FAQs About LESSON Based Assessment 2025
*💐📘 ಎಲ್‌ಬಿಎ ಕುರಿತು ಶಿಕ್ಷಕರ ಕೆಲವೊಂದು ಗೊಂದಲದ ಪ್ರಶ್ನೆಗಳಿಗೆ DSERT ಸಹಾಯಕ ನಿರ್ದೇಶಕರಾದ ರಾಧಾ ಮೇಡಂ ರವರು ಇಂದಿನ VEBINAR ನಲ್ಲಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ ಅವುಗಳಲ್ಲಿ ಮುಖ್ಯವಾದವುಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.*💐
*1. ಮರು ಸಿಂಚನ ಕಾರ್ಯಕ್ರಮದ ಪ್ರಶ್ನೆಗಳನ್ನ ಬಳಸೋದು ಹೇಗೆ?*
ಇದು ಎಲ್ಲಾ ಮಾಧ್ಯಮಗಳಿಗೂ ಅನ್ವಯಿಸುವುದಿಲ್ಲ ಆರರಿಂದ ಹತ್ತನೇ ತರಗತಿಯ ಹಿಂದಿ ವಿಷಯವನ್ನು ಹೊರತುಪಡಿಸಿ ಉಳಿದ ವಿಷಯಗಳಿಗೆ ಅದು selected ಜಿಲ್ಲೆಗಳಿಗೆ ಮಾತ್ರ. ಯಾವ ಜಿಲ್ಲೆಗಳಿಗೆ ಇದು ಅನ್ವಯಿಸುತ್ತೋ ಅವರು ಮಾತ್ರ LBA 20 ಮರು ಸಿಂಚನ 5 ಅಂಕಗಳಿಗೆ ಘಟಕ ಪರೀಕ್ಷೆ ನಡೆಸುವುದು. ಮುಂದಿನ ದಿನಗಳಲ್ಲಿ ಇದು ಬದಲಾವಣೆಗೆ ಒಳಪಡುತ್ತದೆ
*2. ರೂಪಣಾತ್ಮಕ ಮೌಲ್ಯಾಂಕನ ಮತ್ತು ಸಂಕಲನಾತ್ಮಕ ಮೌಲ್ಯಾಂಕನಗಳನ್ನ ಮಾಡುವ ಅವಶ್ಯಕತೆ ಇದೆಯೇ?*
ಸುಮಾರು ಜನ LBA ಇದನ್ನ REPLACE ಮಾಡುತ್ತೆ ಅಂತ ಹೇಳಿ ಅಪಪ್ರಚಾರ ಮಾಡ್ತಾ ಇದ್ದಾರೆ. ಇಲಾಖೆಯ ಅಧಿಕೃತ ಸುತ್ತೋಲೆಗಳನ್ನು ಓದಿ ಅರ್ಥೈಸಿಕೊಂಡು ಅವುಗಳನ್ನು ಫಾಲೋ ಮಾಡಿ, ಯಾವುದೋ ವಿಡಿಯೋಗಳನ್ನು ಫಾಲೋ ಮಾಡಿ ಅದನ್ನೇ ಸರಿ ಎಂದುಕೊಳ್ಳುವುದು ಸಮಂಜಸವಲ್ಲ.
ರೂಪಣಾತ್ಮಕ ಮೌಲ್ಯಂಕನ ಮತ್ತು ಸಂಕಲನಾತ್ಮಕ ಮೌಲ್ಯಾಂಕನಗಳು ಈ ಹಿಂದೆ ಹೇಗೆ ನಡೆಯುತ್ತಿದ್ದವೋ ಅದೇ ರೀತಿ ನಡೆಯುತ್ತದೆ ಎಂಬುದನ್ನು ಎಲ್ಲಾ ಶಿಕ್ಷಕರು ಅರ್ಥಮಾಡಿಕೊಳ್ಳಬೇಕು. ಇವೆರಡನ್ನು ಬೇರೆ ಬೇರೆಯಾಗಿಯೇ ನೋಡಬೇಕೇ ಹೊರತು ಪಾಠದಾರಿತ ಮೌಲ್ಯಾಂಕವನ್ನು ರೂಪಣಾತ್ಮಕ ಮೌಲ್ಯಾಂಕನದ ಜೊತೆ ಸಂಬಂಧಿಕರಿಸುವ ಹಾಗೆ ಇಲ್ಲ. ಆದರೆ ಹಿಂದೆ ರೂಪಣಾತ್ಮಕ ಮೌಲ್ಯಾಂಕನ ಮಾಡುವಾಗ ಯೋಜನೆಗಳು ಚಟುವಟಿಕೆಗಳು ಗೃಹ ಪಾಠಗಳು ಲಿಖಿತ ಮತ್ತು ಮೌಖಿಕ ಚಟುವಟಿಕೆಗಳು ಇವುಗಳ ಆಧಾರದ ಮೇಲೆ ರೂಪಣಾತ್ಮಕ ಮೌಲ್ಯಾಂಕನ ಮಾಡುತ್ತಿದ್ದೆವು ಈಗ ಇದರ ಜೊತೆಗೆ ಪಾಠ ಆಧಾರಿತ ಮೌಲ್ಯಾಂಕನವನ್ನು ಸೇರಿಸಿಕೊಂಡು ರೂಪಣಾತ್ಮಕ ಮೌಲ್ಯಾಂಕನವನ್ನು ಮಾಡಬೇಕಾಗಿರುತ್ತದೆ.
*3. ಪ್ರತಿ ಘಟಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸಲು ಟೇಬಲ್ ರೂಪದಲ್ಲಿ ಬ್ಲೂಪ್ರಿಂಟ್ ತಯಾರಿಸಬೇಕೆ?*
ಪ್ರತಿ ಘಟಕ ಪರೀಕ್ಷೆಗೆ ಬ್ಲೂ ಪ್ರಿಂಟ್ ಹಾಕುವ ಅಗತ್ಯವಿಲ್ಲ. ಆದರೆ ಬ್ಲೂಪ್ರಿಂಟ್ ತಯಾರಿಸಿಕೊಂಡು ಪ್ರಶ್ನೆ ಪತ್ರಿಕೆಗಳನ್ನು ರಚಿಸುವುದು ಉತ್ತಮ ವಿಧಾನ. ಶಿಕ್ಷಣ ಇಲಾಖೆಯ ಪ್ರತಿ ಘಟಕ ಪರೀಕ್ಷೆಗೆ ಬ್ಲೂಪ್ರಿಂಟ್ ಮಾಡಲೇಬೇಕು ಎಂದು ಹೇಳಿರುವುದಿಲ್ಲ ಆದ್ದರಿಂದ ಪ್ರತಿ ಘಟಕ ಪರೀಕ್ಷೆಗೆ ಬ್ಲೂಪ್ರಿಂಟ್ ಹಾಕುವ ಅಗತ್ಯವಿರುವುದಿಲ್ಲ.
*4. ಎಲ್‌ಬಿಎ ಅಂಕಗಳನ್ನು ಎಸ್‌ಎಸ್‌ಎಲ್‌ಸಿ ಆಂತರಿಕ ಮೌಲ್ಯಾಂಕನದಲ್ಲಿ* *ಪರಿಗಣಿಸುತ್ತಾರಾ?*
ಹೌದು. LBA ಅಂಕಗಳು ಎಸ್‌ಎಸ್‌ಎಲ್‌ಸಿ ಆಂತರಿಕ ಮೌಲ್ಯಾಂಕನದಲ್ಲಿ ಪರಿಗಣಿಸಲ್ಪಡುತ್ತವೆ.
*5. LBA ಪರೀಕ್ಷೆಯಲ್ಲಿ ವಿದ್ಯಾರ್ಥಿ ಗೈರುಹಾಜರಾದರೆ ಹೇಗೆ ಲೆಕ್ಕಿಸಬೇಕು?*
ಗೈರುಹಾಜರಾದರೆ “Absent” ಎಂದು ನಮೂದಿಸಬೇಕು. ಆ ಡೇಟಾವನ್ನು ಎಸ್‌ಎಸ್‌ಟಿಎಸ್ ನಲ್ಲಿಯೂ FETCH ಆಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
*6. ಎಲ್‌ಬಿಎ ಯಾವ ಶಾಲೆಗಳಿಗೆ ಅನ್ವಯಿಸುತ್ತದೆ?*
ಕರ್ನಾಟಕ ರಾಜ್ಯ ಪಠ್ಯಕ್ರಮವಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಅನ್ವಯಿಸುತ್ತದೆ. ಸಿಬಿಎಸ್ಸಿ/ಐಸಿಎಸ್ಸಿ ಶಾಲೆಗಳಿಗೆ ಅಲ್ಲ.
*7. ಲೆಸನ್ ಪ್ಲಾನ್ ಮತ್ತು ಎಲ್‌ಬಿಎವನ್ನು ಎಸ್‌ಎಸ್‌ಟಿಎಸ್‌ನಲ್ಲಿ ದಾಖಲಿಸುವುದು ಶಿಕ್ಷಕರಿಗೆ ಹೊರೆ ಎನಿಸುತ್ತದೆಯೆ?*
ಇಲ್ಲ. ಇದು ಟೀಚರ್ ಫ್ರೆಂಡ್ಲಿ ಆಗಿದೆ. ಈ ವ್ಯವಸ್ಥೆಯಿಂದ ಡ್ಯಾಶ್‌ಬೋರ್ಡ್‌ಗಳಲ್ಲಿ ಮಕ್ಕಳ ಕಲಿಕೆ ಸುಲಭವಾಗಿ ವಿಶ್ಲೇಷಿಸಬಹುದು.
*8. ಎಲ್‌ಬಿಎ ಅಂಕಗಳನ್ನು ವಿಭಾಗವಾರು ದಾಖಲಿಸಲು ಅವಕಾಶ ಇದೆಯೆ?*
ಈಗ ನೀಡಲಾಗಿದೆ. ಪಾಠಶಾಲೆಗಳಲ್ಲಿ ವಿಭಾಗಗಳ ಸಂಖ್ಯೆ ಹೆಚ್ಚಿರುವ ಕಾರಣದಿಂದಾಗಿ ವಿಭಾಗವಾರು ದಾಖಲೆ ಸಾಧ್ಯವಾಗಿದೆ.
*9. ನಲಿಕಲಿ ತರಗತಿಗಳಿಗೆ ಎಲ್‌ಬಿಎ ಅನ್ವಯಿಸುತ್ತದೆವೆ?*
ಇಲ್ಲ. ಈ ವಿಷಯ ಈಗ ಚರ್ಚೆ ಹಂತದಲ್ಲಿದೆ. ನಲಿಕಲಿ ಶಿಕ್ಷಕರ ಅಭಿಪ್ರಾಯದ ಆಧಾರದ ಮೇಲೆ ಮುಂದಿನ ನಿರ್ಧಾರ ತಗೆದುಕೊಳ್ಳಲಾಗುವುದು.
*10. ಪಾಠಾಧಾರಿತ ಮೌಲ್ಯಾಂಕನದ (25 ಅಂಕ) ಪ್ರಶ್ನೆ ಪತ್ರಿಕೆಗೆ ಬದಲಾವಣೆ ಮಾಡಬಹುದೆ?*
ಹೌದು. ಲಿಖಿತ/ಮೌಖಿಕ/ಚರ್ಚಾ ಹಂತಗಳಲ್ಲಿ ಒಂದನ್ನೇ ಅಥವಾ ಮಿಶ್ರವಾಗಿ ಅಳವಡಿಸಬಹುದು. ರಶ್ಮಿ ಮೇಡಂ ಈ ಪ್ರಸ್ತಾವನೆಗೆ ಒಪ್ಪಿದ್ದಾರೆ. ಅಧಿಕೃತ ಆದೇಶ ನಾಳೆ ನಿಖರವಾಗಿ ಹೊರಬೀಳಲಿದೆ.
*11. ಇಂಗ್ಲೀಷ್ ವಿಷಯದಲ್ಲಿ prose ಜೊತೆ Poem ಸೇರಿಸಿ ಒಂದು unit ಮಾಡಲು ಸಾಧ್ಯವೇ?*
ಇಲ್ಲ. ಪಾಠ ಮತ್ತು ಕವನವನ್ನ ಪ್ರತ್ಯೇಕವಾಗಿ ಕಾಣಬೇಕು. ಕವನದ ಕಲಿಕೆ ವಿಭಿನ್ನವಾಗಿದೆ, ಅದನ್ನು ಹಾಡುವ ಪ್ರಕ್ರಿಯೆಯೂ ಬೇರೆ ಆಗಿರುವುದರಿಂದ ಬೆರೆಸಬಾರದು.
*12. Social science ಪಾಠಗಳ ಸಂಖ್ಯೆಯಲ್ಲಿ ಕಡಿತ ಸಾಧ್ಯವೇ?*
ಹೌದು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಾಠಗಳ ಸಂಖ್ಯೆಯನ್ನು ಕಡಿತಗೊಳಿಸಲು ಇಲಾಖೆಯು ನಿರ್ಧಾರ ತೆಗೆದುಕೊಳ್ಳಬಹುದು. ಈ ಬಗ್ಗೆ ಅಧ್ಯಯನ ನಡೆಸಲಾಗಿದೆ.
*13. ಪ್ರತಿ ಘಟಕ ಪರೀಕ್ಷೆಗಳನ್ನು ನಿರ್ವಹಣೆ ಮಾಡಿದ ನಂತರ ಇದಕ್ಕೆ ಸಂಬಂಧಿಸಿದಂತೆ ಶಿಕ್ಷಕರ ವೈಯಕ್ತಿಕ ಅಂಕವಹಿ ಕ್ರೂಡಿಕೃತ ಅಂಕವಹಿ ಇತ್ಯಾದಿ ದಾಖಲೆಗಳನ್ನು ಇಡುವ ಅವಶ್ಯಕತೆ ಇದೆಯೇ?*
ಯಾವುದೇ ದಾಖಲೆಗಳನ್ನು ಇಡುವ ಅವಶ್ಯಕತೆ ಇರುವುದಿಲ್ಲ. ನಿಮಗೆ ಬೇಕಾದ ದಾಖಲೆಗಳನ್ನು SATS ನಲ್ಲಿ ಪ್ರಿಂಟ್ ರೂಪದಲ್ಲಿ ಪಡೆಯಲು ಅವಕಾಶವಿರುವುದರಿಂದ ವೈಯಕ್ತಿಕವಾಗಿ ದಾಖಲೆಗಳನ್ನು ಇಡುವ ಅವಶ್ಯಕತೆ ಇರುವುದಿಲ್ಲ.
*🙏ಧನ್ಯವಾದಗಳು🙏*
*💐*
No comments:
Post a Comment