Hedding : Justice H.N. Nagamohan Das Single Member Inquiry Commission regarding the payment of honorarium to the supervisors and master trainers who conducted the comprehensive survey of Scheduled Castes-2025 census...
ಸಮಾಜ ಕಲಾಣ ಇಲಾಖೆ, ಬೆಂಗಳೂರು ಇವರ ನಡವಳಿಗಳು
ವಿಷಯ: ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರ ಗಣತಿ ಕಾರ್ಯನಿರ್ವಹಿಸಿದ ಮೇಲ್ವಿಚಾರಕರು ಹಾಗೂ ತರಭೇತಿ ನೀಡಿದ ಮಾಸ್ಟರ್ ಟೈನರ್‌ಗಳಿಗೆ ಗೌರವಧನ ಪಾವತಿಸುವ ಬಗ್ಗೆ......
ಸರ್ಕಾರದ ಆದೇಶಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿದ್ದತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸುಗಳೊಂದಿಗೆ ವರದಿ ಸಲ್ಲಿಸಲು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ ವಿಚಾರಣಾ ಆಯೋಗವನ್ನು"ರಚಿಸಲಾಗಿರುತ್ತದೆ. ಈ ಸಂಬಂಧ ಸದರಿ ಆಯೋಗವು ದಿನಾಂಕ:27-03 2025 ರಂದು ಸನ್ಮಾನ ಮುಖ್ಯಮಂತ್ರಿಗಳಿಗೆ ಮಧಂತರ ವರದಿಯನ್ನು ಸಲ್ಲಿಸಿರುತ್ತದೆ. ಸದರಿ ಮಧಂತರ ವರದಿಯಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಕುಟುಂಬಗಳ ಮನೆ-ಮನೆ ಸಮೀಕ್ಷೆ ನಡೆಸಲು ಶಿಫಾರಸ್ಸು ಮಾಡಲಾಗಿರುತ್ತದೆ.
ಗೌರವಾನಿತ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತು ದತ್ತಾಂಶ ಸಂಗ್ರಹಿಸಲು ಸರ್ಕಾರದಿಂದ ನಡೆಸಲು ಉದ್ದೇಶಿಸಿರುವೆ ಸಮೀಕ್ಷಾ ಕಾರ್ಯವನ್ನು ಕಾರ್ಯ ಸರ್ಕಾರದ ಅಗತ್ಯ ಕಾರ್ಯವೆಂದು ಪರಿಗಣಿಸಿ, ಕರಾರುವಕ್ಕಾದ ಪ್ರಮಾಣೀಕೃತ ಮಾಹಿತಿಯನ್ನು ಪಡೆಯುವ ಸಲುವಾಗಿ ಸಮೀಕ್ಷಾ ಕಾರ್ಯಕ್ಕೆ ಮೇಲ್ವಿಚಾರಕರನ್ನು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತರಭೇತಿ ನೀಡಲು ಮಾಸ್ಟರ್ ಟ್ರೈನರ್‌ಗಳನ್ನು ಗುರುತಿಸಿ ನೇಮಕ ಮಾಡಲು ಉಲ್ಲೇಖೆ (2) ರಲ್ಲಿ ಆದೇಶಿಸಲಾಗಿರುತ್ತದೆ.
ಸದರಿ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಸಮೀಕ್ಷೆಗೆ ಅವಶ್ಯವಿರುವ ಅನುದಾನವನ್ನು ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ: ಆಇ 352 ವೆಚ್ಚ-3/ 2025 ದಿನಾಂಕ:24-04-2025 ರಂತೆ ವಿವಿಧ ಅಭಿವೃದ್ಧಿ ಯೋಜನೆಯ ಲೆಕ್ಕ ಶೀರ್ಷಿಕೆ:2225-01-796-0-02 ರಡಿ 2025-26 ನೇ ಸಾಲಿನಲ್ಲಿ ಒದಗಿಸಲಾಗಿರುವ ಒಟ್ಟು ರೂ.7075.00 ಲಕ್ಷಗಳ ಅನುದಾನದಿಂದ ಸಮೀಕ್ಷೆಗೆ ಅವಶ್ಯಕವಿರುವ ಅನುದಾನ ರೂ.9149.53 ಲಕ್ಷಗಳನ್ನು ಬಳಸಿಕೊಳ್ಳುವಂತೆ ಹಾಗೂ ಈ ಲೆಕ್ಕ ಶೀರ್ಷಿಕೆಯಡಿ ಅನುದಾನದ ಕೊರತೆ ಉಂಟಾದಲ್ಲಿ ಪೊರಕ ಅಂದಾಜಿನಲ್ಲಿ ಒದಗಿಸಲು ಕ್ರಮವಹಿಸಲಾಗುವುದೆಂದು ಉಲ್ಲೇಖ (3) ರ ಪತ್ರದಲ್ಲಿ ತಿಳಿಸಲಾಗಿರುತ್ತದೆ.
ಮುಂದುವರೆದು, ಉಲ್ಲೇಖ (4) ರಲ್ಲಿ ಕಾರ್ಯದರ್ಶಿಗಳು, ಏಕ ಸದಸ್ಯ ವಿಚಾರಣಾ ಆಯೋಗ, ಬೆಂಗಳೂರು ರವರು ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ದಿನಾಂಕ:27-03-2025 ರಂದು ಮಧಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ. ໖:05-05-2025 8 ໖:06-07-2025 ಅಗತ್ಯ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ನ್ನು ರಾಜ್ಯಾದ್ಯಂತ ಕೈಗೊಳ್ಳಲಾಗಿದ್ದು, ಸದರಿ ಸಮೀಕ್ಷಾ ಕಾರ್ಯನಿರ್ವಹಿಸಿದ ಮೇಲ್ವಿಚಾರಕರಿಗೆ ಲಿಚಾರಕರಿಗೆ ರೂ.10,0 ರೂ.10,000/- ಗಳಂತೆ, ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳಿಗೆ ರೂ.5,000/- ಗಳಂತೆ ಹಾಗೂ ತಾಲ್ಲೂಕು ಮಟ್ಟದ ಮಾಸ್ಟರ್ ಟ್ರೈನರ್‌ಗಳಿಗೆ ರೂ.2,000/- ಗಳಂತೆ ಆಯಾ ಜಿಲ್ಲೆಗಳ ಜಂಟಿ/ಉಪ ನಿರ್ದೇಶಕರು ಹಾಗೂ ಬಿ.ಬಿ.ಎಂ.ಪಿ ಮುಖ್ಯ ಆಯುಕ್ತರಿಗೆ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಒಳ ಮೀಸಲಾತಿ ಸಮೀಕ್ಷೆ ಟ್ರೈನರ್ಸ್ ರವರಿಗೆ ಗೌರವ ಧನ ಬಿಡುಗಡೆ...
CLICK HERE TO DOWNLOAD THE PDF FILE 🗄️🗃️🗃️🗃️....
No comments:
Post a Comment