KSPSTA

RECENT INFORMATIONS

Search This Blog

Wednesday 6 December 2023

Regarding recruitment of primary and high school teachers

  Mahiti Kanaja       Wednesday 6 December 2023

 Hedding ; Regarding recruitment of primary and high school teachers...


ಪ್ರಾರ್ಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿ ಕುರಿತು ಇಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ

➡ರಾಜ್ಯದಲ್ಲಿ ಮಂಜೂರಾಗಿರುವ, ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಖಾಲಿ ಇರುವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಖ್ಯೆ

➡ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಂಜೂರಾಗಿರುವ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಖಾಲಿ ಇರುವ ಪ್ರಾಥಮಿಕ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಖ್ಯೆ

➡ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ.


ಪ್ರಾರ್ಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿ ಕುರಿತು ಸಂಕ್ಷಿಪ್ತ ಮಾಹಿತಿ...👇👇👇👇👇👇👇👇👇

ಕರ್ನಾಟಕದಲ್ಲಿ 2,500 ಪ್ರೌಢಶಾಲಾ ಶಿಕ್ಷಕರ ನೇಮಕ- ಆಸಕ್ತರು ಈಗಲೇ ಅಪ್ಲೈ ಮಾಡಿ
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2023 ನೇ ಸಾಲಿನ ಕರ್ನಾಟಕ PGT ಮತ್ತು TGT ಶಿಕ್ಷಕರ ನೇಮಕಾತಿಯ ಹುದ್ದೆಗಳಿಗೆ ಆನ್‌ಲೈನ್ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ರಾಜ್ಯದ ನಿರುದ್ಯೋಗಿಗಳಿಗೆ(Unemployed) ಇಲ್ಲೊಂದು ಸಿಹಿ ಸುದ್ದಿ ಇದೆ. ಟೀಚಿಂಗ್ ಪೋಸ್ಟ್ಗಳನ್ನು(Teaching Posts) ಹುಡುಕುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ. ಅರ್ಹರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು(Karnataka State Government) ವಿವಿಧ ಉದ್ಯೋಗ ಅಧಿಸೂಚನೆಗಳನ್ನು ಬಿಡುಗಡೆ ಮಾಡುತ್ತಿದೆ. ಶೀಘ್ರದಲ್ಲೇ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಿದೆ. ಇದು ಕರ್ನಾಟಕ ರಾಜ್ಯ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಎಲ್ಲಾ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ.

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2023 ನೇ ಸಾಲಿನ ಕರ್ನಾಟಕ PGT ಮತ್ತು TGT ಶಿಕ್ಷಕರ ನೇಮಕಾತಿಯ ಹುದ್ದೆಗಳಿಗೆ ಆನ್‌ಲೈನ್ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಭಾರತದ ಸಂವಿಧಾನದ ಅಂಗವಾಗಿರುವ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಅಧಿಸೂಚನೆಯನ್ನು ಬಿಡುಗಡೆ ಮಾಡಲಿದೆ. ಆ ಪ್ರಕಾರ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಒಟ್ಟು 2,500 ಪ್ರೌಢ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ www.schooleducation.kar.nic.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಕೊನೆ ದಿನ ಏಪ್ರಿಲ್ 22, 2023 ಆಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಹತೆ: ಪ್ರಾಥಮಿಕ ಶಿಕ್ಷಕ ಹುದ್ದೆಗಳಿಗೆ- 1. ಅಭ್ಯರ್ಥಿಗಳು ಶೇ.50 ರಷ್ಟು ಅಂಕಗಳೊಂದಿಗೆ ಸೀನಿಯರ್ ಸೆಕೆಂಡರಿ(ಅಥವಾ ಅದಕ್ಕೆ ಸಮಾನವಾದ) ಪೂರ್ಣಗೊಳಿಸಿರಬೇಕು ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ 2 ವರ್ಷದ ಡಿಪ್ಲೊಮಾ (D.E.Ed.) ಉತ್ತೀರ್ಣರಾಗಿರಬೇಕು.

ಕನಿಷ್ಠ 50% ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ (ಅಥವಾ ಇದು ಸಮಾನವಾಗಿರುವ) ಪೂರ್ಣಗೊಳಿಸಿರಬೇಕು ಮತ್ತು 4-ವರ್ಷದ ಪ್ರಾಥಮಿಕ ಶಿಕ್ಷಣ (B.EI.Ed) ಉತ್ತೀರ್ಣರಾಗಿರಬೇಕು. ಅಥವಾ ಕನಿಷ್ಠ 50% ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ (ಅಥವಾ ಅದಕ್ಕೆ ಸಮಾನವಾದ) ಮತ್ತು 2 ವರ್ಷದ ಶಿಕ್ಷಣದಲ್ಲಿ (ವಿಶೇಷ ಶಿಕ್ಷಣ) ಡಿಪ್ಲೋಮಾ ಉತ್ತೀರ್ಣರಾಗಿರಬೇಕು.

ಅಥವಾ ಕನಿಷ್ಠ 50% ಅಂಕಗಳೊಂದಿಗೆ ಪದವಿ ಮತ್ತು ಬ್ಯಾಚುಲರ್ ಆಫ್ ಎಜುಕೇಶನ್ (B.Ed) ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯು ಕರ್ನಾಟಕ TET/CTET ನಲ್ಲಿ ಅರ್ಹತೆ ಪಡೆದಿರಬೇಕು.

ತರಬೇತಿ ಪಡೆದ ಪದವೀಧರ ಶಿಕ್ಷಕ ಹುದ್ದೆಗಳಿಗೆ : ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ DE.Ed/B.Ed/B.P.Ed/D.P.Ed ಜೊತೆಗೆ ಪದವಿ ಉತ್ತೀರ್ಣರಾಗಿರಬೇಕು.

ಕನಿಷ್ಠ 50% ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು ಅಥವಾ 1 ವರ್ಷದ ಬ್ಯಾಚುಲರ್ ಇನ್ ಎಜುಕೇಶನ್ (B.Ed) ಉತ್ತೀರ್ಣರಾಗಿರಬೇಕು. ಅಥವಾ ಕನಿಷ್ಠ 50% ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ (ಅಥವಾ ಇದಕ್ಕೆ ಸಮಾನವಾದ) ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ 4 ವರ್ಷಗಳ ಬ್ಯಾಚುಲರ್ (B.El.Ed) ಪೂರ್ಣಗೊಳಿಸಿರಬೇಕು.
ಅಥವಾ ಕನಿಷ್ಠ 50% ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ (ಅಥವಾ ಇದಕ್ಕೆ ಸಮಾನವಾದ) ಮತ್ತು 4 ವರ್ಷದ B.Sc.Ed ಪೂರ್ಣಗೊಳಿಸರಬೇಕು. ಅಭ್ಯರ್ಥಿಯು ಕರ್ನಾಟಕ TET/CTET ನಲ್ಲಿ ಅರ್ಹತೆ ಪಡೆದಿರಬೇಕು.

ವಯೋಮಿತಿ:
ಕನಿಷ್ಠ- 18 ವರ್ಷ
ಗರಿಷ್ಠ 40 ವರ್ಷ


logoblog

Thanks for reading Regarding recruitment of primary and high school teachers

Previous
« Prev Post

No comments:

Post a Comment