Teachers Transfer Casual Questions and Answers
*ಶಿಕ್ಷಕರ ವರ್ಗಾವಣೆ ಬಗ್ಗೆ ಸಾಂದರ್ಭಿಕವಾಗಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಗಳು*..
➡️ *ತಾಲೂಕಿನ ಒಳಗೆ ಪತಿ ಪತ್ನಿ ಪ್ರಕರಣಕ್ಕೆ ಅನುಮತಿ ಇದೆಯೇ* ?
✅ *ಇಲ್ಲ.* ಪತಿ ಪತ್ನಿ ಇಬ್ಬರು ಒಂದೇ ತಾಲೂಕಿನ ಒಳಗೆ ಕಾರ್ಯನಿರ್ವಹಿಸುತ್ತಿದ್ದಲ್ಲಿ ಪತಿ ಪತ್ನಿ ಪ್ರಕರಣದ ಆದ್ಯತೆಗೆ ಅರ್ಹರಿರುವುದಿಲ್ಲ
➡️ *ಪತಿ ಪತ್ನಿ ಪ್ರಕರಣದಲ್ಲಿ ಪತಿ ಅಥವಾ ಪತ್ನಿ ಇರುವ ತಾಲೂಕಿಗೆ ಮಾತ್ರ ವರ್ಗಾವಣೆ ಪಡೆಯಬಹುದೇ?*
✅ *ಇಲ್ಲ.* ಪತಿ ಅಥವಾ ಪತ್ನಿ ಇರುವ ಜಿಲ್ಲೆಯ ಯಾವುದಾದರು ತಾಲೂಕಿಗೆ ವರ್ಗಾವಣೆ ಪಡೆಯಬಹುದು .
➡️ *ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು ಇದೇ ವರ್ಷ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದೇ?*
✅ *ಹೌದು.* ಸಲ್ಲಿಸಬಹುದು.
➡️ *25% ಗಿಂತ ಹೆಚ್ಚು ಖಾಲಿ ಹುದ್ದೆಗಳಿರುವ ತಾಲೂಕುಗಳಿಂದ ಹೊರಹೋಗಲು ವರ್ಗಾವಣೆಯಲ್ಲಿ ಅವಕಾಶವಿದೆಯೇ ?*
✅ *ಇಲ್ಲ*. ಆದರೆ ಈ ತಾಲೂಕಿನಲ್ಲಿ 10 ವರ್ಷ ನಿರಂತರವಾಗಿ ಅಥವಾ 15 ವರ್ಷ ಸಂಚಿತವಾಗಿ ಸೇವೆ ಮಾಡಿದವರು ಹೊರ ತಾಲೂಕಿಗೆ ವರ್ಗಾವಣೆ ಹೊಂದಬಹುದು.
➡️ *25% ಗಿಂತ ಹೆಚ್ಚು ಖಾಲಿ ಹುದ್ದೆಗಳಿರುವ ತಾಲೂಕುಗಳಲ್ಲಿ ತಾಲೂಕಿನ ಒಳಗೆ ವರ್ಗಾವಣೆ ಯಾಗಬಹುದೆ.?*
✅ *ಹೌದು* . ತಾಲೂಕಿನ ಒಳಗೆ ವರ್ಗಾವಣೆಗೆ ಅವಕಾಶವಿದೆ.
➡️ *25% ಗಿಂತ ಹೆಚ್ಚು ಖಾಲಿ ಹುದ್ದೆಗಳಿರುವ ತಾಲೂಕಿನಿಂದ ಹೊರ ತಾಲೂಕು ಅಥವಾ ಹೊರ ಜಿಲ್ಲೆಗೆ ಪರಸ್ಪರ ವರ್ಗಾವಣೆಗೆ ಅವಕಾಶವಿದೆಯೇ?*
✅ *ಹೌದು* . ಪರಸ್ಪರ ವರ್ಗಾವಣೆಗೆ ನಿರ್ಬಂಧ ವಿರುವುದಿಲ್ಲ ಹೊರ ತಾಲೂಕು ಅಥವಾ ಜಿಲ್ಲೆಗೆ ಪರಸ್ಪರ ವರ್ಗಾವಣೆ ಪಡೆಯಬಹುದು..
➡️ *ಎಲ್ಲಾ ವಿಧವೆ ಅಥವಾ ವಿಧುರ ಅಥವಾ ವಿಚ್ಛೇದಿತ ಶಿಕ್ಷಕರಿಗೆ ಕೋರಿಕೆ ವರ್ಗಾವಣೆಯಲ್ಲಿ ಆದ್ಯತೆ,*
ಮತ್ತು
*ವಲಯ ಹಾಗೂ ಹೆಚ್ಚುವರಿ ವರ್ಗಾವಣೆಯಿಂದ ವಿನಾಯಿತಿ ಇದೆಯೇ?*
✅ *ಇಲ್ಲ* .ಕೇವಲ 12 ವರ್ಷದೊಳಗಿನ ಅವಲಂಬಿತ ಮಕ್ಕಳಿರುವ ವಿಧವಾ ಅಥವಾ ವಿದುರ ಅಥವಾ ವಿಚ್ಛೇದಿತ ಶಿಕ್ಷಕರಿಗೆ ಮಾತ್ರ ಕೋರಿಕೆ ವರ್ಗಾವಣೆಯಲ್ಲಿ ಆದ್ಯತೆ ಮತ್ತು ವಲಯ ಹಾಗೂ ಹೆಚ್ಚುವರಿ ವರ್ಗಾವಣೆಯಿಂದ ವಿನಾಯಿತಿ ಇದೆ .
➡️ *ಗರ್ಭಿಣಿ ಶಿಕ್ಷಕಿ ಅಥವಾ ಒಂದು ವರ್ಷದೊಳಗಿನ ಮಗು ಹೊಂದಿರುವ ಮಹಿಳಾ ಶಿಕ್ಷಕರಿಗೆ ಕೋರಿಕೆ ವರ್ಗಾವಣೆಯಲ್ಲಿ ಆದ್ಯತೆ ಇದೆಯೇ ?*
✅ *ಇಲ್ಲ* .ಆದರೆ ವಲಯ ವರ್ಗಾವಣೆ ಮತ್ತು ಹೆಚ್ಚುವರಿ ವರ್ಗಾವಣೆಯಿಂದ ವಿನಾಯಿತಿ ಪಡೆಯಬಹುದು .
➡️ *50 ವರ್ಷ ವಯೋಮಿತಿ ದಾಟಿದ ಮಹಿಳಾ ಶಿಕ್ಷಕಿಯರು ಹಾಗೂ 55 ವರ್ಷ ದಾಟಿದ ಪುರುಷ ಶಿಕ್ಷಕರಿಗೆ ಕೋರಿಕೆ ವರ್ಗಾವಣೆಯಲ್ಲಿ ಆದ್ಯತೆ* *ಇದೆಯೇ* ?
✅ *ಇಲ್ಲ* . ಕೇವಲ ವಲಯ ವರ್ಗಾವಣೆ ಮತ್ತು ಹೆಚ್ಚುವರಿ ವರ್ಗಾವಣೆಯಲ್ಲಿ ವಿನಾಯಿತಿ ಇದೆ .
➡️ *ಸೇವಾ ವಧಿಯಲ್ಲಿ ಕೋರಿಕೆ ವರ್ಗಾವಣೆಗೆ ಆದ್ಯತೆಯನ್ನು ಎಷ್ಟು ಬಾರಿ ಪಡೆಯಬಹುದು* ?
✅ ಆದ್ಯತೆಯನ್ನು ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ ಪಡೆಯಬಹುದು ,ಆದರೆ ಇದು 2020ರ ಹಿಂದೆ ವರ್ಗಾವಣೆಗೊಂಡವರಿಗೆ ಅನ್ವಯಿಸುವುದಿಲ್ಲ.
No comments:
Post a Comment