Sunday, October 5, 2025

Huyilagol Narayanarav Information

  Dailyguru       Sunday, October 5, 2025
ಕನ್ನಡ ನಾಡಿನ ಹೆಮ್ಮೆಯ ಕವಿ. ಮೊದಲ ರಾಜ್ಯ ಗೀತೆಯ ಸೃಷ್ಟಿಕರ್ತ

ಹುಯಿಲಗೋಳ ನಾರಾಯಣರಾಯರು ಅವರ ಜಯಂತಿ ಯ ಶುಭಾಶಯಗಳು
(೪-೧೦-೧೮೮೪)

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಈ ಗೀತೆಯನ್ನು ಕೇಳದ ಕನ್ನಡಿಗರಿಲ್ಲ.

೧೯೨೪ರಲ್ಲಿ ಬೆಳಗಾವಿ ಜಿಲ್ಲಾ ಟಿಳಕವಾಡಿಯಲ್ಲಿ ನಡೆದ ಕಾಂಗ್ರೆಸ್ ಅವೇಶನದಲ್ಲಿ ಇವರು ಬರೆದ ಗೀತೆಯನ್ನು ಪ್ರಸಿದ್ಧ ಗಾಯಕರಾದ ಸುಬ್ಬರಾಯರು ಹಾಡಿದಾಗ ಕೇಳಿದ ಜನರ ಹರ್ಷೋದ್ಗಾರ ಸ್ವಾಗತ.

ನಾರಾಯಣರಾಯರು ಹುಟ್ಟಿದ್ದು ಗದಗಿನಲ್ಲಿ. ತಂದೆ ಕೃಷ್ಣರಾಯರು, ತಾಯಿ ಬಹೆಣಕ್ಕ. ಪ್ರಾರಂಭಿಕ ಶಿಕ್ಷಣ ಗದಗಿನಲ್ಲಿ ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿ.ಎ. ಪದವಿ. ಮುಂಬೈಗೆ ತೆರಳಿ ಎಲ್.ಎಲ್.ಬಿ. ಪದವಿ ಪಡೆದು ಗದುಗಿಗೆ ಬಂದು ಹಿಡಿದ ವಕೀಲಿ ವೃತ್ತಿ.
ಕೆಲಕಾಲ ಮುಂಬೈನ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ವೃತ್ತಿ. ಪುಣೆಯ ಬದುಕು ಇವರಲ್ಲಿದ್ದ ಕನ್ನಡಾಭಿಮಾನಕ್ಕೆ ಪ್ರೇರಣೆ ನೀಡಿತು. ಬಾಲ್ಯದಿಂದಲೂ ಗಮಕ ರೀತಿಯಲ್ಲಿ ಚಿಕ್ಕಮ್ಮ ಹಾಡುತ್ತಿದ್ದ ಕುಮಾರವ್ಯಾಸ ಭಾರತವನ್ನು ತಲ್ಲೀನರಾಗಿ ಕೇಳುತ್ತಿದ್ದರು.
ಇದು ಇವರ ಮೇಲೆ ಬೀರಿದ ಅಚ್ಚಳಿಯದ ಪ್ರಭಾವ. ವಿದ್ಯಾರ್ಥಿಯಾಗಿದ್ದಾಗಲೇ ಮರಾಠಿ ನಾಟಕಗಳನ್ನು ನೋಡಿ ನಾಟಕಗಳಲ್ಲಿ ಬೆಳೆದ ಅಭಿರುಚಿ. ಪ್ರಥಮ ನಾಟಕ ‘ವಜ್ರಮುಕುಟ’ ೧೯೧೦ರಲ್ಲಿ ರಚನೆ. ಇವರು ಬರೆದ ನಾಟಕಗಳಿಗೆ ಗದುಗಿನ ಯಂಗ್ ಮೆನ್ಸ್ ಫುಟ್‌ಬಾಲ್ ಕ್ಲಬ್ ಸಂಸ್ಥೆ ನೀಡುತ್ತಿದ್ದ ರಂಗರೂಪ.
ಹಲವಾರು ಬಾರಿ ನಾರಾಯಣರಾಯರಿಂದಲೇ ನಿರ್ದೇಶನ. ರಂಗ ತಾಲೀಮಿಗೆ ಮತ್ತೋರ್ವ ನಾಟಕಕಾರರಾದ ಶಾಂತ ಕವಿಗಳಿಂದ ಬಂದ ಪ್ರೋತ್ಸಾಹ. ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ ಮುಂತಾದೆಡೆಗಳಲ್ಲಿ ಫುಟ್‌ಬಾಲ್ ಸಂಸ್ಥೆಯಿಂದ ನಾಟಕ ಪ್ರಯೋಗ. ಬಂದ ಹಣದಿಂದ ತೆರೆದ ವಿದ್ಯಾಸಂಸ್ಥೆ. ಇವರು, ಬರೆದ ಮೊಟ್ಟ ಮೊದಲ ಯಶಸ್ವಿ ನಾಟಕದಿಂದ ಪ್ರೇರಿತರಾಗಿ ಹಲವಾರು ನಾಟಕಗಳ ರಚನೆ. ಪ್ರೇಮಾರ್ಜುನ, ಕನಕವಿಲಾಸ, ಅಜ್ಞಾತವಾಸ, ಭಾರತ ಸಂಧಾನ, ಮೋಹಹರಿ, ಪ್ರೇಮವಿಜಯ, ಕುಮಾರರಾಮ, ಶಿಕ್ಷಣ ಸಂಭ್ರಮ, ವಿದ್ಯಾರಣ್ಯ, ಪತಿತೋದ್ಧಾರ, ಉತ್ತರ ಗೋಗ್ರಹಣ, ಸ್ತ್ರೀ ಧರ‍್ಮ ರಹಸ್ಯ, ಮಧ್ವಾಚಾರ್ಯರ ಜೀವನ ಚರಿತ್ರೆ, ಮೂಡಲು ಹರಿಯಿತು ಮುಂತಾದ ಸಾಮಾಜಿಕ ಕೃತಿ ರಚನೆ. ಗದುಗಿನ ವೀರನಾರಾಯಣ ಎಂಬ ಅಂಕಿತದಿಂದ ನೂರಾರು ಕವನಗಳ ರಚನೆ.
ಧಾರವಾಡದ ಕಲೋಪಾಸಕ ಮಂಡಳವು ಜಿ.ಬಿ. ಜೋಶಿಯವರ ನೇತೃತ್ವದಲ್ಲಿ ಗದುಗಿನಲ್ಲಿ ಬೃಹತ್ ಸಮಾರಂಭವೊಂದನೇರ‍್ಪಡಿಸಿ ನೂರುತೊಲ ಬೆಳ್ಳಿಯ ವೀರನಾರಾಯಣ ವಿಗ್ರಹ ನೀಡಿ ಸನ್ಮಾನ. ಸ್ತ್ರೀ ಧರ‍್ಮ ರಹಸ್ಯ ನಾಟಕವಾಡಿ ತೋರಿದ ಗೌರವ.
ರಾಜ್ಯ ಸರಕಾರದಿಂದ ಚಿನ್ನದ ಪದಕ. ಹಲವಾರು ಪ್ರಶಸ್ತಿ ಪುರಸ್ಕೃತ ನಾಡಗೀತೆಯ ನಾರಾಯಣರಾಯರು

ತೀರಿಕೊಂಡದ್ದು ೪.೭.೧೯೭೧ರಲ್ಲಿ.
logoblog

Thanks for reading Huyilagol Narayanarav Information

Previous
« Prev Post

No comments:

Post a Comment