KSPSTA

RECENT INFORMATIONS

Search This Blog

Sunday, May 4, 2025

Regarding the upgrading of government higher primary schools to high schools

  Dailyguru       Sunday, May 4, 2025
Regarding the upgrading of government higher primary schools to high schools.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸುವ ಕುರಿತು.

ಓದಲಾಗಿದೆ:

1. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಏಕ ಕಡತ

:: DPI-CPI0C4-5(NEHS)/14/2024.

2. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಏಕ ಕಡತ

:: DPI-CPI0C4-5(NEHS)/10/2024-SEC-EST4.

ಪ್ರಸ್ತಾವನೆ:-

ಮೇಲೆ ಓದಲಾದ (1)ರ ಏಕಕಡತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಲ್ತಾನಪುರ ಹುಕ್ಕೇರಿ ತಾಲ್ಲೂಕು, ಶಾಲೆಯ ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಸಿದ್ದು ಸದರಿ ಗ್ರಾಮದಿಂದ 5 ಕಿಮೀ ಒಳಗಾಗಿ ಯಾವುದೇ ಪ್ರೌಢ ಶಾಲೆಗಳು ಇರುವುದಿಲ್ಲ. ಸದರಿ ಗ್ರಾಮದಿಂದ ಸಮೀಪದ ಸರಕಾರಿ ಪ್ರೌಢ ಶಾಲೆಗಳಾದ 1) ಸರಕಾರಿ ಪ್ರೌಢ ಶಾಲೆ ಅವರಗೋಳ ರಸ್ತೆ ಮುಖಾಂತರ ಶಾಲೆಗೆ ತಲುಪಲು 7 ಕಿ ಮೀ ದೂರ

ಇರುತ್ತದೆ. 2) ಸರಕಾರಿ ಪ್ರೌಢ ರಾ ಶಿರಗಾಂವ ರಸ್ತೆ ಮುಖಾಂತರ ಶಾಲೆಗೆ ತಲುಪಲು 8 ಕಿ ಮೀ ದೂರ ಇರುತ್ತದೆ. 3) ಸರಕಾರಿ ಪ್ರೌಢ ಶಾಲೆ ಬೇಳೆವಾಡ ರಸ್ತೆ ಮುಖಾಂತರ ಶಾಲೆಗೆ ತಲುಪಲು 6 ಕಿ ಮೀ ದೂರ ಇರುತ್ತದೆ. 4) ಸರಕಾರಿ ಪ್ರೌಢ ಶಾಲೆ ಮಸೂರ ಇದು 8 ಕಿ ಮೀ ಅಂತರ ಇರುತ್ತದೆ. 5) ಎಸ್ ಎಂ ಎಸ್ ಪ್ರೌಢ ಶಾಲೆ ಘೋಡಗೇರಿ ಸಹ 7 ಕಿ.ಮೀ. ಅಂತರ ಇದ್ದು ಈ ಶಾಲೆಗೆ ಹೋಗಲು ನೋಗನಿಹಾಳ ಘೋಡಗೇರಿ ಗ್ರಾಮದ ಮಧ್ಯದಲ್ಲಿ ಬಿಡ್ಜ್ ಇದೆ. ಇದು ಘಟಪ್ರಭಾ ಹಿರಣ್ಯಕೇಶಿ ನದಿಗಳ ಸಂಗಮದಿಂದ ಮಳೆಗಾಲದಲ್ಲಿ ನೀರು ಬ್ರಿಡ್ಜ್ ಮೇಲೆ ಬಂದು ದಾರಿ

ಬಂದಾಗುತ್ತದೆ. ಮಕ್ಕಳಿಗೆ ಹೋಗಲು ತೊಂದರೆ ಆಗುತ್ತದೆ. ಇದರಿಂದಾಗಿ ಸುಲ್ತಾನಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಲ್ತಾನಪೂರ ಹುಕ್ಕೇರಿ ತಾಲ್ಲೂಕು, ಈ ಶಾಲೆಯನ್ನು 8 ನೇ ತರಗತಿಯಿಂದ 9 ನೇ ತರಗತಿಗೆ ಉನ್ನತೀಕರಿಸಿ ಸುಲ್ತಾನಪೂರ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ (2)ರ ಏಕಕಡತದಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗ, ಧಾರವಾಡ ವಿಭಾಗ ಹಾಗೂ ಕಲಬುರುಗಿ ವಿಭಾಗದಲ್ಲಿನ ಒಟ್ಟು 97 ಮರಾಠಿ ಹಾಗೂ ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರು ಸಲ್ಲಿಸಿರುವ ಏಕ ಕಡತದಲ್ಲಿನ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.



ಆದೇಶ ಡೌನ್ಲೋಡ್ ಮಾಡಿಕೊಳ್ಳಿ.
logoblog

Thanks for reading Regarding the upgrading of government higher primary schools to high schools

Previous
« Prev Post

No comments:

Post a Comment