Hedding : Answer to the question asked in the session regarding Hindi subject and Hindi teachers 11-08-2025...
🔖ಪ್ರಶ್ನೆ : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಯಾವ ತರಗತಿಯಿಂದ ಹಿಂದಿಯನ್ನು ಬೋಧಿಸಲಾಗುತ್ತಿದೆ
🏷️ಉತ್ತರ ;ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 6 ನೇ ತರಗತಿಯಿಂದ ಹಿಂದಿಯನ್ನು ಬೋಧಿಸಲಾಗುತ್ತಿದೆ.
🔖ಪ್ರಶ್ನೆ : ರಾಜ್ಯದಲ್ಲಿ ಎಷ್ಟು ಪ್ರಾಥಮಿಕ ಶಾಲೆಗಳಲ್ಲಿ ಹಿಂದಿ (PST )ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ: ಸದರಿ ಶಿಕ್ಷಕರು ಯಾವ ವಿಷಯವನ್ನು ಬೋಧಿಸುತ್ತಿದ್ದಾರೆ: | (ಜಿಲ್ಲಾವಾರು ವಿವರ ನೀಡುವುದು.
🏷️ಉತ್ತರ : ರಾಜ್ಯದ 2865 ಪ್ರಾಥಮಿಕ ಶಾಲೆಗಳಲ್ಲಿ ಹಿಂದಿ ಪಿಎಸ್‌ಟಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಪಟ್ಟಿಯನ್ನು ಅನುಬಂಧದಲ್ಲಿರಿಸಿದೆ. ಜಿಲ್ಲಾವಾರು
2. ಕರ್ನಾಟಕ ಶಿಕ್ಷಣ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ)(ತಿದ್ದುಪಡಿ) ನಿಯಮಗಳು-2001 ರನ್ವಯ ಸಾಮಾನ್ಯ ವಿಜ್ಞಾನ ಆಂಗ್ಲ ಮತ್ತು ಹಿಂದಿ ವಿಷಯಗಳಿಗೆ ನೇಮಕಾತಿ ಮಾಡಿಕೊಂಡಿರುವ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ.
🔖ಪಶ್ನೆ : ಎನ್‌ಸಿಟಿಇ (NCTE) ನಿಯಮಗಳ ಪ್ರಕಾರ 6 ರಿಂದ 8ನೆಯ ತರಗತಿಯ ವಿದ್ಯಾರ್ಥಿಗಳಿಗೆ ಪಿಎಸ್‌ಟಿ ಶಿಕ್ಷಕರು | ಬೋಧಿಸಬಹುದೇ. ಇಲ್ಲವಾದಲ್ಲಿ ಇದಕ್ಕೆ ಕಾರಣಗಳೇನು
🏷️ಉತ್ತರ : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಗಳಿಗೆ ಹಿಂದಿ ಭಾಷೆ ಇರುವುದಿಲ್ಲವಾದ್ದರಿಂದ ಈ ಹಿಂದೆ ಪಿ.ಯು.ಸಿ ಮತ್ತು ಟಿ.ಸಿ.ಹೆಚ್/ಡಿ.ಇಡಿ ವಿದ್ಯಾರ್ಹತೆ ಆಧಾರದ ಮೇಲೆ ನೇಮಕಗೊಂಡ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳುವ ಮೂಲಕ ಹಿಂದಿ ಭಾಷೆಯನ್ನು ಬೋಧಿಸಲು ಕ್ರಮವಹಿಸಲಾಗಿದೆ.
ನಿಯಮಗಳಂತೆ ಶಾಲೆಯಲ್ಲಿ ಕಾರ್ಯಭಾರದ ಜೊತೆಗೆ ಯಾವುದೇ ಶಿಕ್ಷಕರ ಸೇವೆಯನ್ನು ಶಾಲೆಯ ಶೈಕ್ಷಣಿಕ ಹಿತದೃಷ್ಟಿಯಿಂದ ಬಳಸಿಕೊಳ್ಳಲು ಅವಕಾಶವಿರುತ್ತದೆ.
🔖ಪ್ರಶ್ನೆ : ಹಿಂದಿ ಟಿಸಿಎಚ್/ಡಿಎಡ್ TCH / D.ED ಆಗಿರುವ ಕಾರಣ PST ಶಿಕ್ಷಕರು ಅವರನ್ನು ಕನ್ನಡ ಶಿಕ್ಷಕರು ಎಂದು ಪರಿಗಣಿಸಲು ಅವಕಾಶವಿದೆಯೇ ಪರಿಗಣಿಸಲು ಸಾಧ್ಯವಿಲ್ಲದೆ ಇದ್ದಲ್ಲಿ ಯಾವ ನಿಯಮಗಳಡಿಯಲ್ಲಿ ಪರಿಗಣಿಸಲು ಸಾಧ್ಯವಿರುವುದಿಲ್ಲ? (ಆದೇಶ, ಸುತ್ತೋಲೆಯ ಪ್ರತಿಯನ್ನು ನೀಡುವುದು)
🏷️ಉತ್ತರ : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಗಳಿಗೆ ಹಿಂದಿ ಭಾಷೆ ಇರುವುದಿಲ್ಲವಾದ್ದರಿಂದ ಈ ಹಿಂದೆ ಪಿ.ಯು.ಸಿ ಮತ್ತು ಟಿ.ಸಿ.ಹೆಚ್/ಡಿ.ಇಡಿ ವಿದ್ಯಾರ್ಹತೆ ಆಧಾರದ ಮೇಲೆ ನೇಮಕಗೊಂಡಿದ್ದ ಹಿಂದಿ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರನ್ನು (ಪಿಎಸ್‌ಟಿ) (1 ರಿಂದ 5) ನೇ | ತರಗತಿ ವೃಂದದಲ್ಲಿ ವಿಲೀನಗೊಳಿಸಲಾಗಿದೆ.
ಹಿಂದಿ ವಿಷಯ ಹಾಗೂ ಹಿಂದಿ ಶಿಕ್ಷಕರ ಕುರಿತು ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ...
No comments:
Post a Comment