List of taluks where drought conditions have been observed in 2023 monsoon
ಹೆಚ್ಚುವರಿ ಬರಪೀಡಿತ ತಾಲೂಕುಗಳನ್ನು ಘೋಷಿಸಿದ ರಾಜ್ಯ ಸರಕಾರ 21 ಬರಪೀಡಿತ 22 ಸಾಧಾರಣ ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಘೋಷಿಸಿರುವ ವಿವಿಧ ಜಿಲ್ಲೆಗಳ ಬರಪೀಡಿತ ತಾಲೂಕುಗಳೆಂದರೆ ಚಾಮರಾಜನಗರ, ಯಳಂದೂರು, ಕೆ ಆರ್ ನಗರ, ಬೆಳಗಾವಿ,ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಕಲಘಟಗಿ, ಅಳ್ನಾವರ್, ಆಲೂರು, ಅರಸೀಕೆರೆ,ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ ಹಾಗೂ ದಾಂಡೇಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ.
ಬೆಂಗಳೂರು ಉತ್ತರ, ಚನ್ನಪಟ್ಟಣ, ಮಾಗಡಿ,ಮಾಲೂರು,ತುಮಕೂರು, ಗುಂಡ್ಲುಪೇಟೆ,ಹನೂರು, ಕೊಳ್ಳೇಗಾಲ, ದೇವದುರ್ಗ, ಮಸ್ಕಿ, ಬೇಲೂರು,ಹೊಳೆನರಸೀಪುರ, ಸಕಲೇಶಪುರ, ಶೃಂಗೇರಿ, ಚನ್ನರಾಯಪಟ್ಟಣ, ಸೋಮವಾರಪೇಟೆ, ಕೊಪ್ಪ, ನರಸಿಂಹರಾಜಪುರ, ಮಂಗಳೂರು, ಮೂಡುಬಿದರೆ, ಬ್ರಹ್ಮಾವರ, ಕಾರವಾರ ಸಾಧಾರಣ ಬರಪೀಡಿತ ಎಂದು ಘೋಷಿಸಲಾಗಿದೆ ಕಂದ ಇಲಾಖೆ 20 ನಿರ್ವಹಣೆ ಜಂಟಿ ಕಾರ್ಯದರ್ಶಿ ಟಿಸಿ ಕಾಂತರಾಜ್ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಮೊದಲು 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು ಅದರ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಕೇಂದ್ರದಿಂದ ಬರ ಅಧ್ಯಯನ ತಂಡ ಒಂದು ಆಗಮಿಸಿ ಬೆಳೆ ಸಮೀಕ್ಷೆ ನಡೆಸುತ್ತಿದೆ.
No comments:
Post a Comment