30-03-2025 Sunday All News Papers Educational, Employment and Others News Points (Educational and Informational Purpose Only)
*ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಬಾಳ್ವೆ ನಡೆಸಬೇಕು... ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ... ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಯುಗಾದಿ ಹಬ್ಬದ ಶುಭಾಶಯಗಳು*
ಇಂದಿನ ತಂತ್ರಜ್ಞಾನ ಯುಗದಲ್ಲಿ ಸಮಾಚಾರ ಪತ್ರಿಕೆಗಳು ಕೂಡಾ ಜನರ ಮುಂದೆ ಉತ್ತಮ ಕಾರ್ಯವನ್ನು ನಿರ್ವಹಣೆ ಮಾಡುತ್ತಿವೆ. ದಿನ ಪತ್ರಿಕೆಗಳಲ್ಲಿ ಎಲ್ಲ ವಿಷಯಗಳು ವಿವಿಧ ಬಣ್ಣಗಳ ಮೂಲಕ ಮುದ್ರಣಗೊಂಡಿರುತ್ತವೆ.
ಸಮಾಚಾರ ಪತ್ರಿಕೆಗಳು
ಒಂದು ಪತ್ರಿಕೆಗೆ ‘ತನ್ನತನ’ ಎನ್ನುವದು ಬೇಕು. ಪಾ.ವೆಂ. ಆಚಾರ್ಯರು ‘ಸಂಯುಕ್ತ ಕರ್ನಾಟಕ’ದ ಸಂಪಾದಕ ಮಂಡಲಿಯಲ್ಲಿದ್ದ ಕಾಲವದು. ಆ ಸಮಯದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ರಂಗೇರಿತ್ತು. ಮರಾಠಿ ಪತ್ರಿಕೆಗಳು ಭಂಡಶೈಲಿಯಲ್ಲಿ ಸುದ್ದಿಯನ್ನು ಪ್ರಕಟಿಸುತ್ತಿದ್ದವು. ನಾನು ಪಾ.ವೆಂ. ಅವರನ್ನು ಪತ್ರಿಕೆಯ ಕಚೇರಿಯಲ್ಲಿ ಭೆಟ್ಟಿಯಾದಾಗ, ಈ ವಿಷಯವನ್ನು ಪ್ರಸ್ತಾಪಿಸಿ, “ಸಂಯುಕ್ತ ಕರ್ನಾಟಕವು ಸಭ್ಯವಾಗಿ ಬರೆಯುವದೇಕೆ?”ಎಂದು ಕೇಳಿದ್ದೆ. ಪಾ.ವೆಂ. ನಸುನಕ್ಕು ಹೇಳಿದರು: “ಸಂಯುಕ್ತ ಕರ್ನಾಟಕಕ್ಕೆ ದೀರ್ಘವಾದ ಒಂದು ಸತ್ಸಂಪ್ರದಾಯವಿದೆ !”
ಆ ಸತ್ಸಂಪ್ರದಾಯ ಇಂದು ಎತ್ತ ಹೋಗಿದೆಯೋ ಅಥವಾ ಸತ್ತೇ ಹೋಗಿದೆಯೋ ತಿಳಿಯದು ! ಸಂಯುಕ್ತ ಕರ್ನಾಟಕದ ಭಾಷೆ, ಕಾಗುಣಿತಗಳ ತಪ್ಪು ಹಾಗು ವರದಿಯ ಶೈಲಿಯನ್ನು ನೋಡಿದಾಗ, ಈ ಪತ್ರಿಕೆಗೆ ಇಂದು ಕೋಡಂಗಿಯ ವ್ಯಕ್ತಿತ್ವ ಬಂದಿದೆ ಎಂದು ಭಾಸವಾಗುವದು.
No comments:
Post a Comment