KSPSTA

RECENT INFORMATIONS

Search This Blog

Thursday, January 2, 2025

NMMS Exam Postponed

  Dailyguru       Thursday, January 2, 2025

 

NMMS Exam Postponed

2025 ರ ಜನವರಿ 19 ರಂದು ನಿಗದಿಯಾಗಿದ್ದ NMMS ಪರೀಕ್ಷೆಯನ್ನು ಫೆಬ್ರವರಿ 2 ಕ್ಕೆ ಮುಂದೂಡಿಕೆ ಮಾಡಿ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಶಿಕ್ಷಣ ಇಲಾಖೆ ಆದೇಶದಲ್ಲಿ ಏನಿದೆ?

2024-25ನೇ ಸಾಲಿನಲ್ಲಿ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿ ವೇತನ(NMMS) ಪರೀಕ್ಷೆಯನ್ನು ದಿನಾಂಕ:19.01.2025 (ಭಾನುವಾರ) ರಂದು ನಡೆಸುವುದಾಗಿ ಉಲ್ಲೇಖ(2) ರ ಈ ಕಛೇರಿ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಕಾರಣಾಂತರಗಳಿಂದ ಸದರಿ ಪರೀಕ್ಷೆಯನ್ನು ಮುಂದೂಡಿ ದಿನಾಂಕ: 02.02.2025 (ಭಾನುವಾರ) ರಂದು ನಿಗದಿಪಡಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಈ ಬಗ್ಗೆ ಜಿಲ್ಲೆ, ತಾಲ್ಲೂಕು, ಶಾಲಾ ಹಂತದಲ್ಲಿ ವ್ಯಾಪಕ ಪ್ರಚಾರ ನೀಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಲು ಅಗತ್ಯ ಕ್ರಮವಹಿಸಲು ತಿಳಿಸಿದೆ. ಹಾಗೂ ಈಗಾಗಲೇ NMMS ಪರೀಕ್ಷೆಗೆ ನಿಗದಿಯಾಗಿರುವ ಪರೀಕ್ಷಾ ಕೇಂದ್ರಗಳನ್ನು ಬೇರೆ ಯಾವುದೇ ಪರೀಕ್ಷೆಗಳಿಗೆ ನೀಡದಂತೆ ಕ್ರಮವಹಿಸಲು ತಿಳಿಸಿದೆ.



logoblog

Thanks for reading NMMS Exam Postponed

Previous
« Prev Post

No comments:

Post a Comment