KSPSTA

RECENT INFORMATIONS

Search This Blog

Thursday, April 17, 2025

1st Standard Age Relaxation Order For The Year 2025-26

  Dailyguru       Thursday, April 17, 2025
1st Standard Age Relaxation Order For The Year 2025-26



ಒಂದನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಲು ನಿಗಧಿಪಡಿಸಿರುವ ವಯೋಮಿತಿಯನ್ನು 2025-26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ಒಂದು ಬಾರಿಗೆ ಮಾತ್ರ ಸಡಿಲಿಸುವ ಬಗ್ಗೆ..

ಪ್ರಸ್ತಾವನೆ:

ಈ ಮಾಹಿತಿ ಕೆಳಗೆ ಇರುವ ಆದೇಶದ ಪಿಡಿಎಫ್  ಅಲ್ಲಿ ಕ್ರಮಾಂಕ(1)ರ ಆದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.

ಈ ಮಾಹಿತಿ ಕೆಳಗೆ ಇರುವ ಪಿಡಿಎಫ್ ಅಲ್ಲಿ ಕ್ರಮಾಂಕ(2)ರ ತಿದ್ದುಪಡಿ ಆದೇಶದಲ್ಲಿ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿರುವುದನ್ನು 2025-2026ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಲಾಗಿರುತ್ತದೆ.

ಈ ಕೆಳಗಿನ ಪಿಡಿಎಫ್ ಅಲ್ಲಿ ಇರುವ ಕ್ರಮಾಂಕ(3)ರ ಏಕ ಕಡತದಲ್ಲಿ ಒಂದನೇ ತರಗತಿ ಪ್ರವೇಶಾತಿಗೆ ಪ್ರಸ್ತುತ ನಿಗದಿಪಡಿಸಿರುವ ಕನಿಷ್ಠ 6 ವರ್ಷಗಳ ವಯೋಮಿತಿಯನ್ನು ಸಡಿಲಿಸಲು ರಾಜ್ಯಾದ್ಯಂತ ಪೋಷಕರಿಂದ ಹಲವಾರು ಮನವಿಗಳು ಸ್ವೀಕೃತವಾಗುತ್ತಿದ್ದು, ಒಂದನೇ ತರಗತಿಗೆ 5 ವರ್ಷ 5 ತಿಂಗಳು ವಯೋಮಿತಿಯನ್ನು ಮರುನಿಗದಿಗೊಳಿಸಲು ಸರ್ಕಾರದ ಹಂತದಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮಾಂಕ(4)ರ ಪತ್ರದಲ್ಲಿ ಒಂದನೇ ತರಗತಿಯ ಪ್ರವೇಶಾತಿಗೆ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸುವುದು ರಾಜ್ಯ ಶಿಕ್ಷಣ ನೀತಿಯ ಚೌಕಟ್ಟಿಗೆ ಒಳಪಟ್ಟಿರುವುದರಿಂದ ಈ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಸಲಹೆ ನೀಡುವಂತೆ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ಕೋರಲಾಗಿತ್ತು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಆದೇಶ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.


logoblog

Thanks for reading 1st Standard Age Relaxation Order For The Year 2025-26

Previous
« Prev Post

No comments:

Post a Comment