Sunday, June 29, 2025

Primary Excess transfer Exemption claiming State List

  Dailyguru       Sunday, June 29, 2025
Teachers Eligible to Claim Exmeption/Priorities Under Rationalization

*Primary Excess transfer Exemption claiming list*

*State list*

*ಹೆಚ್ಚುವರಿ ವರ್ಗಾವಣೆ ಸಂಬಂಧಿಸಿದಂತೆ ಮಹತ್ವದ ಸೂಚನೆ*

*ಶಿಕ್ಷಕರ ಗಮನಕ್ಕೆ ತರಬಯಸುವುದೇನೆಂದರೆ*** *ಪ್ರಸ್ತುತ ಪ್ರಕಟಿಸಿರುವ ಹೆಚ್ಚುವರಿ ಶಿಕ್ಷಕರ* *ಪಟ್ಟಿಯಲ್ಲಿರುವ ಶಿಕ್ಷಕರು ತಮಗೆ ಯಾವುದಾದರೂ ವಿನಾಯಿತಿ* *ಅಥವಾ ಆದ್ಯತೆ ಇದ್ದಲ್ಲಿ ಸಮರ್ಥಿಸುವ ಅಗತ್ಯ ದಾಖಲೆಗಳನ್ನು ತಮ್ಮ EEDS ಲಾಗಿನ್* *ಮೂಲಕ ವಿನಾಯಿತಿ ಆದ್ಯತೆ ಕೋರಲು ಅರ್ಜಿ ಸಲ್ಲಿಸಬಹುದು.ಇದರಿಂದ ಹೆಚ್ಚುವರಿ* *ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ವಿನಾಯಿತಿ ಆದ್ಯತೆ /ಯನ್ನು ಪಡೆಯಬಹುದಾಗಿದೆ ಈ* *ಪ್ರಕ್ರಿಯೆಯನ್ನು ನಿಗದಿತ ದಿನಾಂಕದೊಳಗಡೆ ಅರ್ಜಿಯನ್ನು ಶಿಕ್ಷಕರು ಆನ್ಲೈನ್ ಮೂಲಕ ಸ್ಪಷ್ಟವಾಗಿ ಕಾಣುವಂತೆ ದಾಖಲೆಗಳನ್ನು* *ಅಪ್ಲೋಡ್ ಮಾಡುವುದು (ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು ಅಂತಹ ದಾಖಲೆಗಳನ್ನು* **ಮಾತ್ರ ವಿನಾಯಿತಿ/ ಆದ್ಯತೆ ಗೆ ಪರಿಗಣಿಸಲಾಗುವುದು)*
*ಒಂದು ಶಾಲೆಯಲ್ಲಿ ಒಂದು* *ಬೋಧನೆ ವಿಷಯಕ್ಕೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚು** *ಶಿಕ್ಷಕರನ್ನು ತಾತ್ಕಾಲಿಕವಾಗಿ* *ಗುರುತಿಸಲಾಗಿರುತ್ತದೆ ಇದರ ಉದ್ದೇಶ ಒಂದು ವೇಳೆ ಇಬ್ಬರು ಶಿಕ್ಷಕರಲ್ಲಿ ವಿನಾಯಿತಿಗೆ ಒಳಪಡುವ ಶಿಕ್ಷಕರಿದ್ದಲ್ಲಿ* *ಅಂತಹ ಶಿಕ್ಷಕರು ವಿನಾಯತಿಯನ್ನು ಪಡೆಯಲು ಅನುಕೂಲವಾಗಲು** *ಇಬ್ಬರು ಶಿಕ್ಷಕರ ಹೆಸರನ್ನು ಪಟ್ಟಿಯಲ್ಲಿ ಗುರುತಿಸಲಾಗಿರುತ್ತದೆ ಇದರಿಂದ ಶಿಕ್ಷಕರು ಆತಂಕ ಪಡುವ ಅವಶ್ಯಕತೆ* *ಇರುವುದಿಲ್ಲ. ಆದ್ದರಿಂದ ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಯಿಂದ ವಿನಾಯಿತಿ ಆದ್ಯತೆ ಪಡೆಯಲು ಇಚ್ಚಿಸಿದಲ್ಲಿ ತಮ್ಮ ಇಇಡಿಎಸ್ ಲಾಗಿನ್ ಮೂಲಕ ನಿಗದಿತ ದಿನಾಂಕದೊಳಗಡೆ ಅಗತ್ಯ* *ದಾಖಲೆಗಳನ್ನು ತಕ್ಷಣ ಪ್ರಾಧಿಕಾರದಿಂದ ಪಡೆದು ಸ್ಪಷ್ಟವಾಗಿ ಕಾಣುವಂತೆ ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಲು ಈ ಮೂಲಕ ತಿಳಿಸಿದೆ . ಈ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಪ್ರಕ್ರಿಯೆ* *ಆಗಿರುತ್ತದೆ ಯಾವುದೇ ಭೌತಿಕ ಪ್ರತಿಯನ್ನು ಪರಿಗಣಿಸಲಾಗುವುದಿಲ್ಲ.*
*ಹೆಚ್ಚುವರಿ ಹುದ್ದೆಗಳ ಮಾಹಿತಿ*

ಒಂದೇ ಶಾಲೆಯಲ್ಲಿ ಒಂದಕ್ಕಿಂತ ಹೆಚ್ಚಿನ ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ. ಸದರಿ list ನಲ್ಲಿ ಇರುವ ಎಲ್ಲಾ ಶಿಕ್ಷಕರು ಹೆಚ್ಚುವರಿಯಾಗುವುದಿಲ್ಲ .
ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಿ.
1) ಒಂದು ಶಾಲೆಯಲ್ಲಿ pst kannada ಹುದ್ದೆಯು ಹೆಚ್ಚುವರಿಯಾಗುತ್ತಿದ್ದಲ್ಲಿ, ಆ ಶಾಲೆಯಲ್ಲಿನ ಎಲ್ಲಾ pst ಕನ್ನಡ ಶಿಕ್ಷಕರ ಹೆಸರು ಲಿಸ್ಟ್ ನಲ್ಲಿ ಬಂದಿರುತ್ತವೆ. ಮೇಲಿನ ಯಾರಾದರೂ ಶಿಕ್ಷಕರು ವಿನಾಯತಿಯನ್ನು ಪಡೆದರೆ ಅವರ ಹಿಂದಿನ ಶಿಕ್ಷಕರು ಹೆಚ್ಚುವರಿಯಾಗುತ್ತಾರೆ. ಒಂದು ವೇಳೆ pst ಕನ್ನಡದ ಎಲ್ಲಾ ಶಿಕ್ಷಕರು ವಿನಾಯತಿಯನ್ನು ಪಡೆದರೆ , ಅದರಲ್ಲಿಯೇ ಸೀನಿಯರ್ ಜೂನಿಯರ್, date of birth ನೋಡ್ಕೊಂಡು ಹೆಚ್ಚುವರಿಯನ್ನು ಮಾಡುತ್ತಾರೆ.
2) ಒಂದು ವೇಳೆ ಮುಖ್ಯಗುರುಗಳು or ದೈಹಿಕ ಶಿಕ್ಷಕರು ಹೆಚ್ಚುವರಿಯಾಗಿದ್ದಲ್ಲಿ ಅವರಿಗೆ ಯಾವುದೇ ವಿನಯತಿಗಳು ಅನ್ವಯವಾಗುವುದಿಲ್ಲ.
3) pst yalli Hindi, English ಹೀಗೆ ಒಂದೇ ವಿಷಯದ ಶಿಕ್ಷಕರು ಹೆಚ್ಚುವರಿಯಾಗಿದ್ದಲ್ಲಿ ಇವರಿಗೂ ಕೂಡ ಯಾವ ವಿನಾಯತಿಗಳು ಅನ್ವಯವಾಗುವುದಿಲ್ಲ.
4) ಯಾವ ಶಿಕ್ಷಕರು ಹೆಚ್ಚುವರಿ ಪಟ್ಟಿಯಿಂದ ವಿನಾಯತಿಯನ್ನು ಪಡೆಯಲು ಅರ್ಹರಿರುತ್ತಾರೆಯೋ ಅಂತಹ ಶಿಕ್ಷಕರು (EEDS) ಆನ್ಲೈನ್ ನಲ್ಲಿ ಮಾಹಿತಿಯನ್ನು ಸಲ್ಲಿಸಬಹುದು.



ಹೆಚ್ಚುವರಿ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್
logoblog

Thanks for reading Primary Excess transfer Exemption claiming State List

Previous
« Prev Post

No comments:

Post a Comment