KSPSTA

RECENT INFORMATIONS

Search This Blog

Friday, October 3, 2025

CM Siddaramaiah gives important information regarding the increase in Dearness Allowance (DA) for state government employees...

  KSPSTA       Friday, October 3, 2025

 Hedding : CM Siddaramaiah gives important information regarding the increase in Dearness Allowance (DA) for state government employees...


ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ

ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರದ ನಂತರ ತುಟ್ಟಿಭತ್ಯೆ ಹೆಚ್ಚಿಸುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಳದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿತ್ತು. ಈ ಬೆನ್ನಲ್ಲೆ ಸಿಎಂ ರಾಜ್ಯ ಸರ್ಕಾರಿ ನೌಕರರ ಬಾಕಿ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. 

ಮೈಸೂರು ವಿಮಾನನಿಲ್ದಾಣದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೇಂದ್ರ ಸರ್ಕಾರ ತುಟ್ಟಿಭತ್ಯೆ ನೀಡಿದ ನಂತರ ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ತುಟ್ಟಿಭತ್ಯೆ ನೀಡುತ್ತದೆ" ಎಂದರು. ಸದ್ಯ ಕೇಂದ್ರ ಸರ್ಕಾರವು ಬುಧವಾರ ಸಂಜೆ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡಿದ್ದು, ಶೀಘ್ರದಲ್ಲಿಯೇ ರಾಜ್ಯ ಸರ್ಕಾರ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ನೌಕರರ ತುಟ್ಟಿಭತ್ಯೆ (ಡಿಎ) 3 ಶೇಕಡಾ ಹೆಚ್ಚಳದ ಘೋಷಣೆಗೆ ಬೆನ್ನಲ್ಲೆ ಕರ್ನಾಟಕ ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ಡಿಎ ಹೆಚ್ಚಳ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.


ಈ ಘೋಷಣೆಯಿಂದ ರಾಜ್ಯದ ಸುಮಾರು 6 ಲಕ್ಷ ನೌಕರರು ಮತ್ತು ನಿವೃತ್ತರಾದವರಿಗೆ ತಕ್ಷಣದ ಆರ್ಥಿಕ ಉಪಶಮನ ಸಿಗುವ ನಿರೀಕ್ಷೆ ಇದೆ.ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,'ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ನೀಡಿದ ನಂತರ, ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ಡಿಎ ಹೆಚ್ಚಳ ನೀಡುತ್ತದೆ ಎಂದು ಹೇಳಿದರು.

ಕೇಂದ್ರದ ಘೋಷಣೆಯು ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲೂ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದಾಗಿ ಅವರು ಸೂಚಿಸಿದರು.ಕೇಂದ್ರ ಸರ್ಕಾರದ ಈ ಹೆಚ್ಚಳವು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರಂತೆ, ಕೇಂದ್ರ ನೌಕರರ ಡಿಎ ಶೇ.55 ರಿಂದ ಶೇ.58ಕ್ಕೆ ಏರಿಕೆಯಾಗಿದ್ದು, ಇದು 2025ರ ಜುಲೈ 1ರಿಂದ ಜಾರಿಗೆ ಬರುತ್ತದೆ.


ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನ ಅರಿಯರ್‌ಗಳನ್ನು ಅಕ್ಟೋಬರ್ ವೇತನದೊಂದಿಗೆ ನೀಡಲಾಗುವುದು.ಈ ಹೆಚ್ಚಳದಿಂದ ಸುಮಾರು 49 ಲಕ್ಷ ಕೇಂದ್ರ ನೌಕರರು ಮತ್ತು 69 ಲಕ್ಷ ನಿವೃತ್ತರಾದವರಿಗೆ ತಿಂಗಳಿಗೆ ಸರಾಸರಿ ₹1,000ಕ್ಕೂ ಹೆಚ್ಚು ಆರ್ಥಿಕ ಲಾಭ ಸಿಗಲಿದೆ. ದೇಶದ ಏರುತ್ತಿರುವ ಬೆಲೆಯ ಏರಿಕೆ ಸಂಬಂಧಿಸಿದಂತೆ ಆಧಾರವು (AICPI) ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮೂಲಗಳು ತಿಳಿಸಿವೆ...
















ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ(DA) ಹೆಚ್ಚಳದ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಮಾಹಿತಿ....


CLICK HERE TO VIEW THE INFORMATION ℹ️ ℹ️ ℹ️







logoblog

Thanks for reading CM Siddaramaiah gives important information regarding the increase in Dearness Allowance (DA) for state government employees...

Previous
« Prev Post

No comments:

Post a Comment