KSPSTA

RECENT INFORMATIONS

Search This Blog

Sunday, March 23, 2025

KSSEDEA Registration Date Extension

  Dailyguru       Sunday, March 23, 2025
KSSEDEA Registration Date Extension 

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸೇವೆಸಲ್ಲಿಸುತ್ತಿರುವ ಸರ್ಕಾರಿ/ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಮತ್ತು ವಸತಿ ಶಿಕ್ಷಣ ಸಂಸ್ಥೆ ಹಾಗೂ ಇಲಾಖೆಯ ಕಛೇರಿಗಳಲ್ಲಿ ಖಾಯಂ ನೌಕರರಾಗಿ ಸೇವೆಸಲ್ಲಿಸುತ್ತಿರುವ ಡಿ ಗ್ರೂಪ್ ನೌಕರರಿಂದ ರಾಜ್ಯ ಮಟ್ಟದ ಮಾನ್ಯ ನಿರ್ದೇಶಕರನ್ನೊಳಗೊಂಡಂತೆ ಸಮಸ್ತ ಶಾಲಾ ಶಿಕ್ಷಣ ಇಲಾಖೆಯ ನೌಕರರನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಶಿಕ್ಷಣ ಇಲಾಖೆಯ ನಮ್ಮ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಒಟ್ಟಾರೆ ಇಲಾಖೆಯ ಒಂದು ಸಂಘಟನೆ ಅವಶ್ಯಕವೆಂದು ಹಲವರ ಅಭಿಪ್ರಾಯದ ಮೇರೆಗೆ ಒಂದು ಸೂಕ್ತ ಬೈಲಾದೊಂದಿಗೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು ಸದರಿ ಸಂಘವನ್ನು ರಚಿಸಿ ನೋಂದಣಿ ಇಲಾಖೆಯಲ್ಲಿ ನೋಂದಣಿ ಸಂಖ್ಯೆ: DRKL/SOR/125/2024-2025 ದಿನಾಂಕ: 08.11.2024 ರಂದು ನೋಂಂದಾಯಿಸಿ ಕಡಿಮೆ ಸಮಯದಲ್ಲಿಯೇ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಶಾಖೆಗಳನ್ನು ರಚಿಸಿ ತನ್ನ ಕಾರ್ಯ ಚಟುವಟಿಕೆಯನ್ನು ಪ್ರಾರಂಭಿಸಲಾಗಿದೆ ಅದಕ್ಕೆ ರಾಜ್ಯಾದ್ಯಂತ ತಾವು ನೀಡಿರುವ ಉತ್ತಮ ಸ್ಪಂದನೆ, ಸಹಕಾರ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು

ಸಂಘದ ಬೈಲಾ ನಿಯಮ 5(ಎ) ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ನಿಧಿಯಿಂದ ವೇತನ ಹಾಗೂ ಇತರೆ ಭತ್ಯೆಗಳನ್ನು ಪಡೆಯುತ್ತಿರುವ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಹಾಗೂ ರಾಜ್ಯದ ಶಾಲಾ ಶಿಕ್ಷಣ ಇಲಾಖೆಗಳ ಆಡಳಿತಕ್ಕೊಳಪಟ್ಟ ಸರ್ಕಾರಿ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಾದ ಡಿ ಗ್ರೂಪ್, ಲಿಪಿಕ ನೌಕರರು, ಶಿಕ್ಷಕರು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು, ಪ್ರಾಂಶುಪಾಲರು, ಶಾಲಾ ಶಿಕ್ಷಣ ಇಲಾಖೆಯ ಅಧೀನದ ಕಛೇರಿಗಳಲ್ಲಿ ಖಾಯಂ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಾಹನ ಚಾಲಕರು, ಅಕ್ಷರ ದಾಸೋಹ ಅಧಿಕಾರಿ ಸಿಬ್ಬಂದಿ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು - ಕಛೇರಿ ಸಿಬ್ಬಂದಿ, ಕ್ಷೇತ್ರ ಸಮನ್ವಯಾಧಿಕಾರಿಗಳು – ಕಛೇರಿ ಸಿಬ್ಬಂದಿ, ಮಾನ್ಯ ಉಪನಿರ್ದೇಶಕರು - ಕಛೇರಿ ಸಿಬ್ಬಂದಿ, ಡಯಟ್, ಅಪರ ಆಯುಕ್ತರ ಕಛೇರಿ, ಆಯುಕ್ತರ ಕಛೇರಿ, ನಿರ್ದೇಶಕರ ಕಛೇರಿ, ಡಿಎಸ್‌ಇಆರ್‌ಟಿ, ಎಸ್‌ಎಸ್ಕೆ, ಪಠ್ಯಪುಸ್ತಕ, ಮೌಲ್ಯಾಂಕನ ಮಂಡಳಿ,ಶಿಕ್ಷಕರ ಕಲ್ಯಾಣ ನಿಧಿ, ವಸತಿ ಶಿಕ್ಷಣ ಕೇಂದ್ರ ಕಛೇರಿಗಳು, ನಿರ್ದೇಶಕರ ಕಛೇರಿ ಪದವಿ ಪೂರ್ವ ಶಿಕ್ಷಣ ಕಛೇರಿಗಳಲ್ಲಿ ಡಿ ಗ್ರೂಪ್ ನಿಂದ ಮಾನ್ಯ ನಿರ್ದೇಶಕರ ವರೆಗಿನ ಎಲ್ಲಾ ಹಂತದ ಖಾಯಂ ನೌಕರರು ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದಲ್ಲಿ ಸದಸ್ಯತ್ವ ಪಡೆಯಲು ಅರ್ಹರಾಗಿರತ್ತಾರೆ. ಅಂತಹ ನೌಕರರು ರೂ. 100-00 (ಒಂದು ನೂರು) ಗಳ ವಾರ್ಷಿಕ ಸದಸ್ಯತ್ವ ಶುಲ್ಕವನ್ನು ಸಂಘವು ನಿರ್ದಿಷ್ಟಪಡಿಸಿದ ಮಾರ್ಗದ ಮೂಲಕ ಅಧಿಕೃತವಾಗಿ ಸಂದಾಯ ಮಾಡಿ ಸಂಘದ ಸದಸ್ಯತ್ವ ಹೊಂದಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ


logoblog

Thanks for reading KSSEDEA Registration Date Extension

Previous
« Prev Post

No comments:

Post a Comment