KSPSTA

RECENT INFORMATIONS

Search This Blog

Monday, June 3, 2024

KSGE Election Draft Voters List Update 2024

  Dailyguru       Monday, June 3, 2024

 KSGE Election Draft Voters List 2024


ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಮುನ್ನವೇ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸೋ ಸಂಬಂಧ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮತದಾರರ ಪಟ್ಟಿ ನೋಟಿಸು ಪ್ರಕಟಿಸಲಾಗಿದೆ. ಅದರಲ್ಲಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯದಂತೆ 2024-29ನೇ ಸಾಲಿನ ಅವಧಿಗೆ ಎಲ್ಲಾ ಹಂತದ ಪ್ರಕ್ರಿಯೆಗಳನ್ನು ಕಗೊಳ್ಳಲು ಸಂಘದ ಬೈಲಾ ನಿಯಮದಂತೆ ಕರಡು ಮತದಾರರ ಪಟ್ಟಿಯನ್ನು ಹೊರಡಿಸಿ, ಈ ಸಂಬಂದ ಸಂಘದ ಸದಸ್ಯರಿಂದ ಸ್ವೀಕೃತವಾಗಬಹುದಾದ ಮನವಿ, ಆಕ್ಷೇಪಣೆಗಳಿಗೆ ಮುಕ್ತ ಅವಕಾಶ ಕಲ್ಪಿಸಿದೆ ಎಂದಿದೆ.


ಈ ಹಿನ್ನಲೆಯಲ್ಲಿ ಕರಡು ಮತದಾರರ ಪಟ್ಟಿ ಸಿದ್ಧಪಡಿಸೋದಕ್ಕೆ ದಿನಾಂಕ ನಿಗದಿ ಗೊಳಿಸಲಾಗಿದೆ. ತಾಲೂಕು ಶಾಖೆಗಳ ಮತಕ್ಷೇತ್ರಗಳು, ಯೋಜನಾ ಶಾಖೆಗಳ ಮತಕ್ಷೇತ್ರಗಳು, ಜಿಲ್ಲಾ ಶಾಖೆಗಳ ಮತ ಕ್ಷೇತ್ರಗಳು, ಬೆಂಗಳೂರು ನಗರ ರಾಜ್ಯ ಪರಿಷತ್ ಮತಕ್ಷೇತ್ರಗಳು ಕರಡು ಮತದಾರರ ಪಟ್ಟಿ ಸಿದ್ಧಪಡಿಸಲು ದಿನಾಂಕ 08-06-2024ರಿಂದ 30-06-2024ರವರೆಗೆ ಅವಕಾಶ ನೀಡಲಾಗಿದೆ. ಕರಡು ಮತದಾರರ ಪಟ್ಟಿಯನ್ನು ದಿನಾಂಕ 01-07-2024ರಂದು ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳನ್ನು ದಿನಾಂಕ 02-07-2024ರಿಂದ 10-07-2024ರ ಒಳಗಾಗಿ ಸಲ್ಲಿಸುವಂತೆ ತಿಳಿಸಿದೆ.


ಇನ್ನೂ ಸಂಘದ ಬೈಲಾ ನಿಯಮಗ ಅನ್ವಯ ಅರ್ಹರಿರುವ ಸಂಘದ ಸದಸ್ಯರ ಹೆಸರುಗಳನ್ನು ಒಳಗೊಂಡ ಕರಡು ಮತದಾರರ ಪಟ್ಟಿಯನ್ನು ನಿಗದಿತ ದಿನಾಂಕದೊಳಗೆ ಸಿದ್ಧಪಡಿಸಿ, ಹೊರಡಿಸಲಾದ ಮತದಾರರ ಪಟ್ಟಿಯನ್ನು ರಾಜ್ಯ ಸಂಘಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ.


ಯಾವುದೇ ಕಾರಣಕ್ಕೂ ನಿಗದಿತ ಅವಧಿಯ ವಿಸ್ತರಣೆಗೆ ಅವಕಾಶ ಇರೋದಿಲ್ಲ. ತಪ್ಪಿದಲ್ಲಿ ಸಂಬಂಧಿಸಿದ ಶಾಖೆಗಳೇ ಹೊಣೆಯಾಗಲಿದ್ದಾವೆ. ತಮ್ಮ ಶಾಖೆಗಳಲ್ಲಿ ಕಾರ್ಯಕಾರಿ ಸಮಿತಿ ಸಭೆಗಳನ್ನು ಸಂಘದ ಬೈಲಾ ರಿತ್ಯಾ ನಡೆಸಿ, ಕ್ರಮ ವಹಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್.ಟಿ ಆದೇಶದಲ್ಲಿ ತಿಳಿಸಿದ್ದಾರೆ




logoblog

Thanks for reading KSGE Election Draft Voters List Update 2024

Previous
« Prev Post

No comments:

Post a Comment