KSPSTA

RECENT INFORMATIONS

Search This Blog

Tuesday, April 1, 2025

Daily Current Affairs Questions and Answers March 2025

  Dailyguru       Tuesday, April 1, 2025
Daily Current Affairs March 2025

✔️ಇತ್ತೀಚೆಗೆ ಸುದ್ದಿಯಲ್ಲಿದ್ದ PM-WANI (ಪ್ರಧಾನ ಮಂತ್ರಿಗಳ ವೈ-ಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್) ಯೋಜನೆಯು ಯಾವುದಕ್ಕೆ ಸಂಬಂಧಿಸಿದೆ?
- ಸಾರ್ವಜನಿಕ ವೈ-ಫೈ ಸೇವೆಗಳ ವಿಸ್ತರಣೆ
✔️ಇತ್ತೀಚೆಗೆ ಯಾವ ಸಚಿವಾಲಯವು ಡಿಜಿಟಲ್ ಬೆಳೆ ಸಮೀಕ್ಷೆ (DCS-Digital Crop Survey) ವ್ಯವಸ್ಥೆಯನ್ನು ಪ್ರಾರಂಭಿಸಿದೆ?
-ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ
✔️ಇತ್ತೀಚೆಗೆ, ಭಾರತವು ಯಾವ ದೇಶದೊಂದಿಗೆ ಹಸಿರು ಮತ್ತು ಡಿಜಿಟಲ್ ಶಿಪ್ಪಿಂಗ್ ಕಾರಿಡಾರ್ (ಜಿಡಿಎಸ್ಸಿ) ಗಾಗಿ ಲೆಟರ್ ಆಫ್ ಇಂಟೆಂಟ್ (ಎಲ್‌ಒಐ) ಗೆ ಸಹಿ ಹಾಕಿದೆ?
-ಸಿಂಗಾಪುರ
✔️ಇತ್ತೀಚೆಗೆ ಯಾವ ಸಚಿವಾಲಯವು "ಬಾಲ್ಪನ್ ಕಿ ಕವಿತಾ"(Balpan Ki Kavita) ಎಂಬ ಉಪಕ್ರಮವನ್ನು ಪ್ರಾರಂಭಿಸಿತು?
-ಶಿಕ್ಷಣ ಸಚಿವಾಲಯ ( Ministry of Education)
✔️ಹಿರಿಯ ನಾಗರಿಕರ ಆಯೋಗ(Senior Citizens Commission)ವನ್ನು ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು?
- ಕೇರಳ(Kerala)
✔️ಇತ್ತೀಚೆಗೆ, ರಾಹುಲ್ ಭಾವೆ (Rahul Bhave)ಅವರನ್ನು ಯಾವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ?
- ಭಾರತದ ಕೈಗಾರಿಕಾ ಹಣಕಾಸು ನಿಗಮ
✔️ಇತ್ತೀಚಿನ ಜಾಗತಿಕ ಹಣಕಾಸು ಕೇಂದ್ರಗಳ ಸೂಚ್ಯಂಕದಲ್ಲಿ (GFCI 37) ಗಿಫ್ಟ್ ಸಿಟಿ (Gujarat International Finance Tec-City) ಯಾವ ಶ್ರೇಣಿಯನ್ನು ಸಾಧಿಸಿದೆ?
- 46ನೇ
✔️ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ 2025 ರಲ್ಲಿ ಗ್ರೀಕೋ-ರೋಮನ್ 97 ಕೆಜಿ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದವರು ಯಾರು?
- ನಿತೇಶ್ ಸಿವಾಚ್ (Nitesh Siwach)
✔️ಭಾರತದಲ್ಲಿ ಗ್ರಾಮೀಣ ಮಹಿಳೆಯರು ಮತ್ತು ಯುವಕರನ್ನು ಸಬಲೀಕರಣಗೊಳಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ(Ministry of Rural Development (MoRD))ವು ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
- ಯುನಿಸೆಫ್ ಯುವಾಹ್ (UNICEF YuWaah)
✔️ಪ್ರತಿ ವರ್ಷ ವಿಶ್ವ ರಂಗಭೂಮಿ ದಿನ(World Theatre Day)ವನ್ನು ಯಾವಾಗ ಆಚರಿಸಲಾಗುತ್ತದೆ?
- ಮಾರ್ಚ್ 27 (March 27)
✔️ನೌಕರರ ರಾಜ್ಯ ವಿಮಾ (ESI-Employees' State Insurance) ಯೋಜನೆಯನ್ನು ಯಾವ ಸಂಸ್ಥೆಯು ನಿರ್ವಹಿಸುತ್ತದೆ?
- ನೌಕರರ ರಾಜ್ಯ ವಿಮಾ ನಿಗಮ

1] ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು ಯಾರು..?
- ಗ್ರೀಕರು
2] ದೊಡ್ಡದಾದ ಕ್ಷುದ್ರ ಗ್ರಹ ಯಾವುದು..?
- ಸಿರಸ್
3] ಜಗತ್ತಿನ ದೊಡ್ಡದಾದ ನದಿ ಯಾವುದು..?
- ಅಮೇಜಾನ್
4] ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ..?
- ಉತ್ತರ ಅಟ್ಲಾಂಟಿಕ್
5] ಜಗತ್ತಿನ ಅತಿ ಭಾರವಾದ ಪಕ್ಷಿ..?
- ಆಸ್ರ್ಟಿಚ್
6] ಅತಿ ಕಡಿಮೆ ಮರಣ ಪ್ರಮಾಣ ಇರುವ ದೇಶ ಯಾವುದು..?
- ಕುವೈತ್
7] ಗಲ್ಫ್ ಯುದ್ದ-2 ಆರಂಭವಾದ ವರ್ಷ ಯಾವುದು..?
- 1-1991,2-2003
8] ಭೂಪಡೆಯಲ್ಲಿ ಎಷ್ಟು ವಿಂಗ್‍ಗಳು ಇರುವವು..?
- 6
9] ಹೋಮ್ ಗಾರ್ಡ್ಸ್ ರಚನೆಯಾದ ವರ್ಷ ಯಾವುದು..?
- 1962
10] ಭಾರತದ ದೊಡ್ಡದಾದ ಯುದ್ದ ಹಡಗು ಯಾವುದು..?
- INS ವಿರಾಟ್
✔️ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗೆ (IAF) ಉತ್ತೇಜನ ನೀಡುವ ಸಲುವಾಗಿ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿಂದ 62,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 156 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಇದುವರೆಗಿನ ಅತಿದೊಡ್ಡ ಒಪ್ಪಂದಕ್ಕೆ ಭದ್ರತೆಯ ಕುರಿತಾದ ಸಂಪುಟ ಸಮಿತಿ (CCS) ಅನುಮೋದನೆ ನೀಡಿದೆ.
- ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ ಕಂಪನಿಯ ಇದುವರೆಗಿನ ಅತಿದೊಡ್ಡ ಆರ್ಡರ್ ಇದಾಗಿದ್ದು, ಹೆಲಿಕಾಪ್ಟರ್‌ಗಳನ್ನು ಕರ್ನಾಟಕದ ಬೆಂಗಳೂರು ಮತ್ತು ತುಮಕೂರಿನಲ್ಲಿರುವ ಅವರ ಪ್ಲ್ಯಾಂಟ್‌ಗಳಲ್ಲಿ ನಿರ್ಮಿಸಲಾಗುವುದು
- ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಕಳೆದ ವರ್ಷ ಜೂನ್‌ನಲ್ಲಿ 156 ಲಘು ಯುದ್ಧ ಹೆಲಿಕಾಪ್ಟರ್‌ಗಳ (LCH) ಟೆಂಡರ್ ಅನ್ನು ಪಡೆದುಕೊಂಡಿತ್ತು.
- ಪ್ರಚಂಡ್‌ ಎಂದೂ ಕರೆಯಲ್ಪಡುವ LCH, 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಇಳಿಯುವ ಮತ್ತು ಟೇಕ್ ಆಫ್ ಮಾಡುವ ವಿಶ್ವದ ಏಕೈಕ ಅಟ್ಯಾಕ್‌ ಹೆಲಿಕಾಪ್ಟರ್ ಆಗಿದ್ದು, ಇದು ಸಿಯಾಚಿನ್ ಹಿಮನದಿ ಮತ್ತು ಪೂರ್ವ ಲಡಾಖ್‌ನ ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾಗಿದೆ.
logoblog

Thanks for reading Daily Current Affairs Questions and Answers March 2025

Previous
« Prev Post

No comments:

Post a Comment