KSPSTA

RECENT INFORMATIONS

Search This Blog

Tuesday, April 22, 2025

Key points of the Commissioners circular on Karnataka Arogya Sanjeevini Scheme

  Dailyguru       Tuesday, April 22, 2025
Key points of the Commissioner's circular on Karnataka Arogya Sanjeevini Scheme

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಆಯುಕ್ತರ ಸುತ್ತೋಲೆಯ ಪ್ರಮುಖ ಅಂಶಗಳು.

*ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
🌷🌷🌷🙏🌷🌷🌷

*ನಗದುರಹಿತ ಆರೋಗ್ಯ ಚಿಕಿತ್ಸೆ ಸೌಲಭ್ಯ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಯ 19.04.2025 ರ ಕರ್ನಾಟಕ ಸರ್ಕಾರದ ವಿಶೇಷ ಕಾರ್ಯದರ್ಶಿ ರವರ ಸುತ್ತೋಲೆಯ ಪ್ರಮುಖ ಅಂಶಗಳು.*

🔴ಈ ಯೋಜನೆಯ ಲಾಭ ಪಡೆಯಲು ನೌಕರರು ವಂತಿಕೆ ಪಾವತಿಸಬೇಕೆ?

🟢ಹೌದು...

ಯೋಜನೆಗೆ ಒಳಪಡುವ ಸರ್ಕಾರಿ ನೌಕರ ಈ ಕೆಳಂಡಂತೆ ಮಾಸಿಕ ವಂತಿಕೆಯನ್ನು ನೀಡಬೇಕಾಗುತ್ತದೆ.

ಗ್ರೂಪ್ ಎ 1000/-

ಗ್ರೂಪ್ ಬಿ 500/-

ಗ್ರೂಪ್ ಸಿ 350/-

ಗ್ರೂಪ್ ಡಿ 250/-

🔴ಈ ವಂತಿಕೆ ಹಣ ಯಾವಾಗಿನಿಂದ ಕಡಿತಗೊಳ್ಳುತ್ತದೆ?

🟢ಮೇ 2025 ನೇ ತಿಂಗಳದಿಂದ ವೇತನದಲ್ಲಿ ಕಡಿತಗೊಳ್ಳುತ್ತದೆ.

KSGEA ALAND

🔴ಈ ಯೋಜನೆಗೆ ಒಳಗೊಳ್ಳುವುದು ಎಲ್ಲಾ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿದೆಯೇ?

🟢ಕಡ್ಡಾಯವಾಗಿ ಇಲ್ಲ...

ಯಾವುದೇ ಸರ್ಕಾರಿ ನೌಕರರು ಈ ಯೋಜನೆಯ ಸದುಪಯೋಗ ಪಡೆಯಲು ಇಚ್ಚಿಸಿದಲ್ಲಿ ಮಾತ್ರ, ತನ್ನ ಆಯ್ಕೆಯನ್ನು ಸೂಚಿಸಬಹುದಾಗಿದೆ. ಇಚ್ಛೆ ಇಲ್ಲದ ಪಕ್ಷದಲ್ಲಿಯೂ ಸಹ ನಿಗದಿತ ನಮೂನೆಯಲ್ಲಿ ತಿಳಿಸಬಹುದಾಗಿದೆ.

ಸರ್ಕಾರಿ ನೌಕರ ಯೋಜನೆಗೆ ಒಳಪಡಲು ಆಯ್ಕೆಯನ್ನು ವ್ಯಕ್ತಪಡಿಸಲು ಉದ್ದೇಶಿಸಿದಲ್ಲಿ ದಿನಾಂಕ: 20.05.2025 ರ ಒಳಗಾಗಿ ಈ ಸಂಬಂಧ ಅನುಬಂಧ-2 ರ ನಮೂನೆ-1 ರಲ್ಲಿ ಘೋಷಣೆಯನ್ನು ತನ್ನ ಮೇಲಾಧಿಕಾರಿ ಮೂಲಕ ಡಿಡಿಓ ಗಳಿಗೆ ಸಲ್ಲಿಸತಕ್ಕದ್ದು.

ನೌಕರರು ಈ ಯೋಜನೆಗೆ ಒಳಪಡದೇ ಇರಲು ಇಚ್ಛಿಸಿದಲ್ಲಿ ದಿನಾಂಕ: 20.05.2025 ರ ಒಳಗಾಗಿ ಈ ಸಂಬಂಧ ಅನುಬಂಧ-2 ರ ನಮೂನೆ-2 ರಲ್ಲಿ ಘೋಷಣೆಯನ್ನು ತನ್ನ ಮೇಲಾಧಿಕಾರಿ ಮೂಲಕ ಡಿಡಿಓ ಗಳಿಗೆ ಸಲ್ಲಿಸತಕ್ಕದ್ದು. 


*ತಪ್ಪಿದಲ್ಲಿ, ಇಂತಹ ನೌಕರರು ಯೋಜನೆಗೆ ಒಳಪಡಲು ಇಚ್ಛಿಸಿದ್ದಾರೆಂದು ಪರಿಗಣಿಸಿ ಅವರ ಮೇ 2025ರ ವೇತನದಿಂದ HRMS ಮುಖಾಂತರ ವಂತಿಕೆ ಕಟಾವಣೆ ಮಾಡಲಾಗುತ್ತದೆ.*

🔴ಈ ಯೋಜನೆ ಅಡಿ ಟ್ಯಾಗ್ ಮಾಡಲಾಗಿರುವ ಆಸ್ಪತ್ರೆಗಳ ಸಂಖ್ಯೆ ಎಷ್ಟು?

🟢2000... ಆಸ್ಪತ್ರೆಗಳು.

ಹೊರ ರಾಜ್ಯದ ಸೋಲಾಪುರ ಹಾಗೂ ಹೈದರಾಬಾದ್ ನಂತಹ ಸಿಟಿಯಲ್ಲಿಯ ಆಸ್ಪತ್ರೆಗಳು ಕೂಡ ಒಳಗೊಂಡಿದೆ.

KSGEA ALAND

🔴ಈ ಯೋಜನೆ ಅಡಿ ವೈದ್ಯಕೀಯ ವೆಚ್ಚದ ಗರಿಷ್ಠ ಮಿತಿ ಎಷ್ಟು?

🟢ಈ ಯೋಜನೆಯಡಿ ವೈದ್ಯಕೀಯ ವೆಚ್ಚದ ಗರಿಷ್ಠ ಮಿತಿ ಇರುವುದಿಲ್ಲ ಹಾಗೂ ಯೋಜನೆಯಡಿ ನೋಂದಾಯಿತ ಖಾಸಗಿ ಹಾಗೂ ಸಾರ್ವಜನಿಕ ವಲಯದ ಆಸ್ಪತ್ರೆಗಳಲ್ಲಿ ಯಾವುದೇ ರೆಫರಲ್ ಇಲ್ಲದೇ ವೈದ್ಯಕೀಯ ಚಿಕಿತ್ಸೆಯನ್ನು ನಗದುರಹಿತವಾಗಿ ಪಡೆಯಬಹುದಾಗಿದೆ.

🔴ಈ ಯೋಜನೆ ಕೇವಲ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಮಾತ್ರ ಉಪಯೋಗವಾಗುತ್ತದೆಯೇ?

🟢ಇಲ್ಲ..

ಅಲೋಪತಿ ವೈದ್ಯಕೀಯ ಚಿಕಿತ್ಸಾ ವಿಧಾನಗಳಡಿ (ಶಸ್ತ್ರ ಚಿಕಿತ್ಸಾ (Surgical) ಹಾಗೂ ಶಸ್ತ್ರ ಚಿಕಿತ್ಸಾ ರಹಿತ ಚಿಕಿತ್ಸೆ (Medical Management)) ನಗದುರಹಿತವಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ. 

🔴ಈ ಯೋಜನೆಯಲ್ಲಿ ನಗದುರಹಿತ ಹೊರರೋಗಿ ಚಿಕಿತ್ಸೆಗಳು ಪಡೆಯಬಹುದೇ?

🟢ಇಲ್ಲ..

ಯೋಜನೆಯ ಮುಂದಿನ ಹಂತಗಳಲ್ಲಿ ಆಯುಷ್, ಡೇ-ಕೇರ್, ವಾರ್ಷಿಕ ಆರೋಗ್ಯ ತಪಾಸಣೆ, ಹೊರರೋಗಿ ಚಿಕಿತ್ಸೆಗಳು, ಔಷಧೋಪಚಾರ ಹಾಗೂ ಇನ್ನಿತರೆ ಚಿಕಿತ್ಸಾ ವಿಧಾನಗಳನ್ನು ಹಂತ ಹಂತವಾಗಿ ಯೋಜನೆಯಲ್ಲಿ ಒಳಪಡಿಸಿ ಯೋಜನೆಯನ್ನು ವಿಸ್ತರಿಸಲಾಗುವುದು.

🔴ಸರ್ಕಾರಿ ನೌಕರರ ಕುಟುಂಬ ಎಂದರೆ ಯಾರೆಲ್ಲಾ ಕುಟುಂಬದ ಸದಸ್ಯರು ಈ ಯೋಜನೆಗೆ ಒಳಪಡುತ್ತಾರೆ?
KSGEA ALAND

🟢i)ಸರ್ಕಾರಿ ನೌಕರನ ಪತಿ ಅಥವಾ ಪತ್ನಿ..

ii)ಸರ್ಕಾರಿ ನೌಕರನೊಂದಿಗೆ ಸಾಮಾನ್ಯವಾಗಿ ವಾಸವಾಗಿರುವ ಆತನ ತಂದೆ ಮತ್ತು ತಾಯಿ (ಮಲ ತಾಯಿಯನ್ನೊಳಗೊಂಡಂತೆ) ಅವರು ಇತರೆ ಯಾವುದೇ ಆರೋಗ್ಯ ಸೌಲಭ್ಯಕ್ಕೆ ಒಳಪಟ್ಟಿರಬಾರದು ಹಾಗೂ ಒಬ್ಬರ ಅಥವಾ ಇಬ್ಬರ ಒಟ್ಟು ಮಾಸಿಕ ಆದಾಯ ರೂ. 17000/- ಮೀರಿರಬಾರದು;

iii)ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಹಾಗೂ ಸಾಮಾನ್ಯವಾಗಿ ಅವನೊಂದಿಗೆ ವಾಸವಾಗಿರುವ (wholly dependent on a government employee and generally residing with him) ಮಗ, ದತ್ತು ಪಡೆದ ಮಗ, ಮಲ ಮಗ ಸೇರಿದಂತೆ ಆತ 30 ವರ್ಷ ಪೂರೈಸುವವರೆಗೂ..

iv)ಅಥವಾ ಸ್ವಂತ ಸಂಪಾದನೆ ಮಾಡುವವರೆಗೆ ಅಥವಾ ಮದುವೆ ಆಗುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ...

v)ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಹಾಗೂ ಸಾಮಾನ್ಯವಾಗಿ ಅವನೊಂದಿಗೆ ವಾಸವಾಗಿರುವ ಮಗಳು, ದತ್ತು ಪಡೆದ ಮಗಳು, ಮಲ ಮಗಳು ಸೇರಿದಂತೆ ಆಕೆ 30 ವರ್ಷ ಪೂರೈಸುವವರೆಗೆ ಅಥವಾ ಸ್ವಂತ ಸಂಪಾದನೆ ಮಾಡುವವರೆಗೆ ಅಥವಾ ಮದುವೆ ಆಗುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ;

ಸರ್ಕಾರಿ ನೌಕರನೊಂದಿಗೆ ವಾಸಿಸುತ್ತಿರುವ ಮತ್ತು ಯಾವುದೇ ಸ್ವಂತ ಗಳಿಕೆ ಇಲ್ಲದೇ ಸರ್ಕಾರಿ ನೌಕರನನ್ನು ಅವಲಂಬಿಸಿರುವ ವಿಧವೆ/ವಿಚ್ಛೇದಿತ ಮಗಳು..

vi)30 ವರ್ಷ ಮೀರಿದ ಅವಿವಾಹಿತ ಮಗ ಅಥವಾ ಮಗಳು- ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಸ್ವಂತ ಸಂಪಾದನೆ ಮಾಡಲು ಅಸಮರ್ಥರಾಗಿದ್ದಲ್ಲಿ;

🔴ಸರ್ಕಾರಿ ನೌಕರ ವಂತಿಗೆ ಪಾವತಿಸಿ ಈ ಯೋಜನೆಯನ್ನು ಪಡೆದುಕೊಳ್ಳುವುದು ಲಾಭದಾಯಕವಾಗಿದೆಯೇ? 

🟢ನಾನು ವೈಯಕ್ತಿಕವಾಗಿ ಹೇಳಬೇಕೆಂದರೆ ಇದು ಅತ್ಯಂತ ಉಪಯುಕ್ತವಾದ ಯೋಜನೆ, ಪ್ರತಿಯೊಬ್ಬ ನೌಕರ ತನ್ನ ಆರ್ಥಿಕ ಭದ್ರತೆಗಾಗಿ, ಕುಟುಂಬದ ಸುರಕ್ಷತೆಗಾಗಿ ಆರೋಗ್ಯ ವಿಮೆಯನ್ನು ತಪ್ಪದೇ ಪಡೆಯಲೇಬೇಕು.. ಈ ಯೋಜನೆಗೆ ನಾವು ಕೊಡುವ ಮಾಸಿಕ 300, 500 ರೂಪಾಯಿಗಳು ದೊಡ್ಡ ಮೊತ್ತ ಅಲ್ಲವೇ ಅಲ್ಲ..

ವಂದನೆಗಳೊಂದಿಗೆ....
KSGEA TEAM
logoblog

Thanks for reading Key points of the Commissioners circular on Karnataka Arogya Sanjeevini Scheme

Previous
« Prev Post

No comments:

Post a Comment