Regarding the promotion of high school teachers of the Department of School Education who have obtained a Master's degree to the post of lecturers of the Department of Pre-University Education.
ಸ್ನಾತಕೋತ್ತರ ಪದವಿ ಪಡೆದಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಕುರಿತು.
ಬಡ್ತಿಗೆ ಕುರಿತು ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು ಈ ಕೆಳಕಂಡಂತೆ ಇವೆ.
ಸಭೆಗೆ ಹಾಜರಿದ್ದ ಎಲ್ಲರನ್ನು ಸ್ವಾಗತಿಸುವುದರೊಂದಿಗೆ ಸಭೆ ಪ್ರಾರಂಭಿಸಲಾಯಿತು. ಸಭೆಯಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಚರ್ಚಿಸಲಾಯಿತು.
1. ವಿಭಾಗೀಯ ಸಹನಿರ್ದೇಶಕರ ಕಛೇರಿಯಿಂದ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಸಹಶಿಕ್ಷಕರ ವಿವರಗಳನ್ನು ನಿಗದಿತ ನಮೂನೆಯಲ್ಲಿ ಸ್ವೀಕೃತವಾಗಿರುತ್ತದೆ. ಈ ದತ್ತಾಂಶವನ್ನು ಕ್ರೋಡೀಕರಿಸಿ ಒಂದೇ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಲು ಕ್ರಮವಹಿಸಲಾಗುತ್ತದೆ.
2. ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ನಿಖರತೆಗೆ ಈಗಾಗಲೇ ಸಲ್ಲಿಸಿರುವ ಮಾಹಿತಿಯೊಂದಿಗೆ ಈ ಕೆಳಕಂಡ ವಿವರಗಳ ಅಗತ್ಯವಿರುತ್ತದೆ.
1) IF PROMOTED PROMOTION ORDER DATE
2) IF PROMOTED SL NO IN PROMOTION ORDER
3) IF PROMOTED % IN PRIMARY CADRE SELECTION (ENTER ALL DIGITS NOT TO BE ROUNDED OFF)
4) IF DR SELECTION ORDER DATE
5) IF DR SL.NO IN SELECTION LIST
6) IF DR % IN SELECTION ORDER (ENTER ALL DIGITS NOT TO BE ROUNDED OFF)
ಸದರಿ ವಿವರಗಳನ್ನು ಈಗಾಗಲೇ ಸಿದ್ಧಪಡಿಸಿರುವ ನಮೂನೆಯಲ್ಲಿ Column No 11,12,13, 15,16,17 ರಲ್ಲಿ ಈ ಹಿಂದೆ ಸಲ್ಲಿಸಿರುವ ವಿವರಗಳೊಂದಿಗೆ ಭರ್ತಿ ಮಾಡಲು ತಿಳಿಸಿದೆ.
3. canariese ನಮೂನೆಯಲ್ಲಿ ಸಲ್ಲಿಸಿರುವ ಮಾಹಿತಿಯನ್ನು ಪುನರ್ ಪರಿಶೀಲಿಸಿ ತಪ್ಪುಗಳಿದ್ದಲ್ಲಿ ಸರಿಪಡಿಸಿ ಸಲ್ಲಿಸುವುದು.
4. ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತುರ್ತಾಗಿ ಸರ್ಕಾರಕ್ಕೆ ಸಲ್ಲಿಸಬೇಕಾಗಿದ್ದು, ದಿನಾಂಕ : 05.04.2025 ರ ಒಳಗೆ ವಿಭಾಗೀಯ ಸಹನಿರ್ದೇಶಕರು ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ. ಇದಕ್ಕೆ ಎಲ್ಲಾ ವಿಭಾಗೀಯ ಸಹನಿರ್ದೇಶಕರು ಸಹಮತಿಸಿದರು.
ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು(ಆ) ರವರು ಈ ಕುರಿತು ಕೂಡಲೇ ಕ್ರಮವಹಿಸಿ ನಿಖರವಾದ ಮಾಹಿತಿ ಸಿದ್ಧಪಡಿಸಿ ವಿಭಾಗೀಯ ಸಹನಿರ್ದೇಶಕರಿಗೆ ಸಕಾಲದಲ್ಲಿ ಸಲ್ಲಿಸಲು ತಿಳಿಸುವುದರೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
No comments:
Post a Comment