KLC Document Verification 2025
⚫ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLC) ದಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 35% ಗಿಂತ ಹೆಚ್ಚಿನ ಅಂಕದೊಂದಿಗೆ 1:5 ರಂತೆ ಅರ್ಹಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು Paper-1 & 2 ರಲ್ಲಿ ಪಡೆದ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
⚫ ಅರ್ಹ ಅಭ್ಯರ್ಥಿಗಳಿಗೆ 2025 ಅಗಸ್ಟ್-01 & 02 ರಂದು ಬೆಂಗಳೂರಿನ ಶಾಸಕರ ಭವನದಲ್ಲಿ Document Verification ನಡೆಯಲಿದೆ.!!
ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಈ ಸಚಿವಾಲಯದಲ್ಲಿ ಖಾಲಿಯಿರುವ ವಿವಿಧ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಹಸ್ತಾಂತರಿಸಿರುವ ಅಂಕಪಟ್ಟಿಯ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಗೆ ಸಿದ್ಧಪಡಿಸಿರುವ ಅರ್ಹತಾ ಪಟ್ಟಿಯನ್ನು ಪ್ರವರ್ಗವಾರು 25 ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಯನ್ನು ಸಮ್ಮೇಳನ ಸಭಾಂಗಣ, 3ನೇ ಮಹಡಿ, ಶಾಸಕರ ಭವನ-1, ಬೆಂಗಳೂರು, ಇಲ್ಲಿ ನಡೆಸಲಾಗುವುದು.
ದಿನಾಂಕ: 01.08.2025 ರಂದು ಈ ಕೆಳಕಂಡ ವೃಂದಗಳಿಗೆ
ದಾಖಲೆಗಳ ಪರಿಶೀಲನೆ ನಡೆಸಲಾಗುವುದು
1. ಸೀನಿಯರ್ ಪ್ರೋಗ್ರಾಮರ್
2. ಜೂನಿಯರ್ ಪ್ರೋಗ್ರಾಮರ್
3. ಜೂನಿಯರ್ ಕನ್ಫೋಲ್ ಆಪರೇಟರ್
4. ಕಂಪ್ಯೂಟರ್ ಆಪರೇಟರ್
ದಿನಾಂಕ: 02.08.2025 ರಂದು ಈ ಕೆಳಕಂಡ ವೃಂದಗಳಿಗೆ
ದಾಖಲೆಗಳ ಪರಿಶೀಲನೆ ನಡೆಸಲಾಗುವುದು
1. ಸಹಾಯಕರು
2. ಕಿರಿಯ ಸಹಾಯಕರು
3. ದತ್ತಾಂಶ ನಮೂದು ಸಹಾಯಕರು/ಬೆರಳಚ್ಚುಗಾರರು
(ಬೆರಳಚ್ಚು ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ನಂತರ ತಿಳಿಸಲಾಗುವುದು)
No comments:
Post a Comment