KSPSTA

RECENT INFORMATIONS

Search This Blog

Friday, August 8, 2025

Regarding the identification and realignment of necessary/additional posts in government primary schools in the state for the year 2024-25...

  Wisdom News       Friday, August 8, 2025

 Hedding : Regarding the identification and realignment of necessary/additional posts in government primary schools in the state for the year 2024-25...



2024-25ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅವಶ್ಯಕ/ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ ಮರುಹೊಂದಾಣಿಕೆ ಮಾಡುವ ಕುರಿತು ಉಲ್ಲೇಖ(2)ರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020ರ ನಿಯಮ(4) ರಂತೆ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ಪ್ರಕ್ರಿಯೆ ಪರ್ಯಾಯ ವರ್ಷಗಳಲ್ಲಿ ಮಂಜೂರಾದ ಹುದ್ದೆಗಳು ಮತ್ತು ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ರಾಜ್ಯ ಸರ್ಕಾರ ಕಾಲ-ಕಾಲಕ್ಕೆ ನಿಗದಿಪಡಿಸಿದ ಮಕ್ಕಳ-ಶಿಕ್ಷಕರ ಅನುಪಾತದ ಆಧಾರದ ಮೇಲೆ ಸಮರ್ಪಕವಾಗಿ ಮರುಹಂಚಿಕೆ ಮಾಡಲು ಸೂಚಿಸಿಸಲಾಗಿರುತ್ತದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಕಲಿಕೆ ಸಾಧಿಸುವ ನಿಟ್ಟಿನಲ್ಲಿ ಹೆಚ್ಚುವರಿ ಇರುವ ಶಿಕ್ಷಕರ ಹುದ್ದೆಗಳನ್ನು ಗುರುತಿಸಿ ಶಿಕ್ಷಕರ ಕೊರತೆಯಿರುವ/ಅವಶ್ಯಕತೆ ಇರುವ ಶಾಲೆಗಳಿಗೆ ಸಿಬ್ಬಂದಿ ಸ್ತರ ವಿನ್ಯಾಸಕ್ಕೆ ಅನುಗುಣವಾಗಿ ಶಿಕ್ಷಕರ ಹುದ್ದೆಗಳನ್ನು ಮರುಹೊಂದಾಣಿಕೆ ಮಾಡಬೇಕಾಗುತ್ತದೆ.


ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) ನಿಯಮಗಳು 1967ರಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದವನ್ನು ನಿಗದಿಪಡಿಸಿದೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ (ಎನ್.ಸಿ.ಟಿ.ಇ) ಅಧಿಸೂಚನೆಗಳನ್ವಯ 1 ರಿಂದ 5ನೇ ತರಗತಿಗಳಿಗೆ ನೇಮಿಸಬೇಕಾದ ಶಿಕ್ಷಕರು ಮತ್ತು 6 ರಿಂದ 8ನೇ ತರಗತಿಗಳಿಗೆ ನೇಮಿಸಬೇಕಾದ ಶಿಕ್ಷಕರುಗಳ ವಿದ್ಯಾರ್ಹತೆಗಳನ್ನು ನಿಗದಿಪಡಿಸಿದೆ. ಈ ಅಧಿಸೂಚನೆಯನ್ನು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಅಧಿನಿಯಮ-2009 (ಆರ್.ಟಿ.ಇ ಅಧಿನಿಯಮ)ದ ಸೆಕ್ಷನ್-23ರ ಉಪಸೆಕ್ಷನ್ (1), ಎನ್.ಸಿ.ಟಿ.ಇ ಅಧಿನಿಯಮ 1993ರ ಸೆಕ್ಷನ್-32ರ ಉಪಸೆಕ್ಷನ್ (2)ರ ಕ್ಲಾಸ್ (ಡಿಡಿ) ಯೊಂದಿಗೆ ಸೆಕ್ಷನ್-12 ಓದಿಕೊಂಡಂತೆ ಮತ್ತು ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಸೂಚನೆ ಸಂಖ್ಯೆ: ಎಸ್‌ಒ 750(ಇ) ದಿನಾಂಕ: 31/03/2010ರನ್ವಯ ಹೊರಡಿಸಲಾಗಿದೆ. ಆರ್.ಟಿ.ಇ ಅಧಿನಿಯಮ-2009 ಮತ್ತು ಎನ್.ಸಿ.ಟಿ.ಇ ಅಧಿನಿಯಮ 1993ರ ಅವಕಾಶಗಳನ್ವಯ ಎಲ್ಲಾ ಪ್ರಾಥಮಿಕ ಶಾಲೆಗಳ ನೇಮಕಾತಿಗಳಲ್ಲಿ ಎನ್.ಸಿ.ಟಿ.ಇ ನಿಗದಿಪಡಿಸಿದ ವಿದ್ಯಾರ್ಹತೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.



ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು. 2001ರಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರು/ಶಿಕ್ಷಕಿಯರೆಂದು ಬದಲಾಯಿಸಿ ಕನ್ನಡ, ವಿಜ್ಞಾನ, ಇಂಗ್ಲೀಷ್ ಮತ್ತು ಹಿಂದಿ ವಿಷಯಗಳಿಗೆ ನಾಲ್ಕು ವರ್ಗಗಳನ್ನು ಸೃಜಿಸಲಾಗಿದೆ.


ಉಲ್ಲೇಖ-5ರ ಸರ್ಕಾರದ ಆದೇಶ ದಿನಾಂಕ: 07/09/2020 ರಲ್ಲಿ ಪ್ರಾಥಮಿಕ ಶಾಲೆಗಳ 6-8ನೇ ತರಗತಿಗೆ ಅನ್ವಯವಾಗುವಂತೆ ಮೂಲ ಹುದ್ದೆಗಳಲ್ಲಿ(ವಿಜ್ಞಾನ-ಗಣಿತ) ವೃಂದಕ್ಕೆ ಮಂಜೂರಾಗಿರುವ ಹುದ್ದೆಗಳ ಸಂಖ್ಯೆಯೊಳಗೆ ಅವಶ್ಯಕತೆಗೆ ಅನುಗುಣವಾಗಿ ಯಾವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ವಿಜ್ಞಾನ-ಗಣಿತ ವೃಂದದ 2ನೇ ಹುದ್ದೆ ಮಂಜೂರು ಮಾಡಲು ಅವಕಾಶವಿದೆಯೋ ಅಂತಹ 2ನೇ ಹುದ್ದೆಯನ್ನು ಮರುಪದನಾಮೀಕರಣಗೊಳಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು(6-8ನೇ ತರಗತಿ) ಜೀವ-ವಿಜ್ಞಾನ ಎಂಬ ನಾಮಾಂಕನ ಹುದ್ದೆಯನ್ನು ಪದನಾಮೀಕರಿಸಿ ಮಂಜೂರಿಸಿದೆ.


2024-25ನೇ ಸಾಲಿನ ಹೆಚ್ಚುವರಿ ಹುದ್ದೆಗಳನ್ನು ಮರು ಹೊಂದಾಣಿಕೆ ಪ್ರಕ್ರಿಯೆ ಕೈಗೊಳ್ಳಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಉಲ್ಲೇಖ-4ರ ಸರ್ಕಾರದ ಆದೇಶದಲ್ಲಿ ಜಿಲ್ಲಾ ಹಂತದಲ್ಲಿ ಮಂಜೂರಿಸಿದ ಹುದ್ದೆಗಳನ್ನು ಸಂದರ್ಭಾನುಸಾರ ಪರಿಷ್ಕರಿಸಲು ಆಯುಕ್ತರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದಂತೆ ಈ ಕೆಳಕಂಡ ಆದೇಶ.


ಆದೇಶ :


ಉಲ್ಲೇಖ-4ರ ದಿನಾಂಕ: 29/08/2022ರ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ವೃಂದಬಲವಾರು ಹುದ್ದೆಗಳಲ್ಲಿ ವ್ಯತ್ಯಾಸವಾದ ಕಾರಣ ಮೂಲ ಮಂಜೂರಾತಿಯ ಒಟ್ಟು 188532 ಹುದ್ದೆಯ ಸಂಖ್ಯೆಯ ಮಿತಿಗೊಳಪಟ್ಟು ದಿನಾಂಕ: 31/12/2024ರಲ್ಲಿ ಸ್ಯಾಟ್ಸ್ ತಂತ್ರಾಂಶದಲ್ಲಿದ್ದ ಮಕ್ಕಳ ದಾಖಲಾತಿಗೆ ಅನುಗುಣವಾಗಿ ಪಿ.ಟಿ.ಆರ್‌ನಂತೆ ಲೆಕ್ಕಾಚಾರ ಮಾಡಿದ್ದು, 2024-25ನೇ ಸಾಲಿಗೆ ಕೆಳಕಂಡಂತೆ ವೃಂದಬಲವನ್ನು ಪರಿಷ್ಕರಿಸಿ, ಒಟ್ಟಾರೆ ಮಂಜೂರಾದ ಹುದ್ದೆಗಳ ಸಂಖ್ಯೆಗೆ ಮೀರದಂತೆ ಮಂಜೂರಿಸಿ ನಿಗದಿಪಡಿಸಿದೆ.




Click Here to Download


logoblog

Thanks for reading Regarding the identification and realignment of necessary/additional posts in government primary schools in the state for the year 2024-25...

Previous
« Prev Post

No comments:

Post a Comment