ್ರಮಗಳನ್ನು ಕಲಿಸಿಕೊಡಬೇಕು.

* ಫೇಲಾಗುವ ಆತಂಕವಿದ್ದರೆ ಪದ್ಯದ ಇಡೀ ಓದಿನ ಬದಲು ಆಯ್ದ ಭಾಗಗಳನ್ನು ಸರಿಯಾಗಿ ಓದಲು ತಿಳಿಸಬೇಕು.

ಅತಿ ಆತಂಕ ಗುರುತಿಸುವುದು ಹೇಗೆ?
* ಪೋಷಕರು - ಶಿಕ್ಷಕರು ಅದೆಷ್ಟೇ ಸಮಾಧಾನ ಮಾಡಿದರೂ ಮಗು ಅತಿಯಾಗಿ ಭಯಪಡುವುದು, ಶಾಲೆ, ಪರೀಕ್ಷೆಗಳನ್ನು ತಪ್ಪಿಸುವುದು.

* ವೈದ್ಯರು ತಪಾಸಣೆ ಮಾಡಿಯೂ ಯಾವುದೇ ನಿಗದಿತ ಕಾಯಿಲೆಯಿರದಿದ್ದರೂ ನಿಲ್ಲದ ದೈಹಿಕಲಕ್ಷಣಗಳಾದ ವಾಂತಿ, ವಾಕರಿಕೆ, ನಿದ್ರಾಹೀನತೆ, ತಲೆನೋವು ಇತ್ಯಾದಿ.

* ಸದಾ ಆತಂಕಿತರಾಗಿರುವುದು, ಕಣ್ಣೀರಿಡುವುದು, ಓದಲು ನಿರಾಕರಿಸುವುದು.

* ತನ್ನನ್ನೇ ಹಳಿದುಕೊಳ್ಳುವುದು, ಬದುಕಿರುವುದು ವ್ಯರ್ಥವೆನ್ನುವಂತಹ ಮಾತುಗಳನ್ನಾಡುವುದು.

* ಅಪರಾಧಿ ಮನೋಭಾವ ಹೊಂದಿರುವುದು, ತಾನು ಒಳ್ಳೆಯ ವಿದ್ಯಾರ್ಥಿಯಲ್ಲ, ಒಳ್ಳೆಯ ಮಗ/ಮಗಳಲ್ಲ ಎನ್ನುವ ಭಾವನೆಗಳನ್ನು ಹೊಂದಿರುವುದು .

National Crime Records Bureau (NCRB) 2017-2021ರ ವರದಿಯ ಪ್ರಕಾರ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಪ್ರಕರಣಗಳು ಶೇ 21.79ರಷ್ಟು ಹೆಚ್ಚಿವೆ. ಇದು ಆತಂಕದಾಯಕ ವಿಷಯ. ಒತ್ತಡಮಯ ಶೈಕ್ಷಣಿಕ ಬದುಕಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶಿಕ್ಷಕರು ಮುಂದಾದರೆ, ಹೆತ್ತವರು ಮಕ್ಕಳಿಗೆ ಅನವಶ್ಯಕ ಒತ್ತಡ ಹೇರದೆ, ಇತರರೊಂದಿಗೆ ಹೋಲಿಕೆ ಮಾಡದೆ ಪರೀಕ್ಷೆಯ ದಿನಗಳಲ್ಲಿ ಜತೆಗಿದ್ದರೆ ಈ ಆತ್ಮಹತ್ಯೆಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಬಹುದು.

ಶಿಕ್ಷಕರಿಗೆ ಸಲಹೆಗಳು
* ಪರೀಕ್ಷೆ ಬಂತು ಓದಿ ಎಂದು ಒತ್ತಾಯ ಮಾಡುವ ಜೊತೆಗೆ ಹೇಗೆ ಓದಬೇಕು ಎಂದು ತಿಳಿಸಿಕೊಡಿ.

* ಪರೀಕ್ಷೆಯಲ್ಲಿ ಉತ್ತರ ಬರೆಯುವುದು ಕಲೆ. ಆ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಿ.

* ಸಮಯ ನಿಭಾವಣೆ ಕಲಿಸಿಕೊಡಿ.

* ಅಣುಕು ಪರೀಕ್ಷೆಗಳನ್ನು ನಡೆಸಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ.

ಪರೀಕ್ಷಾ ತಯಾರಿಯ ವೇಳಾಪಟ್ಟಿ ತಯಾರಿಸಲು ಸಹಾಯ ಮಾಡಿ.

* ಯೋಗ - ಪ್ರಾಣಾಯಾಮಗಳನ್ನು ಕಲಿಸಿಕೊಡಿ.

* ನೀನು ಒಳ್ಳೆಯ ವಿದ್ಯಾರ್ಥಿ, ನಿಮ್ಮಿಂದ ಶಾಲೆಗೆ ರ‍್ಯಾಂಕ್ ಬಂದೇ ಬರುತ್ತದೆ ಎಂದು ನಮ್ಮ ನಿರೀಕ್ಷೆ ಎನ್ನುವಂತಹ ಮಾತುಗಳು ಬೇಡ.

* ನೀನು ಪ್ರಯತ್ನ ಪಡಬೇಕು. ನೀನು ಫೇಲಾದರೆ ಶಾಲೆಯ ಪರ್ಸಂಟೇಜ್ ಹಾಳಾಗುತ್ತದೆ ಎನ್ನುವಂತಹ ಮಾತುಗಳಂತೂ ಖಂಡಿತ ಬೇಡ.

ಹೆತ್ತವರಿಗೆ ಸಲಹೆಗಳು
* ಪರೀಕ್ಷಾ ಮುನ್ನ ತಯಾರಿಯಲ್ಲಿ ಜೊತೆಗಿರಿ.

* ಪರೀಕ್ಷಾ ತಯಾರಿಯ ವೇಳಾಪಟ್ಟಿ ತಯಾರಿಸಿ, ಹಾಗೆ ಓದಲು ತಿಳಿಸಿ.


* ಓದಿನ ಮಧ್ಯೆ ಸಣ್ಣ ವಿರಾಮಗಳನ್ನು ನೀಡಿ.

* ಈ ಸರಿ ಫೇಲಾದರೆ?, ಕಡಿಮೆ ಅಂಕ ಬಂದರೆ? ಎನ್ನುವ ಮಾತುಗಳು ಬೇಡ.

* ಫಲಿತಾಂಶದ ನಿರ್ಧರಿತ ಕಾಲೇಜಿನ ಆಯ್ಕೆ - ಕೋರ್ಸಿನ ಆಯ್ಕೆ ಕುರಿತು ಹೇಳಿ ಭಯಪಡಿಸುವುದು ಬೇಡ.

logoblog

Thanks for reading SSLC Social Science Question Paper 2024

Previous
« Prev Post

No comments:

Post a Comment