Hedding : Regarding submitting information of students pending in the SATS software in EXCEL SHEET for the year 2025-26...
2025-26 ನೇ ಸಾಲಿನಲ್ಲಿ SATS ತಂತ್ರಾಂಶದಲ್ಲಿ ಬಾಕಿಯಿರುವ ವಿದ್ಯಾರ್ಥಿಗಳ ಮಾಹಿತಿಯನ್ನು EXCEL SHEET ನಲ್ಲಿ ಸಲ್ಲಿಸುವ ಕುರಿತು...
👇👇👇👇👇👇👇👇
ದಿನಾಂಕ: 24.09.2025 ರಂದು ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ರವರು ನಡೆಸಿದ ಪ್ರಗತಿ ಪರಿಶೀಲನ ಸಭೆಯಲ್ಲಿ ನಿರ್ದೇಶಿಸಿದಂತೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2025-26 ನೇ ಸಾಲಿನಲ್ಲಿ SATS ತಂತ್ರಾಂಶವನ್ನು FREEZE ಮಾಡಿರುವುದರಿಂದ 35 ಜಿಲ್ಲೆಗಳಲ್ಲಿ 85270 ಮಕ್ಕಳ ಮಾಹಿತಿಯನ್ನು ಇಂದೀಕರಿಸಿರುವುದಿಲ್ಲ ಎಂಬುದಾಗಿ ಜಿಲ್ಲೆಗಳಿಂದ ಬಂದ ದೂರಿನ್ವಯ ಜಿಲ್ಲಾವಾರು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಾಕಿಯಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆಯುವಂತೆ ಮಾನ್ಯ ಆಯುಕ್ತರು ಸಭೆಯಲ್ಲಿ ತಿಳಿಸಿರುತ್ತಾರೆ. ಜಿಲ್ಲೆಗಳಲ್ಲಿ ಬಾಕಿಯಿರುವ ಮಕ್ಕಳ SATS ದಾಖಲಾತಿಯನ್ನು ಇಂದೀಕರಿಸದಿದ್ದರೆ ನಿಖರವಾದ ದಾಸ್ತಾನು ಮಾಹಿತಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಜಿಲ್ಲೆಗಳಿಂದ ಬಂದ ಮನವಿಯನ್ನು ಸಹ ಮಾನ್ಯರ ಗಮನಕ್ಕೆ ತರಲಾಯಿತು. ಮಕ್ಕಳ ಮಾಹಿತಿಯನ್ನು SATSನಲ್ಲಿ ಇಂದೀಕರಿಸಬೇಕಾದಲ್ಲಿ UNFREEZE ಮಾಡಬೇಕಾದರೆ ತಮ್ಮ ಜಿಲ್ಲೆಯಲ್ಲಿ ಬಾಕಿಯಿರುವ ಮಕ್ಕಳ ಮಾಹಿತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಶಾಲೆಗಳಿಂದ ಅಂಗ್ಲ ಭಾಷೆಯಲ್ಲಿ ಭರ್ತಿ ಮಾಡಿದ ಮಾಹಿತಿಯನ್ನು ದಿನಾಂಕ: 10.10.2025 ರೊಳಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಾಹಿತಿಯನ್ನು ಮಾತ್ರ ಸಲ್ಲಿಸುವುದು.
ಜಿಲ್ಲಾವಾರು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಾಕಿಯಿರುವ ಮಕ್ಕಳ ಸಂಖ್ಯೆಯನ್ನು SATS ತಂತ್ರಾಂಶದಿಂದ ಪಡೆದು ಈ ಪತ್ರದೊಂದಿಗೆ ಲಗತ್ತಿಸಿದೆ. ಈ ಸಂಖ್ಯೆಗೆ ತಾಳೆಯಾಗುವಂತೆ ಮಕ್ಕಳ ಮಾಹಿತಿಯನ್ನು ಯಾವುದೆ ಕಲಂ ಖಾಲಿ ಬಿಡದಂತೆ ಭರ್ತಿಮಾಡಿ ನಿಗಧಿತ ನಮೂನೆಯನ್ನು ದೃಢೀಕರಿಸಿ ಮೇಲಿನ ದಿನಾಂಕದೊಳಗೆ ಸಲ್ಲಿಸುವುದು. ತಾವು ನಿಖರವಾದ ಮಾಹಿತಿ ನೀಡಿದಲ್ಲಿ ಮಾತ್ರ ಮಾನ್ಯ ಆಯುಕ್ತರಿಂದ UNFREEZE ಮಾಡಲು ಅನುಮೋದನೆ ಪಡೆಯಲಾಗುವುದು.
CLICK HERE TO DOWNLOAD THE PDF FILE 🗄️🗃️🗃️🗃️...

No comments:
Post a Comment