*FLN ಬಗ್ಗೆ ಸಂಪೂರ್ಣ ಮಾಹಿತಿ*
☀️ FLN ಕನ್ನಡ ಮತ್ತು ಗಣಿತ ವಿಷಯಕ್ಕೆ ಮಾತ್ರ.
☀️ FLN ಇಂಗ್ಲೀಷ್ ವಿಜ್ಞಾನ ಪರಿಸರ ಸಮಾಜ ವಿಜ್ಞಾನ ಹಿಂದಿ ಇತರೆ ವಿಷಯಗಳಿಗೆ ಇರುವುದಿಲ್ಲ.
☀️ FLN ವರ್ಷಪೂರ್ತಿ ಇರುತ್ತದೆ
☀️ ಪ್ರತಿ ತಿಂಗಳು ಕನ್ನಡ 9 ಮತ್ತು ಗಣಿತದ 8 FLN ರುಬ್ರಿಕ್ಸ್ ಅಥವಾ ಕಲಿಕಾ ಫಲಗಳ ಆಧಾರದಲ್ಲಿ ಪ್ರಶ್ನೆ ಪತ್ರಿಕೆಯನ್ನು ತೆಗೆದು FLN ಸಾಧಿಸಿದ ಸಾಧಿಸದ ಮಕ್ಕಳನ್ನು ಗುರುತಿಸಿಕೊಂಡು ಕ್ರಿಯಾ ಯೋಜನೆ ಮಾಡಿಕೊಳ್ಳಬೇಕು
☀️ FLN ನಲ್ಲಿ ಕನ್ನಡದಲ್ಲಿ 9 , ಗಣಿತದಲ್ಲಿ 8 ಕಲಿಕಾ ಫಲಗಳು ಅಥವಾ ಸಾಮರ್ಥ್ಯಗಳು ಅಥವಾ ರುಬ್ರಿಕ್ಸ್ ಇರುತ್ತವೆ
☀️ A ಬಂದರೆ ಮಾತ್ರ FLN ಸಾಧಿಸಿದ ಮಕ್ಕಳು
☀️ BB, B, P ಬಂದರೆ FLN ಸಾಧಿಸದ ಮಕ್ಕಳು ಎಂದು ಗುರ್ತಿಸಿಕೊಳ್ಳಬೇಕು
☀️ ಒಂದು ವಿದ್ಯಾರ್ಥಿಗೆ A ಕೊಡಬೇಕಾದರೆ Oral Reading Writing Numeracy 95% ನಷ್ಟು ಸಾಧಿಸಿದ ಮಕ್ಕಳನ್ನು ಗುರುತಿಸಿಕೊಳ್ಳಬೇಕು
☀️ ಉದಾಹರಣೆಗೆ 10 ಪ್ರಶ್ನೆಗಳ ಪ್ರಶ್ನೆ ಪತ್ರಿಕೆಯಲ್ಲಿ 9 ಅಥವಾ 10 ಪ್ರಶ್ನೆಗಳಿಗೆ ಸರಿ ಉತ್ತರವನ್ನು ಕೊಟ್ಟಿರಬೇಕು
☀️ FLN ಗೆ ಪ್ರತ್ಯೇಕ ರಿಜಿಸ್ಟರ್ ಇಟ್ಟು ನಿರ್ವಹಿಸಬೇಕು
☀️ ಪ್ರತಿಪಾಠದ ನಂತರ ಕಲಿಕಾ ಫಲಗಳ ಪಟ್ಟಿ ಮಾಡಿಕೊಂಡು ತಿಂಗಳಿಗೊಂದು FLN ಪರೀಕ್ಷೆ ಮಾಡಿ ಸಾಧಿಸಿದ ಸಾಧಿಸದ ಮಕ್ಕಳನ್ನು ಗುರುತಿಸಿಕೊಳ್ಳಬೇಕು
☀️ ಪಾಠ ಮಾಡುವಾಗ ಅಥವಾ ಅಭ್ಯಾಸ ಚಟುವಟಿಕೆಗಳ ಮಾಡುವಾಗ FLN ನ ಯಾವ ಕಲಿಕಾ ಫಲಕ್ಕೆ ಪೂರಕವಾಗಿದೆ ಸಂಬಂಧಿಸಿದೆ ಎಂದು ತಿಳಿದು ಅದಕ್ಕೆ ಹೆಚ್ಚು ಒತ್ತು ನೀಡಬೇಕು
☀️ ಈಗಿರುವ ಎಲ್ಲಾ ಅಭ್ಯಾಸ ಚಟುವಟಿಕೆಗಳ ಮತ್ತು ಪಠ್ಯ ಪುಸ್ತಕಗಳು ಅಭ್ಯಾಸ ಪುಸ್ತಕಗಳು FLN ಆಧಾರಿತವಾಗಿವೆ ಪೂರಕವಾಗಿವೆ
☀️ ORWN ಅಂದ್ರೆ ☀️
O = Oral
R = reading
W = writting
N = Numeracy
☀️ ಕನ್ನಡ ಗಣಿತ ಸೇರಿ ಒಟ್ಟು 17 ರುಬ್ರಿಕ್ಸ್/ ಕಲಿಕಾ ಫಲಗಳು / LOs/ ಸಾಮರ್ಥ್ಯಗಳು/ ಲಕ್ಷಸ್ ಇವೆ
☀️ ಸೇತುಬಂಧ ಪರೀಕ್ಷೆ ಜೊತೆಗೆ FLN ಕನ್ನಡ ಗಣಿತಕ್ಕೆ ಪ್ರತ್ಯೇಕ ಪರೀಕ್ಷೆ ನಡೆಸಬೇಕು
☀️ ಪರಿಹಾರ ಬೋಧನೆಯ ಮಕ್ಕಳ ಪಟ್ಟಿಯಂತೆ , FLN ಹಿಂದುಳಿದ ಮಕ್ಕಳ ಪಟ್ಟಿಯನ್ನು ಕೂಡ ಮಾಡಿಕೊಳ್ಳಿ
☀️ FLN ಸಾಧಿಸದ ಮಕ್ಕಳಿಗೆ ಕ್ರಿಯಾ ಯೋಜನೆ ಜೊತೆಗೆ TLM ಬಳಸಿಕೊಂಡು FLN ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು
☀️ ಪ್ರತಿ ತಿಂಗಳ ಕೆಲಸದ 2ನೇ ದಿನ FLN ಪರೀಕ್ಷೆ ಮಾಡಿ ಸಾಧಿಸಿದ ಸಾಧಿಸದ ಮಕ್ಕಳನ್ನು ಪ್ರತಿ ತಿಂಗಳು ಗುರ್ತಿಸಿ ಕೊಂಡು ಕ್ರಿಯಾ ಯೋಜನೆ ಮಾಡಿಕೊಳ್ಳಿ. ಇದೇ ರೀತಿ ಪ್ರತಿ ತಿಂಗಳು ಮಾಡಿಕೊಳ್ಳಿ, ಇದನ್ನು ವರ್ಷಪೂರ್ತಿ ಮಾಡಬೇಕು.
☀️ FLN ಸಾಧಿಸಿದ ಸಾಧಿಸದ ಮಕ್ಕಳನ್ನು ಗುರ್ತಿಸಿಕೊಂಡು FLN ರಿಜಿಸ್ಟರ್ ನಲ್ಲಿ ಸಾಧಿಸಿದ ಸಾಧಿಸದ ಮಕ್ಕಳನ್ನು ಗುರ್ತಿಸಿಕೊಳ್ಳಿ
☀️ FLN ಸಾಧಿಸಿದ ನಂತರ ಆ ಮಗುವನ್ನು FLN ಪಟ್ಟಿಯಿಂದ ಕೈ ಬಿಡುವುದು.
☀️ ಪೂರ್ಣ, ಅಧಿಕೃತ ಮಾಹಿತಿಗಾಗಿ 21.05.2025 ರ DESERT ಡಿ ಎಸ್ ಇ ಆರ್ ಟಿ ಸುತ್ತೋಲೆ
☀️ *FLNನ ಪ್ರಮುಖಾಂಶಗಳು* ☀️
*FLN ಪರೀಕ್ಷೆ ಮಾಡಿ FLN ರೂಬಿಕ್ಸ್ ಅಥವಾ ಗ್ರೇಡ್ ನೀಡುವುದು ಹೇಗೆ ? ಸಂಪೂರ್ಣ ಓದಿ*
ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಗ್ರವಾಗಿದ್ದು, ಪೂರ್ವಪ್ರಾಥಮಿಕ ಶಿಕ್ಷಣವನ್ನು ಔಪಚಾರಿಕ ಶಿಕ್ಷಣ ವ್ಯವಸ್ಥೆಗೆ ತರಲಾಗಿದೆ.
2020 ರ ರಾ.ಶಿ.ನೀ.ಯು 3 ನೇ ತರಗತಿಯೊಳಗಿನ ಪ್ರತಿ ಮಗುವಿನಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಕೌಶಲಗಳನ್ನು ಬೆಳೆಸುವ ಕುರಿತು ಪ್ರಸ್ತಾಪಿಸಿದೆ.
» ಈ ಬಗ್ಗೆ ಕೇಂದ್ರ ಸರ್ಕಾರವು National Initiative for Proficiency in Reading with Understanding and Numeracy or NIPUN BHARAT ಗೆ ಚಾಲನೆ ನೀಡಲಾಗಿದೆ.
FLN ಮಿಷನ್ ಹಿನ್ನೆಲೆ ಮತ್ತು ಪ್ರಾಮುಖ್ಯತೆ
* ಪ್ರತಿ ಮಗುವು FLN ಕೌಶಲಗಳನ್ನು ಕರಗತ ಮಾಡಿಕೊಳ್ಳಲು ಅಗತ್ಯವಾದ ವಾತಾವರಣವನ್ನು ಸೃಜಿಸುವ ದೃಷ್ಟಿಕೋನವನ್ನು NIPUN BHARAT ಹೊಂದಿದೆ.
*3 ರಿಂದ 9 ವಯೋಮಾನದ ಮಕ್ಕಳ ಕಲಿಕಾ ಅಗತ್ಯತೆಗಳನ್ನು ಪೂರೈಸುವ ಗುರಿ ಹೊಂದಿದೆ.
* ಅದರಂತೆ ಕಲಿಕಾ ಅಂತರಗಳನ್ನು ಹಾಗೂ ಅವುಗಳ ಕಾರಣವನ್ನುಖ ಗುರ್ತಿಸಿ, ಸ್ಥಳೀಯ ಸಂದರ್ಭ, ಸನ್ನಿವೇಶಗಳಿಗೆ ತಕ್ಕಂತೆ ಪೂರಕವಾದ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದೆ.
FLN ಮಿಷನ್ ಹಿನ್ನೆಲೆ ಮತ್ತು ಪ್ರಾಮುಖ್ಯತೆ
* ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ಆರಂಭಿಕ ತರಗತಿಗಳ ನಡುವೆ ಬಲವಾದ ಕೊಂಡಿ ಸೃಜಿಸಿ, ಮಕ್ಕಳು ತಡೆರಹಿತವಾಗಿ ಮುಂದುವರೆಯುವುದನ್ನು ಖಾತ್ರಿಪಡಿಸಿಕೊಳ್ಳುವುದು.
* 2026-27 ರೊಳಗೆ FLN ಕೌಶಲಗಳನ್ನು ತಲುಪುವ ಗುರಿ ಹೊಂದಲಾಗಿದೆ.
*FLN ರೂಬಿಕ್ಸ್ ಅಥವಾ ಗ್ರೇಡ್ ನೀಡುವುದು👇*
BB - Below Basic - ಕನಿಷ್ಠ
B - Basic - ಪ್ರಾಥಮಿಕ
P - proficient - ಪ್ರಾವೀಣ್ಯ
A - Advanced - ಸುಧಾರಿತ / ಮುಂದುವರೆದ
1.FLN ಸಾಧಿಸದ ಮಗು ಎಂದರೆ ಯಾರು?
BB ಮತ್ತು B ,
ಮುಂದುವರೆದು BB ಯಿಂದ B ಗೆ , B ಯಿಂದ Pಗೆ , P ಯಿಂದ A. ಗೆ ತರುವ ಪ್ರಯತ್ನ ಆಗಬೇಕೆಂದೇ FLNನ ಆಶಯವಾಗಿದೆ.
*_ಮುಖ್ಯ ಶಿಕ್ಷಕರ ಜವಾಬ್ದಾರಿಗಳು_*
* ಪ್ರತಿ ತಿಂಗಳ ಎರಡನೇ ಕೆಲಸದ ದಿನದಂದು FLN ಸಾಧಿಸಿದ/ಸಾಧಿಸದ ವಿದ್ಯಾರ್ಥಿಗಳನ್ನು ಗುರ್ತಿಸುವುದು ಹಾಗೂ ಸಾಧನೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು.
ಪೋಷಕರ ಸಹಭಾಗಿತ್ವದೊಂದಿಗೆ ವಿದ್ಯಾರ್ಥಿಗಳ ಗೈರುಹಾಜರಿಯನ್ನು ತಪ್ಪಿಸುವುದು.
ಶಾಲೆಯಲ್ಲಿ ಲಭ್ಯವಿರುವ ಕಲಿಕೋಪಕರಣಗಳನ್ನು - ಓದು ಕರ್ನಾಟಕ ಸಾಮಗ್ರಿಗಳು, ಗಣಿತ ಕಲಿಕಾ ಆಂದೋಲನದ ಕಿಟ್, ಕಲಿಕಾಸರೆ, ಕಲಿಕಾ ಚೇತರಿಕೆ ಅಭ್ಯಾಸದ ಹಾಳೆಗಳು, ವಾಚಕಗಳು ಇತ್ಯಾದಿ FLN ಗಳ ಸಾಧನೆ ಪೂರಕವಾಗಿ ಬಳಸಿಕೊಳ್ಳುವ ಬಗ್ಗೆ ಚರ್ಚಿಸಿ, ಅಂತಿಮಗೊಳಿಸುವುದು.
☀️ *ಮುಖ್ಯ ಶಿಕ್ಷಕರ ಜವಾಬ್ದಾರಿಗಳು* ☀️
ಎಲ್ಲಾ ವಿಷಯಗಳ ಶಿಕ್ಷಕರ ಸಹಕಾರದೊಂದಿಗೆ ತರಗತಿ ಶಿಕ್ಷಕರು ದಾಖಲೆ ನಿರ್ವಹಿಸುವುದು ಹಾಗೂ ಅಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ದಾಖಲೆಗಳನ್ನು ಸಲ್ಲಿಸುವ ಜವಾಬ್ದಾರಿ ತರಗತಿ ಶಿಕ್ಷಕರದ್ದಾಗಿರುತ್ತದೆ.
ಪ್ರತಿ ತಿಂಗಳ ಅಂತ್ಯಕ್ಕೆ ಅನುಬಂಧ 4 (1) ರಲ್ಲಿರುವ ನಮೂನೆಯಂತೆ ತರಗತಿವಾರು ಹಾಗೂ ಒಟ್ಟು ಶಾಲಾವಾರು ಮಾಹಿತಿಯನ್ನು ಸಿದ್ಧಪಡಿಸಿ, ತಿಂಗಳ ಕೆಲಸದ ಮೂರನೇ ದಿನದಂದು ಮುಖ್ಯ ಶಿಕ್ಷಕರು CRP ರವರಿಗೆ
ಸಲ್ಲಿಸುವುದು.
No comments:
Post a Comment