KSPSTA

RECENT INFORMATIONS

Search This Blog

Wednesday, August 20, 2025

All payroll officers are expected to attend training on how to incorporate complete employee service information and salary deductions in the HRMS-2.0 project...

  KSPSTA       Wednesday, August 20, 2025

 

Hedding : All payroll officers are expected to attend training on how to incorporate complete employee service information and salary deductions in the HRMS-2.0 project...


ಹೆಚ್.ಆರ್.ಎಂ.ಎಸ್.-2.0 ಯೋಜನೆಯಲ್ಲಿ ನೌಕರರ ಸಂಪೂರ್ಣ ಸೇವಾ ಮಾಹಿತಿಗಳನ್ನು ಅಳವಡಿಸಿಕೊಳ್ಳುವ ಹಾಗೂ ವೇತನ ಸೆಳೆಯುವ ಕುರಿತು ನೀಡುವ ತರಬೇತಿಗೆ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಹಾಜರಾಗುವ ಬಗ್ಗೆ,,




ಉಲ್ಲೇಖ: ಯೋಜನಾ ನಿರ್ದೇಶಕರು, ಹೆಚ್.ಆರ್.ಎಂಎಸ್.-2.0. ಹೆಚ್.ಆರ್.ಎಂ.ಎಸ್.




ಕೇಂದ್ರ ಘಟಕ, ಬೆಂಗಳೂರು ಈ ಮೇಲ್ ದಿನಾಂಕ:20/08/2025.




ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದನ್ವಯ ಹೆಚ್.ಆರ್.ಎಂ.ಎಸ್. 1.0 ತಂತ್ರಾಂಶವನ್ನು ಹೆಚ್.ಆರ್.ಎಂ.ಎಸ್-2.0 ಯೋಜನೆಗೆ ಉನ್ನತೀಕರಿಸಲಾಗುತ್ತಿದ್ದು ಈ ಸಂಬಂಧ ದಿನಾಂಕ:22/08/2025 ರಿಂದ ದಿನಾಂಕ:03/09/2025ರವರೆಗೆ ಬೆಳಿಗ್ಗೆ 11.30 ರಿಂದ 01.30ರವರೆಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವ ಪ್ರಯುಕ್ತ ರಾಜ್ಯದ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ವಿಷಯ ನಿರ್ವಾಹಕರುಗಳು ಕಡ್ಡಾಯವಾಗಿ ತರಬೇತಿ ಪಡೆದುಕೊಳ್ಳುವುದು. ತರಬೇತಿಗೆ ಪೂರ್ವಭಾವಿಯಾಗಿ ಈ ಹಿಂದೆ ಸುತ್ತೋಲೆಗಳಲ್ಲಿ ಹಾಗೂ ತರಬೇತಿಗಳಲ್ಲಿ ತಿಳಿಸಿದಂತೆ ಹೆಚ್.ಆರ್.ಎಂ.ಎಸ್. 1.0 ನಲ್ಲಿ ನೌಕರರ ಸೇವಾ ಮಾಹಿತಿಗಳು, ಪಡೆಯುತ್ತಿರುವ ಭತ್ಯೆಗಳು, ಕಟಾವಣೆಗಳು, ಮುಂಗಡಗಳು ಇತ್ಯಾದಿ ಮಾಹಿತಿಗಳನ್ನು ತುರ್ತಾಗಿ ಪರಿಶೀಲಿಸಿಕೊಂಡು ಡಿ.ಡಿ.ಓ. ಹಂತದಲ್ಲಿ ನವೀಕರಿಸಿಕೊಳ್ಳುವುದು(Update ಮಾಡಿಕೊಳ್ಳುವುದು).




ರಾಜ್ಯದ ಎಲ್ಲಾ ಉಪನಿರ್ದೇಶಕರುಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಅಧೀನದಲ್ಲಿರುವ ವೇತನ ಬಟವಾಡೆ ಅಧಿಕಾರಿಗಳು ಹಾಗೂ ವಿಷಯ ನಿರ್ವಾಹಕರುಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗುವಂತೆ ಕ್ರಮವಹಿಸುವುದು. ತರಬೇತಿ ಲಿಂಕ್‌ನ್ನು ವೈಯಕ್ತಿಕವಾಗಿ ಲಾಗಿನ್ ಆಗುವುದರಿಂದ ಬೇರೆ ಡಿಡಿಓಗಳಿಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ ಆದ್ದರಿಂದ ತಾಲ್ಲೂಕಿನ ಎಲ್ಲಾ ವೇತನ ಬಟವಾಡ ಅಧಿಕಾರಿಗಳು ಒಂದೇ ಕಡೆ ಕಡ್ಡಾಯವಾಗಿ ಹಾಜರಾಗಿ ತರಬೇತಿ ಪಡೆಯುವಂತೆ ಕ್ರಮವಹಿಸುವುದು.















CLICK HERE TO DOWNLOAD THE PDF FILE 🗄️🗃️🗃️🗃️




logoblog

Thanks for reading All payroll officers are expected to attend training on how to incorporate complete employee service information and salary deductions in the HRMS-2.0 project...

Previous
« Prev Post

No comments:

Post a Comment