KSPSTA

RECENT INFORMATIONS

Search This Blog

Tuesday, April 29, 2025

provisional seniority list of teachers with postgraduate qualifications in relation to the promotion of high school assistant teachers

  Dailyguru       Tuesday, April 29, 2025
Regarding the publication of a single state-level provisional seniority list of teachers with postgraduate qualifications in relation to the promotion of high school assistant teachers to the post of lecturers in the Department of Pre-University Education.

ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸುವ ಕುರಿತು.

ಉಲ್ಲೇಖ:- 1

. ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು, 1957.

2. ನಿರ್ದೇಶಕರು, ಪ.ಪೂ.ಶಿ.ಇ, ಮಲ್ಲೇಶ್ವರಂ, ಬೆಂಗಳೂರು, ರವರ ಪತ್ರ ಸಂಖ್ಯೆ: DPUE-ESTOLTPR/1/2023, 20: 28.04.2023.

3. ಈ ಕಛೇರಿಯ ಪತ್ರ ಸಮ ಸಂಖ್ಯೆ : ದಿನಾಂಕ : 01.06.2024 ಮತ್ತು 24.02.2025.

4. ಸರ್ಕಾರದ ಪತ್ರ ಸಂಖ್ಯೆ: ಇಪಿ 164 ಎಸ್‌ಒಹೆಚ್ 2023 ದಿನಾಂಕ:23.10.2024.

5. ಈ ಕಛೇರಿಯ ಸಭಾ ನಡಾವಳಿ ದಿನಾಂಕ: 07.12.2024.

6. ಈ ಕಛೇರಿಯ ಜ್ಞಾಪನ ಸಮ ಸಂಖ್ಯೆ ದಿನಾಂಕ: 07.12.2024.

7. ಈ ಕಛೇರಿಯ ಸಭಾ ನಡಾವಳಿ ದಿನಾಂಕ: 07.12.2024 ಮತ್ತು 19.02.2025

8. ಸರ್ಕಾರದ ಪತ್ರ ಸಂಖ್ಯೆ : ಇಪಿ 164 ಎಸ್‌ಒಹೆಚ್ 2023, ದಿನಾಂಕ: 04.03.2025 2 04.04.2025.

9. ಈ ಕಛೇರಿಯ ಇ-ಆಫೀಸ್ ಕಡತ ಸಂಖ್ಯೆ : 1724527

ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, 18ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು, ಇವರ ಪತ್ರದಲ್ಲಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕರು, ಗ್ರೇಡ್-2 ವೃಂದದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಶಾಲಾ ಶಿಕ್ಷಣ ಇಲಾಖೆಯ ನಾಲ್ಕೂ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರುಗಳ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಿ ಸಲ್ಲಿಸಲು ಕೋರಿರುತ್ತಾರೆ.

ಪ್ರಸ್ತುತ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ರವರ ಜೇಷ್ಠತಾ ಪಟ್ಟಿಯನ್ನು ವಿಭಾಗವಾರು ಸಿದ್ಧಪಡಿಸಲಾಗುತ್ತಿದೆ. ಆದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೋರಿಕೆಯಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ಸಂಬಂಧ ಸ್ನಾತಕೋತ್ತರ ಪದವಿ ಪಡೆದಿರುವ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-2 ರವರ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸುವ ಸಂಬಂಧ ದಿನಾಂಕ : 01.06.2024 ರ ಈ ಕಛೇರಿಯ ಪತ್ರದಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ಕೋರಲಾಗಿರುತ್ತದೆ.

ದಿನಾಂಕ : 23.10.2024 ರ ಸರ್ಕಾರದ ಪತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರುಗಳ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು (inter se ) ಸಿದ್ದಪಡಿಸುವ ಕುರಿತು ನಿರ್ದೇಶನ ನೀಡಲಾಗಿರುತ್ತದೆ.

ಸರ್ಕಾರದಿಂದ ನೀಡಿದ ನಿರ್ದೇಶನಗಳಿಗೆ ಕೆಲವು ಸ್ಪಷ್ಟನೆಗಳ ಅಗತ್ಯ ಕಂಡು ಬಂದಿದ್ದರಿಂದ 24.02.2025 ರ ಪತ್ರದಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ ಮಾರ್ಗದರ್ಶನ ಕೋರಿದ್ದು ಉಲ್ಲೇಖ -8 ರ ಪತ್ರಗಳಲ್ಲಿ ಮಾರ್ಗದರ್ಶನ ಸ್ವೀಕರಿಸಲಾಗಿದೆ.

ಅಧಿಕೃತ ಆದೇಶ ಡೌನ್ಲೋಡ್ ಮಾಡಿಕೊಳ್ಳಿ.
logoblog

Thanks for reading provisional seniority list of teachers with postgraduate qualifications in relation to the promotion of high school assistant teachers

Previous
« Prev Post

No comments:

Post a Comment