Clarification on the message circulating on WhatsApp regarding the academic tour of the school education department for the year 2024-25.
ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ 2024-25 ನೇ ಸಾಲಿನ ಶೈಕ್ಷಣಿಕ ಪ್ರವಾಸ ಕುರಿತು ವಾಟ್ಯಾಪ್ನಲ್ಲಿ ಹರಿದಾಡುತ್ತಿದೆ ಎನ್ನಲಾದ ಸಂದೇಶದ ಕುರಿತು ಸ್ಪಷ್ಟಿಕರಣ ಆದೇಶ.
ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ -1 ರಲ್ಲಿ ಕೆಲ ಜಿಲ್ಲಾ ಉಪ ನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಇವರು ದೂರವಾಣಿ ಕರೆ ಮಾಡಿ ಪ್ರಸ್ತುತ ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25 ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸ ಕುರಿತು ವಾಟ್ಸಾಪ್ನಲ್ಲಿ/ಇತರೆ ಜಾಲತಾಣಗಳಲ್ಲಿ ಸದರಿ ಶೈಕ್ಷಣಿಕ ಪ್ರವಾಸ ರದ್ದು ಮಾಡಿರುವ ಬಗ್ಗೆ ಹಾಗೂ ಈಗಾಗಲೇ ಪ್ರವಾಸ ಹೊರಟಿದ್ದಲ್ಲಿ ಕೂಡಲೇ ಹಿಂದಿರುಗಿ ಬರುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸೂಚಿಸಿರುವುದಾಗಿ ವ್ಯಾಪಕವಾಗಿ ಪ್ರಚಾರವಾಗಿರುವುದರಿಂದ ಈ ಕುರಿತು ಸ್ಪಷ್ಟಿಕರಣವನ್ನು ನೀಡುವಂತೆ ಕೋರಿರುತ್ತಾರೆ.
ಈ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಸ್ಪಷ್ಟಿಕರಣ ನೀಡಲಾಗಿದೆ:
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಈ ಮೇಲಿನಂತೆ ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25 ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸ ಮಾಡದಂತೆ / ಹಮ್ಮಿಕೊಂಡಿದ್ದಲ್ಲಿ ಕೂಡಲೇ ಹಿಂತಿರುಗಿ ಬರುವಂತೆ ಯಾವುದೇ ಸೂಚನೆ /ನಿರ್ದೇಶನ ನೀಡಿರುವುದಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.
ಮುಂದುವರೆದು ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25 ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸಗಳನ್ನು ಉಲ್ಲೇಖ 2 ಮತ್ತು 3 ರಲ್ಲಿ ನೀಡಿರುವ ಸೂಚನೆಗಳು ಮತ್ತು ನಿರ್ದೇಶನಗಳಂತೆ ಹಾಗೂ ಈ ಕೆಳಕಂಡ ಅಂಶಗಳನ್ನೊಳಗೊಂಡಂತೆ ಡಿಸೆಂಬರ್ 2024 ಮಾಹೆಯೊಳಗೆ. ಪೂರ್ಣಗೊಳಿಸುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
No comments:
Post a Comment